ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನ ಹೊಂದಿದವರಿಗೆ ಈಗ ಬಂಪರ್ ಸಿಹಿ ಸುದ್ದಿಯನ್ನ, ನೀವು ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನ ಹೊಂದಿದ್ದರೆ ಈ ಮಾಹಿತಿಯನ್ನ ತಪ್ಪದೆ ತಿಳಿದುಕೊಳ್ಳಿ. ದೇಶದಲ್ಲಿ ಅತೀ ಹೆಚ್ಚು ಶಾಖೆಗಳನ್ನ ಹೊಂದಿರುವ ಮತ್ತು ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಎನಿಸಿಕೊಂಡಿರುವ ಬ್ಯಾಂಕ್ ಅಂದರೆ ಅದೂ ಭಾರತೀಯ ಸ್ಟೇಟ್ ಬ್ಯಾಂಕ್ ಆಗಿದೆ. ಅತೀ ಹೆಚ್ಚು ಜನಪ್ರಿಯತೆಯನ್ನ ಗಳಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈಗ ಉಳಿತಾಯ ಖಾತೆ ಹೊಂದಿರುವ ಎಲ್ಲಾ ಗ್ರಾಹಕರಿಗೆ ದೊಡ್ಡ ಗುಡ್ ನ್ಯೂಸ್ ನೀಡಿದೆ. ಹಾಗಾದರೆ ಏನದು ಗುಡ್ ನ್ಯೂಸ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರಿಗೂ ತಲುಪಿಸಿ.

ಈ ಹಿಂದೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವವರು ಅಂದರೆ ಮೆಟ್ರೋ ನಗರ ಗ್ರಾಹಕರು ಖಾತೆಯಲ್ಲಿ ಮಿನಿಮಮ್ ಹಣವಾಗಿ 3 ಸಾವಿರ ಇಡಬೇಕಾಗಿತ್ತು, ಅರೆನಗರಗಳಲ್ಲಿ 2 ಸಾವಿರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1 ಸಾವಿರ ರೂಪಾಯಿಯ ಹಣವನ್ನ ಮಿನಿಮಮ್ ಹಣವಾಗಿ ಇಡಬೇಕಾಗಿತ್ತು. ಇನ್ನು ಖಾತೆಯಲ್ಲಿ ಮಿನಿಮಮ್ ಹಣವನ್ನ ಇಡಲಿಲ್ಲ ಅಂದರೆ ದಂಡದ ಜೊತೆಗೆ GST ಕೂಡ ಹಾಕಲಾಗುತ್ತಿತ್ತು, ಆದರೆ ಈಗ ಈ ನಿಯಮದಲ್ಲಿ ದೊಡ್ಡ ಬದಲಾವಣೆಯನ್ನ ಮಾಡಲಾಗಿದೆ.

SBI minimum Balance

ಹೌದು ಸ್ನೇಹಿತರೆ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಕೋಟ್ಯಾಂತರ ಗ್ರಾಹಕರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನ ತೆಗೆದುಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಇಲ್ಲಿಯ ತನಕ ಉಳಿತಾಯ ಖಾತೆಯಲ್ಲಿ ಇದ್ದ ಮಿನಿಮಮ್ ಬ್ಯಾಲೆನ್ಸ್ ನಿಯಮವನ್ನ ರದ್ದು ಮಾಡಿದೆ. ಈ ಹಿಂದೆ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬ ಗ್ರಾಹಕ ಕೂಡ ತನ್ನ ಖಾತೆಯಲ್ಲಿ ಕಡ್ಡಾಯವಾಗಿ ಮಿನಿಮಮ್ ಹಣವನ್ನ ಇಡಬೇಕಾಗಿತ್ತು, ಆದರೆ ಈಗ ಈ ನಿಯಮವನ್ನ ರದ್ದು ಮಾಡಲಾಗಿದೆ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಕಟಣೆಯನ್ನ ಹೊರಡಿಸಿದೆ.

ಇನ್ನುಮುಂದೆ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಯಾವುದೇ ಮೊತ್ತವನ್ನ ಇಡದೆ ಇದ್ದರೆ ಬ್ಯಾಂಕ್ ನವರು ಮುಂದಿನ ದಿನಗಳಲ್ಲಿ ನೀವು ನಿಮ್ಮ ಖಾತೆಗೆ ಹಣವನ್ನ ಹಾಕಿದಾಗ ಯಾವುದೇ ಶುಲ್ಕವನ್ನ ಕಡಿತ ಮಾಡುವುದಿಲ್ಲ ಮತ್ತು ಇನ್ನುಮುಂದೆ ಖಾತೆಯಲ್ಲಿ ಹಣ ಇಲ್ಲದೆ ಇದ್ದರೆ ಚಿಂತೆ ಮಾಡುವ ಅಗತ್ಯ ಇಲ್ಲ ಮತ್ತು ನಿಮ್ಮ ಖಾತೆಗೆ ಯಾವುದೇ ರೀತಿಯ ದಂಡ ಮತ್ತು ಶುಲ್ಕವನ್ನ ಪಾವತಿ ಮಾಡುವ ಅಗತ್ಯ ಕೂಡ ಇಲ್ಲ. ಇನ್ನು ಇದರ ಜೊತೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ತೆಗೆದುಕೊಂಡಿರುವ ಇನ್ನೊಂದು ಮಹತ್ವದ ನಿರ್ಧಾರ ಏನು ಅಂದರೆ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಇಟ್ಟಿರುವ ಹಣಕ್ಕೆ ಶೇಕಡಾ 3 ರಷ್ಟು ಬಡ್ಡಿಯನ್ನ ಮಾತ್ರ ಹಾಕಲಾಗುತ್ತದೆ. ಈ ರೀತಿಯಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನ ನೀಡಿದ್ದು ಇದು ಜನರಿಗೆ ಉಪಯೋಗ ಆಗಲಿದೆ ಅನ್ನುವುದು ನಮ್ಮ ಅಭಿಪ್ರಾಯವಾಗಿದೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

SBI minimum Balance

Please follow and like us:
error0
http://karnatakatoday.in/wp-content/uploads/2020/03/SBI-new-rule-1024x576.jpghttp://karnatakatoday.in/wp-content/uploads/2020/03/SBI-new-rule-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನ ಹೊಂದಿದವರಿಗೆ ಈಗ ಬಂಪರ್ ಸಿಹಿ ಸುದ್ದಿಯನ್ನ, ನೀವು ಕೂಡ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆಯನ್ನ ಹೊಂದಿದ್ದರೆ ಈ ಮಾಹಿತಿಯನ್ನ ತಪ್ಪದೆ ತಿಳಿದುಕೊಳ್ಳಿ. ದೇಶದಲ್ಲಿ ಅತೀ ಹೆಚ್ಚು ಶಾಖೆಗಳನ್ನ ಹೊಂದಿರುವ ಮತ್ತು ದೇಶದ ಅತೀ ದೊಡ್ಡ ಸಾರ್ವಜನಿಕ ಬ್ಯಾಂಕ್ ಎನಿಸಿಕೊಂಡಿರುವ ಬ್ಯಾಂಕ್ ಅಂದರೆ ಅದೂ ಭಾರತೀಯ ಸ್ಟೇಟ್ ಬ್ಯಾಂಕ್ ಆಗಿದೆ. ಅತೀ ಹೆಚ್ಚು ಜನಪ್ರಿಯತೆಯನ್ನ ಗಳಿಸಿಕೊಂಡಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಈಗ...Film | Devotional | Cricket | Health | India