ಓದು ಮುಗಿದ ನಂತರ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುವುದು ಸಾಮಾನ್ಯವಾಗಿದೆ, ಓದು ಮುಗಿದ ನಂತರ ಏನಾದರು ಸಾಧನೆ ಮಾಡುವ ಬದಲು ಓದುವಾಗಲೇ ಏನಾದರು ಸಾಧನೆ ಮಾಡೋಣ ಅನುವ ಛಲಕ್ಕೆ ಬಿದ್ದು ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶದವರು ಮೆಚ್ಚುವ ಕೆಲಸವನ್ನ ಮಾಡಿದ 16 ವರ್ಷದ ಹುಡುಗಿಯ ಈ ಕಥೆಯನ್ನ ಕೇಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಿ. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು ಅಂದರೆ ಏನಿಲ್ಲ ಅಂದರೆ 25 ಸಾವಿರ ರೂಪಾಯಿ ಬೇಕು, ಆದರೆ ಈ ಹುಡುಗಿ 1800 ರೂಪಾಯಿ ಖರ್ಚು ಮಾಡಿ AC ತಯಾರಿಸಿದ್ದಾಳೆ. ಹಾಗಾದರೆ ಇಷ್ಟು ಕಡಿಮೆ ಖರ್ಚಿನಲ್ಲಿ ಹೇಗೆ AC ತಯಾರಿಸಿದಳು ಮತ್ತು ಅದಕ್ಕೆ ಆಕೆ ಮಾಡಿದ ಉಪಾಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಉತ್ತರ ಪ್ರದೇಶದ ಜಾನ್ಸಿ ನಗರದಲ್ಲಿ ವಾಸವಿರುವ 16 ವರ್ಷದ ಕಲ್ಯಾಣಿ ಅನ್ನುವ ಹುಡುಗಿ ಹತ್ತಿರದ ಲೋಕಮಾನ್ಯ ತಿಲಕ್ ಕಾಲೇಜಿನಲ್ಲಿ PUC ವ್ಯಾಸಂಗ ಮಾಡುತ್ತಿದ್ದಾಳೆ, ಇನ್ನು ಈ ಹುಡುಗಿಯ ತಂದೆ ಮತ್ತು ತಾಯಿ ಇಬ್ಬರು ಕೂಡ ಶಿಕ್ಷಕರಾಗಿ ಕೆಲಸವನ್ನ ಮಾಡುತ್ತಿದ್ದಾರೆ. ಇನ್ನು ಯಾವಾಗಲು ಎಲ್ಲರಿಗಿಂತ ಬಹಳ ವಿಭಿನ್ನವಾಗಿ ಆಲೋಚನೆ ಮಾಡುತ್ತಿದ್ದ ಕಲ್ಯಾಣಿ ಬಹಳ ಕಡಿಮೆ ಬೆಲೆಯಲ್ಲಿ AC ತಯಾರಿಸಬೇಕು ಅನುವ ಆಲೋಚನೆ ಮಾಡಿದಳು, ಇನ್ನು ಆಕೆ ಮಾಡಿದ ಆಲೋಚನೆಯಂತೆ 12 ವೋಲ್ಟ್ DC ಫ್ಯಾನ್, ಐಸ್ ಬಾಕ್ಸ್, ಸೋಲಾರ್ ಸಿಸ್ಟಮ್ ಹಾಗು ಥರ್ಮಾಕೋಲ್ ಬಳಸಿಕೊಂಡು ಕೇವಲ 1800 ರೂಪಾಯಿಯಲ್ಲಿ ಒಂದು AC ತಯಾರಿಸಿದಳು ಕಲ್ಯಾಣಿ.

Student Kalyani

ಇನ್ನು ಈಕೆ ತಯಾರು ಮಾಡಿದ AC ಗೆ ಯಾವುದೇ ರೀತಿಯ ಕರೆಂಟ್ ಬೇಕಾಗಿಲ್ಲ ಮತ್ತು ಸೋಲಾರ್ ಶಕ್ತಿಯಿಂದ ಈ AC ಕಾರ್ಯ ನಿರ್ವಹಿಸುತ್ತದೆ, ಇನ್ನು ರೂಮ್ ನಲ್ಲಿ ಈ AC ಯನ್ನು ಅರ್ಧ ಘಂಟೆ ಚಾಲು ಮಾಡಿದರೆ ಸಾಕು ಆ ರೂಮ್ 5 ಡಿಗ್ರಿ ತಾಪಮಾನಕ್ಕೆ ಬಂದು ರೂಮ್ ತಂಪಾಗುತ್ತದೆ. ಇನ್ನು ಕಲ್ಯಾಣಿ ತಯಾರು ಮಾಡಿದ ಈ AC ಯನ್ನು ಇನ್ನಷ್ಟು ಡೆವೆಲಪ್ ಮಾಡಿದರೆ ಬೇಸಿಗೆಯಲ್ಲಿ ಬೆವರು ಸುರಿಸುವ ಬದಲು ಈ AC ಯನ್ನು ಬಳಸಬಹುದಾಗಿದೆ. ಇನ್ನು ಈ ಹುಡುಗಿಯ ಕಾರ್ಯದಕ್ಷತೆಯನ್ನ ನೋಡಿದ ಜಪಾನ್ ಮತ್ತು ಇನ್ನಿತರೇ ದೇಶಗಳು ತಮ್ಮ ದೇಶದ ಸೆಮಿನಾರ್ ಗಳಲ್ಲಿ ಪಾಲ್ಗೊಳ್ಳುವಂತೆ ಈ ಹುಡುಗಿಗೆ ಆಮಂತ್ರಣವನ್ನ ನೀಡಿದೆ, ಇನ್ನು ಅಷ್ಟೇ ಅಲ್ಲದೆ ಕಲ್ಯಾಣಿಯ ಈ ಐಡಿಯಾ ಬಗ್ಗೆ ವಿದೇಶಿ ಕಂಪನಿಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಒಂದು ವಸ್ತುವನ್ನ ತಯಾರು ಮಾಡಿದ ಮೇಲೆ ಇಷ್ಟೇನಾ ಎಂದು ತುಂಬಾ ಜನ ಹೇಳುತ್ತಾರೆ, ಆದರೆ ಹಾಗೆ ಹೇಳುವವರಾರು ತಯಾರಿಸುವ ಹೊಸ ವಿಧಾನವನ್ನ ಕಂಡುಹಿಡಿಯುವ ಗೋಜಿಗೆ ಹೋಗುವುದಿಲ್ಲ. ಇನ್ನು ಕಲ್ಯಾಣಿ ಕಂಡುಹಿಡಿದಿರುವ ಈ AC ನ್ಯಾಷನಲ್ ಲೆವೆಲ್ ಗೆ ಸೆಲೆಕ್ಟ್ ಆಗಿದ್ದು ಈ ವಿನೂತನ ಆಲೋಚನೆಗೆ 50 ಬಹುಮಾನಗಳು ಕಲ್ಯಾಣಿ ಕೈಗೆ ಸೇರಿದೆ. ಇನ್ನು ಈ ಹುಡುಗಿ ಬಹಳ ಒಳ್ಳೆಯ ಹಾಡುಗಾರ್ತಿ ಕೂಡ ಆಗಿದ್ದು ಇಂಡಿಯನ್ ಐಡಿಯಲ್ ನಲ್ಲಿ ಮೂರನೇ ಹಂತದ ತನಕ ಹೋಗಿದ್ದಳು, ಕಲ್ಯಾಣಿಯಂತಹ ಹುಡುಗಿಗೆ ನಮ್ಮ ಬಹುಮಾನಗಳ ಬದಲಾಗಿ ಪ್ರೋತ್ಸಹ ಬೇಕಾಗಿದೆ, ಸ್ನೇಹಿತರೆ ಕಲ್ಯಾಣಿಯ ಈ ಸಾಧನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Student Kalyani

Please follow and like us:
error0
http://karnatakatoday.in/wp-content/uploads/2020/03/Student-Kalyani-1024x576.jpghttp://karnatakatoday.in/wp-content/uploads/2020/03/Student-Kalyani-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಓದು ಮುಗಿದ ನಂತರ ಜೀವನದಲ್ಲಿ ಏನಾದರು ಸಾಧನೆ ಮಾಡಬೇಕು ಅನ್ನುವ ಆಸೆ ಪ್ರತಿಯೊಬ್ಬರಲ್ಲೂ ಇರುವುದು ಸಾಮಾನ್ಯವಾಗಿದೆ, ಓದು ಮುಗಿದ ನಂತರ ಏನಾದರು ಸಾಧನೆ ಮಾಡುವ ಬದಲು ಓದುವಾಗಲೇ ಏನಾದರು ಸಾಧನೆ ಮಾಡೋಣ ಅನುವ ಛಲಕ್ಕೆ ಬಿದ್ದು ನಮ್ಮ ದೇಶ ಮಾತ್ರವಲ್ಲದೆ ಬೇರೆ ದೇಶದವರು ಮೆಚ್ಚುವ ಕೆಲಸವನ್ನ ಮಾಡಿದ 16 ವರ್ಷದ ಹುಡುಗಿಯ ಈ ಕಥೆಯನ್ನ ಕೇಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಿ. ಸಾಮಾನ್ಯವಾಗಿ ಒಂದು AC ಖರೀದಿ ಮಾಡಬೇಕು...Film | Devotional | Cricket | Health | India