Student Attended Professor Wedding to Get Sign

ಸಂದರ್ಭ ಮತ್ತು ಪರಿಸ್ಥಿತಿಯ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿ ಮಾಡಿಕೊಡುತ್ತದೆ, ಅಂತಹುದ್ದೇ ಒಂದು ಕೆಲಸವನ್ನ ಇಂಜಿನಿಯರ್ ಓದುತ್ತಿದ್ದ ವಿದ್ಯಾರ್ಥಿ ಮಾಡಿ ಒಂದು ಕ್ಷಣ ಎಲ್ಲರು ಬೆರಗಾಗುವಂತೆ ಮಾಡಿದ್ದಾನೆ.

ಕೇರಳದ ಮುಸಲಿಯರ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವ ಶ್ರೀನಾಥ್ ಮಾಡಿದ ಕೆಲಸಕ್ಕೆ ನಗಬೇಕೋ ಹೊಗಳಬೇಕೋ ಎನ್ನುವ ಚಿಂತೆಗೆ ಜನ ಒಳಗಾಗಿದ್ದಾರೆ.

Student Attended Professor Wedding to Get Sign

ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು, ಮುಸಲಿಯರ್ ಕಾಲೇಜ್ ನ ಉಪನ್ಯಾಸಕರಿಗೆ ಮದುವೆ ನಡೆಯುತ್ತಿತ್ತು, ಮದುವೆಗೆ ವಿದ್ಯಾರ್ಥಿಗಳು ಬಂದಿದ್ದರು, ಅವರಲ್ಲಿ ಶ್ರೀನಾಥ್ ಕೂಡ ಇದ್ದ, ಎಲ್ಲರು ತಮ್ಮ ಪ್ರೊಫೆಸರ್ ಮದುವೆ ನೋಡಿ ಶುಭಾಷಯ ಹೇಳಿ ಹೋಗಲು ಬಂದಿದ್ದರು.

ಆದರೆ ಶ್ರೀನಾಥ್ ಮಾತ್ರ ಬೇರೆ ಬೇರೆ ಕೆಲಸಕ್ಕಾಗಿಯೇ ಬಂದಿದ್ದ, ಉಪನ್ಯಾಸಕರ ಮದುವೆ ರಿಸೆಪ್ಷನ್ ನಡೆಯುತ್ತಿದ್ದಾಗ ಎಲ್ಲಾರು ಫೋಟೋ ಶೂಟ್ ಕೊಟ್ಟು ಶುಭಾಷಯ ಹೇಳಿ ಹೋಗುತ್ತಿದ್ದರು.

Student Attended Professor Wedding to Get Sign

ಆಗ ಸ್ಟೇಜ್ ಮೇಲೆ ಹೋದ ಶ್ರೀನಾಥ್ ತನ್ನ ಅಸೈನ್ ಮೆಂಟ್ ರೆಕಾರ್ಡ್ ಕೊಟ್ಟು ಸಹಿ ಮಾಡುವಂತೆ ಉಪನ್ಯಾಸಕರ ಮುಂದೆ ಇಟ್ಟ, ಇದರಿಂದ ಬೆರಗಾದ ಉಪನ್ಯಾಸಕ ನಗುನಗುತ್ತಲೇ ಅಸೈನ್ ಮೆಂಟ್ ಬುಕ್ ಗೆ ಸಹಿ ಮಾಡಿದರು.

ಇದನ್ನ ನೋಡಿ ನಗು ತಡೆಯಲಾರದ ಮದುವೆ ಹೆಣ್ಣು ನಗಾಡಿದರೆ ಚೆನ್ನಾಗಿರಲ್ಲ ಎಂದು ತುಂಬಾ ಕಂಟ್ರೋಲ್ ಮಾಡಿಕೊಂಡು ಕೈ ಅಡ್ಡ ಇಟ್ಟುಕೊಂಡು ನಗಾಡಿದರು.

Student Attended Professor Wedding to Get Sign

ಯಾರ ಬಗ್ಗೆನೂ ಆಲೋಚಿಸದ ಶ್ರೀನಾಥ್ ತನ್ನ ಪಾಡಿಗೆ ತಾನು ಸಹಿ ಮಾಡಿಸಿಕೊಂಡು ಫೋಟೋ ಶೂಟ್ ಅಲ್ಲಿಂದ ಹೊರಟುಹೋದ, ರೆಕಾರ್ಡ್ ಬುಕ್ ಗೆ ಸಹಿ ಮಾಡಿಸಿಕೊಳ್ಳುವ ಸಲುವಾಗಿಯೇ ಶ್ರೀನಾಥ್ ಮದುವೆಗೆ ಬಂದಿದ್ದನಂತೆ, ಇದನ್ನ ನೋಡಿದ ಜನ ಒಂದು ಕ್ಷಣ ಮೂಕವಿಸ್ಮಿತರಾದರು.

Please follow and like us:
0
http://karnatakatoday.in/wp-content/uploads/2018/06/allll-1024x576.jpghttp://karnatakatoday.in/wp-content/uploads/2018/06/allll-150x150.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಸಂದರ್ಭ ಮತ್ತು ಪರಿಸ್ಥಿತಿಯ ಅರಿವಿಲ್ಲದೆ ನಾವು ಮಾಡುವ ಕೆಲವು ಕೆಲಸಗಳು ಕೆಲವೊಮ್ಮೆ ನಗೆಪಾಟಲಿಗೆ ದಾರಿ ಮಾಡಿಕೊಡುತ್ತದೆ, ಅಂತಹುದ್ದೇ ಒಂದು ಕೆಲಸವನ್ನ ಇಂಜಿನಿಯರ್ ಓದುತ್ತಿದ್ದ ವಿದ್ಯಾರ್ಥಿ ಮಾಡಿ ಒಂದು ಕ್ಷಣ ಎಲ್ಲರು ಬೆರಗಾಗುವಂತೆ ಮಾಡಿದ್ದಾನೆ. ಕೇರಳದ ಮುಸಲಿಯರ್ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮಾಡುತ್ತಿರುವ ಶ್ರೀನಾಥ್ ಮಾಡಿದ ಕೆಲಸಕ್ಕೆ ನಗಬೇಕೋ ಹೊಗಳಬೇಕೋ ಎನ್ನುವ ಚಿಂತೆಗೆ ಜನ ಒಳಗಾಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು, ಮುಸಲಿಯರ್ ಕಾಲೇಜ್ ನ ಉಪನ್ಯಾಸಕರಿಗೆ ಮದುವೆ ನಡೆಯುತ್ತಿತ್ತು, ಮದುವೆಗೆ ವಿದ್ಯಾರ್ಥಿಗಳು...Karnataka news