Sumalatha Statement of Kurukshetra Movie

ಸ್ನೇಹಿತರೆ ಕುರುಕ್ಷೇತ್ರ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆಕಂಡು ಅದ್ದೂರಿ ಪ್ರದರ್ಶನವನ್ನ ಕಾಣುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಕುರುಕ್ಷೇತ್ರ ಚಿತ್ರವನ್ನ ನೋಡಿದ ಪ್ರತಿಯೊಬ್ಬರೂ ಕೂಡ ಚಿತ್ರವನ್ನ ಹಾಡಿ ಹೊಗಳುತ್ತಿದ್ದಾರೆ. ಇನ್ನು ಕುರುಕ್ಷೇತ್ರ ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶವನ್ನ ಕಾಣುತ್ತಿದೆ, ದೊಡ್ಡ ದೊಡ್ಡ ಸ್ಟಾರ್ ನಟರನ್ನ ಒಳಗೊಂಡ ಕುರುಕ್ಷೇತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡನೆಯ ಮಾತು ಇಲ್ಲ ಎಂದು ಹೇಳುತ್ತಿದ್ದಾರೆ ಚಿತ್ರ ನೋಡಿದ ಅಭಿಮಾನಿಗಳು.

ಇನ್ನು ಈ ಚಿತ್ರ ರೆಬಲ್ ಸ್ಟಾರ್ ಅಂಬರೀಷ್ ಅವರು ನಟನೆ ಮಾಡಿರುವ ಮಾಡಿರುವ ಕೊನೆಯ ಚಿತ್ರ ಕೂಡ ಹೌದು, ಇನ್ನು ಅದೆಷ್ಟೋ ಜನರ ಎಂಬಿ ಅಭಿಮಾನಿಗಳು ಅಂಬರೀಷ್ ಅವರ ಅಮೋಘ ನಟನೆಯನ್ನ ನೋಡಿ ಕಣ್ಣು ತುಂಬಿಕೊಂಡರು.

Sumalatha Statement of Kurukshetra Movie

ಇನ್ನು ಚಿತ್ರವನ್ನ ಸುಮಲತಾ ಅವರು ದರ್ಶನ್ ಅವರ ಕುರಿತು ಏನು ಹೇಳಿದ್ದಾರೆ ಗೊತ್ತಾ, ಹಾಗಾದರೆ ಸುಮಲತಾ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಕುರುಕ್ಷೇತ್ರ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇನ್ನು ಚಿತ್ರವನ್ನ ನೋಡಿದ ಸುಮಲತಾ ಅವರು ದರ್ಶನ್ ಅವರ ನಟನೆಯನ್ನ ಹಾಡಿ ಹೊಗಳಿದ್ದಾರೆ, ದುರ್ಯೋಧನ ಅಂದರೆ ದರ್ಶನ್, ದರ್ಶನ್ ಅಂದರೆ ದುರ್ಯೋಧನ ಎಂದು ಹೇಳಿದ್ದಾರೆ ಸುಮಲತಾ.

ಚಿತ್ರದಲ್ಲಿ ದರ್ಶನ್ ಅವರ ದೇಹಾಕೃತಿ, ನಡೆ, ನೋಡುವ ನೋಟ, ಮಾತನಾಡುವ ಗಾಂಭೀರ್ಯತೆ ತುಂಬಾ ಚನ್ನಾಗಿ ಚಿತ್ರದಲ್ಲಿ ಮೂಡಿಬಂದಿದೆ ಮತ್ತು ಅಂಬರೀಷ್ ಅವರನ್ನ ಕೊನೆಯ ಭಾರಿ ಪರದೆಯ ಮೇಲೆ ನೋಡುವ ಅವಕಾಶ ನನ್ನ ಪಾಲಿಗೆ ಒದಗಿ ಬಂದಿದ್ದು ನನಗೆ ತುಂಬಾ ಖುಷಿಯಾಗಿದೆ ಎಂದು ಹೇಳಿದರು ಸುಮಲತಾ.

Sumalatha Statement of Kurukshetra Movie

ಇನ್ನು ಅಂಬರೀಷ್ ಅವರಿಗೆ ಚಿತ್ರದಲ್ಲಿ ನಟನೆಯನ್ನ ಮಾಡಲು ಇಷ್ಟ ಇರಲಿಲ್ಲ, ಆದರೆ ಮುನಿರತ್ನ ಅವರು ನಮ್ಮ ಮನೆಗೆ ಬಂದು ಅಂಬರೀಷ್ ಅವರ ಬಳಿ ಹಠ ಮಾಡಿದರು ಮತ್ತು ನೀವೇ ನಟನೆ ಮಾಡಲಿಲ್ಲ ಅಂದರೆ ನಾನು ಚಿತ್ರವನ್ನೇ ಮಾಡುವುದಿಲ್ಲ ಎಂದು ಹೇಳಿದರು ಹಾಗೆ ಅಂಬರೀಷ್ ಅವರಿಗೆ ಗೊತ್ತಿಲ್ಲದ ಹಾಗೆ ಕಾಸ್ಟ್ಯೂಮ್ ಗಳನ್ನ ರೆಡಿ ಮಾಡಿಕೊಂಡು ಮನೆಗೆ ಬಂತಿದ್ದರು ಮುನಿರತ್ನ ಅವರು ಎಂದು ಹೇಳಿ ಅಂಬರೀಷ್ ಅವರನ್ನ ನೆನೆಸಿಕೊಂಡು ಭಾವುಕರಾದರು ಸುಮಲತಾ ಅವರು.

ಇನ್ನು ಅರ್ಜುನ್ ಸರ್ಜಾ ಅವರು ಚಿತ್ರದಲ್ಲಿ ಹೃದಯ ಮುಟ್ಟುವ ನಟನೆ ಮಾಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ನಿಖಿಲ್ ಅವರು ಕೂಡ ತುಂಬಾ ಚನ್ನಾಗಿ ನಟನೆಯನ್ನ ಮಾಡಿದ್ದಾರೆ, ಇನ್ನು ರವಿಚಂದ್ರ ಅವರು ಕೂಡ ಶ್ರೀ ಕೃಷ್ಣನ ಪಾತ್ರದಲ್ಲಿ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ ಮತ್ತು ಎಲ್ಲಾ ನಟರು ಕೂಡ ಅದ್ಭುತವಾಗಿ ನಟನೆಯನ್ನ ಮಾಡಿದ್ದಾರೆ ಎಂದು ಹೇಳಿ ಚಿತ್ರವನ್ನ ಹಾಡಿ ಹೊಗಳಿದ್ದಾರೆ ಸುಮಲತಾ ಅವರು.

Sumalatha Statement of Kurukshetra Movie

Please follow and like us:
error0
http://karnatakatoday.in/wp-content/uploads/2019/08/Sumalatha-statement-of-Kurukshetra-Movie-1024x576.jpghttp://karnatakatoday.in/wp-content/uploads/2019/08/Sumalatha-statement-of-Kurukshetra-Movie-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸ್ನೇಹಿತರೆ ಕುರುಕ್ಷೇತ್ರ ಚಿತ್ರ ನಿನ್ನೆ ರಾಜ್ಯಾದ್ಯಂತ ತೆರೆಕಂಡು ಅದ್ದೂರಿ ಪ್ರದರ್ಶನವನ್ನ ಕಾಣುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಕುರುಕ್ಷೇತ್ರ ಚಿತ್ರವನ್ನ ನೋಡಿದ ಪ್ರತಿಯೊಬ್ಬರೂ ಕೂಡ ಚಿತ್ರವನ್ನ ಹಾಡಿ ಹೊಗಳುತ್ತಿದ್ದಾರೆ. ಇನ್ನು ಕುರುಕ್ಷೇತ್ರ ಚಿತ್ರ ಬಿಡುಗಡೆಯಾದ ಎಲ್ಲಾ ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶವನ್ನ ಕಾಣುತ್ತಿದೆ, ದೊಡ್ಡ ದೊಡ್ಡ ಸ್ಟಾರ್ ನಟರನ್ನ ಒಳಗೊಂಡ ಕುರುಕ್ಷೇತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡನೆಯ ಮಾತು ಇಲ್ಲ ಎಂದು ಹೇಳುತ್ತಿದ್ದಾರೆ ಚಿತ್ರ ನೋಡಿದ ಅಭಿಮಾನಿಗಳು. ಇನ್ನು...Film | Devotional | Cricket | Health | India