ಸ್ನೇಹಿತರೆ ಸಾವು ಅನ್ನುವುದು ಪ್ರತಿಯೊಬ್ಬರಿಗೂ ಬಂದೆ ಬರುತ್ತದೆ ಆದರೆ ಅದೂ ಕೆಲವರಿಗೆ ತಡವಾಗಿ ಬರುತ್ತದೆ ಮತ್ತು ಕೆಲವರಿಗೆ ಬೇಗನೆ ಬರುತ್ತದೆ, ಜೀವನದಲ್ಲಿ ಯಾರು ತುಂಬಾ ಆಸೆಯನ್ನ ಇಟ್ಟುಕೊಂಡಿರುತ್ತಾರೋ ಅವರಿಗೆ ಆಯಸ್ಸು ಯಾವಾಗಲು ಕಡಿಮೆ  ಇರುತ್ತದೆ. ಸ್ನೇಹಿತರೆ ನಾವು ಹೇಳುವ ಈ ಹುಡುಗಿಯ ಕಥೆ ಮತ್ತು ಆಕೆಯ ಆಸೆಯನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಗ್ಯಾರೆಂಟಿ, ಸ್ನೇಹಿತರೆ ಈ ಹುಡುಗಿ ಕೇವಲ ತನ್ನ 17 ವರ್ಷಕ್ಕೆ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಾರೆ, ಈಕೆ ತನ್ನ 17 ನೇ ವರ್ಷಕ್ಕೆ ಹೇಗೆ ಕಮಿಷನರ್ ಆದರೂ ಮತ್ತು ಈಕೆ ಎಲ್ಲಿ ಸೇವೆ ಸಲ್ಲಿಸಿದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಈಕೆಯ ಹೆಸರು ರಮ್ಯಾ, ಇವರು ಕಾಲೇಜು ವಿದ್ಯಾರ್ಥಿನಿ ಮತ್ತು ಬ್ಲಡ್ ಕ್ಯಾನ್ಸರ್ ರೋಗಿ, ಇನ್ನು ಈಕೆಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಈಕೆ ಹೆಚ್ಚು ದಿನ ಬದುಕುದು ಕಷ್ಟ ಎಂದು ಹೇಳುತ್ತಾರೆ. ಈ ಹುಡುಗಿಯ ಕೊನೆಯ ಆಸೆ ತಾನು ಒಬ್ಬ ಪೊಲೀಸ್ ಕಮಿಷನರ್ ಜನರಿಗೆ ಸೇವೆ ಸಲ್ಲಿಸಬೇಕು ಅನ್ನುವುದು, ಮೇಕ್ ಮೈ ವಿಶ್ ಅನ್ನುವ ಸಂಸ್ಥೆಯ ಬಗ್ಗೆ ಹೆಚ್ಚಾಗಿ ಎಲ್ಲರೂ ಕೇಳೇ ಇರುತ್ತಾರೆ ಮತ್ತು ಈ ಸಂಸ್ಥೆಗೆ ಈಕೆಯ ಬಗ್ಗೆ ತಿಳಿಯುತ್ತದೆ. ಇನ್ನು ಈ ಸಂಸ್ಥೆಯವರು ಈ ಹುಡುಗಿಯ ಕೊನೆಯ ಆಸೆಯನ್ನ ಹೇಗಾದರೂ ಮಾಡಿ ತೀರಿಸಬೇಕು ಅನ್ನುವ ಸಲುವಾಗಿ ಹೈದರಾಬಾದ್ ನ ಕಮಿಷನರ್ ಗೆ ಕರೆ ಮಾಡಿ ಈ ಹುಡುಗಿಯ ಬಗ್ಗೆ ವಿವರಿಸುತ್ತಾರೆ ಮತ್ತು ಆಕೆಯ ಕೊನೆಯ ಆಸೆಯ ಬಗ್ಗೆ ಹೇಳುತ್ತಾರೆ.

17 year police commissioner ramya

ಇನ್ನು ಈಕೆಯ ಕೊನೆಯ ಆಸೆಯನ್ನ ಅರಿತ ಕಮಿಷನರ್ ಕೂಡ ಈಕೆಯನ್ನ ಒಬ್ಬ ಕಮಿಷನರ್ ಆಗಿ ಮಾಡಲು ಒಪ್ಪುತ್ತಾರೆ. ಇನ್ನು ಎಲ್ಲರ ಒಪ್ಪುಗೆಯನ್ನ ಪಡೆದುಕೊಂಡ ಇವರು ಈಕೆಯನ್ನ ಕೆಲವ 17 ವರ್ಷಕ್ಕೆ ಮತ್ತು ಒಂದು ದಿನದ ಸಲುವಾಗಲಿ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡುತ್ತಾರೆ. ಇನ್ನು ಈಕೆ ತಾನು ಕಮಿಷನರ್ ಆದ ಕೇವಲ್ ಘಂಟೆಗಳಲ್ಲಿ ನಮ್ಮ ದೇಶದಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು, ರೈತರು ಮತ್ತು ಹೆಚ್ಚಾಗಿ ಕಾರ್ ಡ್ರೈವರ್ ಗಳ ದೌರ್ಜನ್ಯ ನಡೆಯುತ್ತಿರುವುದನ್ನ ಅರಿತ ಇವರು ಅದನ್ನ ನಿಲ್ಲಿಸಬೇಕು ಎಂದು ಹೇಳುತ್ತಾರೆ.

ಇನ್ನು ಈ ಹುಡುಗಿಯ ಮಾತು ಮತ್ತು ನಡವಳಿಕೆಯನ್ನ ನೋಡಿ ಅಲ್ಲಿನ ಪೊಲೀಸ್ ಕಮಿಷಿನರ್ ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸುತ್ತಾರೆ, ಸ್ನೇಹಿತರೆ ನಮ್ಮ ಆಶಯ ಇಷ್ಟೇ, ಈಕೆಗೆ ಇರುವ ಬ್ಲಡ್ ಕ್ಯಾನ್ಸರ್ ಆದಷ್ಟು ಬೇಗ ವಾಸಿಯಾಗಿ ಈಕೆ ಮೊದಲಿನಂತೆ ಆಗಬೇಕು ಮತ್ತು ಮುಂದೆ ದಕ್ಷ ಪೊಲೀಸ್ ಅಧಿಕಾರಿಯಾಗಿ ಜನರ ಸೇವೆಯನ್ನ ಮಾಡಬೇಕು ಅನ್ನುವುದು. ಸ್ನೇಹಿತರೆ ಹುಡುಗಿಗೆ ಇರುವ ಆ ಮಹಾಮಾರಿ ಆದಷ್ಟು ಬೇಗ ವಾಸಿಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ ಮತ್ತು ಈ ಹುಡುಗಿ ವಿದ್ಯಾರ್ಥಿನಿಯರು, ರೈತರು ಮತ್ತು ಡ್ರೈವರ್ ಗಳಿಗೆ ಆಗುತ್ತಿರುವ ದೌರ್ಜನ್ಯಗಳ ಕು ಧ್ವನಿ ಎತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ಹೇಳಿ.

17 year police commissioner ramya

Please follow and like us:
error0
http://karnatakatoday.in/wp-content/uploads/2019/11/17-year-police-commissioner-ramya-1024x576.jpghttp://karnatakatoday.in/wp-content/uploads/2019/11/17-year-police-commissioner-ramya-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಸಾವು ಅನ್ನುವುದು ಪ್ರತಿಯೊಬ್ಬರಿಗೂ ಬಂದೆ ಬರುತ್ತದೆ ಆದರೆ ಅದೂ ಕೆಲವರಿಗೆ ತಡವಾಗಿ ಬರುತ್ತದೆ ಮತ್ತು ಕೆಲವರಿಗೆ ಬೇಗನೆ ಬರುತ್ತದೆ, ಜೀವನದಲ್ಲಿ ಯಾರು ತುಂಬಾ ಆಸೆಯನ್ನ ಇಟ್ಟುಕೊಂಡಿರುತ್ತಾರೋ ಅವರಿಗೆ ಆಯಸ್ಸು ಯಾವಾಗಲು ಕಡಿಮೆ  ಇರುತ್ತದೆ. ಸ್ನೇಹಿತರೆ ನಾವು ಹೇಳುವ ಈ ಹುಡುಗಿಯ ಕಥೆ ಮತ್ತು ಆಕೆಯ ಆಸೆಯನ್ನ ಕೇಳಿದರೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಗ್ಯಾರೆಂಟಿ, ಸ್ನೇಹಿತರೆ ಈ ಹುಡುಗಿ ಕೇವಲ ತನ್ನ 17 ವರ್ಷಕ್ಕೆ ಪೊಲೀಸ್ ಕಮಿಷನರ್...Film | Devotional | Cricket | Health | India