ಹಿಂದೂ ಧರ್ಮದ ಶಾಸ್ತ್ರಗಳು ಮತ್ತು ಧರ್ಮಗ್ರಂಥಗಳು ಹೇಗೆ ಆಗಿನ ಕಾಲದ ಜನರ ಜೀವನಕ್ಕೆ ಮಾದರಿಯಾಗುತ್ತಿದ್ದವೋ ಅದೇ ರೀತಿ ಇಂದು ಕೂಡ ಮುಖ್ಯವಾಗಿವೆ. ನಮ್ಮ ಪೂರ್ವಜರು ಆ ಸಮಯದಲ್ಲಿ ಇಟ್ಟಿದ್ದ ಕೆಲವು ಶಾಸ್ತ್ರಗಳು ಇಂದಿಗೂ ಹಲವರ ವೈಜ್ಞಾನಿಕ ಮಹತ್ವ ಪಡೆದುಕೊಂಡಿದೆ. ನಮ್ಮ ಪೂರ್ವಜರು ಬಹಳ ಓದಿಲ್ಲ ಅವರಿಗೇನು ತಿಳಿದಿಲ್ಲ ಎಂದರೆ ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ. ಯಾವುದೇ ತಂತ್ರಜ್ಞಾನದ ಸಹಾಯ ಇಲ್ಲದೆ ಅಂದಿನ ಕಾಲದ ಶಾಸ್ತ್ರಜ್ಞರು ಹಾಗು ಭಾರತದ ಅದೆಷ್ಟೋ ಗಣಿತಜ್ಞರು ಭೂಮಿಯಿಂದ ಸೂರ್ಯನಿಗಿರುವ ದೂರ, ಭೂಮಿಯ ಚಾಲನೆ, ದೈನಂದಿನ ಆಗು ವಾರ್ಷಿಕ ಚಲನೆಯ ಬಗ್ಗೆ ನಿಖರ ಮಾಹಿತಿ ನೀಡಿದ್ದರು.

ಆದರೆ ಇಂದಿನ ತಲೆಮಾರಿನವರು ತಮ್ಮ ಜೀವನದಲ್ಲಿ ಅವರಿಗೆ ಸ್ಥಾನ ನೀಡುವುದನ್ನು ಮರೆತಿದ್ದಾರೆ, ಆದರೆ ಅವರು ಕೊಟ್ಟ ಬರೆದ ಆದರ್ಶಗಳು ಮತ್ತು ತತ್ವಗಳು, ವೈದಿಕ ಧರ್ಮದ ಪರಂಪರೆಯೆಂದು ಪರಿಗಣಿಸಲ್ಪಟ್ಟ ಈ ಧರ್ಮಗ್ರಂಥಗಳು ಇಂದಿಗೂ ಮಹತ್ವ ಉಳಿಸಿಕೊಂಡಿದೆ. ಅದೇನೇ ಇರಲಿ ನಮ್ಮ ಹಿಂದೂ ಧರ್ಮದ ಪ್ರಕಾರ ಸೂರ್ಯ ಮುಳುಗುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕೂಡ ಈ ಕೆಲಸಗಳನ್ನು ಮಾಡಲೇಬಾರದಂತೆ. ಹೀಗೆ ಮಾಡುವುದರಿಂದ ಅವರ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಿಕೊಂಡು ಮನೆಯ ವಾತಾವರಣವನ್ನು ಅಶಾಂತಿಯಾಗಿ ಮಾಡುತ್ತದೆ. ಹಾಗು ಜೀವನದಲ್ಲಿ ಎಂದು ಕಾಣದ ದಾರಿದ್ರ್ಯತನ ನಿಧಾನವಾಗಿ ಮನೆಯನ್ನು ಆವರಿಸುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ, ದಿನದ ಅಂತ್ಯದಲ್ಲಿ ತುಳಸಿಗೆ ನೀರನ್ನು ಅರ್ಪಿಸಬಾರದು ಅಥವಾ ಅದರ ಎಲೆಗಳನ್ನು ಮುಟ್ಟಬಾರದು. ಆದರೆ ಸಂಜೆ ನೀವು ಖಂಡಿತವಾಗಿಯೂ ತುಳಸಿಯ ಮುಂದೆ ದೀಪವನ್ನು ಬೆಳಗಿಸಬಹುದು. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಸೂರ್ಯಾಸ್ತದ ನಂತರ ತುಳಸಿ ಸಸ್ಯವನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ನಂತರ ತುಳಸಿ ಸಸ್ಯವನ್ನು ಸ್ಪರ್ಶಿಸುವುದು ದುರದೃಷ್ಟ ಮತ್ತು ಬಡತನವನ್ನು ತರುತ್ತದೆ

ಸೂರ್ಯ ಮುಳುಗಿದ ನಂತರ ಮನೆಯಲ್ಲಿ ಕಸ ಗುಡಿಸಿದರೆ ಅದು ಮನೆಯ ಆರ್ಥಿಕತೆಯನ್ನು ಕುಗ್ಗಿಸುತ್ತದೆ. ಋಣಾತ್ಮಕ ಅಂಶಗಳು ನಿಮ್ಮ ಮನೆಯನ್ನು ಸೇರಿಕೊಳ್ಳುತ್ತವೆ. ದಿನದ ಅಂತ್ಯದ ಸಂದರ್ಭದಲ್ಲಿ ಯಾರೊಂದಿಗೂ ಕೂಡ ಜಗಳ ಆಡಬೇಡಿ, ಯಾರಿಗೂ ಕೂಡ ಕೆಟ್ಟದಾಗಿ ನಡೆದುಕೊಳ್ಳಬೇಡಿ. ಧಾರ್ಮಿಕವಾಗಿ ಸಂಜೆ ಸಮಯ ಬಹಳ ಮುಖ್ಯ. ದೇವರ ಪೂಜೆಗೆ ಈ ಸಂಪೂರ್ಣ ಸಮಯವನ್ನು ನಿಗದಿಪಡಿಸಲಾಗಿದೆ, ಈ ಸಮಯದಲ್ಲಿ ಯಾರೊಂದಿಗೂ ಕೋಪಗೊಳ್ಳುವುದು ಅಥವಾ ಜಗಳವಾಡುವುದು ಸರಿಯಲ್ಲ.

ಸಂಜೆ ಮಲಗುವ ಅಭ್ಯಾಸ ಇದ್ದರೆ ಬಿಟ್ಟುಬಿಡಿ, ಶಾಸ್ತ್ರದಲ್ಲಿ ಇದು ನಿಷಿದ್ಧ. ವಯಸ್ಸಾದ ಮತ್ತು ಗರ್ಭಿಣಿ ಮಹಿಳೆ ಸಂಜೆ ಮಲಗಬಹುದು.    ಸೂರ್ಯಾಸ್ತದ ಸಮಯದಲ್ಲಿ, ನಕಾರಾತ್ಮಕ ಶಕ್ತಿಯು ನಿದ್ರೆಯಿಂದ ಬರುತ್ತದೆ ಮತ್ತು ದುರದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಇದು ಬೊಜ್ಜು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನೂ ಉಂಟುಮಾಡುತ್ತದೆ.  ಧರ್ಮಗ್ರಂಥಗಳ ಪ್ರಕಾರ, ಸಂಪತ್ತಿನ ದೇವತೆಯಾದ ಲಕ್ಷ್ಮಿ ಸಂಜೆ ಮಲಗುವವರ ಮೇಲೆ ಕೋಪಗೊಳ್ಳುತ್ತಾರೆ. ಅಂತಹ ಮನೆಯಲ್ಲಿ ಲಕ್ಷ್ಮಿ ವಾಸ ಮಾಡಲು ಇಚ್ಚಿಸಲ್ಲ.

ಸರಿಯಾದ ಜೀವನಶೈಲಿಯನ್ನು ಅನುಸರಿಸಲು ಸನಾತನ ಧರ್ಮ ಯಾವಾಗಲೂ ಮನುಷ್ಯನಿಗೆ ಕಲಿಸಿದೆ. ಹಿಂದೂ ಧರ್ಮಶಾಸ್ತ್ರದಲ್ಲಿನ ಮೇಲಿನ ತತ್ವಗಳನ್ನು ಜೀವನಶೈಲಿಗೆ ಅಳವಡಿಸಿಕೊಂಡರೆ, ಮನುಷ್ಯನು ಆರಾಮದಾಯಕ ಜೀವನವನ್ನು ಬಹಳ ಮಟ್ಟಿಗೆ ನಡೆಸಬಹುದು. ಸೂರ್ಯ ಮುಳುಗಿದ ಮೇಲೆ ಈ ಕೆಲಸ ಮಾಡಬೇಡಿ.

 

Please follow and like us:
error0
http://karnatakatoday.in/wp-content/uploads/2020/02/do-not-do-this-in-evening-1024x576.jpghttp://karnatakatoday.in/wp-content/uploads/2020/02/do-not-do-this-in-evening-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಹಿಂದೂ ಧರ್ಮದ ಶಾಸ್ತ್ರಗಳು ಮತ್ತು ಧರ್ಮಗ್ರಂಥಗಳು ಹೇಗೆ ಆಗಿನ ಕಾಲದ ಜನರ ಜೀವನಕ್ಕೆ ಮಾದರಿಯಾಗುತ್ತಿದ್ದವೋ ಅದೇ ರೀತಿ ಇಂದು ಕೂಡ ಮುಖ್ಯವಾಗಿವೆ. ನಮ್ಮ ಪೂರ್ವಜರು ಆ ಸಮಯದಲ್ಲಿ ಇಟ್ಟಿದ್ದ ಕೆಲವು ಶಾಸ್ತ್ರಗಳು ಇಂದಿಗೂ ಹಲವರ ವೈಜ್ಞಾನಿಕ ಮಹತ್ವ ಪಡೆದುಕೊಂಡಿದೆ. ನಮ್ಮ ಪೂರ್ವಜರು ಬಹಳ ಓದಿಲ್ಲ ಅವರಿಗೇನು ತಿಳಿದಿಲ್ಲ ಎಂದರೆ ನಮ್ಮಷ್ಟು ಮೂರ್ಖರು ಮತ್ತೊಬ್ಬರಿಲ್ಲ. ಯಾವುದೇ ತಂತ್ರಜ್ಞಾನದ ಸಹಾಯ ಇಲ್ಲದೆ ಅಂದಿನ ಕಾಲದ ಶಾಸ್ತ್ರಜ್ಞರು ಹಾಗು ಭಾರತದ ಅದೆಷ್ಟೋ ಗಣಿತಜ್ಞರು...Film | Devotional | Cricket | Health | India