ರಾಜಸ್ತಾನದ ಸಿಖಾರ್ ಜಿಲ್ಲೆಯ ಬೇರಿ ಹಳ್ಳಿಯಲ್ಲಿ ವಾಸವಿರುವ ಈ ಮಹಿಳೆಯ ಹೆಸರು ಸಂತೋಷಿ ದೇವಿ, ಇನ್ನು ಈಕೆಯ ಗಂಡ ರಾಮ್ ಕರಣ್ ಹೋಂ ಗಾರ್ಡ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಕುಟುಂಬ ವಿಭಜನೆ ಆದಾಗ ರಾಮ್ ಕರಣ್ ಪಾಲಿಗೆ ಒಂದೂವರೆ ಎಕರೆ ಜಮೀನು ಬಂತು ಮತ್ತು ಭೂಮಿ ಏನು ಬೇಸಾಯ ಮಾಡಲು ಸಾಧ್ಯವಾಗದ ಭೂಮಿ ಆಗಿತ್ತು. ಇನ್ನು ಇದನ್ನ ನೋಡಿದ ಹಳ್ಳಿಯ ಸಂತೋಷಿ ದೇವಿಯವರನ್ನ ನೋಡಿ ನಿಮ್ಮ ಮೂವರು ಮಕ್ಕಳನ್ನ ಓದಿಸಿ ಅವರಿಗೆ ಸರಿಯಾಗಿ ಊಟ ಕೊಡಲು ಕೂಡ ನಿನ್ನ ಕೈಯಲ್ಲಿ ಆಗಲ್ಲ ಎಂದು ಗೇಲಿ ಮಾಡುತ್ತಿದ್ದರು. ಇನ್ನು ಜನರ ಮಾತುಗಳನ್ನ ಚಾಲೆಂಜಿಂಗ್ ಆಗಿ ತೆಗೆದುಕೊಂಡ ದೇವಿಯವರು ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾದರು.

ಇನ್ನು ತನ್ನ ಬಳಿ ಒಂದು ಎಮ್ಮೆಯನ್ನ ಮಾರಾಟ ಮಾಡಿದ ದೇವಿಯವರು 220 ದಾಳಿಂಬೆ ಗಿಡಗಳನ್ನ ತಂದು ತನ್ನ ಜಮೀನಿನಲ್ಲಿ ನೆಟ್ಟರು ಮತ್ತು ಉಳಿದ ಹಣದಲ್ಲಿ ಗಿಡಗಳಿಗೆ ತುಂತುರು ನೀರಾವರಿಯನ್ನ ಅಳವಡಿಕೆ ಮಾಡಿದರು. ಇನ್ನು ಒಬ್ಬ ಕೂಲಿ ಆಲಂನ ಕೂಡ ಇಟ್ಟುಕೊಳ್ಳದ ಸಂತೋಷಿ ದೇವಿಗೆ ಸಂಜೆಯ ಸಮಯದಲ್ಲಿ ಗಂಡ ಮತ್ತು ಮಕ್ಕಳು ಸಹಾಯ ಮಾಡುತ್ತಿದ್ದರು, ಇನ್ನು ಸ್ವಲ್ಪಾನು ಕೆಮಿಕಲ್ ಗೊಬ್ಬರವನ್ನ ಹಾಕದೆ ಸಗಣಿಯಿಂದ ತಯಾರು ಮಾಡಿದ ಗೊಬ್ಬರವನ್ನ ದಾಳಿಂಬೆ ಗಿಡಗಳಿಗೆ ಹಾಕಿದರು ದೇವಿಯವರು. ಇನ್ನು ಗಿಡಗಳು ದಾಳಿಂಬೆ ಹಣ್ಣನ ಬಿಡಲು ಆರಂಭಿಸಿದಾಗ ಗಿಡಗಳನ್ನ ಡ್ರಿಮ್ ಮಾಡುತ್ತಿದ್ದ ದೇವಿಯವರು ಅನಾವಶ್ಯಕವಾಗಿ ಬೆಳೆಯುತ್ತಿದ್ದ ಕೊಂಬೆಗಳನ್ನ ಕಟ್ ಮಾಡುತ್ತಿದ್ದರು ಮತ್ತು ಹೀಗೆ ಮಾಡುವುದರಿಂದ ಗಿಡಗಳು ಹಣ್ಣನ್ನ ಚನ್ನಾಗಿ ಪೋಷಣೆ ಮಾಡುತ್ತದೆ.

ಇನ್ನು ಸಂತೋಷಿ ದೇವಿಯವರು ಮಾಡಿದ ಕೆಲವು ಉಪಾಯಗಳಿಂದ ದಾಳಿಂಬೆ ಹಣ್ಣುಗಳು ದೊಡ್ಡ ಗಾತ್ರದಲ್ಲಿ ಬೆಳೆಯುತ್ತಿದ್ದವು, ಇನ್ನು ಮೂರೂ ವರ್ಷಗಳ ನಂತರ ಮೊದಲ ಬೆಲೆ ಬಂದಾಗ ಸುಮಾರು 3 ಲಕ್ಷ ರೂಪಾಯಿ ಲಾಭ ಗಳಿಸಿದರು ಸಂತೋಷಿ ದೇವಿಯವರು. ಇನ್ನು ಮರಗಳ ಶುದ್ಧ ಕಟ್ಟೆಗಳನ್ನ ನಿರ್ಮಾಣ ಮಾಡಿದ ಸಲುವಾಗಿ ಮರಗಳಿಗೆ ಒಳ್ಳೆಯ ತೇವಾಂಶ ಸಿಗುತ್ತಿತ್ತುಮತ್ತು ಮರಗಳ ಮದ್ಯೆ ಜಾಗ ಇದ್ದ ಕಾರಣ ದಾಳಿಂಬಿಹೆ ಮರಗಳ ನಡುವೆ ಮೂಸಂಬಿ, ನಿಂಬೆ ಮತ್ತು ಸೇಬು ಗಿಡಗಳನ್ನ ನೆಟ್ಟ ಸಂತೋಷಿ ದೇವಿಯವರು ಅದನ್ನ ಚನ್ನಾಗಿ ಪೋಷಣೆ ಮಾಡಿದರು. ಇನ್ನು ಜಮೀನಿನಲ್ಲಿ ಸೋಲಾರ್ ಅಳವಡಿಕೆ ಮಾಡಿದ ದೇವಿಯವರು ವಿದ್ಯುತ್ ವೆಚ್ಚವನ್ನ ಕಡಿಮೆ ಮಾಡಿದರು, ಇನ್ನು ಸಂತೋಷಿ ದೇವಿಯವರ ಭೂಮಿಯಲ್ಲಿ ಬೆಲೆ ದಾಳಿಂಬೆಯನ್ನ ರುಚಿಯನ್ನ ನೋಡಿದ ಜನ ಸ್ವತಃ ಅವರ ತೋಟಕ್ಕೆ ಬಂದು ಖರೀದಿ ಮಾಡುತ್ತಿದ್ದಾರೆ.

ದೇವಿಯವರು ತಾವು ಬೆಳೆದ ಹಣ್ಣುಗಳನ್ನ ಯಾವುದೇ ಮಧ್ಯವರ್ತಿಗಳಿಗೆ ಮಾರಾಟ ಮಾಡುವುದಿಲ್ಲ, ಇನ್ನು ಒಂದು ಹೆಜ್ಜೆ ಮುಂದೆ ಹೋದ ದೇವಿಯವರು ದಾಳಿಂಬೆ ಮರದಿಂದ ಕಟ್ ಮಾಡಿಯೇ ಕೊಂಬೆಗಳನ್ನ ಬಳಸಿಕೊಂಡು ದಾಳಿಂಬೆ ನರ್ಸರಿಯನ್ನ ಆರಂಭ ಮಾಡಿದ್ದಾರೆ ಮತ್ತು ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಿಯವರ ನರ್ಸರಿಗೆ ಬಂದು ಗಿಡಗಳನ್ನ ಖರೀದಿ ಮಾಡುತ್ತಿದ್ದಾರೆ. ಇನ್ನು ಈಗ ಪ್ರತಿ ವರ್ಷ ದಾಳಿಂಬೆಯಿಂದ 10 ಲಕ್ಷ ಮತ್ತು ಇತರೆ ಹಣ್ಣು ಹಾಗು ನರ್ಸರಿಯಿಂದ 15 ಲಕ್ಷ ಲಾಭ ಗಳಿಸುತ್ತಿದ್ದಾರೆ ಸಂತೋಷಿ ದೇವಿಯವರು, ಇನ್ನು ತಮಗೆ ಸಿಕ್ಕ ಅವಾರ್ಡ್ ಗಳಿಂದ ಬಂದ ಹಣದಲ್ಲಿ ಒಂದು ರೆಸ್ಟ್ ಹೌಸ್ ಅಂದರೆ ವಿಶ್ರಾಂತಿ ಮನೆಯನ್ನ ನಿರ್ಮಾಣ ಮಾಡಿರುವ ದೇವಿಯವರು ತಮ್ಮ ತೋಟದ ವ್ಯವಸಾಯ ಪದ್ದತಿಯನ್ನ ತಿಳಿಯಲು ಬರುವ ಜನರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾರೆ.

Santhoshi devi Dalimbhe

ಇನ್ನು ಪ್ರತಿದಿನ 15-20 ಜನ ತೋಟವನ್ನ ನೋಡಲು ಬರುತ್ತಾರೆ ಮತ್ತು ಅವರೆಲ್ಲರಿಗೂ ಕೂಡ ದೇವಿಯವರಿಗೆ ಅಡುಗೆ ಮಾಡಿ ಊಟ ಕೊಡುತ್ತಾರೆ, ತನ್ನ ಮೂವರು ಮಕ್ಕಳಿಗೆ ಬಿ.ಎಸ್ ಸಿ ಅಗ್ರಿಕಲ್ಚರ್ ಓದಿಸಿರುವ ಸಂತೋಷಿ ದೇವಿಯವರು ಮಕ್ಕಳಿಗೆ ಜೀವನದ ಹಾದಿಯನ್ನ ಹಾಕಿಕೊಟ್ಟಿದ್ದಾರೆ ಮತ್ತು ಇತ್ತೀಚಿಗೆ ಮಗಳ ಮದುವೆಯನ್ನ ಮಾಡಿ ಗಿಡಗಳನ್ನ ಉಡುಗೊರೆಯಾಗಿ ನೀಡಿದ್ದಾರೆ. ಜೀರೋ ಆಗಿದ್ದ ದೇವಿಯವರು ಈಗ ದೇಶ ವಿದೇಶಗಳಲ್ಲಿ ಹೆಸರನ್ನ ಗಳಿಸಿದ್ದಾರೆ ಮತ್ತು ಇದೆಲ್ಲ ಆಗಿದ್ದು ವ್ಯವಸಾಯದಿಂದ, ಸ್ನೇಹಿತರೆ ದೇವಿಯವರ ಈ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Santhoshi-devi-Dalimbhe-1024x576.jpghttp://karnatakatoday.in/wp-content/uploads/2020/03/Santhoshi-devi-Dalimbhe-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲರಾಜಸ್ತಾನದ ಸಿಖಾರ್ ಜಿಲ್ಲೆಯ ಬೇರಿ ಹಳ್ಳಿಯಲ್ಲಿ ವಾಸವಿರುವ ಈ ಮಹಿಳೆಯ ಹೆಸರು ಸಂತೋಷಿ ದೇವಿ, ಇನ್ನು ಈಕೆಯ ಗಂಡ ರಾಮ್ ಕರಣ್ ಹೋಂ ಗಾರ್ಡ್ ಆಗಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಕುಟುಂಬ ವಿಭಜನೆ ಆದಾಗ ರಾಮ್ ಕರಣ್ ಪಾಲಿಗೆ ಒಂದೂವರೆ ಎಕರೆ ಜಮೀನು ಬಂತು ಮತ್ತು ಭೂಮಿ ಏನು ಬೇಸಾಯ ಮಾಡಲು ಸಾಧ್ಯವಾಗದ ಭೂಮಿ ಆಗಿತ್ತು. ಇನ್ನು ಇದನ್ನ ನೋಡಿದ ಹಳ್ಳಿಯ ಸಂತೋಷಿ ದೇವಿಯವರನ್ನ ನೋಡಿ ನಿಮ್ಮ ಮೂವರು...Film | Devotional | Cricket | Health | India