special tips about Bhagavadh geetha

ಭಗವತ್ ಗೀತೆ ಯಾಕೆ ಓದಬೇಕು ಮೊಮ್ಮಗನಿಗೆ ತಾತ ಕೊಟ್ಟ ಉತ್ತರ, ಎಷ್ಟೇ ಓದಿದರೂ ಈ ಭಗವತ್ ಗೀತೆ ಅರ್ಥ ಆಗೋದಿಲ್ಲ ಆದರೂ ಈ ಭಗವತ್ ಗೀತೆಯನ್ನ ಯಾಕೆ ಓದಬೇಕು ಎಂದು ಮೊಮ್ಮಗ ಕೇಳಿದಾಗ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿದರು ತಾತ.

ಆ ಸಮಯ ಈಗ ಬಂದಿದೆ ಒಂದು ದಿನ ತನ್ನ ಮೊಮ್ಮಗನನ್ನ ಹೊರಗಡೆ ಕರೆದುಕೊಂಡು ಹೋದ ತಾತ ಅಲ್ಲಿ ಇದ್ದಿಲಿನ ಬತ್ತಿ ತೆಗೆದುಕೊಂಡು ಒಂದು ತಟ್ಟೆಯಲ್ಲಿ ಹಾಕಿ ತಗೆದುಕೊಂಡು ಹೋಗುತ್ತಿದ್ದರು ಜನ, ಊಟದ ಸಮಯ ಆದ್ದರಿಂದ ಅವರೆಲ್ಲ ಹತ್ತಿರದ ಮರದ ಬಳಿ ಕೂತು ಊಟ ಮಾಡುತ್ತಿದ್ದರು.

special tips about Bhagavadh geetha

ಆಗ ಅಲ್ಲಿ ಕಾಣುತ್ತಿರುವ ಇದ್ದಿಲಿನ ತಟ್ಟೆಯನ್ನ ಮೊಮ್ಮಗನಿಗೆ ಕೊಟ್ಟು ಇಗೋ ಅಲ್ಲಿ ಕಾಣುತ್ತಿರುವ ನದಿ ನೀರನ್ನ ತಗೆದುಕೊಂಡು ಬರುವಂತೆ ಹೇಳುತ್ತಾನೆ.

ಆದರೆ ಮೊಮ್ಮಗ ಈ ರಂದ್ರಗಳುಳ್ಳ ತಟ್ಟೆಯಲ್ಲಿ ಹೇಗೆ ನೀರನ್ನು ತರಲಿ ಎಂದು ತಾತನ ಬಳಿ ಕೇಳಿದನು ಮೊಮ್ಮಗ, ಆಗ ತಾತ ಪರವಾಗಿಲ್ಲ ವೇಗವಾಗಿ ಓಡಿ ಬಾ ಎಂದು ಹೇಳುತ್ತಾನೆ.

ಈತ ಪ್ರತಿಸಲ ನೀರು ತರುವ ಹೊತ್ತಿಗೆ ತಟ್ಟೆಯಲ್ಲಿರುವ ನೀರು ಖಾಲಿಯಾಗಿತ್ತು, ಹೀಗೆ ಐದು ಸಲ ಮಾಡಿದ ಕೊನೆಗೆ ಬೇಸರದಿಂದ ಇನ್ನು ನನ್ನ ಬಳಿ ಆಗಲ್ಲ ಅಂತ ಹೇಳಿದ ಮೊಮ್ಮಗ.

special tips about Bhagavadh geetha

ಆಗ ತಾತ ಆ ತಟ್ಟೆಯನ್ನ ನೋಡು ಅಂತ ಹೇಳುತ್ತಾನೆ ಮೊಮ್ಮಗ ಅದನ್ನ ನೋಡುತ್ತಾನೆ ಆಗ ತಾತ ಏನು ಅರ್ಥಯಿತು ಎಂದು ಕೇಳುತ್ತಾನೆ ಆದರೆ ಅವನು ಏನು ಅರ್ಥ ಆಗಲಿಲ್ಲ ಎಂದು ತಲೆಯಾಡಿಸುತ್ತಾನೆ.

ಮೊದಲು ಈ ತಟ್ಟೆ ಇದ್ದಿಲಿನ ಮಸಿಯಿಂದ ಕಪ್ಪಗಾಗಿತ್ತು ಆದರೆ ನೀನು ಈ ತಟ್ಟೆಯಲ್ಲಿ ನೀರು ತಗೆದುಕೊಂಡು ಬಂದ ಮೇಲೆ ಈ ಎಷ್ಟು ಸ್ವಚ್ಛವಾಗಿ ಕಾಣುತ್ತಿದೆ ಏನು ಹೇಳಿದರು.

special tips about Bhagavadh geetha

ಇದೆ ರೀತಿ ಭಗವತ್ ಗೀತೆ ಓದಿದರೆ ನಮಗೂ ಹಾಗೆ ಆಗುತ್ತದೆ ಅರ್ಥ ಆಗಲಿ ಆಗದೆ ಇರಲಿ, ನೆನಪಿನಲ್ಲಿ ಇರಲಿ ಇಲ್ಲದೆ ಇರಲಿ ಭಾಗವತ್ ಗೀತೆ ಓದಿದರೆ ನನ್ನ ಯೋಚನೆ ಮತ್ತು ಆಲೋಚನೆಗಳಲ್ಲಿ ಒಂದು ಒಳ್ಳೆಯ ಬದಲಾವಣೆ ಬರುತ್ತದೆ ಎಂದು ಹೇಳಿದರು ಆ ತಾತ.

Please follow and like us:
0
http://karnatakatoday.in/wp-content/uploads/2018/04/BHAGVADGITA-1024x576.pnghttp://karnatakatoday.in/wp-content/uploads/2018/04/BHAGVADGITA-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಭಗವತ್ ಗೀತೆ ಯಾಕೆ ಓದಬೇಕು ಮೊಮ್ಮಗನಿಗೆ ತಾತ ಕೊಟ್ಟ ಉತ್ತರ, ಎಷ್ಟೇ ಓದಿದರೂ ಈ ಭಗವತ್ ಗೀತೆ ಅರ್ಥ ಆಗೋದಿಲ್ಲ ಆದರೂ ಈ ಭಗವತ್ ಗೀತೆಯನ್ನ ಯಾಕೆ ಓದಬೇಕು ಎಂದು ಮೊಮ್ಮಗ ಕೇಳಿದಾಗ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿದರು ತಾತ. ಆ ಸಮಯ ಈಗ ಬಂದಿದೆ ಒಂದು ದಿನ ತನ್ನ ಮೊಮ್ಮಗನನ್ನ ಹೊರಗಡೆ ಕರೆದುಕೊಂಡು ಹೋದ ತಾತ ಅಲ್ಲಿ ಇದ್ದಿಲಿನ ಬತ್ತಿ ತೆಗೆದುಕೊಂಡು ಒಂದು ತಟ್ಟೆಯಲ್ಲಿ ಹಾಕಿ ತಗೆದುಕೊಂಡು...Kannada News