Shivam Chopra cheated the Amazon

ಟೆಕ್ನೋಲಜಿ ಬೆಳೆದಂತೆ ಮನುಷ್ಯರಲ್ಲಿ ಕ್ರಿಮಿನಲ್ ಆಲೋಚನೆಗಳು ಸಹ ಬೆಳೆಯುತ್ತಿದೆ, ಅಮೆಜಾನ್ ನಲ್ಲಿ 166 ಫೋನ್ ಗಳನ್ನ ಬುಕ್ ಮಾಡಿದ 21 ವರ್ಷದ ಯುವಕ ಅಮೆಜಾನ್ ಗೆ ಮಂಕು ಭೂದಿಯನ್ನ ಎರಚಿ ಸುಮಾರು 50 ಲಕ್ಷ ರೂಪಾಯಿಗಳನ್ನು ದೋಚಿದ ಕಥೆ ಇದು.

21 ವರ್ಷದ ಶಿವಂ ಚೋಪ್ರಾ ದೆಹಲಿಯ ತ್ರಿನಗರ್ ನಲ್ಲಿ ವಾಸವಿದ್ದ, ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿದ್ದ ಇವನಿಗೆ ಎಷ್ಟೇ ಪ್ರಯತ್ನ ಪಟ್ಟರು ಉದ್ಯೋಗ ಸಿಗಲಿಲ್ಲ, ಇದರಿಂದ ಒಂದು ಕ್ರೀನಿನಲ್ ಆಲೋಚನೆ ಶಿವಂ ಗೆ ಹೊಳೆಯಿತು.

Shivam Chopra cheated the Amazon

ಆಲೋಚನೆ ಬಂದಿದ್ದೆ ತಡ ಅದನ್ನ ಚಾಲ್ತಿಗೆ ತರಲು ಮುಂದಾದ ಈ ಯುವಕ, ಆ ಪ್ಲಾನ್ ಏನಪ್ಪಾ ಅಂದರೆ, ಮೊದಲು ಎರಡು ಬಾರಿ ದುಬಾರಿ ಫೋನ್ ಗಳನ್ನ ಅಮೆಜಾನ್ ವೆಬ್ಸೈಟ್ ನಲ್ಲಿ ಹಣವನ್ನ ಪಾವತಿ ಮಾಡಿ ಬುಕ್ ಮಾಡಿದ. ಡೆಲಿವೆರಿ ಬಾಯ್ ಬಂದು ಆ ಫೋನ್ ನ್ನ ಕೊಟ್ಟು ಹೋದ, ಡೆಲಿವೆರಿ ಆದ ಕೂಡಲೇ ಅಮೆಜಾನ್ ಗೆ ಫೋನ್ ಮಾಡಿದ ಶಿವಂ ನನಗೆ ಡೆಲಿವೆರಿ ಬಾಕ್ಸ್ ನಲ್ಲಿ ಫೋನ್ ಇರಲಿಲ್ಲ ಅದು ಖಾಲಿ ಬಾಕ್ಸ್ ಆಗಿತ್ತು ಎಂದು ಸುಳ್ಳು ಹೇಳಿದ.

ಇದನ್ನ ನಂಬಿದ ಅಮೆಜಾನ್ ಅವರು ಅದನ್ನ ತಕ್ಷಣ ವಾಪಾಸ್ ತಗೆದುಕೊಂಡರು, ಇದೆ ಪ್ಲಾನ್ ಉಪಯೋಗಿಸಿಕೊಂಡ ಶಿವಂ ಸುಮಾರು 166 ಫೋನ್ ಗಳು ಅಂದರೆ 50 ರೂಪಾಯಿಯ ಫೋನ್ ಗಳನ್ನ ಅಮೆಜಾನ್ ನಿಂದ ಪಡೆದ.

Shivam Chopra cheated the Amazon

ಪ್ರತಿಬಾರಿ ಡೆಲಿವೆರಿ ಆದ ತಕ್ಷಣ ಖಾಲಿ ಬಾಕ್ಸ್ ಎಂದು ಹೇಳಿ ಹಣ ವಾಪಾಸ್ ಪಡೆಯುತ್ತಿದ್ದ, ಹಾಗೆ ಪ್ರತಿಬಾರಿ ಬುಕ್ ಮಾಡುವಾಗ ಯಾವುದೋ ಒಂದು ಅಡ್ರೆಸ್ ಕೊಡುತ್ತಿದ್ದ, ಅಡ್ರೆಸ್ ಹುಡುಕಿ ಸುಸ್ತಾದ ಡೆಲಿವೆರಿ ಬಾಯ್ಸ್ ಶಿವಂ ಗೆ ಫೋನ್ ಮಾಡಿದಾಗ ಒಂದು ಸ್ಥಳಕ್ಕೆ ಬರಲು ಹೇಳಿ ಅಲ್ಲಿ ಪಡೆಯುತ್ತಿದ್ದ.

ಒಂದು ಟೆಲಿಫೋನ್ ಶಾಪ್ ಅವರನ್ನ ಬುಕ್ ಮಾಡಿಕೊಂಡಿದ್ದ ಶಿವಂ ಅವರಿಗೆ 151 ರೂಪಾಯಿ ಕೊಟ್ಟು ಹೊಸ ಸಿಮ್ ಪಡೆಯುತ್ತಿದ್ದ, ಇದರಿಂದ ರೋಸಿಹೋದ ಅಮೆಜಾನ್ ಅವರು ಕೊನೆಗೆ ಇವನನ್ನ ಪತ್ತೆ ಹಚ್ಚಿದರು, ಶಿವಂ ಬಳಿ ಇದ್ದ 12 ಲಕ್ಷ ಹಣ ಮತ್ತು 20 ಫೋನ್ ಗಳನ್ನ ಪೊಲೀಸರು ವಶಪಡಿಸಿಕೊಂಡರು.

Shivam Chopra cheated the Amazon

Please follow and like us:
0
http://karnatakatoday.in/wp-content/uploads/2018/08/waaaaa-1024x576.jpghttp://karnatakatoday.in/wp-content/uploads/2018/08/waaaaa-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣಟೆಕ್ನೋಲಜಿ ಬೆಳೆದಂತೆ ಮನುಷ್ಯರಲ್ಲಿ ಕ್ರಿಮಿನಲ್ ಆಲೋಚನೆಗಳು ಸಹ ಬೆಳೆಯುತ್ತಿದೆ, ಅಮೆಜಾನ್ ನಲ್ಲಿ 166 ಫೋನ್ ಗಳನ್ನ ಬುಕ್ ಮಾಡಿದ 21 ವರ್ಷದ ಯುವಕ ಅಮೆಜಾನ್ ಗೆ ಮಂಕು ಭೂದಿಯನ್ನ ಎರಚಿ ಸುಮಾರು 50 ಲಕ್ಷ ರೂಪಾಯಿಗಳನ್ನು ದೋಚಿದ ಕಥೆ ಇದು. 21 ವರ್ಷದ ಶಿವಂ ಚೋಪ್ರಾ ದೆಹಲಿಯ ತ್ರಿನಗರ್ ನಲ್ಲಿ ವಾಸವಿದ್ದ, ಹೋಟೆಲ್ ಮ್ಯಾನೇಜ್ಮೆಂಟ್ ಮಾಡಿದ್ದ ಇವನಿಗೆ ಎಷ್ಟೇ ಪ್ರಯತ್ನ ಪಟ್ಟರು ಉದ್ಯೋಗ ಸಿಗಲಿಲ್ಲ, ಇದರಿಂದ ಒಂದು ಕ್ರೀನಿನಲ್ ಆಲೋಚನೆ...Karnataka news