ಕಿರುತೆರೆಯಲ್ಲಿ ಜನರನ್ನು ಅತಿಹೆಚ್ಚು ಮನರಂಜನೆ ನೀಡುವ ಸಂಗೀತದ ಹಬ್ಬ ಎಂದರೆ ಅದು ಜಿ ವಾಹಿನಿಯಯಲ್ಲಿ ಪ್ರಸಾರವಾಗುವ ಸರಿಗಮಪ ಕಳೆದ 14 ಸೀಸನ್ ಗಳಿಂದಲೂ ಮನೆಮಾತಾಗಿರುವ ಈ ಕಾರ್ಯಕ್ರಮ ಈಗ 15 ನೇ ಸೀಸನ್ ಆರಂಭವಾಗಿ ಸ್ಪರ್ಧಿಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಭಾವಂತರನ್ನು ಕನ್ನಡಿಗರಿಗೆ ಪರಿಚಯಿಸುತ್ತಿರುವ ಕೆಲಸ ಮಾಡುತ್ತಿದೆ ಜೀ ವಾಹಿನಿ. ಇನ್ನು ಈ ಹದಿನೈದನೇ ಆವೃತ್ತಿಯಲ್ಲಿ ಅತ್ಯದ್ಭುತ ಕಲಾಕಾರರನ್ನು ನಾವು ನೋಡುತ್ತಿದ್ದೇವೆ. ಇನ್ನು ಜಡ್ಜ್ ಗಳ ಬಗ್ಗೆ ಹೇಳಬೇಕಾಗಿಲ್ಲ ಸಂಗೀತ ಮಾಂತ್ರಿಕ ಹಂಸಲೇಖ, ವಿಜಯ ಪ್ರಕಾಶ್ ಹಾಗು ಕರುನಾಡಿನ ನೆಚ್ಚಿನ ಗಾಯಕ ರಾಜೇಶ್ ಕೃಷ್ಣನ್ ಅವರ ಸಂಗೀತಕ್ಕೆ ಮಾರುಹೋದವರಿಲ್ಲ. ಇನ್ನು ಇನ್ನೊಬ್ಬ ಸ್ಟಾರ್ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಕೂಡುವಿಕೆ ಈ ಷೋ ಗೆ ಇನ್ನಷ್ಟು ಕಳೆ ತಂದಿದೆ. ಷೋ ಇಷ್ಟೊಂದು ಹಿಟ್ ಆಗ ಲು ಸ್ಪರ್ಧಿಗಳ ಸಂಗೀತ, ಜಡ್ಜ್ ಮತ್ತು ಅನುಶ್ರೀ ಅವರನಿರೂಪಣೆ ಎಂತಹವರನ್ನು ಷೋ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ.

ಆ ಮಟ್ಟಿನ ಯಶಸ್ಸು ಕಂಡಿದೆ ಸರಿಗಮಪ, ಇನ್ನು ಇಷ್ಟೊಂದು ಯಶಸ್ಸು ಕಂಡಿರುವ ಈ ಕಾರ್ಯಕ್ರಮದ ಸ್ಪರ್ಧಿಗಳ ಹಾಗು ಜಡ್ಜ್ ಗಳ ಸಂಬಳದ ಬಗ್ಗೆ ಇರುವ ಕೆಲ ಮಾಹಿತಿಗಳನ್ನು ನಿಮಗೆ ಹೇಳುತ್ತೇವೆ ಕೇಳಿ. ಇದನ್ನು ಕೇಳಿದರೆ ನಿಮಗೆ ತಲೆತಿರುಗಬಹುದು. ಈ ವೇತನದ ವಿವರಗಳು ಕೆಲ ಬಲ್ಲ ಮೂಲಗಳಿಂದ ತಿಳಿದಿದ್ದು ಸ್ವಲ್ಪ ವ್ಯತ್ಯಯ ಕೂಡ ಇರಬಹುದಾಗಿದೆ. ಮೊದಲೆಯದಾಗಿ ನಿರೂಪಕಿ ಅನುಶ್ರೀ ಒಂದು ಎಪಿಸೋಡ್ ಗೆ 90 ಸಾವಿರ ವೇತನ ಹಾಗು ವಿಜಯ್ ಪ್ರಕಾಶ್ 75 ಸಾವಿರ ಮತ್ತು ಮುಖ್ಯ ಗುರುಗಳಾದ ಹಂಸಲೇಖ ಅವರು ಒಂದು ಲಕ್ಷದ ಎಪ್ಪತೈದು ಸಾವಿರ ಪಡೆಯುತ್ತಾರೆ.

ಹಾಗೆ ಅರ್ಜುನ್ ಜನ್ಯ ಅವರೊಂದಿಗೆ ಅವರ ಸಂಗೀತದ ಟೀಮ್ ಕೂಡ ಇದ್ದು ಇವರು ಕೂಡ ಒಂದೂವರೆ ಲಕ್ಷದಷ್ಟು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಹಲವರ ಪ್ರಕಾರ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವ ವೇತನವು ನೀಡಲ್ಲ ಎನ್ನುವ ವಾದವಿದೆ. ಆದರೂ ಕೂಡ ಸೂತ್ರಗಳ ಪ್ರಕಾರ ಇವರಿಗೂ ಕೂಡ ಎಲಿಮೇನೇಟ್ ಆಗುವ ತನಕ ಎಪಿಸೋಡ್ ಒಂದಕ್ಕೆ ಹದಿನೈದು ಸಾವಿರ ನೀಡಲಾಗುತ್ತದೆ ಎನ್ನಲಾಗುತ್ತಿದೆ.

ಜೀ ವಾಹಿನಿಯ ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋನಲ್ಲಿ ಅತೀ ಹೆಚ್ಚು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದ ರಾಜೇಶ್‌ ಕೃಷ್ಣನ್‌, ಕಳೆದ ಆವೃತ್ತಿಯಲ್ಲಿ ಇರಲಿಲ್ಲ. ಈ ಆವೃತ್ತಿಗೆ ಆಗಮಿಸಿದ್ದು, ರಿಯಾಲಿಟಿ ಶೋ ಮತ್ತಷ್ಟು ಕಲರ್‌ಫ‌ುಲ್‌ ಆಗಿರಲಿದೆಅದೇನೇ ಕರುನಾಡಿನ ಪ್ರತಿಭೆಗಳನ್ನು ಸಮಾಜಕ್ಕೆ ತೋರಿಸುತ್ತಿದೆ ಅವರಿಗೆ ನಮನಗಳು ಇದರಲ್ಲಿ ಹಳ್ಳಿಯ ಪ್ರತಿಭೆಗಳಾದ ಗಂಗಮ್ಮ ಮತ್ತು ಹನುಮಂತ ಕೂಡ ಇದ್ದಾರೆ. ಈ ಬಾರಿಯ ವಿನ್ನರ್ ಯಾರಾಗಬೇಕು ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/sarigamapa-salary-1024x576.jpghttp://karnatakatoday.in/wp-content/uploads/2018/11/sarigamapa-salary-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರಕಿರುತೆರೆಯಲ್ಲಿ ಜನರನ್ನು ಅತಿಹೆಚ್ಚು ಮನರಂಜನೆ ನೀಡುವ ಸಂಗೀತದ ಹಬ್ಬ ಎಂದರೆ ಅದು ಜಿ ವಾಹಿನಿಯಯಲ್ಲಿ ಪ್ರಸಾರವಾಗುವ ಸರಿಗಮಪ ಕಳೆದ 14 ಸೀಸನ್ ಗಳಿಂದಲೂ ಮನೆಮಾತಾಗಿರುವ ಈ ಕಾರ್ಯಕ್ರಮ ಈಗ 15 ನೇ ಸೀಸನ್ ಆರಂಭವಾಗಿ ಸ್ಪರ್ಧಿಗಳು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ಪ್ರತಿಭಾವಂತರನ್ನು ಕನ್ನಡಿಗರಿಗೆ ಪರಿಚಯಿಸುತ್ತಿರುವ ಕೆಲಸ ಮಾಡುತ್ತಿದೆ ಜೀ ವಾಹಿನಿ. ಇನ್ನು ಈ ಹದಿನೈದನೇ ಆವೃತ್ತಿಯಲ್ಲಿ ಅತ್ಯದ್ಭುತ ಕಲಾಕಾರರನ್ನು ನಾವು ನೋಡುತ್ತಿದ್ದೇವೆ. ಇನ್ನು ಜಡ್ಜ್...Kannada News