ನಿಮ್ಮ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಅಕೌಂಟ್ ಮತ್ತು ಇತರ ಯಾವುದೇ ಬ್ಯಾಂಕ್ ಖಾತೆ ಇದ್ದರು ಕೂಡ ಈ ವಿಷಯವನ್ನು ನೀವು ದೀಪಾವಳಿಯ ಮುಂಚೆ ತಿಳಿದುಕೊಳ್ಳಬೇಕಾದ ಅನಿವಾರ್ಯ ಇದೆ. ಹೌದು ಇಂಥ ವಿಷಯವೊಂದನ್ನು ಎಸ್ ಬಿ ಐ ತನ್ನ ಅಧಿಕೃತ ಟ್ವಿಟ್ಟರ್ ಮತ್ತು ಫೇಸ್ಬುಕ್ ಗಳಲ್ಲಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೆ ನಿಮ್ಮ ಹಣದ ಸುರಕ್ಷಿತೆಯ ದ್ರಷ್ಟಿಯಿಂದಲೂ ಕೂಡ ಈ ಕೆಲಸ ನೀವು ಮಾಡಲೇಬೇಕು. ಹಾಗಿದ್ದರೆ ಬ್ಯಾಂಕ್ ನೀಡಿರುವ ಆ ಸಲಹೆ ಏನು ನೋಡೋಣ ಬನ್ನಿ. ಇದು ಹಬ್ಬದ ಸಮಯ ಹೀಗಾಗಿ ಬ್ಯಾಂಕುಗಳಲ್ಲಿ ರಶ್ ಇರುತ್ತದೆ ಹೀಗಾಗಿ ಜನರು ಹೆಚ್ಚು ಹೆಚ್ಚು ಆನ್ಲೈನ್ ಮೂಲಕವೇ ಶಾಪಿಂಗ್ ಮಾಡುತ್ತಾರೆ ಮತ್ತು ಡೆಬಿಟ್ ಕ್ರೆಡಿಟ್, ಯೂಪಿಐ ಬಳಸಿ ಹೆಚ್ಚು ಹಣದ ವ್ಯವಹಾರ ಆಗಲಿದೆ. ಇಷ್ಟೇ ಅಲ್ಲದೆ ದೇಶದಲ್ಲಿ ನೆಟ್ ಬ್ಯಾಂಕಿಂಗ್ ಬಳಸಿ ವ್ಯವಹರಿಸುವವರ ಸಂಖ್ಯೆ ಕೂಡ ಹೆಚ್ಚಿದೆ ಆದ್ದರಿಂದ ನಾಲ್ಕು ವಿಷಯಗಳನ್ನು ನೀವು ಇಲ್ಲಿ ನೆನಪಿಡಲು ಬ್ಯಾಂಕುಗಳು ಹೇಳಿದೆ.

ಮೊದಲೆನೆಯದಾಗಿ ಎಲ್ಲೆಲ್ಲಿ ನಿಮಗೆ ಉಚಿತ ವೈಫೈ ಸಿಗುತ್ತದೆ ಅಲ್ಲಿ ನೀವು ಬ್ಯಾಂಕಿನ ವ್ಯವಹಾರ ಮಾಡಲೇಬೇಡಿ ಇದು ಮುಖ್ಯವಾದ ವಿಚಾರ ಯಾಕೆಂದರೆ ಇಲ್ಲಿ ನಿಮ್ಮ ಖಾತೆಗೆ ಕನ್ನ ಹಾಕುವ ಹಲವಾರು ವೈರಸ್ ಗಳು ಇರಬಹುದು ಎನ್ನಲಾಗಿದೆ. ಇನ್ನು ಈ ಹಬ್ಬದ ದಿನಗಳಲ್ಲಿ ನಿಮಗೆ ಅಪರಿಚಿತ ಶಾಪಿಂಗ್ ಕರೆಗಳು ಬಂದು ನೀವು ಈ ಕೂಪನ್ ಗೆದ್ದಿದ್ದೀರಿ ಹಾಗೆ ಹೀಗೆ ಎಂದು ಹೇಳಿ ನಿಮ್ಮ ಬ್ಯಾಂಕಿನ ಅಥವಾ ಒಟಿಪಿಯನ್ನು ಪಡೆಯಲು ಪ್ರಯತ್ನಿಸುತ್ತಾರೆ ಹೀಗಾಗಿ ಈ ವಿವರಗಳನ್ನು ಎಂದಿಗೂ ಯಾರಿಗೂ ತಿಳಿಸಬೇಡಿ.

ಇಷ್ಟೇ ಅಲ್ಲದೆ ನಿಮ್ಮ ಬ್ಯಾಂಕಿನ ಯಾವುದೇ ವಿವರಗಳನ್ನು ಫೋನಿನಲ್ಲಿ ಸೇವ್ ಮಾಡಿ ಇಡಬೇಡಿ ಯಾಕೆಂದರೆ ಒಂದು ವೇಳೆ ಫೋನ್ ಮಿಸ್ಸಿಂಗ್ ಆದಲ್ಲಿ ಈ ಮಾಹಿತಿ ಕೂಡ ಖದೀಮರ ನೆರವಿಗೆ ಬರುತ್ತದೆ. ಇನ್ನು ಮುಖ್ಯವಾದ ಸಂಗತಿ ಏನಂದರೆ ನಿಮ್ಮ ಎಟಿಎಂ ಕಾರ್ಡ್ ಅನ್ನು ನೀವು ಮಾತ್ರ ಬಳಸಿ ಬೇರೆಯವರಿಗೆ ನೀಡಲೇಬೇಡಿ ಅವರು ಎಷ್ಟೇ ಆತ್ಮೀಯರಿರಲಿ ಯಾಕೆಂದರೆ ಇತ್ತೀಚಿಗೆ ನಡೆದ ಕೆಲ ಪ್ರಕರಣಗಳು ಹಾಗೆ ಇದೆ.

 

ಕೋರ್ಟ್ ಕೂಡ ನಿಮ್ಮ ಏಟಿಎಂ ಕಾರ್ಡ್ ಮೂಲಕ ನೀವಲ್ಲದೆ ಬೇರೆಯವರು ಟ್ರಾನ್ಸಾಕ್ಷನ್ ಮಾಡಿದರೆ ಅವಾಗ ಏನಾದರು ಹೆಚ್ಚು ಕಡಿಮೆ ಆಗಿದ್ದಲ್ಲಿ ನಿಮ್ಮ ವಾದವನ್ನು ಕೇಳುವುದಿಲ್ಲ. ಬ್ಯಾಂಕುಗಳು ಕೂಡ ಇತ್ತೀಚಿಗೆ ಇದೆ ರೀತಿಯಲ್ಲಿ ನಿಬಂಧನೆ ಇಟ್ಟಿದ್ದವು. ಹೀಗಾಗಿ ಹಬ್ಬದ ಸಮಯದಲ್ಲಿ ಬಹಳ ಜಾಗರೂಕತೆಯಿಂದ ಇರುವುದು ನಿಮಗೆ ಒಳ್ಳೆಯದು. ಆದಷ್ಟು ಜನರಿಗೆ ಈ ಮಾಹಿತಿ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/11/SBI-DEEPAVALI-1024x576.jpghttp://karnatakatoday.in/wp-content/uploads/2018/11/SBI-DEEPAVALI-150x104.jpgKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುನಿಮ್ಮ ಬಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕ್ ಅಕೌಂಟ್ ಮತ್ತು ಇತರ ಯಾವುದೇ ಬ್ಯಾಂಕ್ ಖಾತೆ ಇದ್ದರು ಕೂಡ ಈ ವಿಷಯವನ್ನು ನೀವು ದೀಪಾವಳಿಯ ಮುಂಚೆ ತಿಳಿದುಕೊಳ್ಳಬೇಕಾದ ಅನಿವಾರ್ಯ ಇದೆ. ಹೌದು ಇಂಥ ವಿಷಯವೊಂದನ್ನು ಎಸ್ ಬಿ ಐ ತನ್ನ ಅಧಿಕೃತ ಟ್ವಿಟ್ಟರ್ ಮತ್ತು ಫೇಸ್ಬುಕ್ ಗಳಲ್ಲಿ ಹೇಳಿಕೊಂಡಿದೆ. ಇಷ್ಟೇ ಅಲ್ಲದೆ ನಿಮ್ಮ ಹಣದ ಸುರಕ್ಷಿತೆಯ ದ್ರಷ್ಟಿಯಿಂದಲೂ ಕೂಡ ಈ ಕೆಲಸ ನೀವು ಮಾಡಲೇಬೇಕು. ಹಾಗಿದ್ದರೆ ಬ್ಯಾಂಕ್...Kannada News