ಜ್ಯೋತಿಷ್ಯದಲ್ಲಿ ಶನಿಯು ನ್ಯಾಯಾಧೀಶನೆಂದು ಪರಿಗಣಿಸಲಾಗುತ್ತದೆ. ಈ ಗ್ರಹವು ನಮ್ಮ ಕ್ರಿಯೆಗಳ ಫಲವನ್ನು ನೀಡುತ್ತದೆ. ಕರ್ಮಫಲವನ್ನು ನೀಡುತ್ತಾನೆ ಶನಿ. ಶನಿ ಮುನಿಸಿಕೊಂಡರೆ ನಿಮ್ಮ ಕೆಲಸದಲ್ಲಿ ಸುಲಭವಾದ ಯಶಸ್ಸು ಕಂಡುಬರುವುದಿಲ್ಲ, ಜೊತೆಗೆ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಯೋಜನೆಗಳು ನಿಮಗೆ ಕೈಕೊಡಬಹುದು ಮತ್ತು ನಿಮ್ಮ ವಿರುದ್ಧ ಶತ್ರುಗಳ ಕೆಲಸ ಹೆಚ್ಚಾಗಬಹುದು ಮತ್ತು ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಹೀಗಾಗಿ ಶಾಸ್ತ್ರದಲ್ಲಿ ಶನಿವಾರ ಮಾತ್ರ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳುತ್ತಾರೆ ಹಾಗಾದರೆ ಶನಿಯ ಕೆಂಗಣ್ಣಿಗೆ ಗುರಿಯಾಗುವ ಆ ಕಾರ್ಯಗಳು ಯಾವುವು ಮತ್ತು ಅದರ ಪರಿಣಾಮ ಏನು ಎನ್ನುವುದನ್ನು ತಿಳಿಯೋಣ. ಮೊದಲ ಸೂಚನೆ ಏನೆಂದರೆ ಕಬ್ಬಿಣ ಅಥವಾ ಕಬ್ಬಿಣದಿಂದ ಮಾಡಿದ ಯಾವುದನ್ನೂ ಕೂಡ ಶನಿವಾರ ಮನೆಗೆ ತರಬೇಡಿ. ಕಬ್ಬಿಣದ ವಸ್ತುಗಳನ್ನು ನೀವು ಈ ದಿನ ದಾನ ಮಾಡುವುದು ಉತ್ತಮ ಯಾವುದೆ ಕಾರಣಕ್ಕೂ ಹೊಸ ವಸ್ತು ತರಬೇಡಿ.

ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಶನಿವಾರ ಖರೀದಿಸಬಾರದು ಎಂಬುದು ಭಾರತೀಯ ಸಮಾಜದಲ್ಲಿ ದೀರ್ಘಕಾಲದ ಸಂಪ್ರದಾಯವಾಗಿದೆ. ಶನಿವಾರ ಕಬ್ಬಿಣದ ವಸ್ತುಗಳನ್ನು ಖರೀದಿಸುವ ಮೂಲಕ ಶನಿ ದೇವ ಕೋಪಗೊಳ್ಳುತ್ತಾನೆ ಎಂದು ನಂಬಲಾಗಿದೆ. ಉಪ್ಪು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ನೀವು ಉಪ್ಪು ಖರೀದಿಸಲು ಬಯಸಿದರೆ, ಶನಿವಾರದ ಬದಲು ಇನ್ನೊಂದು ದಿನ ಖರೀದಿಸುವುದು ಉತ್ತಮ. ಶನಿವಾರ ಉಪ್ಪು ಖರೀದಿಸುವ ಮೂಲಕ ಅದು ಆ ಮನೆಗೆ ಸಾಲ ತರುತ್ತದೆ. ನಿಮ್ಮ ಆರ್ಥಿಕ ಸ್ಥಿತಿ ಕೂಡ ಅಲ್ಲಾಡುತ್ತದೆ.

ಕತ್ತರಿಸುವ ಯಾವುದೇ ಸಾಧನವನ್ನು ಕೂಡ ಶನಿವಾರ ಖರೀದಿ ಮಾಡಿ ಮನೆಗೆ ತರಬೇಡಿ. ಇದು ನಿಮ್ಮ ಸಂಬಂಧಗಳಲ್ಲಿ ಬಿರುಕು ತರುತ್ತದೆ. ಸುಡುವ ವಸ್ತುಗಳನ್ನು ಹಾಗು ಇಂಧನ, ಸೀಮೆಎಣ್ಣೆ ಇತ್ಯಾದಿಗಳನ್ನು ಅಡುಗೆಮನೆಗೆ ಅಗತ್ಯವೆಂದು ಪರಿಗಣಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ, ಬೆಂಕಿಯನ್ನು ದೇವತೆ ಎಂದು ಪರಿಗಣಿಸಲಾಗುತ್ತದೆ ಮತ್ತು ಇಂಧನಕ್ಕೆ ವಿಶೇಷ ಒತ್ತು ನೀಡಲಾಗುತ್ತದೆ, ಆದರೆ ಶನಿವಾರ ಇಂಧನವನ್ನು ಖರೀದಿಸುವುದನ್ನು ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ ಎನ್ನಲಾಗಿದೆ . ಶನಿವಾರ ಮನೆಗೆ ತಂದ ಇಂಧನವು ಕುಟುಂಬಕ್ಕೆ ನೋವುಂಟು ಮಾಡುತ್ತದೆ ಎಂದು ಹೇಳಲಾಗಿದೆ.

ವಿಶೇಷವಾಗಿ ಕಪ್ಪು ಬೂಟುಗಳನ್ನು ಇಷ್ಟಪಡುವ ಜನರ ಸಂಖ್ಯೆ ಬಹಳ ಜಾಸ್ತಿ . ನೀವು ಕಪ್ಪು ಬೂಟುಗಳನ್ನು ಖರೀದಿಸಲು ಬಯಸಿದರೆ, ಶನಿವಾರದಂದು ಖರೀದಿಸಬೇಡಿ. ಶನಿವಾರ ಖರೀದಿಸಿದ ಕಪ್ಪು ಬೂಟುಗಳು ನಿಮ್ಮ ಕೆಲಸ ವಿಫಲಗೊಳ್ಳಲು ಕಾರಣವಾಗುತ್ತದೆ ಎಂದು ನಂಬಲಾಗಿದೆ. ಯಾವುದೇ ಕಾರಣಕ್ಕೂ ಕೂಡ ಶನಿವಾರ ಬಡವರನ್ನು ಅವಮಾನಿಸಬೇಡಿ.

ಶನಿ ಬಡವರನ್ನು ಪ್ರತಿನಿಧಿಸುತ್ತಾನೆ. ಈ ಕಾರಣಕ್ಕಾಗಿ, ಬಡವರನ್ನು ಅವಮಾನಿಸುವ, ಬಡವರಿಗೆ ಕಿರುಕುಳ ನೀಡುವ ಜನರಿಗೆ , ಶನಿಯು ತಮ್ಮ ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸುತ್ತದೆ. ಕೇವಲ ಶನಿವಾರ ಮಾತ್ರವಲ್ಲ ಯಾವುದೇ ಕಾರಣಕ್ಕೂ ದುರ್ಬಲರಿಗೆ ಕೊಡುವ ತೊಂದರೆಯನ್ನು ಶನಿ ಮಾತ್ರ ಯಾವುತ್ತು ಕ್ಷಮಿಸಲ್ಲ. ಈ ದಿನ ಶನಿ ಒಲಿಸಿಕೊಳ್ಳಲು , ಶನಿವಾರ ಎಣ್ಣೆ ದಾನ ಮಾಡಬೇಕು. ಈ ದಿನಗಳಲ್ಲಿ ತೈಲವನ್ನು ಮನೆಗೆ ತರಬಾರದು. ಮುಖ್ಯವಾಗಿ ಶನಿವಾರ ಬಡವರಿಗೆ ನಿರ್ಗತಿಕರಿಗೆ ಅಥವಾ ನಿಮ್ಮ ಸಹಾಯ ಕೋರಿ ಬಂಡ ಯಾವ ವ್ಯಕ್ತಿಯನ್ನು ಕೂಡ ಹಾಗೆಯೆ ಕಳಿಸಬೇಡಿ.

Please follow and like us:
error0
http://karnatakatoday.in/wp-content/uploads/2020/02/saturday-special-1024x576.jpghttp://karnatakatoday.in/wp-content/uploads/2020/02/saturday-special-150x104.jpgKarnataka Trendingಆರೋಗ್ಯಎಲ್ಲಾ ಸುದ್ದಿಗಳುಜ್ಯೋತಿಷ್ಯದಲ್ಲಿ ಶನಿಯು ನ್ಯಾಯಾಧೀಶನೆಂದು ಪರಿಗಣಿಸಲಾಗುತ್ತದೆ. ಈ ಗ್ರಹವು ನಮ್ಮ ಕ್ರಿಯೆಗಳ ಫಲವನ್ನು ನೀಡುತ್ತದೆ. ಕರ್ಮಫಲವನ್ನು ನೀಡುತ್ತಾನೆ ಶನಿ. ಶನಿ ಮುನಿಸಿಕೊಂಡರೆ ನಿಮ್ಮ ಕೆಲಸದಲ್ಲಿ ಸುಲಭವಾದ ಯಶಸ್ಸು ಕಂಡುಬರುವುದಿಲ್ಲ, ಜೊತೆಗೆ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ನಿಮ್ಮ ಯೋಜನೆಗಳು ನಿಮಗೆ ಕೈಕೊಡಬಹುದು ಮತ್ತು ನಿಮ್ಮ ವಿರುದ್ಧ ಶತ್ರುಗಳ ಕೆಲಸ ಹೆಚ್ಚಾಗಬಹುದು ಮತ್ತು ಅವರು ನಿಮ್ಮ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ಹೀಗಾಗಿ ಶಾಸ್ತ್ರದಲ್ಲಿ ಶನಿವಾರ ಮಾತ್ರ ಕೆಲವು ಕೆಲಸಗಳನ್ನು ಮಾಡಲೇಬಾರದು ಎಂದು ಹೇಳುತ್ತಾರೆ...Film | Devotional | Cricket | Health | India