ಕರ್ಮಾಧಿಪತಿಯಾದ ಶನಿ ಒಲಿದರೆ ಏನು ಬೇಕಾದರೂ ಆಗಬಹುದು ಅದೇ ರೀತಿ ಜಾತಕದಲ್ಲಿ ಶನಿ ದೋಷ ಇದ್ದರೆ ಆತ ಇಂತಹ ಕಷ್ಟಕ್ಕೂ ಕೂಡ ಸಿಲುಕಬಹುದು ಹೀಗಾಗಿ ಶನಿ ದೇವನ ಮೇಲೆ ವಿಶೇಷ ಭಕ್ತಿಯನ್ನು ಜನರು ತೋರುತ್ತಾರೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಶನಿಯಿಂದ ಕೆಲ ರಾಶಿಗಳು ಉತ್ತಮ ಫಲವನ್ನು ಪಡೆಯುವ ನಿರೀಕ್ಷೆ ಇದೆ, ಕರ್ಮಫಲಕ್ಕೆ ಕಾರಣನಾದ ಶನಿ ಕೆಲ ರಾಶಿಗಳಿಗೆ ಈ ತಿಂಗಳು ಭಾಗ್ಯಗಳನ್ನು ನೀಡಲಿದ್ದಾನೆ. ಹಾಗಿದ್ದರೆ ಶನಿಯಿಂದ ಲಾಭ ಪಡೆಯಲಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇಂದು ಪ್ರತಿ ಶನಿವಾರ ಶನಿದೇವರಿಗೆ ಎಳ್ಳೆಣ್ಣೆಯ ದೀಪವನ್ನ ಹಚ್ಚಿ ಶನಿ ದೇವರ ಆರಾಧನೆಯನ್ನ ಮಾಡಿ.

ಮಕರ ರಾಶಿಯವರು ಸಂಗಾತಿಯ ನಿರೀಕ್ಷೆಯಲ್ಲಿರುವವರಿಗೆ ಸಿಗುವ ಸಾಧ್ಯತೆ ಹೆಚ್ಚು, ಸಹವಾಸ ಬೆಳಸುವಾಗ ಎಚ್ಚರವಿರಲಿ ಮತ್ತು ನಿಮ್ಮ ಪ್ರಯತ್ನದ ಫಲವಾಗಿ ಕುಟುಂಬದಲ್ಲಿ ಸಾಮರಸ್ಯ ಉಂಟಾಗುತ್ತದೆ. ಪ್ರೌಢ ವಯಸ್ಸಿನವರು ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಬೇಕು, ಉನ್ನತ ಶಿಕ್ಷಣಕ್ಕೆ ಸಾಕಷ್ಟು ಅವಕಾಶವಿದೆ, ಯಾವುದೇ ಕೆಲಸದಲ್ಲಾದರೂ ಏಕಾಗ್ರತೆ ಸಾಧನೆ ಮುಖ್ಯವೆನಿಸುತ್ತದೆ. ನಿಮ್ಮ ಅಸೂಯೆ ವರ್ತನೆ ನಿಮ್ಮನ್ನು ದುಃಖಿಗಳಾಗಿಯೂ ಮತ್ತು ಖಿನ್ನರಾಗಿಯೂ ಮಾಡಬಹುದು, ಆದರೆ ಇದು ಒಂದು ಸ್ವಯಂಕೃತ ಗಾಯವಾಗಿರುವುದರಿಂದ ಇದರ ಬಗ್ಗೆ ಪ್ರಲಾಪಿಸುವ ಅಗತ್ಯವಿಲ್ಲ. ಇತರರ ಸಂತೋಷ ಮತ್ತು ಅತೃಪ್ತಿಯನ್ನು ಹಂಚಿಕೊಳ್ಳುವ ಮೂಲಕ ಇದನ್ನು ತೊಡೆದುಹಾಕಲು ಪಣತೊಡಿ, ಹಣಕಾಸು ಸ್ಥಿತಿ ಊಹಾಪೋಹ ಅಥವಾ ಅನಿರೀಕ್ಷಿತ ಲಾಭದ ಮೂಲಕ ಸುಧಾರಿಸುತ್ತವೆ.

Shani dev help

ಎರಡನೆಯ ರಾಶಿ ಮೇಷ ರಾಶಿ, ಇವರಿಗೆ ಕೌಶಲ್ಯಾಭಿವೃದ್ಧಿಯಲ್ಲಿ ಪದೇ ಪದೇ ಶ್ರಮ ಪಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ವ್ಯಾಪಾರಿಗಳಿಗೆ ಉತ್ತಮ ಕಾಲ, ಪರಿಣಿತರಲ್ಲಿ ಸೂಕ್ತ ಸಲಹೆ ಪಡೆಯುವುದರಿಂದ ವ್ಯಾಪಾರದಲ್ಲಿ ಪ್ರಗತಿ ಹೊಂದುವಿರಿ. ಆದ್ಯತೆಯ ಮೇರೆಗೆ ಕೆಲಸಕಾರ್ಯಗಳನ್ನು ಮಾಡುವ ಮೂಲಕ ಸಮಯ ನಿರ್ವಹಣೆ ಸಾಧ್ಯವಾಗುತ್ತದೆ, ಈ ತಿಂಗಳಲ್ಲಿ ಕುಟುಂಬದಲ್ಲಿ ಪರಸ್ಪರ ಸಾಮರಸ್ಯವೂ ಉತ್ತಮಗೊಳ್ಳುವ ಸಾಧ್ಯತೆಯಾಗುತ್ತಿದೆ. ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವ ಮೂಲಕ ಯಾವುದೇ ಕೆಲಸಕ್ಕೆ ಉತ್ತಮ ನಿರ್ದೇಶನ ನೀಡಬಹುದು, ಯಾವುದೇ ಉದ್ವೇಗ ಮತ್ತು ವಿವಾದಗಳನ್ನು ಸ್ವಯಂಪ್ರೇರಿತವಾಗಿ ತಪ್ಪಿಸಲು ಪ್ರಯತ್ನಿಸಿ. ಕಟಕ ರಾಶಿಯವರಿಗೆ ನಿರಂತರ ಪ್ರಯತ್ನದಿಂದ ಯಶಸ್ಸು ಶತಸ್ಸಿದ್ಧ, ಆತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ಉತ್ತಮ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳುವಿರಿ.

ಅನಗತ್ಯ ವಿವಾದಗಳಿಂದ ದೂರವಿರಿ, ಕುಟುಂಬ ಸದಸ್ಯರ ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ ಅದರಲ್ಲೂ ಅಲರ್ಜಿ ಮತ್ತು ಸೋಂಕಿನಿಂದ ಪದೇ ಪದೇ ಭಾದಿತರಾಗುತ್ತಿದ್ದರೆ ಜಾಗರೂಕರಾಗಿರಿ. ಗೆಳೆಯ ಗೆಳತಿಯೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ, ಈ ತಿಂಗಳಲ್ಲಿ ಆರ್ಥಿಕ ಪರಿಸ್ಥಿತಿ ಬಹಳ ಉತ್ತಮವಾಗಲಿದೆ, ಆರ್ಥಿಕ ಲಾಭಗಳನ್ನು ಪಡೆಯಲು ಉತ್ತಮ ಅವಕಾಶಗಳಿವೆ ಮತ್ತು ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಸಿಂಹ ರಾಶಿಗೆ ಶನಿಯ ವಿಶೇಷ ಲಾಭವಿದೆ, ಕಷ್ಟಕರ ಸನ್ನಿವೇಶಗಳಲ್ಲಿ ಆಪ್ತ ಸ್ನೇಹಿತರು ನಿಮಗೆ ನೆರವಾಗುವರು. ಏಕತಾನತೆಯಿಂದ ಹೊರಬಂದು ಎಲ್ಲರೊಡನೆ ಬೆರೆಯಿರ, ಮನಸ್ಸನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ಯಾರ ಸಹವಾಸದಿಂದ ನಿಮಗೆ ಕೇಡಾಗುತ್ತದೆ ಎನಿಸುತ್ತದೆಯೇ ಅಂತಹವರ ಸಹವಾಸದಿಂದ ದೂರವಿರಿ. ವಿದ್ಯಾರ್ಥಿಗಳು ಸಕಾರಾತ್ಮಕವಾಗಿ ಚಿಂತಿಸಬೇಕು ಮತ್ತು ತಮ್ಮ ಗುರಿಯತ್ತ ಗಮನ ಹರಿಸಬೇಕು. ವ್ಯಾಸಂಗದಲ್ಲಿ ಏಕಾಗ್ರತೆಯನ್ನು ಸಾಧಿಸಿ, ಶನಿದೇವನ ಮಂದಿರದಲ್ಲಿ ನಿರ್ಗತಿಕರಿಗೆ ದಾನ ಧರ್ಮಗಳನ್ನು ಮಾಡಿ ಇದರಿಂದ ಶನಿ ಕ್ರಪೆ ಮತ್ತಷ್ಟು ಸಾಧ್ಯ.

Shani dev help

Please follow and like us:
error0
http://karnatakatoday.in/wp-content/uploads/2019/12/Shani-dev-help-1024x576.jpghttp://karnatakatoday.in/wp-content/uploads/2019/12/Shani-dev-help-150x104.jpgKarnataka Trendingಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಕರ್ಮಾಧಿಪತಿಯಾದ ಶನಿ ಒಲಿದರೆ ಏನು ಬೇಕಾದರೂ ಆಗಬಹುದು ಅದೇ ರೀತಿ ಜಾತಕದಲ್ಲಿ ಶನಿ ದೋಷ ಇದ್ದರೆ ಆತ ಇಂತಹ ಕಷ್ಟಕ್ಕೂ ಕೂಡ ಸಿಲುಕಬಹುದು ಹೀಗಾಗಿ ಶನಿ ದೇವನ ಮೇಲೆ ವಿಶೇಷ ಭಕ್ತಿಯನ್ನು ಜನರು ತೋರುತ್ತಾರೆ. ಇನ್ನು ಡಿಸೆಂಬರ್ ತಿಂಗಳಲ್ಲಿ ಶನಿಯಿಂದ ಕೆಲ ರಾಶಿಗಳು ಉತ್ತಮ ಫಲವನ್ನು ಪಡೆಯುವ ನಿರೀಕ್ಷೆ ಇದೆ, ಕರ್ಮಫಲಕ್ಕೆ ಕಾರಣನಾದ ಶನಿ ಕೆಲ ರಾಶಿಗಳಿಗೆ ಈ ತಿಂಗಳು ಭಾಗ್ಯಗಳನ್ನು ನೀಡಲಿದ್ದಾನೆ. ಹಾಗಿದ್ದರೆ ಶನಿಯಿಂದ ಲಾಭ ಪಡೆಯಲಿರುವ...Film | Devotional | Cricket | Health | India