Sumalatha in big problem

ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ದೇಶವೇ ಕಾದು ಕುಳಿತ್ತಿದ್ದ ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಪ್ರಭಾವಿ ನಿಖಿಲ್ ಅವರ ಸೋಲಿಸಿ ಗೆಲುವಿನ ಖುಷಿಯಲ್ಲಿ ಇದ್ದ ಸುಮಲತಾ ಅವರಿಗೆ ಈಗ ದೊಡ್ಡ ಸಮಸ್ಯೆ ಎದುರಾಗಿದೆ.

ಎದುರಾಳಿಗಳು ಸುಮ್ಮನೆ ಕೂರದೆ ಸುಮಲತಾ ಅವರಿಗೆ ಈಗ ಜವಾಬ್ದಾರಿಯನ್ನ ಹೇರುತ್ತಿದ್ದಾರೆ, ಈಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆ ಏನು ಅಂದರೆ ಸುಮಲತಾ ಈ ಸಮಸ್ಯೆಯನ್ನ ಬಗೆಹರಿಸುತ್ತಾರಾ ಎನ್ನುವುದು.

ಹಾಗಾದರೆ ಆ ಜವಾಬ್ದಾರಿಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sumalatha in big problem

ಹೌದು ಮೊದಲ ಬಾರಿಗೆ ಚುನಾವಣೆಗೆ ಎಂಟ್ರಿ ಕೊಟ್ಟು ಈಗ ಲೋಕ ಸಭಾ ಸದಸ್ಯರಾಗಿ ಆಯ್ಕೆ ಆಗಿರುವ ಸುಮಲತಾ ಅಂಬರೀಷ್ ಈಗ ಆರಂಭದಲ್ಲೇ ದೊಡ್ಡ ಜವಾಬ್ದಾರಿಯ ಕೆಲಸ ಎದುರಾಗಿದೆ.

ಹೌದು ಮಂಡ್ಯಾದ ಜೀವ ನದಿಯಾಗಿರುವ ಕಾವೇರಿ ನೀರನ್ನ ಈಗ ಬಿಡಬೇಕಾದ ವಿಚಾರವಾಗಿ ಕಾವೇರಿ ನಿರ್ವಾಣ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆಯನ್ನ ಕೊಟ್ಟಿದ್ದು ತಮಿಳುನಾಡಿಗೆ ತಕ್ಷಣವೇ 9.19 ಟಿಎಂಸಿ ನೀರನ್ನ ಬಿಡಬೇಕು ಎಂದು ಆದೇಶ ಮಾಡಿದೆ.

ಇನ್ನು ಇತ್ತಕಡೆ ಮಂಡ್ಯ, ಮೈಸೂರು ಹಾಗು ಬೆಂಗಳೂರಿನ ಜನರು ಕುಡಿಯಲು ನೀರಿಲ್ಲದೆ ಪರದಾಡುತ್ತಿದ್ದರೆ ತಮಿಳು ನಾಡಿನ ಜನರಿಗೆ ಕೃಷಿಗಾಗಿ ಕಾವೇರಿ ನೀರನ್ನ ಬಿಡಬೇಕು ಎಂದು ಕೇಳುತ್ತಿರುವುದು ನಿಜಕ್ಕೂ ವಿಷಾದನೀಯ.

Sumalatha in big problem

ಈ ಬಗ್ಗೆ ಈಗಾಗಲೇ ತಮಿಳುನಾಡಿನ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನ ತಂದಿದ್ದು ನಟ ರಜನೀಕಾಂತ್ ಕೂಡ ಕರ್ನಾಟಕ ಆದಷ್ಟು ಬೇಗ ನೀರು ಬಿಡಬೇಕು ಮತ್ತು ನಾನು ತಮಿಳುನಾಡಿನ ಪರ ಎಂದು ಹೇಳಿದ್ದಾರೆ.

ಇನ್ನು ಸಂಸದೆ ಸುಮಲತಾ ಅವರು ಈ ವಿಚಾರದಲ್ಲಿ ಆದಷ್ಟು ಬೇಗ ಮಂಡ್ಯದ ಜನರಿಗೆ ನ್ಯಾಯವನ್ನ ಒದಗಿಸಬೇಕು ಮತ್ತು ಯಾವುದೇ ಕಾರಣಕ್ಕೂ ಕಾವೇರಿ ನೀರನ್ನ ತಮಿಳು ನಾಡಿಗೆ ಬಿಡದೆ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಸುಮಲತಾ ಮೇಲೆ ಇದೆ.

ಹೌದು ಸುಮಲತಾ ಅವರು ಈ ವಿಚಾರದಲ್ಲಿ ಮಂಡ್ಯಾದ ಜನರಿಗೆ ಯಾವ ರೀತಿಯ ನ್ಯಾಯ ಒದಗಿಸುತ್ತಾರೆ ಅನ್ನುವುದನ್ನ ನಾವು ಕಾದು ನೋಡಬೇಕಾಗಿದೆ, ಸ್ನೇಹಿತರೆ ಸುಮಲತಾ ಈ ಸಮಸ್ಯೆ ಬಗೆಹರಿಸುತ್ತಾರಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Sumalatha in big problem

Please follow and like us:
error0
http://karnatakatoday.in/wp-content/uploads/2019/05/Sumalatha-in-big-problem-1024x576.jpghttp://karnatakatoday.in/wp-content/uploads/2019/05/Sumalatha-in-big-problem-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಕರ್ನಾಟಕ ಮಾತ್ರವಲ್ಲದೆ ಇಡೀ ಭಾರತ ದೇಶವೇ ಕಾದು ಕುಳಿತ್ತಿದ್ದ ಮಂಡ್ಯ ಲೋಕ ಸಭಾ ಚುನಾವಣೆಯಲ್ಲಿ ಪ್ರಭಾವಿ ನಿಖಿಲ್ ಅವರ ಸೋಲಿಸಿ ಗೆಲುವಿನ ಖುಷಿಯಲ್ಲಿ ಇದ್ದ ಸುಮಲತಾ ಅವರಿಗೆ ಈಗ ದೊಡ್ಡ ಸಮಸ್ಯೆ ಎದುರಾಗಿದೆ. ಎದುರಾಳಿಗಳು ಸುಮ್ಮನೆ ಕೂರದೆ ಸುಮಲತಾ ಅವರಿಗೆ ಈಗ ಜವಾಬ್ದಾರಿಯನ್ನ ಹೇರುತ್ತಿದ್ದಾರೆ, ಈಗ ಜನರಲ್ಲಿ ಕಾಡುತ್ತಿರುವ ಪ್ರಶ್ನೆ ಏನು ಅಂದರೆ ಸುಮಲತಾ ಈ ಸಮಸ್ಯೆಯನ್ನ ಬಗೆಹರಿಸುತ್ತಾರಾ ಎನ್ನುವುದು. ಹಾಗಾದರೆ ಆ ಜವಾಬ್ದಾರಿಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ...Film | Devotional | Cricket | Health | India