ಯಾರೇ ನೀನು ಚಲುವೆ ಒಂದು ಕಾಲದಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದ ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಜನರಿಗೆ ಪ್ರೀತಿ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದೆ ಈ ಚಿತ್ರ ಎಂದು ಹೇಳಬಹುದು. ಇನ್ನು ಆಗಿನ ಕಾಲದಲ್ಲಿ ರವಿಚಂದ್ರನ್ ಅವರ ಚಿತ್ರವನ್ನ ನೋಡಲು ಜನರು ಮುಗಿಬೀಳುತ್ತಿದ್ದರು, ರವಿಚಂದ್ರನ್ ಅವರ ಚಿತ್ರಗಳಲ್ಲಿ ಬರುವ ಪ್ರೇಮ ಕಥೆಗಳು ಅಷ್ಟೊಂದು ಚನ್ನಾಗಿ ಇರುತ್ತಿತ್ತು. ಇನ್ನು ಆ ಕಾಲದಲ್ಲಿ ಯಾರೇ ನೀನು ಚಲುವೆ ಚಿತ್ರ ಕನ್ನಡದ ಚಿತ್ರರಂಗದಲ್ಲಿ ತನ್ನದೇ ಆದ ದಾಖಲೆಯನ್ನ ಸೃಷ್ಟಿ ಮಾಡಿತ್ತು ಮತ್ತು ಚಿತ್ರಕಥೆ ಕೂಡ ಅಷ್ಟು ಚನ್ನಾಗಿ ಇದ್ದಿತ್ತು, ಇನ್ನು ಚಿತ್ರದಲ್ಲಿ ನಾಯಕಿಯಾಗಿ ನಟನೆ ಮಾಡಿದ ನಟಿ ಸಂಗೀತ ಅವರನ್ನ ತಮ್ಮ ಡ್ರೀಮ್ ಗರ್ಲ್ ಅನ್ನುವಂತೆ ಊಹಿಸಿಕೊಂಡರು ಹುಡುಗರು.

ಇನ್ನು ಸಂಗೀತ ಅವರು ಕನ್ನಡದಲ್ಲಿ ಮಾಡಿದ್ದು ಕೆಲವೇ ಕೆಲವು ಚಿತ್ರಗಳು ಮಾತ್ರ, ಆದರೆ ಮಾಡಿದ್ದು ಸ್ವಲ್ಪ ಚಿತ್ರಗಳಾದರೂ ತುಂಬಾ ಅಭಿಮಾನಿಗಳನ್ನ ಹೊಂದಿದ್ದರು ನಟಿ ಸಂಗೀತ ಅವರು. ನಟಿ ಸಂಗೀತ ಅವರು ಚಿತ್ರರಂಗದಲ್ಲಿ ಸಾಧನೆಗಳನ್ನ ಮಾಡುವ ಸಮಯದಲ್ಲೇ ಚಿತ್ರರಂಗವನ್ನ ತೊರೆದರು ಮತ್ತು ಚಿತ್ರರಂಗವನ್ನ ತೊರೆಯಲು ಕಾರಣ ಏನು ಮತ್ತು ನಟಿ ಸಂಗೀತ ಅವರು ಈಗ ಎಲ್ಲಿದ್ದಾರೆ ಅನ್ನುವುದರ ಬಗ್ಗೆ ಹೆಚ್ಚು ಜನರಿಗೆ ಇನ್ನು ಕೂಡ ತಿಳಿದಿಲ್ಲ. ಹಾಗಾದರೆ ನಟಿ ಸಂಗೀತ ಅವರು ಎಲ್ಲಿದ್ದಾರೆ ಮತ್ತು ಯಾಕೆ ಅವರು ಚಿತ್ರರಂಗವನ್ನ ತೊರೆದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಮತ್ತು ನಟಿ ಸಂಗೀತ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

sangita madhavan nair

ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ನಟನೆ ಮಾಡಿದ ನಟಿ ಸಂಗೀತ 2000 ಇಸವಿಯಲ್ಲಿ ಕ್ಯಾಮೆರಾ ಮ್ಯಾನ್ ಸರ್ವಣ್ಣ ಅವರನ್ನ ಮದುವೆಯಾದರು. ಇನ್ನು ನಟಿ ಸಂಗೀತ ಅವರು ಮದುವೆಯಾಗಿದ್ದೆ ತಡ ನಾವು ಇನ್ನುಮುಂದೆ ಯಾವುದೇ ಚಿತ್ರಗಳಲ್ಲಿ ನಟನೆ ಮಾಡುವುದಿಲ್ಲ ಎಂದು ಪ್ರಕಟಣೆಯನ್ನ ಕೊಟ್ಟರು ನಟಿ ಸಂಗೀತ. ನಟಿ ಸಂಗೀತ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಬಹಳ ಒಳ್ಳೆಯ ವ್ಯಕ್ತಿತ್ವವನ್ನ ಹೊಂದಿರುವವರು, ಸಾಮಾನ್ಯ ಜೀವನವನ್ನ ನಡೆಸಲು ಇಷ್ಟಪಡುವ ನಟಿ ಸಂಗೀತ ಹೆಚ್ಚಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ನಟಿ ಸಂಗೀತ ಅವರು ತಾನಾಯಿತು ತನ್ನ ಕುಟುಂಬ ಆಯಿತು ಎಂದು ಬದುಕುತ್ತಿದ್ದಾರೆ, ಇನ್ನು ನಟಿ ಸಂಗೀತ ಅವರು ತನ್ನ ಗಂಡ ಯಾವುದಾದರೂ ಸಿನಿಮಾಗಳಲ್ಲಿ ಕ್ಯಾಮೆರಾ ಮ್ಯಾನ್ ಆಗಿ ಕೆಲಸ ಮಾಡಿದರೆ ನಟಿ ಸಂಗೀತ ಅವರು ಗಂಡನ ಸಹಾಯಕಿ ಆಗಿ ಅವರ ಜೊತೆ ಕೆಲಸವನ್ನ ಮಾಡುತ್ತಾರೆ.

ಕ್ಯಾಮೆರಾಗಳ ಮುಂದೆ ನಿಲ್ಲುತ್ತಿದ್ದ ನಟಿ ಸಂಗೀತ ಅವರು ಈಗ ಕ್ಯಾಮೆರಾ ಹಿಂದೆ ನಿಂತು ತನ್ನ ಗಂಡನಿಗೆ ಸಹಾಯವನ್ನ ಮಾಡುತ್ತಿದ್ದಾರೆ, ಹಿಂದೆ ಸ್ಟಾರ್ ನಟಿಯಾಗಿ ಮಿಂಚಿದ ಸಂಗೀತ ಅವರಿಗೆ ಸಹಾಯಕಿ ಆಗಿ ಕೆಲಸ ಮಾಡಲು ಯಾವುದೇ ಮುಜುಗರ ಇಲ್ಲ ಎಂದು ಹೇಳಿಕೊಂಡಿದ್ದಾರೆ, ನಾನು ಕೆಲಸ ಮಾಡುತ್ತಿರುವುದು ನನ್ನ ಗಂಡನ ಜೊತೆಯಲ್ಲಿ ಮತ್ತು ಗಂಡನಿಗಾಗಿ, ಈ ಕಾರಣಕ್ಕೆ ಈ ಕೆಲಸ ನಮಗೆ ತುಂಬಾ ಸಂತೋಷ ಕೊಡುತ್ತದೆ ಎಂದು ಹೇಳುತ್ತಾರೆ ನಟಿ ಸಂಗೀತ ಅವರು. ಈ ಸಂಗೀತ ಅವರಂತ ಹೆಂಡತಿಯನ್ನ ಪಡೆದಿರುವ ಕ್ಯಾಮೆರಾ ಮ್ಯಾನ್ ಸರ್ವಣ್ಣ ಅವರು ತುಂಬಾ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ನಟಿ ಸಂಗೀತ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

sangita madhavan nair

Please follow and like us:
error0
http://karnatakatoday.in/wp-content/uploads/2019/12/sangita-madhavan-nair-1024x576.jpghttp://karnatakatoday.in/wp-content/uploads/2019/12/sangita-madhavan-nair-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾರೇ ನೀನು ಚಲುವೆ ಒಂದು ಕಾಲದಲ್ಲಿ ಸಂಚಲನವನ್ನ ಸೃಷ್ಟಿ ಮಾಡಿದ ಚಿತ್ರ ಎಂದು ಹೇಳಿದರೆ ತಪ್ಪಾಗಲ್ಲ, ಜನರಿಗೆ ಪ್ರೀತಿ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದೆ ಈ ಚಿತ್ರ ಎಂದು ಹೇಳಬಹುದು. ಇನ್ನು ಆಗಿನ ಕಾಲದಲ್ಲಿ ರವಿಚಂದ್ರನ್ ಅವರ ಚಿತ್ರವನ್ನ ನೋಡಲು ಜನರು ಮುಗಿಬೀಳುತ್ತಿದ್ದರು, ರವಿಚಂದ್ರನ್ ಅವರ ಚಿತ್ರಗಳಲ್ಲಿ ಬರುವ ಪ್ರೇಮ ಕಥೆಗಳು ಅಷ್ಟೊಂದು ಚನ್ನಾಗಿ ಇರುತ್ತಿತ್ತು. ಇನ್ನು ಆ ಕಾಲದಲ್ಲಿ ಯಾರೇ ನೀನು ಚಲುವೆ ಚಿತ್ರ ಕನ್ನಡದ ಚಿತ್ರರಂಗದಲ್ಲಿ...Film | Devotional | Cricket | Health | India