Seeha Rama Kalyana

ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಕಿಂಗ್ ಅಂದರೆ ಅದು ಚಿಕ್ಕಣ್ಣ, ಚಿಕ್ಕ ಯಾವ ಸಿನಿಮಾದಲ್ಲಿ ನಟನೆ ಮಾಡುತ್ತಾರೋ ಅಲ್ಲಿ ಭರ್ಜರಿ ನಗು ಇದ್ದೆ ಇರುತ್ತದೆ. ಕನ್ನಡ ಸಿನಿಮಾದಲ್ಲಿ ಕಳೆದ 10 ವರ್ಷದ ಜನರನ್ನ ನಗೆಯ ಹಬ್ಬದಲ್ಲಿ ತೇಲಿಸಿದ ನಟ ಅಂದರೆ ಅದು ನಮ್ಮ ಚಿಕ್ಕಣ್ಣ, ಆದರೆ ನಮ್ಮ ಹಾಸ್ಯ ನಟ ಚಿಕ್ಕಣ್ಣ ಸಪ್ತಪದಿ ತುಳಿದಿದ್ದಾರೆ ಅನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿ ಮಾಡುತ್ತಿದೆ. ಆದರೆ ಚಿಕ್ಕಣ್ಣ ಸಪ್ತಪದಿ ತುಳಿದಿರುವುದು ಕಾಮಿಡಿ ಕ್ವೀನ್ ನಯನ ಜೊತೆ ಅಂದರೆ ಇನ್ನು ಶಾಕ್ ಆಗುತ್ತಾರೆ ಸಿನಿಮಾ ಪ್ರೇಕ್ಷಕರು.

Seeha Rama Kalyana

ಚಿಕ್ಕಣ್ಣ ನಯನ ಅವರನ್ನ ಮದುವೆಯಾಗಿದ್ದಾರೆ ಅಂದರೆ ಎಲ್ಲರು ಶಾಕ್ ಆಗುತ್ತಾರೆ ಯಾಕೆ ಅಂದರೆ ನಯನ ಅವರಿಗೆ ಈಗಾಗಲೇ ಮದುವೆಯಾಗಿದೆ, ಆದರೆ ನಾವು ಹೇಳುವ ಈ ಸುದ್ದಿಯನ್ನ ಕೇಳಿದರೆ ಚಿಕ್ಕಣ್ಣ ಅವರು ನಿಜ ಜೀವನದಲ್ಲಿ ಮದುವೆಯಾಗಿದ್ದಾರೆ ಅನ್ನುವ ಪ್ರಶ್ನೆ ಮೂಡುತ್ತದೆ.

ಸ್ನೇಹಿತರೆ ನೀವು ಆಶ್ಚರ್ಯ ಪಡುವ ಅಗತ್ಯ ಇಲ್ಲ ಯಾಕೆ ಅಂದರೆ ಇದು ನಿಜ ಜೀವನದ ಮದುವೆಯಲ್ಲ ಇದು ರೀಲ್ ಮಾಡುವೆ, ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾ ರಾಮ ಕಲ್ಯಾಣದಲ್ಲಿ ಚಿಕ್ಕಣ್ಣ ಕಲ್ಯಾಣ, ಸದ್ಯ ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾ ರಾಮ ಕಲ್ಯಾಣ ಟೀಮ್ ನಲ್ಲಿ ಚಿಕ್ಕಣ್ಣ ಬ್ಯುಸಿ ಆಗಿದ್ದಾರೆ.

Seeha Rama Kalyana

ಈ ಸಿನಿಮಾದಲ್ಲಿ ಚಿಕ್ಕಣ್ಣ ಕೂಡ ಮೇಜರ್ ಅಟ್ರಾಕ್ಷನ್, ಈ ಸಿನಿಮಾದಲ್ಲಿ ನಿಖಿಲ್ ಗೆ ಗೆಳೆಯನಾಗಿ ಚಿಕ್ಕಣ್ಣ ಅಭಿನಯ ಮಾಡುತ್ತಿದ್ದಾರೆ, ಈ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಕಾಮಿಡಿ ಕ್ವೀನ್ ನಯನ ಜೋಡಿಯಾಗಿದ್ದಾರೆ.

ಸಿನಿಮಾದಲ್ಲಿ ಚಿಕ್ಕಣ್ಣ ಮತ್ತು ನಯನ ಅವರ ಮದುವೆಯ ಅದ್ಬುತ ಸನ್ನಿವೇಶವನ್ನ ಚಿತ್ರತಂಡ ಅದ್ದೂರಿಯಾಗಿ ಶೂಟ್ ಮಾಡಿದೆ, ಈ ಚಿತ್ರದಲ್ಲಿ ರಚಿತಾ ರಾಮ್, ನಿಖಿಲ್ ಮತ್ತು ಮಧುಬಾಲ ಕೂಡ ಕಾಣಿಸಿಕೊಳ್ಳುತ್ತಾರೆ.

ಈ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ, ಚಿಕ್ಕಣ್ಣ ಮದುವೆ ನೋಡಬೇಕು ಅನ್ನುವುವವರು ಈ ಚಿತ್ರ ಬಿಡುಗಡೆಯಾಗುವ ತನಕ ಕಾಯಲೇಬೇಕು, ಸ್ನೇಹಿತರೆ ಈ ಚಿಕ್ಕಣ್ಣನ ಮದುವೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Seeha Rama Kalyana

Please follow and like us:
0
http://karnatakatoday.in/wp-content/uploads/2018/11/Seetha-raama-kalyaa-1024x576.jpghttp://karnatakatoday.in/wp-content/uploads/2018/11/Seetha-raama-kalyaa-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಕಿಂಗ್ ಅಂದರೆ ಅದು ಚಿಕ್ಕಣ್ಣ, ಚಿಕ್ಕ ಯಾವ ಸಿನಿಮಾದಲ್ಲಿ ನಟನೆ ಮಾಡುತ್ತಾರೋ ಅಲ್ಲಿ ಭರ್ಜರಿ ನಗು ಇದ್ದೆ ಇರುತ್ತದೆ. ಕನ್ನಡ ಸಿನಿಮಾದಲ್ಲಿ ಕಳೆದ 10 ವರ್ಷದ ಜನರನ್ನ ನಗೆಯ ಹಬ್ಬದಲ್ಲಿ ತೇಲಿಸಿದ ನಟ ಅಂದರೆ ಅದು ನಮ್ಮ ಚಿಕ್ಕಣ್ಣ, ಆದರೆ ನಮ್ಮ ಹಾಸ್ಯ ನಟ ಚಿಕ್ಕಣ್ಣ ಸಪ್ತಪದಿ ತುಳಿದಿದ್ದಾರೆ ಅನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಬಹಳ ಸುದ್ದಿ ಮಾಡುತ್ತಿದೆ. ಆದರೆ ಚಿಕ್ಕಣ್ಣ ಸಪ್ತಪದಿ ತುಳಿದಿರುವುದು...Kannada News