ಮನೆಮಂದಿಯೆಲ್ಲ ಬಹಳ ಇಷ್ಟಪಟ್ಟು ನೋಡುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶನಿ ಧಾರಾವಾಹಿಯನ್ನು ನೋಡದವರಿಲ್ಲ. ಪ್ರತಿಯೊಬ್ಬರು ಕೂಡ ತಪ್ಪದೆ ಕುಳಿತು ಶನಿ ಲೀಲೆಯನ್ನು ನೋಡುವ ಈ ಅದ್ಬುತ ಕಥೆಯಲ್ಲಿ ಈಗ ಪುಟ್ಟ ಹನುಮನ ಎಂಟ್ರಿ ಆಗಿದೆ. ಇತ್ತೀಚೆಗೆ ಈ ಪುಟ್ಟ ಹನುಮನ ಸೇರ್ಪಡೆಯಿಂದ ಧಾರಾವಾಹಿ ನೋಡುವವರ ಸಂಖ್ಯೆ ಕೂಡ ಹೆಚ್ಚಿದೆ ಎಂದರೆ ತಪ್ಪಾಗಲಾರದು.

 

 

ಇಷ್ಟಕ್ಕೂ ಈ ಪುಟ್ಟ ಹನುಮ ಯಾರು ಈತನ ಬಗ್ಗೆ ಕೆಲ ಸಂಗತಿಗಳನ್ನು ಹೇಳುತ್ತೇವೆ ಒಮ್ಮೆ ಕೇಳಿ. ಮುದ್ದಾಗಿ ತೆರೆ ಮೇಲೆ ಕಾಣಿಸುಕೊಳ್ಳುವ ಈ ಹುಡುಗನ ಹೆಸರು ಕನಿಷ್ಕ್ ರವಿ ದೇಸಾಯಿ, ಯಾದಗಿರಿ ಮೂಲದ ರವಿ ಈಗಾಗಲೇ ಹರ ಹರ ಮಹದೇವ್ ಸೀರಿಯಲ್ ನಲ್ಲಿ ಕೂಡ ನಟಿಸಿದ್ದಾರೆ. ನಟನೆ ಈತನಿಗೆ ದೇವರು ಕೊಟ್ಟ ವರ ಎನ್ನಬಹುದು ಯಾವುದೇ ನಟನ ತರಬೇತಿ ಕೂಡ ಪಡೆದಿಲ್ಲ ಈ ಬಾಲಕ.

 

ಕನಿಷ್ಕ ಈಗ ಏಳನೇ ತರಗತಿ ಅಭ್ಯಾಸ ಮಾಡುತ್ತಿದ್ದು ನಟನೆಯಂತೆ ಓದುವುದರಲ್ಲಿ ಕೂಡ ಮುಂದೆ ಇದ್ದಾನೆ. ಅಷ್ಟೇ ಅಲ್ಲದೆ ಕರಾಟೆಯಲ್ಲಿ ಕೂಡ ಪರಿಣಿತಿ ಹೊಂದಿದ್ದಾನೆ ಬ್ರೌನ್ ಬೆಲ್ಟ್ ಕೂಡ ಪಡೆದುಕೊಂಡಿದ್ದಾನೆ. ಶನಿ ಧಾರಾವಾಹಿಯ ಎಲ್ಲ ಬಾಲ ಪಾತ್ರಗಳು ಇನ್ನು ಕೆಲವೇ ದಿನಗಳಲ್ಲಿ ಮುಗಿಯಲಿದ್ದು, ಇನ್ನು ಶನಿ ಯುವಕನಾಗಲಿದ್ದಾನೆ.

ಮತ್ತು ಬಾಲ ಹನುಮನ ಪತ್ರ ಕೂಡ ಈಗಾಗಲೇ ಚಿತ್ರಿಸಲಾಗಿದೆ. ಈ ಹುಡುಗನ ನಟನೆ ನಿಮಗೆ ಇಷ್ಟವಾಗಿದ್ದರೆ ಈ ಬಾಲ ಹನುಮನ ಬಗ್ಗೆ ಅನಿಸಿಕೆ ಅಭಿಪ್ರಾಯ ಹಾಗೂ ತಪ್ಪದೆ ವಿಶ್ ಮಾಡಿ.

Please follow and like us:
0
http://karnatakatoday.in/wp-content/uploads/2018/08/bala-hanuma-1024x576.jpghttp://karnatakatoday.in/wp-content/uploads/2018/08/bala-hanuma-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಮನೆಮಂದಿಯೆಲ್ಲ ಬಹಳ ಇಷ್ಟಪಟ್ಟು ನೋಡುವ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಶನಿ ಧಾರಾವಾಹಿಯನ್ನು ನೋಡದವರಿಲ್ಲ. ಪ್ರತಿಯೊಬ್ಬರು ಕೂಡ ತಪ್ಪದೆ ಕುಳಿತು ಶನಿ ಲೀಲೆಯನ್ನು ನೋಡುವ ಈ ಅದ್ಬುತ ಕಥೆಯಲ್ಲಿ ಈಗ ಪುಟ್ಟ ಹನುಮನ ಎಂಟ್ರಿ ಆಗಿದೆ. ಇತ್ತೀಚೆಗೆ ಈ ಪುಟ್ಟ ಹನುಮನ ಸೇರ್ಪಡೆಯಿಂದ ಧಾರಾವಾಹಿ ನೋಡುವವರ ಸಂಖ್ಯೆ ಕೂಡ ಹೆಚ್ಚಿದೆ ಎಂದರೆ ತಪ್ಪಾಗಲಾರದು.     ಇಷ್ಟಕ್ಕೂ ಈ ಪುಟ್ಟ ಹನುಮ ಯಾರು ಈತನ ಬಗ್ಗೆ ಕೆಲ ಸಂಗತಿಗಳನ್ನು ಹೇಳುತ್ತೇವೆ ಒಮ್ಮೆ ಕೇಳಿ. ಮುದ್ದಾಗಿ...Kannada News