Sentinal people

ಸ್ನೇಹಿತರೆ ಇದು ಇಂತಹ ಆದುನಿಕ ಯುಗ ಅಂದರೆ ಒಂದು ಮೆಸೇಜ್ ಅಥವಾ ಒಂದು ವಿಡಿಯೋ ಕಾಲ್ ನಿಂದ ಲಕ್ಷಾಂತರ km ದೂರದಲಿ ಇರುವವರ ಜೊತೆ ನಾವು ಮಾತನಾಡಬಹುದಾಗಿದೆ.

ಇಂತಹ ಯುಗದಲ್ಲಿ ನಾವು ಬದುಕುತ್ತ ಇದ್ದರೆ ಹೊರಪ್ರಪಂಚದ ಸಂಪರ್ಕನೆ ಇಲ್ಲದೆ ಮತ್ತು ನಮಗೆ ಅಂತಹ ಪ್ರಪಂಚದ ಸಂಪರ್ಕನೆ ಬೇಡ ಅಂತ ಶಿಲಾಯುಗದ ಮಾನವರಂತೆ ಬದುಕುತ್ತಿರುವ ಬುಡಕಟ್ಟು ಜನಾಂಗವೊಂದು ನಮ್ಮ ಭಾರತದಲ್ಲಿ ಇದೆ ಅಂತ ಹೇಳಿದರೆ ನೀವು ನಂಬಲೇಬೇಕು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಇರುವ ಉತ್ತರ ಸೆಂಟಿನಲ್ ದ್ವೀಪದಲ್ಲಿ ಇರುವ ಜನನಾಂಗವೇ ಈ ಸೆಂಟಿನಲ್ ಜನಾಂಗ, ಇನ್ನು ಇವರನ್ನ ಸಂಪರ್ಕ ಮಾಡುವುದು ಕಾನೂನಿಂದ ನಿಷೇದ ಮಾಡಲಾಗಿದೆ.

Sentinal people

ಇನ್ನು ಈ ದ್ವೀಪವನ್ನ ನೋಡಲು ಹೋದ ಪ್ರತಿಯೊಬ್ಬರ ಮೇಲು ಇಲ್ಲಿನ ಜನರು ದಾಳಿಯನ್ನ ನಡೆಸಿದ್ದಾರೆ ಮತ್ತು ಕೊಲೆ ಮಾಡಿದ್ದಾರೆ ಮತ್ತು ಇಲ್ಲಿಗೆ ಹೋದ ಪ್ರತಿಯೊಬ್ಬ ವ್ಯಕ್ತಿ ಜೀವಂತವಾಗಿ ವಾಪಾಸ್ ಬಂದಿಲ್ಲ. ಇನ್ನು ಈ ಜನಾಂಗ ಸುಮಾರು 55 ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಾ ಇದೆ, ಈ ಜನಾಂಗ ಜಾಗರಿಕತೆಯ ಪರಿಚಯ ಇಲ್ಲದ ಕಟ್ಟಾ ಕಡೆಯ ಜನಾಂಗವಾಗಿದೆ, ಇನ್ನು ಇಲ್ಲಿ ಇರುವ ಜನರು ಮೈ ಮೇಲೆ ಬಟ್ಟೆಯನ್ನ ಧರಿಸುವುದಿಲ್ಲ ಅಂದರೆ ಇವರು ಸಂಪೂರ್ಣವಾಗಿ ಬೆತ್ತಲೆಯಾಗಿ ಜೀವನವನ್ನ ನಡೆಸುತ್ತ ಇದ್ದಾರೆ.

ಇನ್ನು ಈ ಜನಾಂಗ ಬಳಸುವ ಭಾಷೆ ಬೇರೆ ಯಾರಿಗೂ ಅರ್ಥ ಆಗುವುದಿಲ್ಲ ಮತ್ತು 1960 ನೇ ಇಸವಿಯಿಂದ ಈ ಜನಾಂಗವನ್ನ ಸಂಪರ್ಕ ಮಾಡಲು ಸಾಧ್ಯವಾಗಲಿಲ್ಲ. 2004 ರಲ್ಲಿ ಸುನಾಮಿ ಸಂಭವಿಸಿದ ಸಂದರ್ಭದಲ್ಲಿ ಅಲ್ಲಿನ ಜನಕ್ಕೆ ಆಹಾರ ಕಳುಹಿಸಲು ಹೆಲಿಕಾಪ್ಟರ್ ಕಳುಹಿಸಲಾಯಿತು ಆದರೆ ಅಲ್ಲಿನ ಜನಾಂಗ ಆ ಹೆಲಿಕಾಪ್ಟರ್ ಮೇಲೆ ವಿಷಾದ ಬಾಣಗಳನ್ನ ಬಿಟ್ಟರು ಮತ್ತು ಕಲ್ಲಿನಿಂದ ಹೊಡೆದರು.

Sentinal people

2006 ರಲ್ಲಿ ಇಬ್ಬರು ಮೀನುಗಾರಿಕೆಗಾಗಿ ಈ ದ್ವೀಪದ ಸಮೀಪ ಹೋದರು ಮತ್ತು ರಾತ್ರಿ ಹೊತ್ತಿನಲ್ಲಿ ಬೋಟ್ ಗೆ ಹಗ್ಗವನ್ನ ಕಟ್ಟಿ ನಿದ್ರೆ ಮಾಡಿದರು ಆದರೆ ಹಗ್ಗ ಕಟ್ ಆದ ಪರಿಣಾಮ ಆ ಬೋಡ್ ಆ ದ್ವೀಪಕ್ಕೆ ತೇಲಿಕೊಂಡು ಹೋಯಿತು ಮತ್ತು ಇದನ್ನ ನೋಡಿದ ಅಲ್ಲಿನ ಜನ ಇವರಿಬ್ಬರನ್ನ ಅಲ್ಲೇ ಸಾಯಿಸಿದರು. ಇನ್ನು ಕ್ರೈಸ್ತ ಧರ್ಮ ಪ್ರಚಾರಕ ಜಾನ್ ಚಾಲ್ ಕೂಡ ಒಂದು ಪ್ರದೇಶಕ್ಕೆ ಹೋಗಿ ಅವರ ಸಂಪರ್ಕವನ್ನ ಪಡೆಯಲು ಪ್ರಯತ್ನ ಮಾಡಿದ್ದ ಆದರೆ ಜನಾಂಗ ಇವನನ್ನ ಕೂಡ ಕೊಂದು ಹಾಕಿತ್ತು.

ಇನ್ನು ಜನಾಂಗದ ವಿಡಿಯೋ ಮತ್ತು ಫೋಟೋಗಳನ್ನ ಇಂಟರ್ನೆಟ್ ಅಪ್ಲೋಡ್ ಮಾಡಬಾರದು ಎಂದು ಸರ್ಕಾರ ಆಜ್ಞೆಯನ್ನ ಕೂಡ ಹೊರಡಿಸಿದೆ. ಇನ್ನು ಈ ಬುಡಕಟ್ಟಿನ ಜನಾಂಗ ಯಾರ ಮೇಲೆ ಕೂಡ ದಾಳಿ ಮಾಡಿದರು ಅವರ ಕೇಸ್ ದಾಖಲು ಮಾಡಲಾಗುವುದಿಲ್ಲ ಮತ್ತು ಇವರ ಮೇಲೆ ನಾವೇನಾದರೂ ದಾಳಿ ಮಾಡಿದರೆ ನಮ್ಮ ಮೇಲೆ ಕೇಸ್ ಹಾಕಲಾಗುತ್ತದೆ.

ಇನ್ನು ಈ ಜನಾಂಗದ ಸ್ನೇಹವನ್ನ ಸಂಪಾದನೆ ಮಾಡುವಲ್ಲಿ ಯಶಸ್ಸನ್ನ ಸಾದಿಸಿದ ಒಬ್ಬ ವ್ಯಕ್ತಿ ಅಂದರೆ ಅದು ಭಾರತೀಯ ಮಾನವ ಶಾಸ್ತ್ರಜ್ಞ ತ್ರಿಲೋಕನಾಥ್ ಪಂಡಿತ್ ಎಂದು ಹೇಳಲಾಗುತ್ತದೆ. ಸ್ನೇಹಿತರೆ ಈ ಜನಾಂಗದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಇತರರಿಗೂ ತಲುಪಿಸಿ.

Sentinal people

Please follow and like us:
0
http://karnatakatoday.in/wp-content/uploads/2019/01/Sentinel-people-1024x576.jpghttp://karnatakatoday.in/wp-content/uploads/2019/01/Sentinel-people-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಸ್ನೇಹಿತರೆ ಇದು ಇಂತಹ ಆದುನಿಕ ಯುಗ ಅಂದರೆ ಒಂದು ಮೆಸೇಜ್ ಅಥವಾ ಒಂದು ವಿಡಿಯೋ ಕಾಲ್ ನಿಂದ ಲಕ್ಷಾಂತರ km ದೂರದಲಿ ಇರುವವರ ಜೊತೆ ನಾವು ಮಾತನಾಡಬಹುದಾಗಿದೆ. ಇಂತಹ ಯುಗದಲ್ಲಿ ನಾವು ಬದುಕುತ್ತ ಇದ್ದರೆ ಹೊರಪ್ರಪಂಚದ ಸಂಪರ್ಕನೆ ಇಲ್ಲದೆ ಮತ್ತು ನಮಗೆ ಅಂತಹ ಪ್ರಪಂಚದ ಸಂಪರ್ಕನೆ ಬೇಡ ಅಂತ ಶಿಲಾಯುಗದ ಮಾನವರಂತೆ ಬದುಕುತ್ತಿರುವ ಬುಡಕಟ್ಟು ಜನಾಂಗವೊಂದು ನಮ್ಮ ಭಾರತದಲ್ಲಿ ಇದೆ ಅಂತ ಹೇಳಿದರೆ ನೀವು ನಂಬಲೇಬೇಕು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ...Kannada News