ಶನಿದೇವರ ಬಗ್ಗೆ ನಿಮಗೆ ಗೊತ್ತೇ ಇದೆ ಮತ್ತು ಆತನ ಶಕ್ತಿಯ ಬಗ್ಗೆ ತಿಳಿದಿದ್ದೀರಿ ,ಶನಿದೇವ ನಂಬಿದವರನ್ನು ಯಾವತ್ತೂ ಕೈ ಬಿಡೋದಿಲ್ಲ ಆದರೆ ಶನಿ ದೇವರ ಬಗ್ಗೆ ತಿಳಿದಿಲ್ಲದವರು ,ಶನಿ ದೇವರು ಅಂದರೆ ಭಯ ಪಡುತ್ತಾರೆ ,ಶನಿ ದೇವರ ಅನುಗ್ರಹ ನಿಮ್ಮಕುಟುಂಬ ಹಾಗು ನಿಮ್ಮ ಮೇಲೆ ಇದ್ದರೆ ,ನಿಮಗೆ ಬೇಕಾದ ಎಲ್ಲ ಸೌಖ್ಯವನ್ನು ಶನಿ ದೇವರು ನೀಡುತ್ತಾನೆ. ಹಾಗೆ ಅದೇ ಶನಿಗೆ ದೇವನಿಗೆ ಕೋಪ ಬಂದರೆ ಅದನ್ನು ತಡೆದು ಕೊಳ್ಳುವ ಶಕ್ತಿ ಮನುಶ್ಯನಲ್ಲಿ ಇರೋದಿಲ್ಲ ,ಕಷ್ಟ ಬಂದಾಗ ತುಂಬಾ ಜನರು ದೇವರನ್ನು ದೂಷಿಸುತ್ತಾರೆ ,ಇಂಥ ಅಭ್ಯಾಸಗಳು ಶನಿ ದೇವರಿಗೆ ಹಿಡಿಸೋದಿಲ್ಲ.ಶನಿ ವೇದಾಂತ ಗ್ರಹ. ನಮಗೆ ಎಷ್ಟೇ ಕಷ್ಟ ಕೊಟ್ಟರೂ ಅದರಿಂದ ನಮಗೆ ಒಳಿತೇ ಆಗುತ್ತದೆ. ಕಷ್ಟಗಳ ಮೂಲಕ ನಮ್ಮ ಜೀವನವನ್ನು ತೊಳೆದು ಪವಿತ್ರಗೊಳಿಸುತ್ತಾನೆ.

ನಮ್ಮ ಆತ್ಮಬಲವನ್ನು ವೃದ್ಧಿಮಾಡುತ್ತಾನೆ. ಈ ಕಷ್ಟಗಳು ಕ್ರೂರ ಎನಿಸಿದಾಗ ದೇವರ ಧ್ಯಾನ, ಜಪ-ತಪ ನಮ್ಮ ನೆರವಿಗೆ ಬಂದು ನಮಗೆ ಎದುರಿಸುವ ಚೈತನ್ಯವನ್ನು ಕೊಡುತ್ತದೆ. ಇಷ್ಟೆಲ್ಲ ಇದ್ದರೂ ಈ ನಾಲ್ಕು ರಾಶಿಯ ವ್ಯಕ್ತಿಗಳೆಂದರೆ ಶನೇಶ್ವರನಿಗೆ ಬಲು ಇಷ್ಟವಂತೆ, ಇವರ ಮೇಲೆ ಆತನ ಅನುಗ್ರಹ ಸದಾ ಇರುತ್ತದೆ ಹಾಗಿದ್ರೆ ಆ ರಾಶಿಗಳು ಯಾವುವು ಅವರಲ್ಲಿನ ವಿಶೇಷತೆ ಏನೆಂದು ತಿಳಿಯೋಣ. ಶನಿಯನ್ನು ಸದಾ ನಾವು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ ಅವುಗಳೆಂದರೆ ಕರಿ ಎಳ್ಳನ್ನು ಬ್ರಾಹ್ಮಣರಿಗೆ ದಾನ ಮಾಡುವುದು. ಹಸುವಿಗೆ ಬೆಲ್ಲ ಮಿಶ್ರಿತ ಕರಿಎಳ್ಳು ತಿನ್ನಿಸುವುದು. ಬೆಳಗಿನ ಹೊತ್ತು ಕಾಗೆಗಳಿಗೆ ಆಹಾರ ನೀಡುವುದು, ಅಂಗವಿಕಲರಿಗೆ ದಾನಧರ್ಮ ಮಾಡುವುದು.

ನವಗ್ರಹ ಪ್ರದಕ್ಷಿಣೆ ಹಾಕುವುದು. ಶ್ರಾವಣ ಮಾಸದಂದು ಕಡ್ಡಾಯವಾಗಿ ಶನಿವಾರ ಉಪವಾಸ ಕೂರುವುದು. ರಾಮನಾಮ, ದುರ್ಗಾಸ್ತುತಿ, ಹನುಮಾನ್ ಚಾಲೀಸ್ ಪಠಣ ಮೆಣಸು ಬೆರೆಸಿದ ಮೊಸರನ್ನವನ್ನು ದೇವರಿಗೆ ಸಮರ್ಪಣೆ ಮಾಡಿ ಕಾಗೆಗೆ ಉಣ ಬಡಿಸುವುದು. ಹೆಸರಾಂತ ಶನಿ ದೇವಾಲಯಗಳಿಗೆ ಸಾಧ್ಯವಾದರೆ ಎರಡು ವರ್ಷಕ್ಕೊಮ್ಮೆ ಭೇಟಿ ನೀಡಿ.

 

 

ಶನಿ ಶಿಂಗನಾಪುರ, ತಿರುನಲ್ಲಾರು ಶನಿ ದೇವಾಲಯ, ನರ್ಸಿನ್ ಗೋಲೆ ಶನಿಮಹಾತ್ಮ ದೇವಾಲಯ, ವೆಂಕಟಾಥಳ ಶನಿ ದೇವಾಲಯ ಇತ್ಯಾದಿ ಪ್ರಸಿದ್ದ ದೇವಾಲಯಗಳ ದರುಶನ ಮಾಡುವುದು ಸಾಮಾನ್ಯವಾಗಿ ಕರ್ಕ, ತುಲಾ,ಮೀನಾ, ಕುಂಭ ರಾಶಿಗಳು ಇವುಗಳ ಮೇಲೆ ಶನಿಯ ಅನುಗ್ರಹ ಯಾವಾಗಲು ಇರುತ್ತದೆಯಂತೆ ಆತನ ಓಲೈಕೆಗೆ ಬೇಕಾದ ಎಲ್ಲ ಕೆಲಸಗಳನ್ನು ಈ ರಾಶಿಯವರು ಅಚ್ಚುಕಟ್ಟಾಗಿ ಮಾಡುತ್ತಾರಂತೆ. ಹೀಗಾಗಿ ಶನಿ ಇವರ ಮೇಲೆ ಸದಾ ಕರುಣಾಮಯಿ ಎನ್ನಬಹುದೇನೋ. ಏನೇ ಇರಲಿ ಶನಿ ಸದಾ ಎಲ್ಲರನ್ನು ಹರಸಲಿ ಎನ್ನೋಣ.

Please follow and like us:
0
http://karnatakatoday.in/wp-content/uploads/2018/10/shani-ista-1024x576.pnghttp://karnatakatoday.in/wp-content/uploads/2018/10/shani-ista-150x104.pngKarnataka Today's Newsಅಂಕಣಜ್ಯೋತಿಷ್ಯನಗರಶನಿದೇವರ ಬಗ್ಗೆ ನಿಮಗೆ ಗೊತ್ತೇ ಇದೆ ಮತ್ತು ಆತನ ಶಕ್ತಿಯ ಬಗ್ಗೆ ತಿಳಿದಿದ್ದೀರಿ ,ಶನಿದೇವ ನಂಬಿದವರನ್ನು ಯಾವತ್ತೂ ಕೈ ಬಿಡೋದಿಲ್ಲ ಆದರೆ ಶನಿ ದೇವರ ಬಗ್ಗೆ ತಿಳಿದಿಲ್ಲದವರು ,ಶನಿ ದೇವರು ಅಂದರೆ ಭಯ ಪಡುತ್ತಾರೆ ,ಶನಿ ದೇವರ ಅನುಗ್ರಹ ನಿಮ್ಮಕುಟುಂಬ ಹಾಗು ನಿಮ್ಮ ಮೇಲೆ ಇದ್ದರೆ ,ನಿಮಗೆ ಬೇಕಾದ ಎಲ್ಲ ಸೌಖ್ಯವನ್ನು ಶನಿ ದೇವರು ನೀಡುತ್ತಾನೆ. ಹಾಗೆ ಅದೇ ಶನಿಗೆ ದೇವನಿಗೆ ಕೋಪ ಬಂದರೆ ಅದನ್ನು ತಡೆದು ಕೊಳ್ಳುವ...Kannada News