ಸ್ನೇಹಿತರೆ ಬಿಗ್ ಬಾಸ್ ಸೀಸನ್ 7 ಕ್ಕೆ ತೆರೆಬಿದ್ದು ಶೈನ್ ಶೆಟ್ಟಿ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಮತ್ತು ಕುರಿ ಪ್ರತಾಪ್ ಅವರು ರನ್ನರ್ ಅಪ್ ಆಗಿ ಎರಡನೆಯಾದ ಸ್ಥಾನವನ್ನ ಗಳಿಸಿಕೊಂಡಿದ್ದಾರೆ. ಇನ್ನು ಆರಂಭದಲ್ಲಿ ಕುರಿ ಪ್ರತಾಪ್ ಅವರ ಬಿಗ್ ಬಾಸ್ ಮನೆಗೆ ಬಂದಾಗ ಎಲ್ಲರೂ ಕೂಡ ಈ ಭಾರಿ ಕುರಿ ಪ್ರತಾಪ್ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗುತ್ತಾರೆ ಎಂದು ಭಾವಿಸಿದ್ದರು, ಆದರೆ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ವಿನ್ನರ್ ಆಗಿದ್ದು ಎಲ್ಲರ ಊಹೆ ತಪ್ಪಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಶೈನ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 7 ವಿನ್ ಆದ್ದರಿಂದ ಯಾರಿಗೆ 50 ಲಕ್ಷ ರೂಪಾಯಿ ಬಹುಮಾನ ಮತ್ತು TMT ಕಂಬಿ ಕಡೆಯಿಂದ ಒಂದು ಲಕ್ಷ ಬಹುಮಾನ ಮತ್ತು ಹತ್ತು ಲಕ್ಷ ಬೆಲೆಬಾಳುವ ಒಂದು ಕಾರನ್ನ ಕೂಡ ಬಹುಮಾನವಾಗಿ ನೀಡಲಾಗಿದೆ. ಇನ್ನು ಎರಡನೆಯ ಸ್ಥಾನವನ್ನ ಗಳಿಸಿಕೊಂಡ ಕುರಿ ಪ್ರತಾಪ್ ಅವರಿಗೆ ಬಿಗ್ ಬಾಸ್ ಕಡೆಯಿಂದ 6 ಲಕ್ಷ ರೂಪಾಯಿ ಮತ್ತು ಅವರ ಸಂಭಾವನೆಯ ಹಣ ಸಿಕ್ಕಿದೆ. ಇನ್ನು ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಕೊಟ್ಟಿದ್ದು 50 ಲಕ್ಷ ಬಹುಮಾನ ಆದರೆ ಆ ಅಷ್ಟು ಹಣ ಅವರ ಕೈ ಸೇರಿಲ್ಲ, ಹಾಗಾದರೆ 50 ಲಕ್ಷ ರೂಪಾಯಿ ಯಾಕೆ ಶೈನ್ ಶೆಟ್ಟಿ ಅವರ ಕೈ ಸೇರಲಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Shine Shetty Winning price

ಇನ್ನು ಕಳೆದ ಕೆಲವು ಸೀಸನ್ ಗಳನ್ನ ಹೋಲಿಕೆ ಮಾಡಿದರೆ ಈ ಭಾರಿಯ ಬಿಗ್ ಬಾಸ್ ಸ್ವಲ್ಪ ಕುತೂಹಲಕಾರಿಯಾಗಿ ಇತ್ತು ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು TRP ಕೂಡ ಹಿಂದಿನ ಸೀಸನ್ ಗಳಿಗಿಂತ ಈ ಸೀಸನ್ ನಲ್ಲಿ ಜಾಸ್ತಿ ಇದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ, ಹೌದು ಭಾರಿ ಯಾವುದೇ ಸಾಮಾನ್ಯ ಪ್ರಜೆಗೆ ಅವಕಾಶವನ್ನ ಕಲ್ಪಿಸಿಕೊಡಲಾಗಿಲ್ಲ ಮತ್ತು ಬಂದ ಎಲ್ಲ ಸ್ಪರ್ಧಿಗಳು ಕೂಡ ಸೆಲೆಬ್ರಿಟಿಗಳು ಆಗಿದ್ದರು. ಇನ್ನು ಶೈನ್ ಶೆಟ್ಟಿ ಅವರಿಗೆ ಬಿಗ್ ಬಾಸ್ ಕಡೆಯಿಂದ ಬಹುಮಾನದ ಹಣವಾಗಿ 50 ಲಕ್ಷ ರೂಪಾಯಿಯನ್ನ ನೀಡಲಾಗಿತ್ತು, ಇನ್ನು ಬಹುಮಾನದ ಹಣಕ್ಕೆ ಯಾವತ್ತೂ ಕೂಡ ತೆರಿಗೆ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.

ಹೌದು ಸ್ನೇಹಿತರೆ ರಿಯಾಲಿಟಿ ಶೋ ಅಥವಾ ಗೇಮ್ ಶೋ ಗಳಲ್ಲಿ ಗೆದ್ದ ಬಹುಮಾನದ ಹಣಕ್ಕೆ ತೆರಿಗೆ ಸ್ವಲ್ಪ ಜಾಸ್ತಿನೇ ಇರುತ್ತದೆ ಮತ್ತು ಗೆದ್ದ ಮೊತ್ತಕ್ಕೆ ಶೇಕಡಾ 32 ರಷ್ಟು ತೆರಿಗೆ ಬೀಳುತ್ತದೆ. ಇನ್ನು ಶೇಕಡಾ 32 ರಷ್ಟು ಹಣವನ್ನ ಕಡಿತ ಮಾಡಿ ಉಳಿದ ಹಣ ಶೈನ್ ಶೆಟ್ಟಿ ಅವರ ಕೈ ಸೇರಲಿದೆ, ಇನ್ನು ಲೆಕ್ಕ ಹಾಕಿ ನೋಡುವುದಾದರೆ 50 ಲಕ್ಷ ಹಣವಾದಲ್ಲಿ ಒಟ್ಟು 34 ಲಕ್ಷ ಹಣ ಮಾತ್ರ ಶೈನ್ ಶೆಟ್ಟಿ ಅವರ ಕೈ ಸೇರಲಿದೆ, ಇನ್ನು ಇದರ ಪ್ರಾಯೋಜಕರು ನೀಡಿದ್ದ ಹತ್ತು ಲಕ್ಷ ಮತ್ತು ಇನ್ನೊಬ್ಬರು ಕೊಟ್ಟಿದ್ದ ಒಂದು ಲಕ್ಷ ಮತ್ತು ಒಂದು ಕಾರ್ ಶೈನ್ ಶೆಟ್ಟಿ ಅವರ ಕೈ ಸೇರಲಿದೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ಭಾರಿಯ ಬಿಗ್ ಬಾಸ್ ಯಾರು ವಿನ್ ಆಗಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Shine Shetty Winning price

Please follow and like us:
error0
http://karnatakatoday.in/wp-content/uploads/2020/02/Shine-Shettu-winning-Price-1024x576.jpghttp://karnatakatoday.in/wp-content/uploads/2020/02/Shine-Shettu-winning-Price-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಬಿಗ್ ಬಾಸ್ ಸೀಸನ್ 7 ಕ್ಕೆ ತೆರೆಬಿದ್ದು ಶೈನ್ ಶೆಟ್ಟಿ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ ಮತ್ತು ಕುರಿ ಪ್ರತಾಪ್ ಅವರು ರನ್ನರ್ ಅಪ್ ಆಗಿ ಎರಡನೆಯಾದ ಸ್ಥಾನವನ್ನ ಗಳಿಸಿಕೊಂಡಿದ್ದಾರೆ. ಇನ್ನು ಆರಂಭದಲ್ಲಿ ಕುರಿ ಪ್ರತಾಪ್ ಅವರ ಬಿಗ್ ಬಾಸ್ ಮನೆಗೆ ಬಂದಾಗ ಎಲ್ಲರೂ ಕೂಡ ಈ ಭಾರಿ ಕುರಿ ಪ್ರತಾಪ್ ಅವರು ಈ ಭಾರಿಯ ಬಿಗ್ ಬಾಸ್ ವಿನ್ನರ್ ಆಗುತ್ತಾರೆ...Film | Devotional | Cricket | Health | India