ಮನುಷ್ಯನಿಗೆ ಕಷ್ಟ ಬಂದಾಗ ಶನಿಯಿಂದ ಬಂತು ಎಂದು ಹೇಳುತ್ತಾರೆ. ಶನಿಯಿಂದ ಕಷ್ಟ ತೊಂದರೆ ಬರಬಾರದೆಂದು ಶನಿಶೋತ್ರ, ಜಪತಪ ಮಾಡುವವರು ಬಹಳ ಜನರು ಇದ್ದಾರೆ. ಶನಿಯ ಕಾಟ ಇದ್ದಾಗ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಲು ಹೇಳುತ್ತಾರೆ. ಶನಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂದು ಶನಿಕಥೆ ತಿಳಿದವರಿಗೆ ಗೊತ್ತಿದೆ. ಜ್ಯೋತಿಷದಲ್ಲಿ ಶನಿಗಿಂತ ದುಃಖಕರವಾದ ಗ್ರಹ ಬೇರೆ ಇಲ್ಲ. ಏನೇ ಘಟನೆ ನಡೆದಾಗ ಇದಕ್ಕೆ ಶನಿಯೇ ಕಾರಣವೆಂದು ಹೇಳುತ್ತಾರೆ. ಶನಿ ಒಲಿದರೆ ಒಳ್ಳೆಯದು ಹೌದು ಮುನಿಸಿದರೆ ಕೆಟ್ಟದ್ದು ಹೌದು ಅವರವರ ಕರ್ಮ ಫಲಗಳನ್ನು ಅರಿತು ಶನಿ ಒಳ್ಳೆಯದನ್ನು ಮಾಡುತ್ತಾನೆ.

2019 ರಲ್ಲಿ ಮೊದಲ ಬಾರಿಗೆ ಶನಿ ಮಕರ ರಾಶಿ ಪ್ರವೇಶಿಸುತ್ತಿದ್ದಾನೆ ಹೀಗಾಗಿ ಈ ರಾಶಿಗಳಿಗೆ ಭಾರಿ ಅದ್ರಷ್ಟ ಎದುರಾಗಲಿದೆ. ಶನಿಯಿಂದ ಒಳೆಯದನ್ನ ಕಾಣಲಿದ್ದಾರೆ ಈ ರಾಶಿಯ ಜನರು. ಮೇಷ ರಾಶಿಯವರಿಗೆ ಈ ಬಾರಿ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಮುಂದೆ ಸಾಗುವವು.

ನಿಮ್ಮ ಶ್ರಮ ಹಾಗೂ ನಿಷ್ಠೆಯ ಫಲವಾಗಿ ಉತ್ತಮ ಆದಾಯ ಹೊಂದುವಿರಿ. ಖರ್ಚಿನ ಮೇಲೆ ನಿಗಾ ಇಡುವುದು ಒಳ್ಳೆಯದು. ಸ್ಥಿರ ಚರ ಆಸ್ತಿ ವಿಚಾರಗಳಲ್ಲಿ ಬಂಧುಗಳ ನಡುವೆ ಮನಸ್ತಾಪ ಆಗುವ ಸಾಧ್ಯತೆ ಇದೆ. ಗುರು ಹಿರಿಯರ ಮಧ್ಯಸ್ಥಿಕೆಯಿಂದ ಅನುಕೂಲವಾಗುವುದು.ವೃಷಭ ಮತ್ತು ಸಿಂಹ ರಾಶಿಗಳ ವ್ಯಕ್ತಿಗಳಿಗೆ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ ಕಂಡುಬರುವುದು.

ವಿದೇಶದಿಂದ ಬರುವ ವಾರ್ತೆ ನಿಮ್ಮ ವ್ಯಾಪಾರ ವೃದ್ಧಿಗೆ ಸಹಕಾರಿಯಾಗುವುದು. ವಿದ್ಯಾರ್ಥಿಗಳು ಅಧ್ಯಯನವನ್ನು ಹೆಚ್ಚಿನ ಗಮನವಿಟ್ಟು ಮಾಡಬೇಕು. ಆರೋಗ್ಯ ಸುಧಾರಿಸುವುದು. ಸಾಲಗಳ ತೀರುವಳಿಗೆ ಸಕಾಲವಿದೆ. ಪತಿ ಪತ್ನಿಯರ ನಡುವಿನ ಸಾಮರಸ್ಯ ಹೆಚ್ಚುವುದು. ಸಾದ್ಯವಾದರೆ ಇಂದು ಶನಿದೇವನನ್ನು ನೆನೆದು ಜಯ ಶನಿ ಎಂದು ತಿಳಿಸಿರಿ.

Please follow and like us:
0
http://karnatakatoday.in/wp-content/uploads/2019/01/shani-makara-rashi-1024x576.pnghttp://karnatakatoday.in/wp-content/uploads/2019/01/shani-makara-rashi-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಮನುಷ್ಯನಿಗೆ ಕಷ್ಟ ಬಂದಾಗ ಶನಿಯಿಂದ ಬಂತು ಎಂದು ಹೇಳುತ್ತಾರೆ. ಶನಿಯಿಂದ ಕಷ್ಟ ತೊಂದರೆ ಬರಬಾರದೆಂದು ಶನಿಶೋತ್ರ, ಜಪತಪ ಮಾಡುವವರು ಬಹಳ ಜನರು ಇದ್ದಾರೆ. ಶನಿಯ ಕಾಟ ಇದ್ದಾಗ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಲು ಹೇಳುತ್ತಾರೆ. ಶನಿಯಿಂದ ತಪ್ಪಿಸಿಕೊಳ್ಳುವುದು ಕಷ್ಟವೆಂದು ಶನಿಕಥೆ ತಿಳಿದವರಿಗೆ ಗೊತ್ತಿದೆ. ಜ್ಯೋತಿಷದಲ್ಲಿ ಶನಿಗಿಂತ ದುಃಖಕರವಾದ ಗ್ರಹ ಬೇರೆ ಇಲ್ಲ. ಏನೇ ಘಟನೆ ನಡೆದಾಗ ಇದಕ್ಕೆ ಶನಿಯೇ ಕಾರಣವೆಂದು ಹೇಳುತ್ತಾರೆ. ಶನಿ ಒಲಿದರೆ ಒಳ್ಳೆಯದು ಹೌದು ಮುನಿಸಿದರೆ...Kannada News