ಸ್ನೇಹಿತರೆ ನಾವು ಹೇಳುತ್ತಿರುವ ಈತನ ಹೆಸರು ಬಾಲಕಿಶನ್, ಸ್ನೇಹಿತರೆ ಈತ ಒಬ್ಬ ನಟೋರಿಯಸ್ ಕ್ರಿಮಿನಲ್, ಸುಮಾರು 15 ಹೆಚ್ಚು ಕೇಸ್ ನಲ್ಲಿ ಮೂರೂ ರಾಜ್ಯದ ಪೊಲೀಸರು ಈತನಿಗಾಗಿ ಹುಡುಕುತ್ತಿದ್ದಾರೆ. ಇನ್ನೇನು ಸಿಕ್ಕೇ ಬಿಟ್ಟ ಅನ್ನುವಷ್ಟರಲ್ಲಿ ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದ ಈ ಬಾಲಕಿಶನ್, ಇನ್ನು ಈ ಕಳ್ಳನನ್ನ ಹಿಡಿದು ಕೊಟ್ಟವರಿಗೆ ಬಹುಮಾನವನ್ನ ಕೊಡುವುದಾಗಿ ಹೇಳಿದ್ದರು ಪೊಲೀಸರು, ಆದರೂ ಪ್ರಯೋಜನ ಆಗಲಿಲ್ಲ. ಮಾಧವಿ ಅಗ್ನಿಹೋತ್ರಿ, ಇವರು ಹೊಸದಾಗಿ ಆಯ್ಕೆಯಾದ 18 ವರ್ಷದ ಸಬ್ ಇನ್ಸ್ಪೆಕ್ಟರ್ ಮತ್ತು ನೂರು ಮಿಟರ ಶೂಟಿಂಗ್ ನಲ್ಲಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ ಇವರು. ಇವರ ಮಧ್ಯಪ್ರದೇಶದ ಪೊಲೀಸ್ ಸ್ಟೇಷನ್ ನಲ್ಲಿ ಕೆಲಸವನ್ನ ಮಾಡುತ್ತಿದ್ದಾರೆ, ಇನ್ನು ಮಾಧವಿ ಅವರು ಹೇಗಾದರೂ ಮಾಡಿ ಪ್ರತಿ ಭಾರಿ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸುತ್ತಿದ್ದ ಬಾಲಕಿಶನ್ ಅನ್ನುವಾತನನ್ನ ಬಂಧನ ಮಾಡಬೇಕು ಎಂದು ನಿರ್ಧಾರ ಮಾಡಿದರು.

ಇನ್ನು ಬಾಲಕಿಶನ್ ಬಗ್ಗೆ ಮಾಹಿತಿಯನ್ನ ಕಲೆಹಾಕಿದ ಇನ್ಸ್ಪೆಕ್ಟರ್ ಮಾಧವಿ ಅವರಿಗೆ ಬಾಲಕಿಶನ್ ಒಬ್ಬ ಕಾರ್ಕೋಟಕ ವಿಷ ಮತ್ತು ಯಾವಾಗಲು ತನ್ನ ಜೊತೆ ಒಂದು ಬಂಧೂಕನ್ನ ಇಟ್ಟುಕೊಂಡಿರುತ್ತಾನೆ ಎಂದು ಗೊತ್ತಾಯಿತು. ಇನ್ನು ಬಾಲಕಿಶನ್ ಹುಡುಗಿಯರು ಅಂದರೆ ಜೊಲ್ಲು ಸುರಿಸುತ್ತಾನೆ ಮತ್ತು ಅದೇ ಅವನ ಮೈನಸ್ ಪಾಯಿಂಟ್ ಅನ್ನುವುದು ಕೂಡ ಮಾಧವಿಗೆ ತಿಳಿಯಿತು, ಇನ್ನು ಬಾಲಕಿಶನ್ ಬೆನ್ನಿಗೆ ಬಿದ್ದ ಒಂದು ಕೀ ಪಾಯಿಂಟ್ ಕೂಡ ಗೊತ್ತಾಯಿತು. ಹಾಗಾದರೆ ಆ ಕೀ ಪಾಯಿಂಟ್ ಏನು ಮತ್ತು ಅದನ್ನ ಬಳಸಿಕೊಂಡು ಬೇಗೆ ಬಾಲಕಿಶನ್ ಎಂಬಾತನನ್ನ ಮಾಧವಿ ಅವರು ಹೇಗೆ ಬಂಧನ ಮಾಡಿದರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sub inspector Madhavi Agnihotri

ಹೌದು ಸ್ನೇಹಿತರೆ ಮಾಧವಿ ಅವರಿಗೆ ಬಾಲಕಿಶನ್ ಹೆಸರಿನಲ್ಲಿ ಒಂದು ಫೇಸ್ಬುಕ್ ಖಾತೆ ಇದೆ ಮತ್ತು ಆತ ಅದರಲ್ಲಿ ಸಕ್ರಿಯನಾಗಿರುತ್ತಾನೆ ಅನ್ನುವುದು ಇನ್ಸ್ಪೆಕ್ಟರ್ ಮಾಧವಿ ಅವರಿಗೆ ತಿಳಿಯಿತು, ಇನ್ನು ಸೆರೆ ಹಿಡಿಯುವಾಗ ಆತನ ಗುರುತು ಸಿಗಲಿ ಎಂದು ಈಗಿನ ಬಾಲಕಿಶನ್ ಫೋಟೋವನ್ನ ಫೇಸ್ ಬುಕ್ ನಲ್ಲಿ ತೆಗೆದುಕೊಂಡ ಮಾಧವಿ ಬೇಟೆ ಶುರು ಮಾಡಿದರು. ಇನ್ನು ರಾಧಾ ಅನ್ನುವ ಹೆಸರಿನಲ್ಲಿ ಫೇಸ್ಬುಕ್ ನಲ್ಲಿ ಚಾಟಿಂಗ್ ಆರಂಭ ಮಾಡಿದ ಮಾಧವಿ ಅವರು ನಾನು ದೆಹಲಿಯನ್ನ ಕೂಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು ಮತ್ತು ಇದನ್ನ ನಂಬಿದ ಬಾಲಕಿಶನ್ ಎಡಬಿಡದೆ ಚಾಟಿಂಗ್ ಮಾಡಿದ್ದಾನೆ ಮಾಧವಿ ಅವರ ಜೊತೆ. ಹೀಗೆ ಮೂರೂ ದಿನಗಳ ಕಾಲ ಮಾಧವಿ ಮತ್ತು ಬಾಲಕಿಶನ್ ಜೊತೆ ಚಾಟಿಂಗ್ ನಡೆಯಿತು, ಇನ್ನು ಮೂರೂ ದಿನದ ನಂತರ ನನ್ನನ್ನ ಮದುವೆ ಆಗುತ್ತೀಯ ಎಂದು ಕೇಳಿದನು ಬಾಲಕಿಶನ್, ಇನ್ನು ಅದನ್ನ ಸರಿ ಎಂದ ಮಾಧವಿ ನಾನು ಈ ವಾರ ನನ್ನ ಹಳ್ಳಿಗೆ ಹೋಗುತ್ತಿರುವುದಾಗಿ ಹೇಳಿದರು.

ಇನ್ನು ಹಳ್ಳಿಯ ಪಕ್ಕದಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ಬಾ ನಾನು ನಿನ್ನ ಭೇಟಿ ಮಾಡುತ್ತೇನೆ ಎಂದು ಹೇಳಿದನು ಬಾಲಕಿಶನ್, ಅಲ್ಲಿಗೆ ಬಾಲಕಿಶನ್ ಬಲೆಗೆ ಬೀಳುವುದು ಖಚಿತವಾಯಿತು. ಸ್ವಲ್ಪ ಜನ ಪೊಲೀಸರು ಸಿವಿಲ್ ಡ್ರೆಸ್ ನಲ್ಲಿ ಇದ್ದರೆ ಇನ್ನು ಸ್ವಲ್ಪ ಜನ ಪೊಲೀಸರು ಮಾಧವಿ ಅವರ ನೆಂಟರ ಹಾಗೆ ಮಾಧವಿ ಅವರ ಜೊತೆ ಇದ್ದರೂ. ಇನ್ನು ಘಮಘಮ ಸೆಂಟ್ ಹಾಕಿಕೊಂಡು ಮದುವೆಯ ಕನಸನ್ನ ಕಾಣುತ್ತ ಬೈಕ್ ನಲ್ಲಿ ಬಂದನು ಬಾಲಕಿಶನ್, ಇನ್ನು ದೇವಸ್ಥಾನಕ್ಕೆ ಬಂದ ಬಾಲಕಿಶನ್ ಬೈಕ್ ಇಳಿಯುತ್ತಿದ್ದತೆ ಆತನನ್ನ ಸುತ್ತುವರೆದ ಪೊಲೀಸರು ಬಾಲಕಿಶನ್ ನನ್ನ ಬಂಧನ ಮಾಡಿದ್ದಾರೆ, ಸ್ನೇಹಿತರೆ ಇನ್ಸ್ಪೆಕ್ಟರ್ ಮಾಧವಿ ಅವರ ಈ ಆಲೋಚನೆಗೆ ನಾವು ಭೇಷ್ ಅನ್ನಲೇಬೇಕು.

Sub inspector Madhavi Agnihotri

Please follow and like us:
error0
http://karnatakatoday.in/wp-content/uploads/2019/12/Madhavi-Agnihotri-1024x576.jpghttp://karnatakatoday.in/wp-content/uploads/2019/12/Madhavi-Agnihotri-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ನಾವು ಹೇಳುತ್ತಿರುವ ಈತನ ಹೆಸರು ಬಾಲಕಿಶನ್, ಸ್ನೇಹಿತರೆ ಈತ ಒಬ್ಬ ನಟೋರಿಯಸ್ ಕ್ರಿಮಿನಲ್, ಸುಮಾರು 15 ಹೆಚ್ಚು ಕೇಸ್ ನಲ್ಲಿ ಮೂರೂ ರಾಜ್ಯದ ಪೊಲೀಸರು ಈತನಿಗಾಗಿ ಹುಡುಕುತ್ತಿದ್ದಾರೆ. ಇನ್ನೇನು ಸಿಕ್ಕೇ ಬಿಟ್ಟ ಅನ್ನುವಷ್ಟರಲ್ಲಿ ಹೇಗಾದರೂ ಮಾಡಿ ತಪ್ಪಿಸಿಕೊಂಡು ಹೋಗುತ್ತಿದ್ದ ಈ ಬಾಲಕಿಶನ್, ಇನ್ನು ಈ ಕಳ್ಳನನ್ನ ಹಿಡಿದು ಕೊಟ್ಟವರಿಗೆ ಬಹುಮಾನವನ್ನ ಕೊಡುವುದಾಗಿ ಹೇಳಿದ್ದರು ಪೊಲೀಸರು, ಆದರೂ ಪ್ರಯೋಜನ ಆಗಲಿಲ್ಲ. ಮಾಧವಿ ಅಗ್ನಿಹೋತ್ರಿ, ಇವರು ಹೊಸದಾಗಿ ಆಯ್ಕೆಯಾದ 18...Film | Devotional | Cricket | Health | India