ಕಶ್ಯಪರಿಗೆ ಅದಿತಿಯಲ್ಲಿ ಜನಿಸಿದ ಮಗ ಜಗತ್ತನ್ನೇ ಬೆಳಗುವ ಸೂರ್ಯ. ಇಂತಹ ಸೂರ್ಯನ ಪತ್ನಿ ಸಂಜ್ಞೆಯ ಛಾಯೆಯಿಂದ ಸೃಷ್ಟಿ ಹೊಂದಿದ ಅವಳನ್ನೇ ಹೋಲುವ ಛಾಯಾದೇವಿ ಪುತ್ರನೇ ಶನಿ. ಶನಿಯು ಪರಮಾತ್ಮನ ಕೃಪೆಗೆ ಪಾತ್ರನಾಗಿ ಅವನ ಆಜ್ಞಾನುಸಾರ ಪ್ರತಿಯೊಬ್ಬರೂ ಸತ್ಯ ಧರ್ಮನಿಷ್ಠೆಯಿಂದ ಬಾಳುವಂತೆ ಮಾಡಿ ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಪಾಪ ಕರ್ಮಗಳಿಗೆ ತಕ್ಕಂತೆ ಮಾನವರಿಗೆ ಶಿಕ್ಷೆ ಕೊಟ್ಟು ತಿದ್ದಿ ಬೆಳೆಸಿ ಪುಣ್ಯ ಕಾರ್ಯಗಳಂತೆ ಸೌಭಾಗ್ಯ ಕೊಟ್ಟು ಉದ್ಧರಿಸಲು ನಿಯಾಮಕನಾದ ಗ್ರಹವಾಗಿದ್ದಾನೆ. ಈ ವಿಷಯದಲ್ಲಿ ಎಲ್ಲರನ್ನೂ ತಿದ್ದುವವನಾಗಿ ಇದಕ್ಕೆ ತ್ರಿಮೂರ್ತಿಗಳೂ ಹೊರತಲ್ಲ.

ಶನಿಯ ಕೋಪಕ್ಕೆ ಎಂದು ತುತ್ತಾಗಬಾರದು, ಶನಿ ಯಾರನ್ನು ಬಿಡುವುದಿಲ್ಲ ಹೀಗಾಗಿ ಕಾಲ ಘಟಿಸಿದಂತೆ ಅವರವರ ಪಾಪ ಕರ್ಮಗಳಿಗೆ ತಕ್ಕಂತೆ ಪಾಠ ಕಲಿಸುತ್ತಾನೆ. ಇನ್ನು ಮುಂದಿನ ವಾರ ಸಂಭವಿಸಲಿರುವ ರಾಶಿ ಚಕ್ರ ಹಾಗು ಜಾತಕದ ಬದಲಾವಣೆ ಈ ನಾಲ್ಕು ರಾಶಿಗಳಿಗೆ ಶನಿಯಿಂದ ಉದ್ಯೋಗ ಹಾಗು ವ್ಯವಹಾರದಲ್ಲಿ ಉತ್ತಮ ಲಾಭವಾಗಲಿದೆ.

ಸಿಂಹ ಹಾಗು ಮೇಷ ರಾಶಿಗೆ ಆರ್ಥಿಕ ಮುಗ್ಗಟ್ಟಿನಿಂದ ಹಿನ್ನಡೆಯಾಗಿದ್ದ ನಿಮ್ಮ ಉದ್ಯಮಕ್ಕೆ ಮತ್ತೆ ಚೈತನ್ಯ ಮೂಡಿ ಲಾಭದತ್ತ ಸಾಗಲಿದೆ. ಇದಕ್ಕೆ ನಿಮ್ಮ ಶ್ರಮ, ಶ್ರದ್ದೆ ಹಾಗೂ ಏಕಾಗ್ರತೆ ಮುಖ್ಯ. ಮಕ್ಕಳ ವಿದ್ಯಾಭ್ಯಾಸದಲ್ಲಿ ಭಾರಿ ಹಿನ್ನಡೆಯಾಗುವ ಸಂಭವವಿದ್ದು ಸುಳ್ಳು ಮಾತಿನಿಂದ ಅವರು ನಿಮ್ಮ ದಾರಿ ತಪ್ಪಿಸಬಹುದು. ಮುಖ್ಯ ದಾಖಲೆಗಳನ್ನು ಜೋಪಾನವಾಗಿಡಿ. ರಾಜಕಾರಣಿಗಳಿಗೆ ಪಕ್ಷ ದ ವರಿಷ್ಠರಿಂದ ಹೆಚ್ಚಿನ ಹೊಣೆಗಾರಿಕೆ ಹೊರುವಂತೆ ಸೂಚನೆ ಬರಲಿದೆ.

ಇನ್ನು ಕುಂಭ ಹಾಗು ಕಟಕದವರಿಗೆ ಹಲವು ವ್ಯಕ್ತಿಗಳಿಗೆ ನಿಮ್ಮ ಮಾತು ತುಂಬಾ ಕಠೋರ ಎನಿಸಿದರೂ ಅದನ್ನು ಕೇಳುವುದರಿಂದ ಅವರಿಗೇ ಹೆಚ್ಚಿನ ಲಾಭವಾಗಲಿದೆ. ಅದನ್ನು ಕಡೆಗಣಿಸಿದವರೇ ನಂತರ ನಿಮ್ಮನ್ನು ಹಾಡಿ ಹೊಗಳುವರು. ಸರ್ಕಾರಿ ನೌಕರರಿಗೆ ಅವರ ಪ್ರಾಮಾಣಿಕತೆಯೇ ಮೇಲಿನ ಅಧಿಕಾರಿಗಳು ಮೆಚ್ಚುವಂತೆ ಮಾಡಿ ಹೆಚ್ಚಿನ ಜವಾಬ್ದಾರಿ ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ.


ಶನಿಯು ಕೆಟ್ಟವನಲ್ಲ. ಅವನ ನಿಯಮಿತ ಕಾರ್ಯವನ್ನಷ್ಟೇ ಮಾಡುತ್ತಾನೆ. ಅಂದರೆ ನಮ್ಮ ಅನುಚಿತ ಕರ್ಮಗಳಿಗೆ ಅನುಸಾರವಾಗಿ ಶಿಕ್ಷೆ ಕೊಟ್ಟು ಬಳಲಿಸಿ, ಪುಟವಿಟ್ಟ ಬಂಗಾರದಂತೆ ಮಾನವ ಪರಿಶುದ್ಧನಾಗಿ ನವ ಉತ್ಸಾಹದಿಂದ ಕೊನೆಯಲ್ಲಿ ಹೊರ ಬರಲು ಮಾತ್ರ ಕಾರಣನಾಗಿ ಉಪಕಾರಿಯಾಗಿದ್ದಾನೆ.

Please follow and like us:
error0
http://karnatakatoday.in/wp-content/uploads/2019/08/maha-shani-deva-1024x576.jpghttp://karnatakatoday.in/wp-content/uploads/2019/08/maha-shani-deva-150x104.jpgKarnataka Trendingಎಲ್ಲಾ ಸುದ್ದಿಗಳುಕಶ್ಯಪರಿಗೆ ಅದಿತಿಯಲ್ಲಿ ಜನಿಸಿದ ಮಗ ಜಗತ್ತನ್ನೇ ಬೆಳಗುವ ಸೂರ್ಯ. ಇಂತಹ ಸೂರ್ಯನ ಪತ್ನಿ ಸಂಜ್ಞೆಯ ಛಾಯೆಯಿಂದ ಸೃಷ್ಟಿ ಹೊಂದಿದ ಅವಳನ್ನೇ ಹೋಲುವ ಛಾಯಾದೇವಿ ಪುತ್ರನೇ ಶನಿ. ಶನಿಯು ಪರಮಾತ್ಮನ ಕೃಪೆಗೆ ಪಾತ್ರನಾಗಿ ಅವನ ಆಜ್ಞಾನುಸಾರ ಪ್ರತಿಯೊಬ್ಬರೂ ಸತ್ಯ ಧರ್ಮನಿಷ್ಠೆಯಿಂದ ಬಾಳುವಂತೆ ಮಾಡಿ ಜನ್ಮ ಜನ್ಮಾಂತರಗಳಲ್ಲಿ ಮಾಡಿದ ಪಾಪ ಕರ್ಮಗಳಿಗೆ ತಕ್ಕಂತೆ ಮಾನವರಿಗೆ ಶಿಕ್ಷೆ ಕೊಟ್ಟು ತಿದ್ದಿ ಬೆಳೆಸಿ ಪುಣ್ಯ ಕಾರ್ಯಗಳಂತೆ ಸೌಭಾಗ್ಯ ಕೊಟ್ಟು ಉದ್ಧರಿಸಲು ನಿಯಾಮಕನಾದ ಗ್ರಹವಾಗಿದ್ದಾನೆ. ಈ...Film | Devotional | Cricket | Health | India