ಭೂಮಂಡಲದಲ್ಲಿ ಶನಿದೇವ ಎಂದರೆ ಸಾಕಷ್ಟು ಮಂದಿ ಹೆದರುತ್ತಾರೆ. ಶನಿಯ ಕಾಟ ನಿವಾರಣೆಗೆಂದು ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ, ಆಂಜನೇಯ ಸ್ವಾಮಿಗೆ ದೀಪ ಹಚ್ಚುವುದು ಸಾಮಾನ್ಯ. ಅಷ್ಟಕ್ಕೂ ಶನಿ ಕ್ರೂರಗ್ರಹವಲ್ಲ ಶನಿಯ ದೃಷ್ಟಿ ಬಿದ್ದರೆ ಒಬ್ಬ ವ್ಯಕ್ತಿ ಉತ್ತುಂಗಕ್ಕೂ ಕೂಡ ಹೋಗಬಹುದು.  ಶನಿಗೆ 56 ಚಂದ್ರರಿದ್ದಾರೆ. ಶನಿದೇವ ಕರ್ಮಯೋಗಿ. ಜಾತಕನ ಕರ್ಮಸಿದ್ಧಾಂತಕ್ಕೆ ಅನುಸಾರವಾಗಿ ಆತನ ಪ್ರಭಾವ ನಡೆಯುತ್ತದೆ. ಕಟು ನ್ಯಾಯವಾದಿಯಂತೆ ಅವರವರ ಕರ್ಮಕ್ಕೆ ಅನುಗುಣವಾಗಿ ವ್ಯಕ್ತಿಯನ್ನು ಶಿಕ್ಷಿಸುತ್ತಾನೆ. 30 ವರ್ಷಗಳ ನಂತರ ನಡೆಯುತ್ತಿರುವ ಮಹಾ ಸಂಯೋಗದಿಂದ ಈ ನಾಲ್ಕು ರಾಶಿಗಳಿಗೆ ಸೂರ್ಯ ಹಾಗೂ ಶನಿಯಿಂದ ಬಹಳಷ್ಟು ಲಾಭ ಪಡೆಯಲಿದ್ದಾರೆ. ಇವರ ಜಾತಕವೇ ಬದಲಾಗಲಿದೆ. ಈ ಮೂಲಕ ಇವರು ಇನ್ನು ಮುಂದೆ ಮಾಡುವ ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಯಶಸ್ಸು ಕೂಡ ಪಡೆಯಲಿದ್ದಾರೆ.

ಮೇಷ ರಾಶಿ, ಈ ರಾಶಿಚಕ್ರದ ಅಧಿಪತಿ ಮಂಗಳ. ಈ ರಾಶಿಯವರು ಬಹಳ ಪ್ರತಿಭಾವಂತರು. ನಿಮ್ಮ ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಿ. ಯಾರಿಂದಲೂ ಸಲಹೆ ತೆಗೆದುಕೊಳ್ಳುವುದು ಇವರಿಗೆ ಇಷ್ಟವಿಲ್ಲ. ಈ ರಾಶಿಚಕ್ರದ ಜನರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಬೇಕೆಂದು ನಂಬುತ್ತಾರೆ. ಈ ಜನರು ಸ್ವಾವಲಂಬಿಗಳಾಗಿದ್ದಾರೆ. ಶನಿಯ ಕೃಪೆ ಸದಾ ಇವರ ಮೇಲೆ ಆಹ್ಲಾದಕರವಾದ ಪ್ರಭಾವ ಬೀರುತ್ತದೆ, ಇದರಿಂದಾಗಿ ಅವರು ಅಪಾರ ಸಂತೋಷವನ್ನು ಪಡೆಯುತ್ತಾರೆ.

 

 

ವೃಶ್ಚಿಕ ರಾಶಿಯವರು ಸಹ ಸೂರ್ಯನ ಆಶೀರ್ವಾದವನ್ನು ಪಡೆಯುತ್ತಾರೆ. ಈ ಮಹಾ ಸಂಯೋಗ ಇವರನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ. ಈ ಜನರು ಕೂಡ ಮಣ್ಣಿನಲ್ಲಿ ಕೈ ಹಾಕಿದರೆ ಅದು ಚಿನ್ನವಾಗುತ್ತದೆ. ಸುತ್ತಮುತ್ತಲಿನ ಜನರನ್ನು ಸಂಮೋಹನಗೊಳಿಸುವ ಅದ್ಭುತ ಶಕ್ತಿಯನ್ನು ಇವರು ಹೊಂದಿದ್ದಾರೆ. ಮಕರ ರಾಶಿಯವರು ಕಷ್ಟಪಟ್ಟು ಕೆಲಸ ಮಾಡುವುದನ್ನು ನಂಬುತ್ತಾರೆ ಮತ್ತು ವಿಶ್ವಾಸಾರ್ಹರು. ಅವರು ಯಾವುದೇ ಕ್ಷೇತ್ರದಲ್ಲಿ ಪ್ರಯತ್ನಿಸಿದರೂ ಅವರು ಮೇಲಕ್ಕೆ ಹೋಗುತ್ತಾರೆ.

ಎಲ್ಲಾ ಕಾರ್ಯಗಳಲ್ಲೂ ಅವರಿಗೆ ಯೋಗವಿದೆ. ಕುಂಭ ರಾಶಿಗೆ ಮಾನವೀಯತೆಯ ವಾತ್ಸಲ್ಯ ಮತ್ತು ಸಮಾಜದ ಸುಧಾರಣೆಗೆ ಯಾವುದೇ ಒಳ್ಳೆಯ ಕೆಲಸ ಮಾಡಲು ಅವರು ಯಾವಾಗಲೂ ಸಿದ್ದರು . ಅದಕ್ಕಾಗಿಯೇ ಅವರು ಶನಿಗೆ ಪ್ರಿಯರಾಗಿದ್ದಾರೆ. ದಯಾ ಗುಣ ಇರುವವರು ಶನಿಗೆ ಅತ್ಯಂತ ಪ್ರಿಯರು. ಈ ಎಲ್ಲ ನಾಲ್ಕು ರಾಶಿಗಳಿಗೆ ಹೆಚ್ಚಿದ ದುಡಿಮೆಯಿಂದಾಗಿ ಆರ್ಥಿಕ ಸ್ಥಿರತೆ ಕಂಡುಬರುವುದು. ಬಂಧುಗಳೊಡನೆ ಇದ್ದ ವಿರಸ ದೂರವಾಗಲಿದೆ. ಕುಟುಂಬದಲ್ಲಿ ಮಧುರ ಬಾಂಧವ್ಯ ಮೂಡಲಿದೆ.

ವಿದೇಶದಲ್ಲಿರುವ ಬಂಧುಗಳಿಂದ ಸುವಾರ್ತೆಯನ್ನು ಕೇಳುವಿರಿ. ಕಷ್ಠಪಟ್ಟು ಪ್ರಾಮಾಣಿಕವಾಗಿ ದುಡಿಯುವ ನಿಮಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಮಾತು ಕೇಳಿಬರಲಿದ್ದು ನಿಮ್ಮ ಬಗ್ಗೆ ಶಿಫಾರಸ್ಸು ಮಾಡುವರು. ಭವಿಷ್ಯದ ಬಗೆಗೆ ಈಗಲೇ ಒಂದು ಯೋಜನೆಯನ್ನು ನಿರೂಪಿಸುವುದು ಉತ್ತಮ. ಷೇರು ಮಾರುಕಟ್ಟೆ ವ್ಯವಹಾರದಲ್ಲಿ ತಾತ್ಕಾಲಿಕ ಹಿನ್ನಡೆ ಕಂಡುಬರುವುದು. ಆತ್ಮವಿಶ್ವಾಸ ಪ್ರಗತಿಗೆ ಪೂರಕವಾಗಲಿದೆ. ಗುರಿ ಸಾಧನೆಗೆ ಮತ್ತೊಂದು ಮಾರ್ಗವನ್ನು ಕಂಡುಕೊಳ್ಳುವಿರಿ. ಮಾನಸಿಕ ಚಿಂತೆಯಿಂದ ದೂರವಿರುವುದು ಒಳ್ಳೆಯದು. ಆತ್ಮೀಯರಲ್ಲಿ ಮಾತ್ರ ಗೌಪ್ಯತೆಯನ್ನು ಹಂಚಿಕೊಳ್ಳಿರಿ. ಮನೆ ಖರೀದಿ ವಿಚಾರದಲ್ಲಿ ಚೆನ್ನಾಗಿ ಆಲೋಚಿಸಿ ಮುಂದುವರೆಯುವುದು ಒಳ್ಳೆಯದು.

Please follow and like us:
error0
http://karnatakatoday.in/wp-content/uploads/2019/09/shani-and-surya-1024x576.jpghttp://karnatakatoday.in/wp-content/uploads/2019/09/shani-and-surya-150x104.jpgKarnataka Trendingಎಲ್ಲಾ ಸುದ್ದಿಗಳುಭೂಮಂಡಲದಲ್ಲಿ ಶನಿದೇವ ಎಂದರೆ ಸಾಕಷ್ಟು ಮಂದಿ ಹೆದರುತ್ತಾರೆ. ಶನಿಯ ಕಾಟ ನಿವಾರಣೆಗೆಂದು ಶನಿದೇವರಿಗೆ ಎಳ್ಳೆಣ್ಣೆ ಅಭಿಷೇಕ, ಆಂಜನೇಯ ಸ್ವಾಮಿಗೆ ದೀಪ ಹಚ್ಚುವುದು ಸಾಮಾನ್ಯ. ಅಷ್ಟಕ್ಕೂ ಶನಿ ಕ್ರೂರಗ್ರಹವಲ್ಲ ಶನಿಯ ದೃಷ್ಟಿ ಬಿದ್ದರೆ ಒಬ್ಬ ವ್ಯಕ್ತಿ ಉತ್ತುಂಗಕ್ಕೂ ಕೂಡ ಹೋಗಬಹುದು.  ಶನಿಗೆ 56 ಚಂದ್ರರಿದ್ದಾರೆ. ಶನಿದೇವ ಕರ್ಮಯೋಗಿ. ಜಾತಕನ ಕರ್ಮಸಿದ್ಧಾಂತಕ್ಕೆ ಅನುಸಾರವಾಗಿ ಆತನ ಪ್ರಭಾವ ನಡೆಯುತ್ತದೆ. ಕಟು ನ್ಯಾಯವಾದಿಯಂತೆ ಅವರವರ ಕರ್ಮಕ್ಕೆ ಅನುಗುಣವಾಗಿ ವ್ಯಕ್ತಿಯನ್ನು ಶಿಕ್ಷಿಸುತ್ತಾನೆ. 30 ವರ್ಷಗಳ ನಂತರ...Film | Devotional | Cricket | Health | India