Story of Chikkanna

ಕನ್ನಡ ಸಿನೆಮಾಗಳಲ್ಲಿ ಅದ್ಭುತವಾಗಿ ಹಾಸ್ಯ ಮಾಡುವ ಮೂಲಕ ಕರ್ನಾಟಕದ ಎಲ್ಲರ ಮನೆಯ ಮಾತಾಗಿರುವ ಚಿಕ್ಕಣ್ಣ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸುದ್ದಿಯಾಗಿದ್ದಾರೆ. ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಮೂಡಿಬರುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಣ್ಣ ತನ್ನ ಜೀವನದ ನೋವು ಮತ್ತು ನಲಿವುಗಳನ್ನ ಜನರ ಜೊತೆ ಹಂಚಿಕೊಂಡಿದ್ದಾರೆ.

ಚಿಕ್ಕಣ್ಣ ತನಗೆ ಓದಬೇಕು ಅನ್ನುವ ಆಸೆ ಇದ್ದರೂ ಕೂಡ ಆಗದೆ ತುಂಬಾ ಕಷ್ಟವನ್ನ ಅನುಭವಿಸಿದರು, ಇನ್ನು 10 ನೇ ತರಗತಿ ಪಾಸ್ ಆದರೂ ಕೂಡ ಚಿಕನ್ನ ಓದುದನ್ನ ಯಾಕೆ ಬಿಟ್ಟರು ಮತ್ತು ಸಿನೆಮಾಗಳಲ್ಲಿ ಯಶಸ್ಸನ್ನ ಸಾಧಿಸುವುದಕ್ಕೂ ಮುಂಚೆ ಚಿಕ್ಕಣ್ಣ ಅನುಭವಿಸಿದ ಕಷ್ಟಗಳು ಏನು ಅನ್ನುವುದನ್ನ ನೀವು ಕೇಳಿದರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ.

Story of Chikkanna

ಸ್ನೇಹಿತರೆ ಚಿಕ್ಕಣ್ಣ ಹುಟ್ಟುತ್ತಲೇ ಶ್ರೀಮಂತರ ಮನೆಯಲ್ಲಿ ಹುಟ್ಟಿದ ಹುಡುಗನಲ್ಲ, ಸಾಲು ಸಾಲು ಹೆಣ್ಣು ಮಕ್ಕಳ ನಂತರ ಗಂಡು ಮಗುವಾಗಿ ಮನೆಯಲ್ಲಿ ಜನಿಸಿದ ಚಿಕ್ಕಣ್ಣ ಶಾಲೆಯಿಂದ ಬಂದಕೂಡಲೇ ದನಗಳಿಗೆ ಮೇವು ಹಾಗು ಮೊಸರೆ ಇಡುವ ಕೆಲಸವನ್ನ ಮಾಡಬೇಕಿತ್ತು.

ಇನ್ನು ಚಿಕ್ಕಣ್ಣ ತನ್ನ ತಂದೆಯ ಬಳಿ ಅದೆಷ್ಟೋ ಸಲ ಪೆಟ್ಟನ್ನ ಕೂಡ ತಿಂದಿದ್ದಾರೆ ಮತ್ತು ನೀನು ಓದುವುದು ಬೇಡ ಎಂದು ಚಿಕ್ಕಣ್ಣ ಅವರ ತಂದೆ ಚಿಕ್ಕಣ್ಣ ಅವರನ್ನ 5 ನೇ ತರಗತಿಯಲ್ಲಿಯೇ ಓದುವುದನ್ನ ನಿಲ್ಲಿಸಲು ಮುಂದಾಗಿದ್ದರು, ಆದರೆ ತಂದೆಯನ್ನ ಹೇಗೋ ಒಪ್ಪಿಸಿ 10 ನೇ ತರಗತಿಯ ತನಕ ಓದಿದರೂ ಚಿಕ್ಕಣ್ಣ.

ಇನ್ನು ಕೆಲವರು ರಜೆಯ ದಿನಗಳಲ್ಲಿ ತಮ್ಮ ನೆಂಟರ ಮನೆಗೆ ಹೋಗುತ್ತಾರೆ, ಆದರೆ ಚಿಕ್ಕಣ್ಣ ರಜೆಯ ದಿನಗಳಲ್ಲಿ ಹೋಗುತ್ತಿದ್ದಿದ್ದು ಗಾರೆಯ ಕೆಲಸಕ್ಕೆ, ಇನ್ನು ತಾನು ಮಾಡಿದ ಕೆಲಸದ ಹಣದಲ್ಲಿಯೇ ಚಿಕ್ಕಣ್ಣ ತನ್ನ ಓದನ್ನ ಮುಗಿಸಿದರು.

Story of Chikkanna

ಇನ್ನು ಇದಾದ ನಂತರ ಮನೆಯ ನಿರ್ವಹಣೆಗಾಗಿ ಚಿಕ್ಕಣ್ಣ ಗಾರೆಯ ಕೆಲಸವನ್ನ ಸೇರಿಕೊಳ್ಳುತ್ತಾರೆ, ಇನ್ನು ಕೆಲವು ಸಮಯದ ನಂತರ ಚಿಕ್ಕಣ್ಣ ತನ್ನ ಪರಿಶ್ರಮದಿಂದ ಕಾಮಿಡಿ ಶೋ ಗಳಲ್ಲಿ ಭಾಗವಹಿಸಿ ಕಾಮಿಡಿಯನ್ನ ಮಾಡಿಕೊಂಡು ಬಂದರು.

ಹೀಗೆ ಚಿಕ್ಕ ಪುಟ್ಟ ನಾಟಕಗಳಲ್ಲಿ ನಟನೆ ಮಾಡುತ್ತಿದ್ದ ಚಿಕ್ಕ ಕೆಲವು ಸಮಯದ ನಂತರ ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ನಟನಾಗಿ ಸ್ಥಾನವನ್ನ ಪಡೆದುಕೊಳ್ಳುತ್ತಾರೆ, ಒಂದು ಕಾಲದಲ್ಲಿ ಗಾರೆಯ ಕೆಲಸವನ್ನ ಮಾಡುತ್ತಿದ್ದ ಈಗ ದಿನಕ್ಕೆ ಲಕ್ಷ ದುಡಿಯುವ ಹಂತಕ್ಕೆ ಬಂದು ತಲುಪಿದ್ದಾರೆ.

ಕಷ್ಟಪಟ್ಟ ಚಿಕ್ಕಣ್ಣ ಅವರಿಗೆ ಮತ್ತಷ್ಟು ಸುಖ ಸಿಗಲಿ ಎಂದು ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ, ಸ್ನೇಹಿತರೆ ಜೀವನದಲ್ಲಿ ಕಷ್ಟ ಪಟ್ಟರೆ ಏನು ಬೇಕಾದರೂ ಸಾಧಿಸಬಹುದು ಅನ್ನುವುದಕ್ಕೆ ಉದಾಹರಣೆ ನಮ್ಮ ಚಿಕ್ಕಣ್ಣ, ಸ್ನೇಹಿತರೆ ಚಿಕ್ಕಣ್ಣ ಅವರ ಕಷ್ಟದ ಜೀವನದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Story of Chikkanna

Please follow and like us:
0
http://karnatakatoday.in/wp-content/uploads/2019/06/Story-of-Chikkanna-1024x576.jpghttp://karnatakatoday.in/wp-content/uploads/2019/06/Story-of-Chikkanna-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಕನ್ನಡ ಸಿನೆಮಾಗಳಲ್ಲಿ ಅದ್ಭುತವಾಗಿ ಹಾಸ್ಯ ಮಾಡುವ ಮೂಲಕ ಕರ್ನಾಟಕದ ಎಲ್ಲರ ಮನೆಯ ಮಾತಾಗಿರುವ ಚಿಕ್ಕಣ್ಣ ಈಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸುದ್ದಿಯಾಗಿದ್ದಾರೆ. ಕನ್ನಡ ಕಿರುತೆರೆಯ ಖಾಸಗಿ ವಾಹಿನಿಯಲ್ಲಿ ಮೂಡಿಬರುವ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಕ್ಕಣ್ಣ ತನ್ನ ಜೀವನದ ನೋವು ಮತ್ತು ನಲಿವುಗಳನ್ನ ಜನರ ಜೊತೆ ಹಂಚಿಕೊಂಡಿದ್ದಾರೆ. ಚಿಕ್ಕಣ್ಣ ತನಗೆ ಓದಬೇಕು ಅನ್ನುವ ಆಸೆ ಇದ್ದರೂ ಕೂಡ ಆಗದೆ ತುಂಬಾ ಕಷ್ಟವನ್ನ ಅನುಭವಿಸಿದರು, ಇನ್ನು 10 ನೇ...Kannada News