ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 7 ರ ಫೈನಲ್ ಕಾರ್ಯಕ್ರಮ ನಿನ್ನೆ ಮುಗಿದಿದೆ ಮತ್ತು ಈ ಭಾರಿಯ ಬಿಗ್ ಬಾಸ್ ವಿನ್ನರ್ ಯಾರು ಅನ್ನುವುದನ್ನ ಕೂಡ ಘೋಷಣಾ ಮಾಡಲಾಗಿದೆ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿನ್ನರ್ ಆಗಿ ಶೈನ್ ಶೆಟ್ಟಿ ಅವರು ಹೊರಹೊಮ್ಮಿದ್ದಾರೆ, ದೀಪಿಕಾ ದಾಸ್, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ವಾಸುಕಿ ವೈಭವ್ ಮತ್ತು ಕುರಿ ಪ್ರತಾಪ್ ಅವರು ಬಿಗ್ ಬಾಸ್ ನಲ್ಲಿ ಫೈನಲ್ ಗೆ ಬಂದಿದ್ದರು, ಆದರೆ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ಅವರನ್ನ ಪ್ರಾರಂಭದಲ್ಲೇ ಇಲಿಮಿನೇಟ್ ಮಾಡಲಾಯಿತು. ಇನ್ನು ಕೊನೆಯಲ್ಲಿ ಅಂದರೆ ನಿನ್ನೆ ವಾಸುಕಿ ವೈಭವ್ ಎಲಿಮಿನೇಟ್ ಆಗಿ ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಅವರು ಕೊನೆಯಲ್ಲಿ ಉಳಿದುಕೊಂಡರು ಮತ್ತು ಕೊನೆಯಲ್ಲಿ ಸುದೀಪ್ ಅವರು ಕೊನೆಯಲ್ಲಿ ಶೈನ್ ಶೆಟ್ಟಿ ಅವರನ್ನ ಕೈ ಎತ್ತಿ ಈ ಭಾರಿಯ ವಿನ್ನರ್ ಶೈನ್ ಶೆಟ್ಟಿ ಎಂದು ಘೋಷಣೆ ಮಾಡಿದರು.

ಇನ್ನು ಹೆಚ್ಚಿನ ಜನರು ಕುರಿ ಪ್ರತಾಪ್ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂದು ಭಾವಿಸಿದ್ದರು, ಆದರೆ ಅವರ ಊಹೆ ಸುಳ್ಳಾಗಿದ್ದು ಶೈನ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಈ ಭಾರಿಯ ಬಿಗ್ ಬಾಸ್ ನಲ್ಲಿ ಯಾವುದೇ ಸಾಮಾನ್ಯ ಪ್ರಜೆಗೆ ಅವಕಾಶಗಳನ್ನ ಕೊಡಲಾಗಿಲ್ಲ ಮತ್ತು ಬಿಗ್ ಬಾಸ್ ಗೆ ಬಂದ ಎಲ್ಲಾ ಸ್ಪರ್ಧಿಗಳು ಕೂಡ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಆಗಿದ್ದರು. ಬಿಗ್ ಬಾಸ್ ನಲ್ಲಿ ಈ ಭಾರಿ ರವಿ ಬೆಳೆಗೆರೆ, ಜೈ ಜಗದೀಶ್ ರಂತಹ ದೊಡ್ಡ ಸೆಲೆಬ್ರಿಟಿಗಳನ್ನ ತಂದು ಬಿಗ್ ಬಾಸ್ ನಲ್ಲಿ ದೊಡ್ಡ ಕುತೂಹಲವನ್ನ ಮೂಡಿಸಲಾಗಿತ್ತು, ಇನ್ನು ಕುರಿ ಪ್ರತಾಪ್ ಅವರು ಈ ಭಾರಿಯ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಾಗ ಈ ಭಾರಿಯ ಬಿಗ್ ಬಾಸ್ ವಿನ್ನರ್ ಕುರಿ ಪ್ರತಾಪ್ ಅವರು ಆಗುತ್ತಾರೆ ಎಂದು ಎಲ್ಲರೂ ಕೂಡ ಭಾವಿಸಿದ್ದರು.

Shine Shetty winner

ಮಜಾ ಟಾಕೀಸ್ ನಲ್ಲಿ ಮಾಡುತ್ತಿದ್ದ ಹಾಸ್ಯವನ್ನ ಬಿಗ್ ಬಾಸ್ ನಲ್ಲಿ ಮನೆಯಲ್ಲಿ ಮಾಡಲಿಲ್ಲ ಕುರಿ ಪ್ರತಾಪ್ ಅವರು ಮತ್ತು ಜನರು ನಿರೀಕ್ಷೆ ಮಾಡಿದಷ್ಟು ಮನರಂಜನೆಯನ್ನ ಕುರಿ ಪ್ರತಾಪ್ ಅವರು ಕೊಡಲಿಲ್ಲ, ಇದು ಅವರಿಗೆ ಮೈನಸ್ ಪಾಯಿಂಟ್ ಆಯಿತು. ಇನ್ನು ಇನ್ನೊಂದು ಶೈನ್ ಶೆಟ್ಟಿ ಅವರು ತುಂಬಾ ಚನ್ನಾಗಿ ಟಾಸ್ಕ್ ಗಳನ್ನ ಮಾಡಿದರು ಮತ್ತು ಇದರ ಜೊತೆಗೆ ಶೈನ್ ಶೆಟ್ಟಿ ಅವರ ತಾಯಿ ನಡೆದುಕೊಂಡ ರೀತಿ ಮತ್ತು ಶೈನ್ ಶೆಟ್ಟಿ ಅವರ ಹೋಟೆಲ್ ವಿಷಯ ಕೂಡ ಪ್ರೇಕ್ಷಕರ ಮನವನ್ನ ಮುಟ್ಟುವಲ್ಲಿ ಪ್ರಮುಖ ಕಾರಣವಾಯಿತು ಎಂದು ಹೇಳಿದರೆ ತಪ್ಪಾಗಲ್ಲ, ಹಾಗೆ ಜನರು ಹೆಚ್ಚಾಗಿ ಶೈನ್ ಶೆಟ್ಟಿ ಅವರಿಗೆ ವೋಟ್ ಮಾಡಲು ಶುರು ಮಾಡಿದರು.

ಇನ್ನು ಒಂದು ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಯಾರಿಗೆ ಹೆಚ್ಚು ವೋಟ್ ಸಿಕ್ಕಿದೆ ಅನ್ನುವುದರ ಬಗ್ಗೆ ಮಾಹಿತಿಯನ್ನ ನೀಡಿದ್ದರು ಮತ್ತು ಆ ವಾರ ಎಲ್ಲರಿಂತ ಹೆಚ್ಚಿನ ಮತವನ್ನ ಶೈನ್ ಶೆಟ್ಟಿ ಅವರು ಪಡೆದಿದ್ದರು ಮತ್ತು ಈ ಎಲ್ಲಾ ಕಾರಣಗಳಿಂದ ಶೈನ್ ಶೆಟ್ಟಿ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಶೈನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಕಡೆಯಿಂದ 50 ಲಕ್ಷ ರೂಪಾಯಿಯ ದೊಡ್ಡ ಮೊತ್ತದ ಬಹುಮಾನ ಸಿಕ್ಕಿದೆ ಮತ್ತು ಅದರ ಜೊತೆಗೆ ಒಂದು ಕಾರನ್ನ ಕೂಡ ಬಹುಮಾನವಾಗಿ ನೀಡಲಾಗಿದೆ, ಇನ್ನು ರನ್ನರ್ ಅಪ್ ಪ್ರಶಸ್ತಿಯನ್ನ ಪಡೆದುಕೊಂಡ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ 6 ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗಿದೆ, ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Shine Shetty winner

Please follow and like us:
error0
http://karnatakatoday.in/wp-content/uploads/2020/02/Shine-shetty-winner-1-1024x576.jpghttp://karnatakatoday.in/wp-content/uploads/2020/02/Shine-shetty-winner-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 7 ರ ಫೈನಲ್ ಕಾರ್ಯಕ್ರಮ ನಿನ್ನೆ ಮುಗಿದಿದೆ ಮತ್ತು ಈ ಭಾರಿಯ ಬಿಗ್ ಬಾಸ್ ವಿನ್ನರ್ ಯಾರು ಅನ್ನುವುದನ್ನ ಕೂಡ ಘೋಷಣಾ ಮಾಡಲಾಗಿದೆ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 7 ರ ವಿನ್ನರ್ ಆಗಿ ಶೈನ್ ಶೆಟ್ಟಿ ಅವರು ಹೊರಹೊಮ್ಮಿದ್ದಾರೆ, ದೀಪಿಕಾ ದಾಸ್, ಶೈನ್ ಶೆಟ್ಟಿ, ಭೂಮಿ ಶೆಟ್ಟಿ, ವಾಸುಕಿ ವೈಭವ್ ಮತ್ತು ಕುರಿ ಪ್ರತಾಪ್ ಅವರು ಬಿಗ್ ಬಾಸ್...Film | Devotional | Cricket | Health | India