ಇಡೀ ಪ್ರಪಂಚಕ್ಕೆ ಕರೋನ ಅನ್ನುವ ಮಹಾಮಾರಿ ಹರಡುವಂತೆ ಮಾಡಿ ಈಗ ಏನು ಆಗಲಿಲ್ಲ ಅನ್ನುವ ಹಾಗೆ ಸುಮ್ಮನೆ ತನ್ನ ಪಾಡಿಗೆ ತಾನು ಇದೆ ಚೀನಾ, ಆದರೆ ಕರೋನ ಮಹಾಮಾರಿಯಿಂದ ಅಕ್ಷರಶಃ ಜೀವನವನ್ನ ಕಳೆದುಕೊಂಡಿರುವ ಅದೆಷ್ಟೋ ದೇಶಗಳು ಸುಮ್ಮನೆ ಹೇಗೆ ತಾನೇ ಇರುತ್ತದೆ ನೀವೇ ಹೇಳಿ ಸ್ನೇಹಿತರೆ. ಕರೋನ ಮಹಾಮಾರಿಯನ್ನ ತನ್ನ ಲಾಭಕ್ಕೆ ಬಳಸಿಕೊಂಡು ವೈದ್ಯಕೀಯ ಸಾಮಗ್ರಿಗಳನ್ನ ಮಾರಾಟ ಮಾಡಿ ಚನ್ನಾಗಿ ಹಣ ಗಳಿಕೆ ಮಾಡಿಕೊಳ್ಳೋಣ ಎಂದು ಆಲೋಚನೆ ಮಾಡಿದ್ದ ಚೀನಾ ದೇಶಕ್ಕೆ ಅದೇ ದೊಡ್ಡ ತಿರುಗು ಬಾಣವಾಗಿದೆ. ಹೌದು ಸ್ನೇಹಿತರೆ 123 ದೇಶಗಳು ಚೀನಾ ದೇಶಕ್ಕೆ ದೊಡ್ಡ ಶಾಕ್ ನೀಡಿದ್ದು ಅದನ್ನ ಅರಗಿಸಿಕೊಳ್ಳುವುದು ಚೀನಾಕ್ಕೆ ದೇಶಕ್ಕೆ ದೊಡ್ಡ ಸವಾಲೇ ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ಆ 123 ದೇಶಗಳು ಒಟ್ಟಾಗಿ ಚೀನಾ ದೇಶಕ್ಕೆ ಕೊಟ್ಟ ಆ ಶಾಕ್ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಚೀನಾದಿಂದ ಬಂದ ವೈದ್ಯಕೀಯ ಸಾಮಗ್ರಿಗಳನ್ನ ನಕಲಿ ವೈದ್ಯಕೀಯ ಸಾಮಗ್ರಿಗಳು ಎಂದು ಹೇಳಿ ಅವುಗಳನ್ನ ವಾಪಾಸ್ ಕಳುಹಿಸಿದವು 50 ಕ್ಕೂ ಹೆಚ್ಚು ದೇಶಗಳು. ತನ್ನ ಎಲ್ಲಾ ಉಪಾಯಗಳು ಫೇಲ್ ಆದಕಾರಣ ಸುಮ್ಮನೆ ಕುಳಿತ ಚೀನಾ ದೇಶಕ್ಕೆ ಈಗ ಮತ್ತೆ 123 ದೇಶಗಳು ದೊಡ್ಡ ಶಾಕ್ ಕೊಡಲು ಮುಂದಾಗಿದೆ. ಏಷ್ಯಾದಲ್ಲಿ ಚೀನಾ ದೇಶಕ್ಕೆ ಮಣ್ಣು ಮುಕ್ಕಿಸಬಲ್ಲ ಶಕ್ತಿ ಇರುವುದು ಕೇವಲ ಭಾರತಕ್ಕೆ ಮಾತ್ರವಾಗಿದೆ, ಇನ್ನು ಇದನ್ನ ಸ್ಪಷ್ಟವಾಗಿ ಅರಿತ ಡೊನಾಲ್ಡ್ ಟ್ರಂಪ್ ಭಾರತದ ಜೊತೆಗೆ ಚೀನಾ ದೇಶದ ವಿರುದ್ಧವಾಗಿ ಇರುವ ರಾಷ್ಟ್ರಗಳನ್ನ ತನ್ನ ಸೇರಿಸಿಕೊಂಡು ಚೀನಾದ ಸುತ್ತ ಚಕ್ರವ್ಯೂಹ ರಚನೆ ಮಾಡಿ ಚೀನಾ ದೇಶಕ್ಕೆ ದೊಡ್ಡ ಪೆಟ್ಟು ಕೊಡಲು ಉಪಾಯ ಮಾಡಿದ್ದಾರೆ.

Special investigation

ಇನ್ನು ಚೀನಾ ದೇಶ ಈಗ ಒಬ್ಬಂಟಿ ಉಳಿದಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಸಡನ್ ಆಗಿ ಚೀನಾ ದೇಶಕ್ಕೆ ಶಾಕ್ ಕೊಟ್ಟ ಆಪಲ್ ಹಾಗು ಲಾವಾ ಕಂಪನಿಗಳು ಚೀನಾ ದೇಶವನ್ನ ತೊರೆದು ತಮ್ಮ ಉತ್ಪಾಧನಾ ಘಟಕಗಳನ್ನ ಮೇಡ್ ಇನ್ ಇಂಡಿಯಾ ಅಡಿಯಲ್ಲಿ ಭಾರತಕ್ಕೆ ಸ್ಥಳಾಂತರ ಮಾಡುವ ಕೆಲಸವನ್ನ ಆರಂಭ ಮಾಡಿಕೊಂಡಿದೆ. ಇನ್ನು ಇದರ ಮದ್ಯೆ ಪ್ರಪಂಚದ ಪ್ರಸಿದ್ಧ ಫುಟ್ ವೆರ್ ಕಂಪೆನಿಯಾದ ವಾನ್ ವೀಲೆಕ್ಸ್ ಕಂಪನಿ ಚೀನಾ ದೇಶವನ್ನ ಭಾರತಕ್ಕೆ ತಮ್ಮ ಕಂಪನಿಯನ್ನ ಸ್ಥಳಾಂತರ ಮಾಡುವ ನಿರ್ಧಾರವನ್ನ ಮಾಡಿದೆ. ಇನ್ನು ಅಷ್ಟೇ ಅಲ್ಲದೆ ಕೆಲವು ದೊಡ್ಡ ದೊಡ್ಡ ಕಂಪನಿಗಳು ಚೀನಾ ದೇಶವನ್ನ ತೊರೆಯಲು ನಿರ್ಧಾರವನ್ನ ಮಾಡಿದ್ದು ಚೀನಾದ ಬುಡ ಅಲುಗಾಡುವಂತೆ ಆಗಿದೆ ಎಂದು ಹೇಳಬಹುದು.

ಇನ್ನು ಇಷ್ಟು ದಿನ ಕರೋನ ಮೂಲವನ್ನ ಪತ್ತೆ ಮಾಡುವ ಸಲುವಾಗಿ ಚೀನಾಕ್ಕೆ ದೇಶಕ್ಕೆ ತೆರಳಲು ಮುಂದಾದ ಅಮೇರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳಿಗೆ ಅನುಮತಿ ಕೊಡದೆ ಮಂಡತನ ಪ್ರದರ್ಶನ ಮಾಡಿದ ಚೀನಾ ದೇಶಕ್ಕೆ ಸಕತ್ ಪೆಟ್ಟು ಕೊಟ್ಟಿರುವ 123 ದೇಶಗಳು ಕರೋನ ಮೂಲದ ವಿರುದ್ಧ ತನಿಖೆ ಆಗಲೇಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಗೆ ಒತ್ತಾಯವನ್ನ ಮಾಡಿದೆ. ಇನ್ನು ಈಗ ಚೀನಾಕ್ಕೆ ದೇಶಕ್ಕೆ ಉಸಿರು ಗಟ್ಟಿದಂತೆ ಆಗಿದ್ದು ಬೇರೆ ವಿಧಿ ಇಲ್ಲದೆ ತಮ್ಮ ದೇಶದಲ್ಲಿ ತನಿಖೆ ಮಾಡಲು ಅನುಮತಿ ಕೊಡುವುದಾಗಿ ಚೀನಾ ದೇಶ ಹೇಳಿದೆ, ಸ್ನೇಹಿತರೆ 123 ದೇಶಗಳು ಚೀನಾ ದೇಶಕ್ಕೆ ಕೊಟ್ಟ ಈ ಶಾಕ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Special investigation

Please follow and like us:
error0
http://karnatakatoday.in/wp-content/uploads/2020/05/Special-investigation-1-1024x576.jpghttp://karnatakatoday.in/wp-content/uploads/2020/05/Special-investigation-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಇಡೀ ಪ್ರಪಂಚಕ್ಕೆ ಕರೋನ ಅನ್ನುವ ಮಹಾಮಾರಿ ಹರಡುವಂತೆ ಮಾಡಿ ಈಗ ಏನು ಆಗಲಿಲ್ಲ ಅನ್ನುವ ಹಾಗೆ ಸುಮ್ಮನೆ ತನ್ನ ಪಾಡಿಗೆ ತಾನು ಇದೆ ಚೀನಾ, ಆದರೆ ಕರೋನ ಮಹಾಮಾರಿಯಿಂದ ಅಕ್ಷರಶಃ ಜೀವನವನ್ನ ಕಳೆದುಕೊಂಡಿರುವ ಅದೆಷ್ಟೋ ದೇಶಗಳು ಸುಮ್ಮನೆ ಹೇಗೆ ತಾನೇ ಇರುತ್ತದೆ ನೀವೇ ಹೇಳಿ ಸ್ನೇಹಿತರೆ. ಕರೋನ ಮಹಾಮಾರಿಯನ್ನ ತನ್ನ ಲಾಭಕ್ಕೆ ಬಳಸಿಕೊಂಡು ವೈದ್ಯಕೀಯ ಸಾಮಗ್ರಿಗಳನ್ನ ಮಾರಾಟ ಮಾಡಿ ಚನ್ನಾಗಿ ಹಣ ಗಳಿಕೆ ಮಾಡಿಕೊಳ್ಳೋಣ ಎಂದು ಆಲೋಚನೆ ಮಾಡಿದ್ದ...Film | Devotional | Cricket | Health | India