ದಿನ ಬೆಳಗಾದರೆ ಸಾಕು ಜನರು ಪೇಪರ್ ಮತ್ತು ನ್ಯೂಸ್ ಗಳಲ್ಲಿ ನೋಡುವ ವಿಷಯ ಏನು ಅಂದರೆ ಇಂದು ಗ್ಯಾಸ್ ಮತ್ತು ಚಿನ್ನದ ಬೆಲೆ ಎಷ್ಟು ಆಗಿದೆ ಎಂದು, ಹೌದು ಗ್ಯಾಸ್ ಮತ್ತು ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಮತ್ತೆ ಮನೆಯಲ್ಲಿ ಗ್ಯಾಸ್ ಬಳಸುವ ಎಲ್ಲರಿಗೂ ಇದು ಶಾಕಿಂಗ್ ಸುದ್ದಿಯನ್ನ ನೀಡಿದೆ ನಮ್ಮ ಕೇಂದ್ರ ಸರ್ಕಾರ, ಹೌದು ಕಳೆದ ಮೂರೂ ನಾಲ್ಕು ತಿಂಗಳುಗಳಿಂದ ಚಿನ್ನದ ಬೆಲೆ ಏರುವುದರ ಜೊತೆಗೆ ಗ್ಯಾಸ್ ಬೆಲೆ ಕೂಡ ಏರಿಕೆ ಕಂಡಿದ್ದು ಜನಸಾಮಾನ್ಯರ ನಿದ್ದೆಗೆಡಿಸಿದೆ. ಹಾಗಾದರೆ ಗ್ಯಾಸ್ ಬೆಲೆ ಎಷ್ಟು ಏರಿಕೆ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ಗ್ಯಾಸ್ ಬಳಸುವ ಪ್ರತಿಯೊಬ್ಬರಿಗೂ ತಲುಪಿಸಿ.

ಸ್ನೇಹಿತರೆ ನೀವು ದಿನನಿತ್ಯ ಬಳಸುವ ಗ್ಯಾಸ್ ಸಿಲಿಂಡರ್ ನ ಬೆಲೆ ಬರೋಬ್ಬರಿ 145 ರೂಪಾಯಿ ಏರಿಕೆ ಕಂಡಿದ್ದು ಜನರ ಬೇಸರಕ್ಕೆ ಕಾರಣವಾಗಿದೆ, ಹೌದು ಪಹಲ್ ಯೋಜನೆಯ ಅಡಿಯಲ್ಲಿ ಗ್ರಾಹಕರಿಗೆ ವಿತರಣೆ ಮಾಡುವ ಅಡುಗೆ ಅನಿಲದ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದ್ದು ಜನರು ಇನ್ನುಮುಂದೆ ಹೆಚ್ಚಿನ ಬೆಲೆಯನ್ನ ಕೊಟ್ಟು ಅಡುಗೆ ಅನಿಲವನ್ನ ಖರೀದಿ ಮಾಡಬೇಕಾಗಿದೆ. ಅಂತಾರಾಷ್ಟ್ರೀಯ ಮರುಕಟ್ಟೆಯಲ್ಲಿನ ದರವನ್ನ ಆಧರಿಸಿ ಅಡುಗೆ ಅನಿಲದ ಬೆಲೆಯನ್ನ ಪರಿಷ್ಕರಣೆ ಮಾಡಲಾಗುತ್ತದೆ, ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಿಲದ ಬೆಲೆ ಏರಿಕೆ ಆದಕಾರಣ ನಮ್ಮ ದೇಶದಲ್ಲಿ ಅಡುಗೆ ಅನಿಲದ ಬೆಲೆ ಭಾರಿ ಏರಿಕೆ ಆಗಿದೆ.

Shocking news of Gas

ಇನ್ನು ಬಂದಿರುವ ಖುಷಿಯ ವಿಚಾರ ಏನು ಅಂದರೆ ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯನ್ನ ಏರಿಕೆ ಮಾಡುವುದರ ಜೊತೆಗೆ ಸಬ್ಸಿಡಿ ದರವನ್ನ ಕೂಡ ಏರಿಕೆ ಮಾಡಿದ್ದು ಇದು ಜನರ ಮುಖದಲ್ಲಿ ಮಂದಹಾಸವನ್ನ ಮೂಡಿಸಿದೆ. ಇನ್ನು ಗ್ರಾಹಕರ ಸಬ್ಸಿಡಿ ಹಣವನ್ನ ನೇರವಾಗಿ ಗ್ಯಾಸ್ ಬಳಸುವ ಗ್ರಾಹಕರ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ, ಇನ್ನು ನಮ್ಮ ದೇಶದಲ್ಲಿ ಸುಮಾರು 27 ಕೋಟಿಗೂ ಹೆಚ್ಚಿನ ಗ್ರಾಹಕರು ಗ್ಯಾಸ್ ಸಂಪರ್ಕವನ್ನ ಹೊಂದಿದ್ದು ಇದರಲ್ಲಿ 23 ಕೋಟಿ ಗ್ರಾಹಕರಿಗೆ ಸಬ್ಸಿಡಿ ಹೆಚ್ಚಳ ಮಾಡುವುದರ ಮೂಲಕ ಜನರಿಗೆ ಗುಡ್ ನ್ಯೂಸ್ ಕೂಡ ಕೊಟ್ಟಿದೆ. ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ನ ಸಬ್ಸಿಡಿ ದರ ಈ ಹಿಂದೆ 154 ರೂಪಾಯಿ ಇತ್ತು, ಆದರೆ ಈಗ ಈ ದರವನ್ನ 291 ರುಪಾಯಿಗೆ ಏರಿಕೆ ಮಾಡಲಾಗಿದೆ.

ಇನ್ನು ಇದರ ಜೊತೆಗೆ ಉಜ್ವಲ ಯೋಜನೆಯ ಅಡಿಯಲ್ಲಿ 148 ರೂಪಾಯಿ ಇದ್ದ ಸಬ್ಸಿಡಿ ದರವನ್ನ 312 ರುಪಾಯಿಗೆ ಏರಿಕೆ ಮಾಡಲಾಗಿದೆ, ಹಿಂದೆ ನೀವು ಒಂದು ಗ್ಯಾಸ್ ಸಿಲಿಂಡರ್ ಗೆ ಸುಮಾರು 700 ತುಂಬಬೇಕಾಗಿತ್ತು ಆದರೆ ಈಗ ಒಂದು ಗ್ಯಾಸ್ ಸಿಲಿಂಡರ್ 800 ರೂಪಾಯಿಗೂ ಅಧಿಕ ಹಣವನ್ನ ತುಂಬಬೇಕಾಗಿದೆ. ಈ ದರ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದ್ದು ಜನರು ಈ ಬೆಲೆಗೆ ಹೊಂದಿಕೊಂಡು ಹೋಗಬೇಕಾಗಿದೆ, ಒಟ್ಟಾರೆಯಾಗಿ ಮನೆಯಲ್ಲಿ ಗ್ಯಾಸ್ ಬಳಸುವವರಿಗೆ ಇದು ಖುಷಿಯ ಸುದ್ದಿ ಮತ್ತು ಬೇಸರ ಸುದ್ದಿ ಕೂಡ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಆಗಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Shocking news of Gas

Please follow and like us:
error0
http://karnatakatoday.in/wp-content/uploads/2020/02/Shocking-news-of-Gas-1-1024x576.jpghttp://karnatakatoday.in/wp-content/uploads/2020/02/Shocking-news-of-Gas-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲದಿನ ಬೆಳಗಾದರೆ ಸಾಕು ಜನರು ಪೇಪರ್ ಮತ್ತು ನ್ಯೂಸ್ ಗಳಲ್ಲಿ ನೋಡುವ ವಿಷಯ ಏನು ಅಂದರೆ ಇಂದು ಗ್ಯಾಸ್ ಮತ್ತು ಚಿನ್ನದ ಬೆಲೆ ಎಷ್ಟು ಆಗಿದೆ ಎಂದು, ಹೌದು ಗ್ಯಾಸ್ ಮತ್ತು ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿರುವುದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈಗ ಮತ್ತೆ ಮನೆಯಲ್ಲಿ ಗ್ಯಾಸ್ ಬಳಸುವ ಎಲ್ಲರಿಗೂ ಇದು ಶಾಕಿಂಗ್ ಸುದ್ದಿಯನ್ನ ನೀಡಿದೆ ನಮ್ಮ ಕೇಂದ್ರ ಸರ್ಕಾರ, ಹೌದು ಕಳೆದ ಮೂರೂ ನಾಲ್ಕು...Film | Devotional | Cricket | Health | India