ಆರನೇ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಸುಜಾತ ಅವರಿಗೆ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಗೊತ್ತಾ.
ಬಿಗ್ ಬಾಸ್ ಕನ್ನಡ ಶುರುವಾಗಿ ಆರು ವಾರಗಳು ಕಳೆದೆ ಬಿಟ್ಟಿದೆ, ನಿನ್ನೆ ಮೊನ್ನೆ ಶುರುವಾಗಿದ್ದು ಅನ್ನುವ ಹಾಗೆ ಇದ್ದ ಬಾಸ್ ಕನ್ನಡ ಸೀಸನ್ 7 ನ ಆರನೇ ವಾರ ಈಗ ಮುಗಿದಿದೆ, ಇನ್ನು ವಾರಗಳು ಕಳೆದಂತೆ ಮನೆಯಿಂದ ಘಟಾನುಘಟಿ ಸ್ಪರ್ಧಿಗಳು ಆಚೆ ಬರುತ್ತಿದ್ದಾರೆ, ಇನ್ನು ಜನರ ವೋಟ್ ಮತ್ತು ಅವರು ಆಡಿದ ಆಟವನ್ನ ಆಧಾರವಾಗಿ ಇಟ್ಟುಕೊಂಡು ಒಬ್ಬೊಬ್ಬರನ್ನಾಗಿಯೇ ಮನೆಯಿಂದ ಆಚೆ ಹಾಕಲಾಗುತ್ತಿದೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಂಡು ಬಹಳ ನಾಜೂಕಾಗಿ ಆಟವನ್ನ ಆಡುತ್ತಿದ್ದಾರೆ, ಇನ್ನು ಆರನೇ ಸ್ಪರ್ಧಿ ಮನೆಯಿಂದ ಆಚೆ ಬಂದಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು ಈ ವಾರ ಎಲಿಮಿನೇಟ್ ಆದ ಸ್ಪರ್ಧಿಯನ್ನ ಮನೆಯಿಂದ ಆಚೆ ಕಳುಹಿಸಿದ್ದಾರೆ.
ಹೌದು ಕಿರುತೆರೆ ನಟಿ ಸುಜಾತ ಅವರು ಆರನೇ ವಾರ ಮನೆಯಿಂದ ಆಚೆ ಬಂದಿದ್ದಾರೆ, ಸುಜಾತ ಅವರಿಗೆ ಕಡಿಮೆ ಮತಗಳು ಬಂದ ಕಾರಣ ಕಳೆದ ವಾರದ ಸುಜಾತ ಅವರು ಮನೆಯಿಂದ ಆಚೆ ಬಂದಿದ್ದಾರೆ. ಹಾಗಾದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸುಜಾತ ಅವರು ಪಡೆದ ಸಂಭಾವನೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ವಾರ ಯಾರು ಹೊರಗೆ ಬರಬೇಕಿತ್ತು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ವಾರಗಳು ಕಳೆಯುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಒಡಕುಗಳು ಕಾಣಿಸಿಕೊಂಡಿದ್ದು ಆಟ ರೋಚಕ ಹಂತವನ್ನ ತಲುಪಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ಕಳೆದ ವಾರ ಜೈ ಜಗದೀಶ್ ಅವರು ಮನೆಯಿಂದ ಹೊರಗೆ ಬಂದರೆ ಈ ವಾರ ಸುಜಾತ ಅವರು ಮನೆಯಿಂದ ಹೊರಗೆ ಬಂದಿದ್ದಾರೆ, ಹೌದು ವಾರದ ನಾಮಿನೇಷನ್ ನಲ್ಲಿ ಐದು ಜನ ಸ್ಪರ್ಧಿಗಳು ಅಂದರೆ ಚಂದನ್ ಆಚಾರ್, ದೀಪಿಕಾ ದಾಸ್, ಕುರಿ ಪ್ರತಾಪ್, ಕಿಶನ್ ಮತ್ತು ಸುಜಾತ ಅವರು ಮನೆಯಿಂದ ಹೊರಗೆ ಹೋಗಲು ನೊಮಿನೇಟ್ ಆಗಿದ್ದು ಕಡೆಯಲ್ಲಿ ಸುಜಾತ ಅವರು ಮನೆಯಿಂದ ಆಚೆ ಬಂದಿದ್ದಾರೆ. ಇನ್ನು ಆರು ಮನೆಯಲ್ಲಿ ಇದ್ದ ಸುಜಾತ ಅವರಿಗೆ ಬಿಗ್ ಬಾಸ್ ಕಡೆಯಿಂದ ಸಿಕ್ಕ ಒಟ್ಟು ಸಂಭಾವನೆ ಎಷ್ಟು ಅಂತ ನೀವೇ ನೋಡಿ, ವಾರಕ್ಕೆ 40 ಸಾವಿರದಂತೆ ಆರು ವಾರ ಮನೆಯಲ್ಲಿ ಇದ್ದ ನಟಿ ಸುಜಾತ ಅವರಿಗೆ ಬಿಗ್ ಬಾಸ್ ಕಡೆಯಿಂದ 2.40 ಲಕ್ಷ ರೂಪಾಯಿ ಸಂಭಾವನೆ ಸಿಕ್ಕಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.
ಆರಂಭದಲ್ಲಿ ಸ್ವಲ್ಪ ಮಂಕಾಗಿಯೇ ಸಾಗುತ್ತಿದ್ದ ಬಿಗ್ ಬಾಸ್ ಈಗ ಬಹಳ ಕುತೂಹಲಕಾರಿ ಹಂತವನ್ನ ತಲುಪಿದ್ದು ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ದಿಗಳಿಗೆ ಹೆಚ್ಚಿನ ಮತವನ್ನ ಹಾಕುತ್ತಿದ್ದಾರೆ. ಇನ್ನು ದಿನಗಳು ಕಳೆದಂತೆ ಬಿಗ್ ಬಾಸ್ ಆಟ ಬಹಳ ರೋಚಕ ಘಟ್ಟವನ್ನ ತಲುಪುತ್ತಿದ್ದು ಮುಂದಿನ ದಿನಗಳಲ್ಲಿ ಒಬ್ಬೊಬ್ಬರೇ ಮನೆಯಿಂದ ಆಚೆ ಬರಲಿದ್ದಾರೆ. ಸ್ನೇಹಿತರೆ ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಿಂದ ಮುಂದಿನ ವಾರ ಯಾರು ಆಚೆ ಬರಬೇಕು ಮತ್ತು ಈ ಭಾರಿ ಬಿಗ್ ಬಾಸ್ ವಿನ್ನರ್ ಯಾರಾಗಬಹುದು ಅನ್ನುವುದರ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಬಿಗ್ ಬಾಸ್ ಪ್ರೇಕ್ಷಕರಿಗೆ ತಲುಪಿಸಿ.

Leave a Reply