ಶ್ರಾವಣ ಮಾಸ ಎಂದರೆ ಏನೋ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಈ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ,ವ್ರತ,ಪೂಜೆ,ನಾಡಹಬ್ಬ,ಪುಣ್ಯ ಆರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ,ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂಬ ರೂಢಿಯುಂಟು. ಈ ಮಾಸ ಪೂರ್ತಿ ಮನೆಯ ಮುಂಭಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ.

ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ. ಮುತ್ತೈದೆಯರು ಮಂಗಳ ರೂಪಿಣಿಯರಾಗಿ ಕಂಗೊಳಿಸುತ್ತ ಹಬ್ಬವನ್ನು ಶೃದ್ದೆ, ಭಕ್ತಿ, ಉತ್ಸಾಹದಿಂದ ಆಚರಿಸುತ್ತಾರೆ. ಶ್ರಾವಣದಲ್ಲಿ ಕೆಲವು ಕೆಲಸಗಳನ್ನು ನೀವು ಅಪ್ಪಿತಪ್ಪಿಯೂ ಕೂಡ ಮಾಡಲೇಬಾರದು ಹೌದು ಹಾಗಿದ್ರೆ ಆ ಕೆಲಸಗಳು ಯಾವುವು ಎಂದು ಒಮ್ಮೆ ನೋಡೋಣ ಬನ್ನಿ.ಶ್ರಾವಣದ ಸಮಯದಲ್ಲಿ ಶಿವಲಿಂಗವನ್ನ ಪೂಜಿಸುವಾಗ ಲಿಂಗಕ್ಕೆ ಹಳದಿಯನ್ನ ಲೇಪಿಸಬೇಡಿ.

ಅಲ್ಲದೆ ಶ್ರಾವಣದಲ್ಲಿ ಹಾಲನ್ನು ಕುಡಿಯುವ ಅಭ್ಯಾಸ ಇದ್ದರೆ ಅದನ್ನು ತ್ಯಜಿಸಿ, ಹಾಗೇನಾದರೂ ಅಗತ್ಯವೇ ಇದ್ದಲ್ಲಿ ಕುದಿಸಿದ ಹಾಲನ್ನ ಕುಡಿಯಿರಿ ಅಥವಾ ಮೊಸರನ್ನು ಸೇವಿಸಬಹುದು, ಇಷ್ಟೇ ಅಲ್ಲದೆ ಶ್ರಾವಣ ಮಾಸದಲ್ಲಿ ಯಾವುದೇ ರೀತಿಯ ಕೆಟ್ಟ ಯೋಚನೆಗಳಿಂದ ದೂರವಿರಿ ನಿಮ್ಮ ಮನಸ್ಸು ಕೇವಲ ಶಿವನ ಆರಾಧನೆಯಲ್ಲಿ ಇರಬೇಕು ಯಾವುದೇ ರೀತಿಯ ಏಕಾಗ್ರತೆ ಭಂಗಗೊಳಿಸುವ ಅಭ್ಯಾಸದಿಂದ ದೂರವಿರಿ.

ಶ್ರಾವಣ ಮಾಸದಲ್ಲಿ ಗುರು ಹಿರಿಯರು ಮಾತಾ ಪಿತರು, ಯೋಗಿಗಳು, ಅಥವಾ ಬಡವರನ್ನು ಅವಮಾನಿಸಬೇಡಿ ಇದು ಶಿವನಕೆಂಗಣ್ಣಿಗೆ ಗುರಿಯಾಗುತ್ತದೆ. ಅಷ್ಟೇ ಅಲ್ಲದೆ ಈ ವ್ಯಕ್ತಿಗಳಿಗೆ ಯಾವಾಗಲು ಗೌರವ ನೀಡಬೇಕು. ಶ್ರಾವಣ ಮಾಸ ಪ್ರಾರಂಭವಾಯಿತೆಂದರೆ ಸಾಲು ಸಾಲು ಹಬ್ಬ ಹರಿದಿನಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡು ಬಿಚ್ಚಿಡುತ್ತಾ ಇಡೀ ಮಸ ವಿಶಿಒಷ್ಟಪೂರ್ಣ ಆಚರಣೆಯೊಂದಿಗೆ ಸಾಗುವುದು. ಈ ಮಾಹಿತಿ ಇಷ್ಟವಾಗಿದ್ರೆ ಹರ್ ಹರ್ ಮಹದೇವ್ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/07/shravana-1024x576.pnghttp://karnatakatoday.in/wp-content/uploads/2018/07/shravana-150x104.pngEditorಅಂಕಣಆರೋಗ್ಯಎಲ್ಲಾ ಸುದ್ದಿಗಳುಜ್ಯೋತಿಷ್ಯಶ್ರಾವಣ ಮಾಸ ಎಂದರೆ ಏನೋ ಒಂದು ರೀತಿಯ ರೋಮಾಂಚನ ಉಂಟಾಗುತ್ತದೆ. ಆಸ್ತಿಕರ ಪಾಲಿನ ಆನಂದ ಚೇತನ ಸ್ವರೂಪವಾಗಿದೆ ಈ ಮಾಸ. ಈ ಮಾಸದಲ್ಲಿ ಪ್ರತಿದಿನವೂ ಪುಣ್ಯದಿನ,ವ್ರತ,ಪೂಜೆ,ನಾಡಹಬ್ಬ,ಪುಣ್ಯ ಆರಾಧನೆ ಏನಾದರೂ ನಿತ್ಯ ನಿರಂತರವಾಗಿರುತ್ತವೆ,ಏನೇ ಮಾಡಿದರೂ ಶ್ರಾವಣ ಮಾಸದಲ್ಲಿ ಮಾಡು ಒಳ್ಳೆಯದಾಗುತ್ತದೆ ಎಂಬ ರೂಢಿಯುಂಟು. ಈ ಮಾಸ ಪೂರ್ತಿ ಮನೆಯ ಮುಂಭಾಗಿಲಿನಲ್ಲಿ ತೋರಣ ಹಸಿರಾಗಿರುತ್ತದೆ. ದೇವರ ಮಂಟಪದಲ್ಲಿ ನಂದಾದೀಪ ಬೆಳಗುತ್ತಿರುತ್ತದೆ. ಮುತ್ತೈದೆಯರು ಮಂಗಳ ರೂಪಿಣಿಯರಾಗಿ ಕಂಗೊಳಿಸುತ್ತ ಹಬ್ಬವನ್ನು ಶೃದ್ದೆ, ಭಕ್ತಿ, ಉತ್ಸಾಹದಿಂದ ಆಚರಿಸುತ್ತಾರೆ....Kannada News