ಕೇಂದ್ರ ಸರ್ಕಾರವು ದೇಶದ ಜನರಿಗೆ ಉಪಯೋಗ ಆಗಲಿ ಅನ್ನುವ ದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದೆ, ಇನ್ನು ದೇಶದಲ್ಲಿ ಇರುವ ಬಡ ಹೆಣ್ಣು ಮಕ್ಕಳಿಗಾಗಿಯೇ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿದೆ. ಹೌದು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ, ಹೆಣ್ಣು ಮಕ್ಕಳ ಮದುವೆಗೆ ಮತ್ತು ಮುಸಲ್ಮಾನ್ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ತಲಾಕ್ ಬ್ಯಾನ್, ಹೀಗೆ ಹಲವು ಯೋಜನೆಯನ್ನ ದೇಶದಲ್ಲಿ ಜಾರಿಗೆ ತರಲಿದೆ. ಇನ್ನು ಈಗ ನಾವು ನಿಮಗೆ ಎರಡು ಮುಖ್ಯ ಯೋಜನೆಯ ಬಗ್ಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಎರಡು ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ದೇಶದ ಎಲ್ಲಾ ಬಡ ಕುಟುಂಬದವರಿಗೆ ತಲುಪಿಸಿ.

ಸ್ನೇಹಿತರೆ ಜಾರಿಗೆ ಬಂದಿರುವ ಎರಡು ಯೋಜನೆಯನ್ನ ಮೊದಲನೆಯದು ಬಾಲಿಕಾ ಸಮೃದ್ಧಿ ಯೋಜನೆ, ಸ್ನೇಹಿತರೆ ಈ ಯೋಜನೆ ದೇಶದಲ್ಲಿ 1997 ಇಸವಿಯಿಂದ ಜಾರಿಯಲ್ಲಿ ಇದೆ, ಇನ್ನು ದೇಶದ ಶಾಲೆಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯನ್ನ ಹೆಚ್ಚಿಸುವ ಸಲುವಾಗಿ ಈ ಯೋಜನೆಯನ್ನ ಜಾರಿಗೆ ತರಲಿದೆ. ಇನ್ನು ಯೋಜನೆಯ ಅಡಿಯಲ್ಲಿ ಒಬ್ಬ ತಾಯಿಗೆ ಹೆಣ್ಣು ಮಗು ಹುಟ್ಟಿದ್ದ ನಂತರ 500 ರೂಪಾಯಿ ಮತ್ತು ಆ ಹೆಣ್ಣು ಮಗು ಶಾಲೆಗೆ ಸೇರಿದ ಮೇಲೆ ಆ ಮಗುವಿನ ವಿದ್ಯಾಭ್ಯಾಸಕ್ಕಾಗಿ ಸರ್ಕಾರದ ವತಿಯಿಂದ ಆ ಹೆಣ್ಣು ಮಗುವಿಗೆ ಪ್ರತಿ ವರ್ಷ ಒಂದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನವನ್ನ ಪ್ರತಿ ತಿಂಗಳು ನೀಡಲಾಗುತ್ತದೆ.

Schemes for girls

ಇನ್ನು ಮಗುವಿಗೆ 18 ವರ್ಷ ತುಂಬಿದ ನಂತರ ಈ ಹಣವನ್ನ ವಿಥ್ ಡ್ರಾ ಮಾಡಿಕೊಳ್ಳಬಹುದು, ಇನ್ನು ಹೆಣ್ಣು ಮಗು ಹುಟ್ಟಿದ ನಂತರ ಆ ಗ್ರಾಮದ ಅಂಗವಾಡಿಯಲ್ಲಿ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಅಥವಾ ಆನ್ಲೈನ್ ನಲ್ಲಿ ಕೂಡ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಇನ್ನು ಎರಡನೆಯದಾಗಿ ಸುಕನ್ಯಾ ಸಮೃದ್ಧಿ ಯೋಜನೆ, ಇನ್ನು ಈ ಯೋಜನೆಯನ್ನ 2015 ರಲ್ಲಿ ಇಡೀ ದೇಶಾದ್ಯಂತ ಜಾರಿಗೆ ತರಲಾಗಿತ್ತು, ಇನ್ನು ಈ ಯೋಜನೆಯ ಅಡಿಯಲ್ಲಿ ಒಂದು ಕುಟುಂಬದಲ್ಲಿ ಮೂರೂ ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆಯನ್ನ ತೆರೆಯಬಹುದಾಗಿದೆ. ಇನ್ನು ಈ ಯೋಜನೆಯ ಅಡಿಯಲ್ಲಿ ತಿಂಗಳಿಗೆ ಕನಿಷ್ಠ 250 ರೂಪಾಯಿಯಿಂದ ಹಿಡಿದು ವರ್ಷಕ್ಕೆ 1.50 ಲಕ್ಷದ ವರೆಗೆ ಹಣವನ್ನ ಕಟ್ಟಬಹುದು, ಇನ್ನು ನೀವು ಕಟ್ಟಿದ ಹಣಕ್ಕೆ ಶೇಕಡಾ 8.5 ರಷ್ಟುಬಡ್ಡಿ ನಿಮಗೆ ಸಿಗಲಿದೆ.

ಇನ್ನು ಹೀಗೆ ಪ್ರತಿ ತಿಂಗಳು ಹಣವನ್ನ ಜಮಾ ಮಾಡಿದರೆ ನಿಮ್ಮ ಮಗುವಿಗೆ 18 ವರ್ಷ ತುಂಬಿದ ನಂತರ ನೀವು ಕಟ್ಟಿದ ಹಣದಲ್ಲಿ ಶೇಕಡಾ 50 ರಷ್ಟು ಹಣವನ್ನ ತೆಗೆಯಬಹುದು ಮತ್ತು ಮಗುವಿಗೆ 21 ವರ್ಷ ತುಂಬಿದ ನಂತರ ಪೂರ್ತಿ ಹಣವನ್ನ ತೆಗೆಯಬಹುದು. ಇನ್ನು ನೀವು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯನ್ನ ಜಮಾ ಮಾಡಿದರೆ ನಾಲ್ಕು ವರ್ಷದ ನಂತರ ಬಡ್ಡಿ ಸಮೇತವಾಗಿ ನಿಮಗೆ 5 ಲಕ್ಷ ರೂಪಾಯಿ ಸಿಗಲಿದೆ, ಇನ್ನು ಹತ್ತಿರದ ಪೋಸ್ಟ್ ಆಫೀಸ್ ಅಥವಾ ನಿಮ್ಮ ಹತ್ತಿರದ ಸ್ಟೇಟ್ ಬ್ಯಾಂಕ್ ಗೆ ಹೋಗಿ ಈ ಯೋಜನೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ, ಸ್ನೇಹಿತರೆ ಕೇಂದ್ರ ಸರ್ಕಾರದ ಈ ಎರಡು ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Schemes for girls

Please follow and like us:
error0
http://karnatakatoday.in/wp-content/uploads/2019/11/Schemes-for-girls-1-1024x576.jpghttp://karnatakatoday.in/wp-content/uploads/2019/11/Schemes-for-girls-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಕೇಂದ್ರ ಸರ್ಕಾರವು ದೇಶದ ಜನರಿಗೆ ಉಪಯೋಗ ಆಗಲಿ ಅನ್ನುವ ದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳನ್ನ ಜಾರಿಗೆ ತಂದಿದೆ, ಇನ್ನು ದೇಶದಲ್ಲಿ ಇರುವ ಬಡ ಹೆಣ್ಣು ಮಕ್ಕಳಿಗಾಗಿಯೇ ಹಲವು ಯೋಜನೆಗಳನ್ನ ಜಾರಿಗೆ ತರಲಾಗಿದೆ. ಹೌದು ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ, ಹೆಣ್ಣು ಮಕ್ಕಳ ಮದುವೆಗೆ ಮತ್ತು ಮುಸಲ್ಮಾನ್ ಹೆಣ್ಣು ಮಕ್ಕಳ ಸಂರಕ್ಷಣೆಗಾಗಿ ತಲಾಕ್ ಬ್ಯಾನ್, ಹೀಗೆ ಹಲವು ಯೋಜನೆಯನ್ನ ದೇಶದಲ್ಲಿ ಜಾರಿಗೆ ತರಲಿದೆ. ಇನ್ನು ಈಗ ನಾವು ನಿಮಗೆ ಎರಡು ಮುಖ್ಯ...Film | Devotional | Cricket | Health | India