Sampurnesh Babu

ಉತ್ತರ ಕರ್ನಾಟಕ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನ ನಮ್ಮ ಕನ್ನಡಿಗರು ಕೈ ಬಿಟ್ಟಿಲ್ಲ, ಕನ್ನಡ ತಾಯಿಯ ಪುತ್ರರಾದ ದರ್ಶನ್, ಸುದೀಪ್, ಯಶ್ ಮತ್ತು ಗಣೇಶ್ ಹೀಗೆ ಹಲವಾರು ನಟರು ಪ್ರವಾಹದಲ್ಲಿ ಸಿಲುಕಿಕೊಂಡವರಿಗೆ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿದ್ದಾರೆ. ಇನ್ನು ಇನ್ಫೋಸಿಸ್ ನ ಸುಧಾಮೂರ್ತಿ ಅವರು ಕೂಡ 10 ಕೋಟಿ ಹಣವನ್ನ ನೆರೆ ಸಂತ್ರಸ್ತರಿಗೆ ನೀಡುವುದರ ಜೊತೆಗೆ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನ ನೀಡಿದ್ದಾರೆ, ಇನ್ನು ಇದೆ ಸಮಯದಲ್ಲಿ ತೆಲುಗಿನ ಖ್ಯಾತ ನಟರೊಬ್ಬರು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

ಹಾಗಾದರೆ ಆ ನಟ ಯಾರು ಮತ್ತು ಅವರು ಮಾಡಿದ ಸಹಾಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sampurnesh Babu

ನಟ ಸಂಪೂರ್ಣೇಶ್ ಬಾಬು ಅವರು ಉತ್ತರ ಕರ್ನಾಟದ ಭೀಕರ ಪ್ರವಾಹದಲ್ಲಿ ಸಿಲುಕಿದ ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ, ಉತ್ತರ ಕರ್ನಾಟಕದ ಪ್ರವಾಹದ ಸುದ್ದಿ ನಮ್ಮ ಮನವನ್ನ ಕಲುಕುವಂತೆ ಮಾಡಿದೆ, ಕನ್ನಡದ ಜನ ತೆಲುಗು ಚಿತ್ರಗಳನ್ನ ದಶಕಗಳ ಕಾಲದಿಂದ ಆರಾಧಿಸುತ್ತ ಬಂದಿದ್ದಾರೆ, ಆದ್ದರಿಂದ ಅವರಿಗೆ ಸಹಾಯ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ ಸಂಪೂರ್ಣೇಶ್ ಬಾಬು ಅವರು.

ಮೊನ್ನೆ ಆದ ಪ್ರವಾಹವನ್ನ ನೋಡಿ ನನಗೆ ತುಂಬಾ ನೋವು ಉಂಟಾಗಿದೆ, ಈಗ ತೆಲುಗು ಚಿತ್ರರಂಗ ಕನ್ನಡದ ಜನರಿಗೆ ಸಹಾಯವನ್ನ ಮಾಡುವ ಕಾಲ ಬಂದಿದೆ ಮತ್ತು ನಾನು 2 ಲಕ್ಷ ಹಣವನ್ನ ಮುಖ್ಯ ಮಂತ್ರಿಗಳ ಪ್ರವಾಹ ಪರಿಹಾರ ನಿದಿಗೆ ಹಾಕುತ್ತೇನೆ ಎಂದು ಹೇಳಿದ್ದಾರೆ ನಟ ಸಂಪೂರ್ಣೇಶ್ ಬಾಬು ಅವರು.

Sampurnesh Babu

ಇನ್ನು ತೆಲುಗಿನ ಟಾಪ್ ನಂತರದ ಮಹೇಶ್ ಬಾಬು, ಪ್ರಭಾಸ್, NTR ಸೇರಿದಂತೆ ತಲುಗಿನ ನಟರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಕರ್ನಾಟಕದಲ್ಲೂ ಇದ್ದು ಅವರ ಚಿತ್ರಗಳನ್ನ ನೋಡಿ ಗೆಲ್ಲಿಸಿದ್ದಾರೆ, ಇನ್ನು ಕನ್ನಡ ನಾಡಿನ ಮಕ್ಕಳಾದ ರಜನೀಕಾಂತ್ ಮತ್ತು ರಾಜಮೌಳಿ ಅವರು ಕೂಡ ಪ್ರವಾಹ ಪೀಡಿತ ಜನರಿಗೆ ಸಹಾಯವನ್ನ ಮಾಡಬೇಕು ಅನ್ನುವುದು ನಮ್ಮ ಆಶಯ.

ಸ್ನೇಹಿತರೆ ನಟ ಸಂಪೂರ್ಣೇಶ್ ಬಾಬು ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಸ್ನೇಹಿತರೆ ನೀವು ಕೂಡ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಪ್ರವಾಹ ಪೀಡಿತ ಜನರಿಗೆ ಮಾಡಿ.

Sampurnesh Babu

Please follow and like us:
error0
http://karnatakatoday.in/wp-content/uploads/2019/08/Sampurmnesh-Babu-1024x576.jpghttp://karnatakatoday.in/wp-content/uploads/2019/08/Sampurmnesh-Babu-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಉತ್ತರ ಕರ್ನಾಟಕ ಪ್ರವಾಹದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನ ನಮ್ಮ ಕನ್ನಡಿಗರು ಕೈ ಬಿಟ್ಟಿಲ್ಲ, ಕನ್ನಡ ತಾಯಿಯ ಪುತ್ರರಾದ ದರ್ಶನ್, ಸುದೀಪ್, ಯಶ್ ಮತ್ತು ಗಣೇಶ್ ಹೀಗೆ ಹಲವಾರು ನಟರು ಪ್ರವಾಹದಲ್ಲಿ ಸಿಲುಕಿಕೊಂಡವರಿಗೆ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿದ್ದಾರೆ. ಇನ್ನು ಇನ್ಫೋಸಿಸ್ ನ ಸುಧಾಮೂರ್ತಿ ಅವರು ಕೂಡ 10 ಕೋಟಿ ಹಣವನ್ನ ನೆರೆ ಸಂತ್ರಸ್ತರಿಗೆ ನೀಡುವುದರ ಜೊತೆಗೆ ಅವರಿಗೆ ಬೇಕಾದ ಅಗತ್ಯ ವಸ್ತುಗಳನ್ನ ನೀಡಿದ್ದಾರೆ, ಇನ್ನು ಇದೆ ಸಮಯದಲ್ಲಿ ತೆಲುಗಿನ...Film | Devotional | Cricket | Health | India