smriti irani and Surendra Sing

ರಾಜಕಾರಣಿಗಳು ಅಂದರೆ ದುಡ್ಡು ಮಾಡುವವರು, ಮೂರೂ ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡುವವರು ಎನ್ನುವ ಈಗಿನ ಕಾಲದಲ್ಲೂ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಅಮೇಥಿಯಲ್ಲಿ ಸೋಲಿಸುವುದರ ಮೂಲಕ ಭರ್ಜರಿ ಜಯ ಸಾದಿಸಿದರು ಸ್ಮ್ರಿತಿ ಇರಾನಿ ಅವರು.

ಇನ್ನು ಈಗ ಸ್ಮ್ರಿತಿ ಇರಾನಿ ಅವರು ಮಾಡಿದ ಕೆಲಸ ಈಗ ದೇಶದಾದ್ಯಂತ ಬಹಳ ಸದ್ದು ಮಾಡುತ್ತಿದ್ದು ನಿಮ್ಮ ಜೀವನದಲ್ಲಿ ಇಂತಹ ರಾಜಕಾರಣಿಯನ್ನ ನೋಡಿರುವುದು ಇರಲಿ ಕೇಳಿರಲು ಸಾಧ್ಯವಿಲ್ಲ.

ಹಾಗಾದರೆ ಸ್ಮ್ರಿತಿ ಇರಾನಿ ಅವರು ಮಾಡಿದ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

smriti irani and Surendra Sing

ಹೌದು ಕುಟುಂಬ ರಾಜಕಾರಣವೇ ಹೆಚ್ಚಾಗಿರುವ ಈಗಿನ ಕಾಲದಲ್ಲಿ ರಾಜಕಾರಣಿಗಳ ಏಳಿಗೆಗಾಗಿ ಕಾರ್ಯಕರ್ತರು ಎಷ್ಟೇ ದುಡಿದಿದ್ದರು ಕೂಡ ಅವರನ್ನ ಬೆಳೆಸಲು ಮತ್ತು ಅವರ ಕಷ್ಟಗಳಿಗೆ ನೆರವಾಗುವವರು ತುಂಬಾ ಕಡಿಮೆ.

ಇಂತಹ ಕಾಲದಲ್ಲಿ ಸ್ಮ್ರಿತಿ ಇರಾನಿ ಅವರು ತಮ್ಮ ಆಪ್ತ ಕಾರ್ಯಕರ್ತನ ಅಂತಿಮ ಯಾತ್ರೆಯಲ್ಲಿ ಹೆಗಲನ್ನ ಕೊಟ್ಟಿದ್ದಾರೆ, ಇನ್ನು ಆತ ಸಾಯಲು ಕಾರಣ ಕೇಳಿದರೆ ನಿಮಗೂ ಪಾಪ ಅನಿಸುತ್ತದೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅಮೇಥಿಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಸ್ಮ್ರಿತಿ ಇರಾನಿ ಅವರು ಭರ್ಜರಿ ಗೆಲುವುದು ಸಾದಿಸಿದರು, ಇನ್ನು ಸ್ಮ್ರಿತಿ ಇರಾನಿ ಗೆಲುವು ಸಾದಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಸ್ಮ್ರಿತಿ ಇರಾನಿ ಅವರ ಆಪ್ತನನ್ನ ದುಷ್ಟರು ಗುಂಡಿಕ್ಕಿ ಹತ್ಯೆ ಮಾಡಿದ್ದರು.

smriti irani and Surendra Sing

ಸ್ಮ್ರಿತಿ ಇರಾನಿ ಅವರ ಆಪ್ತ ಸುರೇಂದ್ರ ಸಿಂಗ್ ಅವರನ್ನ ಶನಿವಾರ ರಾತ್ರಿ ದುಷ್ಟರು ಗುಂಡಿಕ್ಕಿ ಹತ್ಯೆ ಮಾಡಿದ್ದು ಸ್ಮ್ರಿತಿ ಇರಾನಿ ಅವರು ಆತನ ಅಂತಿಮ ಯಾತ್ರೆಯೆಯಲ್ಲಿ ಹೆಗಲನ್ನ ಕೊಟ್ಟು ಆತನ ಋಣವನ್ನ ತೀರಿಸಿದ್ದಾರೆ.

ಸ್ಮ್ರಿತಿ ಇರಾನಿ ಏಳಿಗೆಗಾಗಿ ದುಡಿದ ಕಾರ್ಯಕರ್ತರಲ್ಲಿ ಸುರೇಂದ್ರ ಸಿಂಗ್ ಅವರು ಕೂಡ ಒಬ್ಬರು, ಇನ್ನು ಸುರೇಂದ್ರ ಸಿಂಗ್ ಅವರು ಸ್ಮ್ರಿತಿ ಇರಾನಿ ಅವರ ಗೆಲುವಿನಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸಿದ್ದರು.

ಇನ್ನು ಸುರೇಂದ್ರ ಸಿಂಗ್ ಅವರ ಹತ್ಯೆಯನ್ನ ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆಯನ್ನ ಶುರು ಮಾಡಿದ್ದಾರೆ, ಇಹಲೋಕ ತ್ಯಜಿಸಿದ ಸುರೇಂದ್ರ ಸಿಂಗ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ, ಸ್ನೇಹಿತರೆ ಸ್ಮ್ರಿತಿ ಇರಾನಿ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

smriti irani and Surendra Sing

Please follow and like us:
error0
http://karnatakatoday.in/wp-content/uploads/2019/05/Smriti-Irani-And-Surendra-Sing-1024x576.jpghttp://karnatakatoday.in/wp-content/uploads/2019/05/Smriti-Irani-And-Surendra-Sing-150x104.jpgeditorಎಲ್ಲಾ ಸುದ್ದಿಗಳುನಗರಮಂಗಳೂರುಸುದ್ದಿಜಾಲರಾಜಕಾರಣಿಗಳು ಅಂದರೆ ದುಡ್ಡು ಮಾಡುವವರು, ಮೂರೂ ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡುವವರು ಎನ್ನುವ ಈಗಿನ ಕಾಲದಲ್ಲೂ ಕೂಡ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನ ಅಮೇಥಿಯಲ್ಲಿ ಸೋಲಿಸುವುದರ ಮೂಲಕ ಭರ್ಜರಿ ಜಯ ಸಾದಿಸಿದರು ಸ್ಮ್ರಿತಿ ಇರಾನಿ ಅವರು. ಇನ್ನು ಈಗ ಸ್ಮ್ರಿತಿ ಇರಾನಿ ಅವರು ಮಾಡಿದ ಕೆಲಸ ಈಗ ದೇಶದಾದ್ಯಂತ ಬಹಳ ಸದ್ದು ಮಾಡುತ್ತಿದ್ದು ನಿಮ್ಮ ಜೀವನದಲ್ಲಿ ಇಂತಹ ರಾಜಕಾರಣಿಯನ್ನ ನೋಡಿರುವುದು ಇರಲಿ ಕೇಳಿರಲು ಸಾಧ್ಯವಿಲ್ಲ. ಹಾಗಾದರೆ ಸ್ಮ್ರಿತಿ...Film | Devotional | Cricket | Health | India