ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದೆ ಹೌದು ಸುರಕ್ಷತಾ ಹಾಗು ಉತ್ತಮ ಸೇವೆ ನೀಡುವ ಯೋಜನೆಯ ಮೇರೆಗೆ ಹೊಸ ಬದಲಾವಣೆಯೊಂದನ್ನು ತಂದಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕನು ಇದನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ. ಆಗಿರುವ ಮಹತ್ವದ ಬದಲಾವಣೆ ಏನೆಂದರೆ ಸ್ಟೇಟ್ ಬ್ಯಾಂಕ್ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಬೇಕು ಎಂಬುದಾಗಿ ತಿಳಿಸಿದೆ.

ಈ ಕುರಿತ ಮಾಹಿತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು 2018ರ ಡಿಸೆಂಬರ್ 1 ರೊಳಗೆ ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ನಂಬರ್ ರಿಜಿಸ್ಟರ್ ಮಾಡದಿದ್ದರೆ ಇಂಟರ್ ನೆಟ್ ಬ್ಯಾಂಕಿಂಗ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದಾಗಿ ತಿಳಿಸಿದೆ. ಹೀಗಾಗಿ ಗ್ರಾಹಕರು ತಕ್ಷಣ ಸಮೀಪದ ಬ್ಯಾಂಕ್ ಗೆ ತೆರಳಿ ತಮ್ಮ ಮೊಬೈಲ್ ನಂಬರ್ ನ್ನು ಬ್ಯಾಂಕ್ ಖಾತೆಗೆ ರಿಜಿಸ್ಟರ್ ಮಾಡಬೇಕೆಂದು ಪ್ರಕಟಿಸಿದೆ.

ಆತಂಕಕಾರಿ ವಿಷಯ ಏನೆಂದರೆ ಈ ಬಾರಿ ಸ್ಟೇಟ್ ಬ್ಯಾಂಕಿಗೆ ಆದ ವಂಚನೆಯ ಪ್ರಕರಣಗಳು ಅಷ್ಟಿಷ್ಟಲ್ಲ 5555 ಕೋಟಿ ರೂ ಮೊತ್ತದ ಬರೋಬ್ಬರಿ 1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೇಳಿದೆ.

ಆರ್ಟಿಐ ಮೂಲಕ ಕೇಳಳಾದ ಪ್ರಶ್ನೆಗೆ ಬ್ಯಾಂಕ್ ಈ ಉತ್ತರ ನೀಡಿದೆ. ಬ್ಯಾಂಕಿಂಗ್ ವಂಚನೆಯ ಕಾರಣ ಬ್ಯಾಂಕ್ ಗೆ ಆದ ಹಣಕಾಸಿನ ನಷ್ಟವೆಷ್ಟು ಎಂದೂ   ಪ್ರಶ್ನಿಸಿದ್ದು ಇದರ ಕುರಿತು ಪ್ರತಿಕ್ರಿಯೆ ನೀಡಿದ ಬ್ಯಾಂಕ್ “ತಾನಿನ್ನೂ ಆ ಮೊತ್ತವನ್ನು ಎಣಿಕೆ ಮಾಡಿಲ್ಲ” ಎಂದಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿ ನಿಮ್ಮ ಖಾತೆಯಲ್ಲಿ ಆಗುತ್ತಿರುವ ಪ್ರತಿ ವಿವರದ ನೋಟಿಫಿಕೇಶನ್ ಪಡೆಯಿರಿ.

Please follow and like us:
0
http://karnatakatoday.in/wp-content/uploads/2018/10/SBI-INDIA-new-1024x576.pnghttp://karnatakatoday.in/wp-content/uploads/2018/10/SBI-INDIA-new-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಡಿಯಾ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ನೀಡಿದೆ ಹೌದು ಸುರಕ್ಷತಾ ಹಾಗು ಉತ್ತಮ ಸೇವೆ ನೀಡುವ ಯೋಜನೆಯ ಮೇರೆಗೆ ಹೊಸ ಬದಲಾವಣೆಯೊಂದನ್ನು ತಂದಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಗ್ರಾಹಕನು ಇದನ್ನು ತಿಳಿದುಕೊಳ್ಳುವುದು ಉತ್ತಮವಾಗಿದೆ. ಆಗಿರುವ ಮಹತ್ವದ ಬದಲಾವಣೆ ಏನೆಂದರೆ ಸ್ಟೇಟ್ ಬ್ಯಾಂಕ್ ತನ್ನ ಇಂಟರ್ನೆಟ್ ಬ್ಯಾಂಕಿಂಗ್ ಬಳಕೆದಾರರಿಗೆ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಮೊಬೈಲ್ ನಂಬರ್ ರಿಜಿಸ್ಟರ್ ಮಾಡಬೇಕು ಎಂಬುದಾಗಿ ತಿಳಿಸಿದೆ. ಈ...Kannada News