ಇನ್ನೇನು ಕೆಲ ದಿನಗಳಲ್ಲೇ ಸಂಕ್ರಾಂತಿ ಬರುತ್ತಿದೆ ಎಡಕ್ಕೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಹಲವು ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ನಗದು ವ್ಯವಹಾರಗಳಿಗೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಿದ್ದ ಬ್ಯಾಂಕ್ ತನ್ನ ಖಾತೆದಾರರಿಗೆ ಹೆಚ್ಚಿನ ಟ್ರಾನ್ಸಾಕ್ಷನ್ ಮಾಡಲು ಶುಲ್ಕ ವಿಧಿಸುತ್ತಿತ್ತು ಆದರೆ ಇದೀಗ ಹಲವು ನಿಯಮಗಳನ್ನು ಬದಲಾವಣೆ ಮಾಡುವ ಮೂಲಕ ಮತ್ತೊಮ್ಮೆ ಜನರಿಗೆ ರಿಲೀಫ್ ನೀಡಿದೆ. ಹಾಗಿದ್ದರೆ ಈಗ ಆಗಿರುವ ಬದಲಾವಣೆಗಳೇನು ಎಂದು ನೋಡೋಣ ಬನ್ನಿ. ಮೊದಲಿಗೆ ಬ್ಯಾಂಕ್ ಸಾಮಾನ್ಯ ಉಳಿತಾಯ ಖಾತೆ ಹೊಂದಿರುವವರಿಗೆ ತನ್ನ ಏಟಿಎಂ ಗಳಲ್ಲಿ ಐದು ಹಾಗು ಇತರೆ ಬ್ಯಾಂಕುಗಳಲ್ಲಿ ಮೂರು ಉಚಿತ ಟ್ರಾನ್ಸಾಕ್ಷನ್ ಆಫ಼ರ್ ನೀಡಿದೆ ಇದು ಮೆಟ್ರೋ ನಗರಗಳಲ್ಲಿ ಮಾತ್ರ.

ಅದಷ್ಟೇ ರೀತಿ ನಾನ್ ಮೆಟ್ರೋ ಸಿಟಿಗಳಲ್ಲಿ ತಿಂಗಳಿಗೆ ಐದು ಐದರಂತೆ ಉಚಿತ ಸೇವೆ ನೀಡಿದೆ. ಒಂದು ವೇಳೆ ಇದಕ್ಕಿಂತ ಹೆಚ್ಚಿನ ವ್ಯವಹಾರ ಮಾಡಿದರೆ ಬ್ಯಾಂಕ್ ನಿಮಗೆ ಐದು ರೂನಿಂದ ಇಪ್ಪತ್ತು ರೂ ತನಕ ಶುಲ್ಕ ವಿಧಿಸಲಿದೆ. ಅಲ್ಲದೆ ತನ್ನ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಆಗಿ 25000 ಹಣ ಇಡುವವರಿಗೆ ಹತ್ತು ಟ್ರಾನ್ಸಾಕ್ಷನ್ ನೀಡಲಿದೆ ಈ ಬಗ್ಗೆ ನೀವು ಬ್ಯಾಂಕಿನಲ್ಲಿ ವಿಚಾರಿಸಿ.

 

 

ಅಲ್ಲದೆ ತಿಂಗಳಿಗೆ ಒಂದು ಲಕ್ಷಕ್ಕೂ ಹೆಚ್ಚು ಹಣ ಮಿನಿಮಮ್ ಇಡುವವರಿಗೆ ಏಟಿಎಂ ನಲ್ಲಿ ಯಾವುದೇ ಲಿಮಿಟ್ ಇಲ್ಲದೆ ಹಣ ತಗೆಯ ಬಹುದಾಗಿದೆ. ಇನ್ನು ಸ್ಯಾಲರಿ ಅಕೌಂಟ್ ಗಳಿಗೂ ಕೂಡ ಯಾವುದೇ ನಿಬಂಧನೆ ಇರದೇ ಈ ಸೇವೆ ನೀಡಲಿದೆ ಬ್ಯಾಂಕ್. ಈ ಬಗ್ಗೆ ನಿಮಗೆ ಏನಾದ್ರು ಅನಿಸಿಕೆ ಇದ್ದರೆ ತಿಳಿಸಿ ಮತ್ತು ಎಲ್ಲರಿಗು ಈ ಮಾಹಿತಿ ತಲುಪಿಸಿ.

 

ಹಬ್ಬದ ದಿನಗಳು ಹತ್ತಿರ ಬರುತ್ತಿದ್ದಂತೆ ಬ್ಯಾಂಕ್ ತನ್ನ ನಿಯಮ ಸಡಿಲಿಸಿ ಜನರಿಗೆ ಸ್ವಲ್ಪ ಖುಷಿ ನೀಡಿದೆ ಇದೆ ರೀತಿ ಇತ್ತೀಚಿಗೆ ಬ್ಯಾಂಕ್ ಹೊಸ ಅಕೌಂಟ್ ಮಾಡುವವರು ಯಾವುದೇ ಮಿನಿಮಮ್ ಹಣ ಇಲ್ಲದೆ ಕೂಡ ಖಾತೆ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು. ಈ ಆಫ಼ರ್ ಕೂಡ ಜನರಿಗೆ ಸಂತಸ ತಂದಿತ್ತು.

 

Please follow and like us:
0
http://karnatakatoday.in/wp-content/uploads/2019/01/sbi-good-news-sankranthi-1024x576.pnghttp://karnatakatoday.in/wp-content/uploads/2019/01/sbi-good-news-sankranthi-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಇನ್ನೇನು ಕೆಲ ದಿನಗಳಲ್ಲೇ ಸಂಕ್ರಾಂತಿ ಬರುತ್ತಿದೆ ಎಡಕ್ಕೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆದಾರರಿಗೆ ಹಲವು ಭರ್ಜರಿ ಸಿಹಿಸುದ್ದಿ ನೀಡಿದೆ. ಈ ಹಿಂದೆ ನಗದು ವ್ಯವಹಾರಗಳಿಗೆ ಸ್ವಲ್ಪ ಮಟ್ಟಿನ ಕಡಿವಾಣ ಹಾಕಿದ್ದ ಬ್ಯಾಂಕ್ ತನ್ನ ಖಾತೆದಾರರಿಗೆ ಹೆಚ್ಚಿನ ಟ್ರಾನ್ಸಾಕ್ಷನ್ ಮಾಡಲು ಶುಲ್ಕ ವಿಧಿಸುತ್ತಿತ್ತು ಆದರೆ ಇದೀಗ ಹಲವು ನಿಯಮಗಳನ್ನು ಬದಲಾವಣೆ ಮಾಡುವ ಮೂಲಕ ಮತ್ತೊಮ್ಮೆ ಜನರಿಗೆ ರಿಲೀಫ್ ನೀಡಿದೆ. ಹಾಗಿದ್ದರೆ ಈಗ ಆಗಿರುವ ಬದಲಾವಣೆಗಳೇನು ಎಂದು...Kannada News