ಕನ್ನಡ ಚಿತ್ರರಂಗವನ್ನ ಒಂದು ಮಟ್ಟಕ್ಕೆ ತಗೆದುಕೊಂಡು ಹೋದ ಚಿತ್ರ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಹಿಂದೆ ಯಾವ ಚಿತ್ರ ಕೂಡ ಮಾಡದ ದಾಖಲೆಯನ್ನ ಮಾಡಿ ನಮ್ಮ ಕನ್ನಡಿಗರಿಗೂ ಕೂಡ ಟ್ಯಾಲೆಂಟ್ ಇದೆ ಎಂದು ಇಡೀ ದೇಶಕ್ಕೆ ತೋರಿಸಿದ ಚಿತ್ರ ಅಂದರೆ ಅದೂ KGF. ಹೌದು ಕನ್ನಡ ಚಿತ್ರರಂಗದ ಹೆಗ್ಗಳಿಕೆಯ ಚಿತ್ರ KGF ಮೊದಲ ಭಾಗ ಇಡೀ ದೇಶದ ಜನರ ಮೆಚ್ಚುಗೆಗೆ ಮಾತ್ರವಲ್ಲದೆ ಇಡೀ ಪ್ರಪಂಚದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಮಾತ್ರವಲ್ಲದೆ ಯಾವ ಕನ್ನಡ ಸಿನಿಮಾ ಮಾಡದಷ್ಟು ಹಣವನ್ನ ಕೂಡ ಸಂಪಾಧನೆ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.

ಇನ್ನು ಈಗ KGF ಚೀರ್ತ್ರದ ಎರಡನೆಯ ಭಾಗದ ಶೂಟಿಂಗ್ ಈಗ ನಡೆಯುತ್ತಿದ್ದು ಚಿತ್ರದ ಬಿಡುಗಡೆಗಾಗಿ ಕೇವಲ ಯಶ್ ಅಭಿಮಾನಿಗಳು ಮಾತ್ರವಲ್ಲದೆ ಇದು ಭಾರತದ ಎಲ್ಲಾ ಭಾಷೆಯ ಜನರು ಕಾಯುತ್ತಿದ್ದಾರೆ. ಇನ್ನು ಚಿತ್ರದ ಬಹುಭಾಗ ಶೂಟಿಂಗ್ ಈಗಾಗಲೇ ಪೂರ್ಣ ಆಗಿದ್ದು ಕೆಲವು ಶೂಟಿಂಗ್ ಗಳು ಮಾತ್ರ ಬಾಕಿ ಉಳಿದಿದೆ, ಇನ್ನು KGF ಬಹ ಎರಡು ಬಿಡುಗಡೆಗೂ ಮುನ್ನಾನೇ ಕೋಟಿ ಕೋಟಿ ಹಣವನ್ನ ಸಂಪಾದನೆ ಮಾಡುತ್ತಿದ್ದು ಇಡೀ ಭಾರತದ ಚಿತ್ರರಂಗವೇ ಶಾಕ್ ಆಗಿದೆ. ಹಾಗಾದರೆ ಬಿಡುಗಡೆಗೂ ಮುನ್ನ KGF ಚಿತ್ರ ಗಳಿಸಿದ ಹಣ ಎಷ್ಟು ಮತ್ತು ಅದು ಹೇಗೆ ಸಾಧ್ಯ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Salam rockey bai

ಹೌದು ಸ್ನೇಹಿತರೆ KGF ಭಾಗ 2 ಇನ್ನು ಚಿತ್ರೀಕರಣದ ಹಂತದಲ್ಲಿ ಇದೆ, ಇನ್ನು ಚಿತ್ರದ ಶೂಟಿಂಗ್ ನಡೆಯುತ್ತಿರುವಾಗಲೇ ಬೇರೆ ಬೇರೆ ಭಾಷೆಗಳಲ್ಲಿ KGF ಭಾಗ 2 ಚಿತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ಹೌದು KGF ಭಾಗ 2 ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ, ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಿಗೆ ತೆಲುಗಿನಲ್ಲಿ ಭಾರಿ ಅಭಿಮಾನಿಗಳು ಇದ್ದು ಆ ಅಭಿಮಾನಿಗಳು KGF ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇನ್ನು ಈಗ ಸಿಕ್ಕ ಮಾಹಿತಿಯ ಪ್ರಕಾರ KGF ಭಾಗ 2 ರ ತೆಲುಗು ಭಾಷೆಯ ಹಕ್ಕು ಬರೋಬ್ಬರಿ 40 ಕೋಟಿ ರೂಪಾಯಿಗೆ ಮಾರಾಟ ಆಗುತ್ತಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇದುವರೆಗೆ ಯಾವ ಕನ್ನಡ ಚಿತ್ರ ಕೂಡ ಇಷ್ಟು ದುಭಾರಿ ಮೊತ್ತಕ್ಕೆ ಬೇರೆ ಭಾಷೆಗೆ ಮಾರಾಟ ಆಗಿರಲಿಲ್ಲ, ಆದರೆ ಈಗ KGF ಚಿತ್ರ ಇಷ್ಟು ದುಭಾರಿ ಮೊತ್ತಕ್ಕೆ ಮಾರಾಟ ಆಗುತ್ತಿರುವುದು KGF ಭಾಗ 2 ಚಿತ್ರದ ಇನ್ನೊಂದು ಸಾಧನೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಚಿತ್ರದ ಶೂಟಿಂಗ್ ಇನ್ನು ನಡೆಯುತ್ತಿದ್ದು ಯಾವಾಗ ಚಿತ್ರ ಬಿಡುಗಡೆಯಾಗುತ್ತದೆ ಎಂದು ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ, ಇನ್ನು ಈ ಚಿತ್ರ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಎಲ್ಲಾ ಭಾಷೆಗಳ ಹಕ್ಕು ಕೋಟಿ ಕೋಟಿ ರೂಪಾಯಿಗೆ ಮಾರಾಟ ಆಗಲಿದೆ ಮತ್ತು ಚಿತ್ರ ಬಿಡುಗಡೆಯಾದ ನಂತರ ಎಲ್ಲಾ ಚಿತ್ರರಂಗದ ದಾಖಲೆಗಳನ್ನ ಧೂಳಿಪಟ ಮಾಡುತ್ತದೆ ಎಂದು ಅನ್ನುವುದು ಅಭಿಮಾನಿಗಳ ಅಭಿಪ್ರಾಯವಾಗಿದೆ. ಏನೇ ಆಗಲಿ ನಮ್ಮ ಕನ್ನಡ ಈ ಮಟ್ಟಕ್ಕೆ ಬಂದು ನಿಂತಿರುವುದು ನಾವು ಹೆಮ್ಮೆ ಪಡಬೇಕಾದ ವಿಷಯ, ಸ್ನೇಹಿತರೆ ನಿಮ್ಮ ಪ್ರಕಾರ KGF ಭಾಗ 2 ಚಿತ್ರ ಯಾವ ಯಾವ ದಾಖಲೆಯನ್ನ ಮಾಡಲಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Salam rockey bai

Please follow and like us:
error0
http://karnatakatoday.in/wp-content/uploads/2020/02/KGF-Chapter-2-records-1024x576.jpghttp://karnatakatoday.in/wp-content/uploads/2020/02/KGF-Chapter-2-records-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಕನ್ನಡ ಚಿತ್ರರಂಗವನ್ನ ಒಂದು ಮಟ್ಟಕ್ಕೆ ತಗೆದುಕೊಂಡು ಹೋದ ಚಿತ್ರ ಅಂದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಹಿಂದೆ ಯಾವ ಚಿತ್ರ ಕೂಡ ಮಾಡದ ದಾಖಲೆಯನ್ನ ಮಾಡಿ ನಮ್ಮ ಕನ್ನಡಿಗರಿಗೂ ಕೂಡ ಟ್ಯಾಲೆಂಟ್ ಇದೆ ಎಂದು ಇಡೀ ದೇಶಕ್ಕೆ ತೋರಿಸಿದ ಚಿತ್ರ ಅಂದರೆ ಅದೂ KGF. ಹೌದು ಕನ್ನಡ ಚಿತ್ರರಂಗದ ಹೆಗ್ಗಳಿಕೆಯ ಚಿತ್ರ KGF ಮೊದಲ ಭಾಗ ಇಡೀ ದೇಶದ ಜನರ...Film | Devotional | Cricket | Health | India