ದೇಶದ ಜನತೆ ಅತಿಹೆಚ್ಚು ಬಳಸುವ ಮತ್ತು ಹೆಚ್ಚು ವ್ಯಾಪಕವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರ ಆರ್ಥಿಕ ಪರಿಸ್ಥಿತಿ ಹಾಗು ಹಣಕಾಸಿನ ಉಳಿತಾಯ ಮತ್ತು ಇನ್ನಿತರೇ ಕೊಡುಗೆಗಳನ್ನು ನೀಡುತ್ತಿರುವ ದೇಶದ ಪ್ರತಿಷ್ಠಿತ ಬ್ಯಾಂಕ್ ಎಂದರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಹೌದು ಇತ್ತೀಚಿನ ವರ್ಷಗಳಲ್ಲಿ ಈ ಸ್ಟೇಟ್ ಬ್ಯಾಂಕ್ ಮತ್ತು ಇನ್ನಿತರೇ ಬ್ಯಾಂಕುಗಳು ತಂಡ ಹೊಸ ನಿಯಮಗಳು ಖಾತೆದಾರರನ್ನು ಸಿಟ್ಟಿಗೇಳುವಂತೆ ಮಾಡಿತ್ತು. ಎಲ್ಲದಕ್ಕೂ ಚಾರ್ಜ್, ಮಿನಿಮಮ್ ಬ್ಯಾಲೆನ್ಸ್ ಮಾಡುವುದಕ್ಕೂ ಹಣ ಕಟ್, ಹೆಚ್ಚು ಎಟಿಎಂ ಬಳಸಿದರೂ ಹಣ ಕಡಿತ, ಹೀಗೆ ಎಲ್ಲದಕ್ಕೂ ಶುಲ್ಕ ವಿಧಿಸಿ ಬ್ಯಾಂಕುಗಳು ಗ್ರಾಹಕರ ಕೆಂಗಣ್ಣಿಗೆ ಗುರಿಯಾಗಿದ್ದವು.

ಇಷ್ಟೇ ಅಲ್ಲದೆ ಒಂದು ದಿನಕ್ಕೆ ಇಷ್ಟೇ ಹಣ ತೆಗಿಯಬೇಕು ಇಷ್ಟೇ ಜಮೆ ಮಾಡಬೇಕು ಎನ್ನುವ ಷರತ್ತು ಕೂಡ ಇತ್ತು,ಈ ರೀತಿಯಾಗಿ ಬ್ಯಾಂಕುಗಳು ಜನ ಸಾಮಾನ್ಯರಿಗೆ ಸ್ವಲ್ಪ ತೊಂದರೆ ನೀಡಿದ್ದವು ಆದರೆ ಇದೀಗ SBI ಖಾತೆ ಇದ್ದವರಿಗೆ ಎಲ್ಲಿಲ್ಲದ ಸಿಹಿಸುದ್ದಿಯೊಂದು ಬ್ಯಾಂಕ್ ನೀಡಿದೆ ಆದ್ದರಿಂದ ಇದನ್ನ ನೀವು ತಿಳಿದುಕೊಳ್ಳಲೇಬೇಕಾಗುತ್ತದೆ. ಹೌದು ಸ್ಟೇಟ್ ಬ್ಯಾಂಕ್ ಈಗ ಎಲ್ಲ ನಿಯಮಗಳನ್ನ ಸಡಿಲಿಸಿದೆ ಇನ್ನು ಮುಂದೆ ನೀವು ನಿಮ್ಮ ಉಳಿತಾಯ ಖಾತೆಗೆ ದಿನವೊಂದಕ್ಕೆ ಎಷ್ಟು ಹಣ ಕೂಡ ಹಾಕಬಹುದು ಅಂದರೆ 2 ಲಕ್ಷದವರೆಗೆ, ಈ ಹಿಂದೆ 30000 ಮಿತಿ ಇತ್ತು ಅದನ್ನ ತೆಗೆದುಹಾಕಿದೆ.

ಇದರಿಂದ ಸಹಜವಾಗಿಯೇ ಎಲ್ಲರು ಖುಷಿಯಾಗಿದ್ದಾರೆ. ಬ್ಯಾಂಕುಗಳು ವಿಧಿಸುತ್ತಿರುವ ಈ ಶುಲ್ಕ ಮಾಧ್ಯಮ ವರ್ಗದ ಜನರಿಗೆ ತುಂಬಾ ಹೊರೆಯಾಗಿ ಪರಿಣಮಿಸುತ್ತಿರುವುದಂತೂ ಸತ್ಯವಾದ ವಿಷಯ. ಈ ವಿಷಯವನ್ನು ಅಂದು ಮನಗಂಡ ಕೇಂದ್ರ ಸರ್ಕಾರ ಜನಧನ್ ಖಾತೆಯ ಮೂಲಕ ಅದೆಷ್ಟೋ ಜನರು ಬ್ಯಾಂಕ್ ಖಾತೆ ಇಲ್ಲದವರಿಗೆ ಜೀರೋ ಬ್ಯಾಲೆನ್ಸ್ ಅಕೌಂಟ್ ಮೂಲಕ ಖಾತೆ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು.

ಈ ಯೋಜನಾ ಸಫಲವಾಗಿ ಹಲವು ಕೋಟಿಯಷ್ಟು ಹಣ ಬ್ಯಾಂಕ್ ಬೊಕ್ಕಸಕ್ಕೆ ಬಂದಿತ್ತು ಆದರೂ ಕೂಡ ಸಣ್ಣಪಟ್ಟು ಸೇವೆಗಳಿಗೆ ಇಂದು ಬ್ಯಾಂಕ್ ವಿಧಿಸುತ್ತಿರುವ ಸೇವಾ ಚಾರ್ಜ್ ಎಷ್ಟು ಸರಿ ಎಷ್ಟು ತಪ್ಪು ನೀವೇ ತಿಳಿಸಿ ಮುಂಬರುವ ದಿನಗಳಲ್ಲಿ ಎಲ್ಲ ಶುಲ್ಕವನ್ನು ಬ್ಯಾಂಕ್ ಸಡಿಲಿಸಲಿದೆ ಎಂದು ಹೇಳಲಾಗುತ್ತಿದೆ ನಿಮಗೂ ಕೂಡ ಈ ವಿಷಯದ ಬಗ್ಗೆ ಅಸಮಾಧಾನ(ಸೇವಾ ಶುಲ್ಕಗಳ ಬಗ್ಗೆ) ಇದ್ದಾರೆ ಸಲಹೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/09/SBI-INDIA-1024x576.pnghttp://karnatakatoday.in/wp-content/uploads/2018/09/SBI-INDIA-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುನಗರಹಣದೇಶದ ಜನತೆ ಅತಿಹೆಚ್ಚು ಬಳಸುವ ಮತ್ತು ಹೆಚ್ಚು ವ್ಯಾಪಕವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಜನರ ಆರ್ಥಿಕ ಪರಿಸ್ಥಿತಿ ಹಾಗು ಹಣಕಾಸಿನ ಉಳಿತಾಯ ಮತ್ತು ಇನ್ನಿತರೇ ಕೊಡುಗೆಗಳನ್ನು ನೀಡುತ್ತಿರುವ ದೇಶದ ಪ್ರತಿಷ್ಠಿತ ಬ್ಯಾಂಕ್ ಎಂದರೆ ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ. ಹೌದು ಇತ್ತೀಚಿನ ವರ್ಷಗಳಲ್ಲಿ ಈ ಸ್ಟೇಟ್ ಬ್ಯಾಂಕ್ ಮತ್ತು ಇನ್ನಿತರೇ ಬ್ಯಾಂಕುಗಳು ತಂಡ ಹೊಸ ನಿಯಮಗಳು ಖಾತೆದಾರರನ್ನು ಸಿಟ್ಟಿಗೇಳುವಂತೆ ಮಾಡಿತ್ತು. ಎಲ್ಲದಕ್ಕೂ ಚಾರ್ಜ್, ಮಿನಿಮಮ್ ಬ್ಯಾಲೆನ್ಸ್...Kannada News