ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸಿ ಅದ್ಬುತ ಅಭಿಮಾನಿಗಳನ್ನು ಗಳಿಸಿದ್ದ ನಟ ನಟಿಯರು ಇದೀಗ ಚಿತ್ರರಂಗದಿಂದ ಸ್ವಲ್ಪ ದೂರವಿದ್ದಾರೆ. ಇನ್ನು ಕೆಲವರು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತ ಮನರಂಜನೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.ಆರಂಭದ  ಕಾಲದಲ್ಲಿ ಹೀರೋಯಿನ್ ಆಗಿ ಕರುನಾಡಿನ ಜನರನ್ನ ರಂಜಿಸಿದ ನಟಿಯರು ಕೂಡ ಈ ಸಾಲಲ್ಲಿ ಇದ್ದಾರೆ ಅದೇನೇ ಇರಲಿ ಕಲಾ ಸರಸ್ವತಿ ಒಲಿದ ಈ ಕಲಾವಿದರು ತಮ್ಮ ಜೀವನವನ್ನೇ ನಟನೆಗೆ ಮುಡಿಪಾಗಿಟ್ಟು ಅದೆಷ್ಟೋ ಅದ್ಬುತ ನೆನಪುಗಳನ್ನ ನೀಡಿದ್ದಾರೆ. ಅನಂತಹ ನಟ ನಟಿಯರ ಮಕ್ಕಳು ಈಗ ಮತ್ತೆ ಚಿತ್ರರಂಗದಲ್ಲಿ ಸದ್ಧು ಮಾಡಲು ಬರುತ್ತಿದ್ದಾರೆ. ಹಾಗಿದ್ರೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಯಾವ ನಟರ ಮಕ್ಕಳು ಚಿತ್ರರಂಗದಲ್ಲಿ ಅದ್ರಷ್ಟ ಪರೀಕ್ಷೆಗೆ ಬಂದಿದ್ದಾರೆ ಎನ್ನುವುದನ್ನ ನೋಡೋಣ.

 

ಮೊದಲನೆಯದಾಗಿ ಕನ್ನಡ ಚಿತ್ರರಂಗದ ಲೇಡಿ ಸೂಪರ್ಸ್ಟಾರ್ ಮಾಲಾಶ್ರೀ ಅವರ ಪುತ್ರಿ ಕೂಡ ಈಗ ಚಂದನವನಕ್ಕೆ ಬರಲು ತಯಾರಿಯಾಗಿದ್ದಾರೆ. ಮಾಲಾಶ್ರೀ ಮಗಳು ಅನನ್ಯ ಎಲ್ಲವು ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಕನ್ನಡ ಚಿತ್ರರಂಗಕ್ಕೆ ಕಾಲಿಡಲಿದ್ದಾಳೆ. ಸದ್ಯಕ್ಕೆ ತನ್ನ ಶಿಕ್ಷಣದಲ್ಲಿ ಮುಂದುವರಿಯುತ್ತಿದ್ದಾಳೆ.

ಇನ್ನು ರಿಯಲ್ ಸ್ಟಾರ್ ಉಪ್ಪಿ ಮಗಳು ಐಶ್ವರ್ಯ ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಬಹತೇಕ ಖಚಿತ ಏಕೆಂದರೆ ಈಗಾಗಲೇ ಹೌರಾ ಬ್ರಿಜ್ ಎನ್ನುವ ಚಿತ್ರದಲ್ಲಿ ನಟಿಸಿ ಭಲೇ ಎನಿಸಿಕೊಂಡಿದ್ದಾರೆ. ಹೀಗಾಗಿ ಇವರು ಕೂಡ ಚಿತ್ರರಂಗಕ್ಕೆ ಮುಖ ಮಾಡುವ ಎಲ್ಲ ಸೂಚನೆಗಳಿವೆ. ಇನ್ನು ನಮ್ಮ ನಿಮ್ಮೆಲ್ಲರ ನೆಚ್ಚಿನ ನಟಿ ಸುಧಾರಾಣಿ ಅವರು ಮಗಳು ಕೂಡ ಅಮ್ಮನಂತೆ ಕಲಾವಿದೆ, ಇವರು ಕೂಡ ಶೀಘ್ರದಲ್ಲೇ ಸಿನಿಲೋಕಕ್ಕೆ ಬರಲಿದ್ದಾರೆ.

ಇನ್ನು ಸುಧಾರಾಣಿ ಕೂಡ ಕಿರಿಯ ವಯಸ್ಸಿನಲ್ಲೇ ಶಿವಣ್ಣ ಜೊತೆ ನಟಿಸಿದ್ದರು ಇದರಂತೆ ಅವರ ಮಗಳು ಕೂಡ ಬಣ್ಣ ಹಾಕಲು ರೆಡಿಯಾಗಿದ್ದಾರೆ ಎನ್ನಲಾಗಿದೆ. ಕಲಾ ಸರಸವತಿ ಇವರೆಲ್ಲರಿಗೂ ಉಜ್ವಲ ಭವಿಷ್ಯ ನೀಡಲಿ ಮತ್ತು ಕರುನಾಡಿನ ಜನರ ಅಶಿರವಾದ ದೊರೆಯಲಿ ಎನ್ನುವುದು ನಮ್ಮೆಲ್ಲರ ಆಶಯ.

Please follow and like us:
0
http://karnatakatoday.in/wp-content/uploads/2019/02/sandalwood-actress-1024x576.jpghttp://karnatakatoday.in/wp-content/uploads/2019/02/sandalwood-actress-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರನಗರಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ನಟಿಸಿ ಅದ್ಬುತ ಅಭಿಮಾನಿಗಳನ್ನು ಗಳಿಸಿದ್ದ ನಟ ನಟಿಯರು ಇದೀಗ ಚಿತ್ರರಂಗದಿಂದ ಸ್ವಲ್ಪ ದೂರವಿದ್ದಾರೆ. ಇನ್ನು ಕೆಲವರು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತ ಮನರಂಜನೆ ನೀಡುತ್ತಿದ್ದಾರೆ. ಮತ್ತೆ ಕೆಲವರು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.ಆರಂಭದ  ಕಾಲದಲ್ಲಿ ಹೀರೋಯಿನ್ ಆಗಿ ಕರುನಾಡಿನ ಜನರನ್ನ ರಂಜಿಸಿದ ನಟಿಯರು ಕೂಡ ಈ ಸಾಲಲ್ಲಿ ಇದ್ದಾರೆ ಅದೇನೇ ಇರಲಿ ಕಲಾ ಸರಸ್ವತಿ ಒಲಿದ ಈ ಕಲಾವಿದರು ತಮ್ಮ ಜೀವನವನ್ನೇ ನಟನೆಗೆ ಮುಡಿಪಾಗಿಟ್ಟು ಅದೆಷ್ಟೋ ಅದ್ಬುತ...Kannada News