Sakshi expression of dhoni run out

ಭಾರತದಿಂದ ಪಂದ್ಯ ಕಿತ್ತುಕೊಂಡ ಆ ಒಂದು ರನ್ ಔಟ್ ಅದೆಷ್ಟೋ ಕೋಟಿ ಕನಸುಗಳನ್ನು ನುಚ್ಚು ನೂರು ಮಾಡಿತ್ತು ಮತ್ತು ಒಂದು ಕ್ಷಣ ಎಲ್ಲರ ಕಣ್ಣಲ್ಲೂ ನೀರು ತರಿಸಿತ್ತು, ವಿಶ್ವ ಕಪ್ ನ ಅಸೆ ಹೊತ್ತು ಕೂತಿದ್ದ ಕೋಟಿ ಜೀವಗಳಿಗೆ ನಿರಾಸೆ ಮೂಡಿಸಿತ್ತು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರು ಕಣ್ಣೀರು ಹಾಕಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ವಿಶ್ವಕ್ಕೆ ಕ್ರಿಕೆಟ್ ಕೇವಲ ಆಟವಾಗಿದ್ದರೆ ಭಾರತಕ್ಕೆ ಅದೊಂದು ಭಾವನಾತ್ಮಕ ಕ್ರೀಡೆ, ನ್ಯೂಜಿಲೆಂಡ್ ವಿರುದ್ಧ ವಿರೋಚಿತ ಹೋರಾಟ ನೀಡಿರುವ ಧೋನಿ ಕೊನೆಯ ಹಂತದಲ್ಲಿ ರನೌಟ್‌ಗೆ ಬಲಿಯಾಗಿದ್ದರು ಮತ್ತು ಕಾಕತಾಳೀಯವೆಂಬಂತೆ ತಮ್ಮ ಚೊಚ್ಚಲ ಪಂದ್ಯದಲ್ಲೂ ರನೌಟ್‌ ಆಗಿದ್ದರು.

Sakshi expression of dhoni run out

ಅಂದು 2004ರಲ್ಲಿ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಧೋನಿ ರನೌಟ್ ಬಲೆಗೆ ಸಿಲುಕಿದ್ದರು, ಹಾಗೊಂದು ವೇಳೆ ಇದು ಕೊನೆಯ ಪಂದ್ಯವಾದರೆ ರನೌಟ್‌ನೊಂದಿಗೆ ಕೆರಿಯರ್ ಪೂರ್ಣಗೊಳಿಸಿದಂತಾಗುತ್ತದೆ, 18 ರನ್ ಅಂತರದ ಸೋಲಿಗೆ ಶರಣಾಗಿರುವ ಟೀಮ್ ಇಂಡಿಯಾ ಫೈನಲ್ ರೇಸ್‌ನಿಂದ ಹೊರಬಿದ್ದಿದೆ, ಇದರೊಂದಿಗೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ವಿಶ್ವಕಪ್ ಕನಸು ನೂಚ್ಚುನೂರಾಗಿದೆ.

ಈ ಮಧ್ಯೆ ತಂಡವನ್ನು ಗೆಲ್ಲಿಸುವ ಭರದಲ್ಲಿ ಎಂ ಎಸ್ ಧೋನಿ ರನೌಟ್‌ ಆಗಿದ್ದು ಈ ವೇಳೆ ಮೈದಾನದಲ್ಲೇ ಧೋನಿ ಕಣ್ಣೀರಿಟ್ಟರು, ಇನ್ನು ಇದನ್ನು ಕಂಡ ಸಾಕ್ಷಿ ಹಣೆ ಚಚ್ಚಿಕೊಂಡ ವಿಡಿಯೋ ವೈರಲ್ ಆಗಿದೆ.

Sakshi expression of dhoni run out

ಭಾರತದ ಪರ ಅರ್ಧಶತಕ ಸಿಡಿಸಿ ನಿರ್ಣಾಯಕ ಎನಿಸಿದ್ದ ಮಹೇಂದ್ರ ಸಿಂಗ್ ಧೋನಿ ರನೌಟ್ ಇಡೀ ಪಂದ್ಯದ ಗತಿಯನ್ನು ಬದಲಿಸಿತು, 10 ಎಸೆತದಲ್ಲಿ 25 ರನ್ ಬೇಕಿದ್ದಾಗ ಎಂ ಎಸ್ ಧೋನಿ ಫರ್ಗ್ಯೂಸನ್ ಎಸೆತದಲ್ಲಿ ಲೆನ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿದರು, ಈ ವೇಳೆ ಎರಡು ರನ್ ತೆಗೆದುಕೊಳ್ಳುವಾಗ ಮಾರ್ಟಿನ್ ಗುಪ್ಟಿಲ್ ಅವರು ಚೆಂಡನ್ನು ದೂರದಿಂದ ನೇರವಾಗಿ ವಿಕೆಟ್ ಗೆ ಹೊಡೆದು ರನೌಟ್ ಮಾಡಿದರು, ಇದು ಟೀಂ ಇಂಡಿಯಾಗೆ ದೊಡ್ಡ ಹೊಡೆತ ನೀಡಿತು.

ಇನ್ನು ಧೋನಿ ರನೌಟ್ ಆಗುತ್ತಿದ್ದಂತೆ ಮೈದಾನದಿಂದ ನಿರ್ಗಮಿಸುವಾಗ ಧೋನಿ ಕಣ್ಣೀರು ಹಾಕುತ್ತಾ ನಿರ್ಗಮಿಸಿದ್ದರು, ಇನ್ನು ಧೋನಿ ರನೌಟ್ ಆಗುತ್ತಿದ್ದಂತೆ ಧೋನಿ ಪತ್ನಿ ಸಾಕ್ಷಿ ಹಣೆ ಚಚ್ಚಿಕೊಂಡಿದ್ದಾರೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಎಂ ಎಸ್ ಧೋನಿ ರನೌಟ್ ಆಗಿದ್ದೇ ಇಡೀ ಪಂದ್ಯದ ಟರ್ನಿಂಗ್ ಪಾಯಿಂಟ್ ಎಂದು ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ರಾಸ್ ಟೇಲರ್ ಹೇಳಿದ್ದಾರೆ.

Sakshi expression of dhoni run out

Please follow and like us:
error0
http://karnatakatoday.in/wp-content/uploads/2019/07/sakshi-dhoni-1024x576.jpghttp://karnatakatoday.in/wp-content/uploads/2019/07/sakshi-dhoni-150x104.jpgKarnataka Trendingಆಟೋಎಲ್ಲಾ ಸುದ್ದಿಗಳುಕ್ರಿಕೆಟ್ಸುದ್ದಿಜಾಲಭಾರತದಿಂದ ಪಂದ್ಯ ಕಿತ್ತುಕೊಂಡ ಆ ಒಂದು ರನ್ ಔಟ್ ಅದೆಷ್ಟೋ ಕೋಟಿ ಕನಸುಗಳನ್ನು ನುಚ್ಚು ನೂರು ಮಾಡಿತ್ತು ಮತ್ತು ಒಂದು ಕ್ಷಣ ಎಲ್ಲರ ಕಣ್ಣಲ್ಲೂ ನೀರು ತರಿಸಿತ್ತು, ವಿಶ್ವ ಕಪ್ ನ ಅಸೆ ಹೊತ್ತು ಕೂತಿದ್ದ ಕೋಟಿ ಜೀವಗಳಿಗೆ ನಿರಾಸೆ ಮೂಡಿಸಿತ್ತು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರು ಕಣ್ಣೀರು ಹಾಕಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ವಿಶ್ವಕ್ಕೆ ಕ್ರಿಕೆಟ್ ಕೇವಲ ಆಟವಾಗಿದ್ದರೆ ಭಾರತಕ್ಕೆ ಅದೊಂದು ಭಾವನಾತ್ಮಕ ಕ್ರೀಡೆ, ನ್ಯೂಜಿಲೆಂಡ್ ವಿರುದ್ಧ ವಿರೋಚಿತ...Film | Devotional | Cricket | Health | India