ತಮಿಳಿನ ಟಾಪ್ ನಟ ಸೂರ್ಯ ಅವರು ಖ್ಯಾತ ನಟ ಶಿವಕುಮಾರ್ ಅವರ ಮಗ, ಶಿವಕುಮಾರ್ ಅವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳನ್ನ ಅಭಿನಯ ಮಾಡಿದ್ದಾರೆ, ಆದರೆ ಎಷ್ಟೇ ಸಿನಿಮಾಗಳಲ್ಲಿ ನಟನೆ ಮಾಡಿದರೂ ಕೂಡ ಅವರ ಕೈಯಲ್ಲಿ ಯಾವಾಗಲು ಹಣ ಇರುತ್ತಿರಲಿಲ್ಲ. ಶಿವಕುಮಾರ್ ಅವರದ್ದು ಮಧ್ಯಮ ವರ್ಗದ ಕುಟುಂಬ, ಶಿವಕುಮಾರ್ ಅವರ ಕೈಯಲ್ಲಿ ಹಣ ನಿಲ್ಲದಿರಲು ಕಾರಣ ಅವರಿಗಿರುವ ಅತಿಯಾದ ಒಳ್ಳೆಯತನ, ಹೌದು ನಿರ್ಮಾಪಕರಿಗೆ ಹಿಂಸೆ ಕೊಡದೆ ಅವರು ಕೊಟ್ಟಷ್ಟು ಹಣವನ್ನ ತೆಗೆದುಕೊಳ್ಳುತ್ತಿದ್ದರು ಶಿವಕುಮಾರ್ ಅವರು ಮತ್ತು ಯಾರ ಬಳಿನೂ ಗಟ್ಟಿಯಾಗಿ ಸಂಭಾವನೆಯನ್ನ ಕೇಳುತ್ತಿರಲಿಲ್ಲ ಶಿವಕುಮಾರ್ ಅವರು. ಇನ್ನು ನಿರ್ಮಾಪಕರು ಕಷ್ಟದಲ್ಲಿ ಇದ್ದಾರೆ ಅಂದರೆ ಫ್ರೀ ಆಗಿ ನಟನೆ ಮಾಡುತ್ತಿದ್ದರು ಶಿವಕುಮಾರ್ ಅವರು, ಇನ್ನು ಇತ್ತಕಡೆ ಮಗ ಸೂರ್ಯನಿಗೆ ನಟನೆ ಅಂದರೆ ಸ್ವಲ್ಪನೂ ಇಷ್ಟ ಇರಲಿಲ್ಲ, ಆದರೆ ತಂದೆ ಶಿವಕುಮಾರ್ ಗೆ ಮಗನನ್ನ ದೊಡ್ಡ ನಟನನ್ನಾಗಿ ಮಾಡುವ ಆಸೆ.

ನಾನು ಸ್ವಂತ ಬಿಸಿನೆಸ್ ಮಾಡಬೇಕು ಎಂದು ಒಂದು ಕಂಪೆನಿಯನ್ನ ಆರಂಭಿಸಿದ ನಟ ಸೂರ್ಯ ದಿನಕ್ಕೆ 200 ಕಿಲೋಮೀಟರ್ ಸುತ್ತಾಡಿ 15 ಗಂಟೆಗಳ ಕಾಲ ಕೆಲಸವನ್ನ ಮಾಡಿ ತಮ್ಮ ಕಂಪನಿಯನ್ನ ಒಳ್ಳೆಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಬಹಳ ಪ್ರಯತ್ನಪಟ್ಟರು ಆದರೆ ಅದರಲ್ಲಿ ಜಯ ಸಿಗಲಿಲ್ಲ ಸೂರ್ಯ ಅವರಿಗೆ ಮತ್ತು ಹಾಕಿದ ಹಣ ಕೂಡ ಕೈಗೆ ಬರಲಿಲ್ಲ. ಇನ್ನು ಇದಾದ ನಂತರ ಮನೆಯವರ ಒತ್ತಾಯಕ್ಕೆ ಮಣಿದ ಸೂರ್ಯ ಸಿನಿಮಾಗಳಲ್ಲಿ ನಟನೆ ಮಾಡಲು ಒಪ್ಪಿಕೊಂಡರು, ಇನ್ನು ಕುಟುಂಬದ ಪೋಷಣೆಗಾಗಿ ನಟನೆ ಮಾಡಲು ಆರಂಭಿಸಿದ ಸೂರ್ಯ ಮೊದಲ ಚಿತ್ರಕ್ಕೆ 50 ಸಾವಿರ ಸಂಭಾವನೆ ಪಡೆದು ನಟನೆ ಮಾಡಿದರು.

Surya and Jyothika

ಕೆಲವು ಸಮಯದ ನಂತರ ನಟಿ ಜ್ಯೋತಿಕಾ ಅವರ ಸತತವಾಗಿ ಮೂರೂ ಚಿತ್ರಗಳನ್ನ ಮಾಡಿದರು ನಟ ಸೂರ್ಯ ಮತ್ತು ಆ ಸಮಯದಲ್ಲಿ ಇವರಿಬ್ಬರ ನಡುವೆ ಏನೋ ಇದೆ ಅನ್ನುವ ಗಾಸಿಪ್ ಗಳು ಕೂಡ ಹುಟ್ಟಿಕೊಂಡವು. ಇನ್ನು ಆ ಸಮಯದಲ್ಲಿ ಜ್ಯೋತಿಕಾ ಮತ್ತು ಸೂರ್ಯ ಅವರ ನಡುವೆ ಏನೋ ಇದೆ ಇದೆ ಎಂದು ನ್ಯೂಸ್ ಹುಟ್ಟುಹಾಕಿದರು ಮಾದ್ಯಮದವರು, ನಟನೆಯನ್ನ ಹೊರತುಪಡಿಸಿ ವೈಯಕ್ತಿಕ ಕಾರಣಕ್ಕಾಗಿ ಜ್ಯೋತಿಕಾ ಅವರ ಯಾವತ್ತು ಮಾತನಾಡದ ಸೂರ್ಯ ಅವರು ಗಾಸಿಪ್ ಗಳ ಕುರಿತು ಜ್ಯೋತಿಕಾ ಅವರ ಮಾತನಾಡಲು ಶುರು ಮಾಡಿದರು. ಹೀಗೆ ಕೆಲವು ಸಮಯದ ನಂತರ ಜ್ಯೋತಿಕಾ ಮತ್ತು ಸೂರ್ಯ ಅವರ ನಡುವೆ ಪ್ರೀತಿ ಆರಂಭವಾಯಿತು ಮತ್ತು ಮನೆಯಲ್ಲಿ ತಂದೆ ತುಂಬಾ ಸ್ಟ್ರಿಕ್ಟ್ ಇದ್ದ ಕಾರಣ ಮನೆಯಲ್ಲಿ ಪ್ರೀತಿಯ ವಿಷಯವನ್ನ ಹೇಳಲು ತುಂಬಾ ಭಯಪಟ್ಟರು ಸೂರ್ಯ.

ಹೀಗೆ ಒಂದು ದಿನ ಧೈರ್ಯ ಮಾಡಿ ಮನೆಯಲ್ಲಿ ಪ್ರೀತಿಯ ವಿಷಯ ಹೇಳಿದಾಗ ಮನೆಯವರು ಇದಕ್ಕೆ ಒಪ್ಪಲಿಲ್ಲ ಮತ್ತು ಸೂರ್ಯ ಅವರ ತಂದೆಗೆ ಕೂಡ ಇದು ಇಷ್ಟ ಆಗಲಿಲ್ಲ, ಇನ್ನು ತಂದೆಗೆ ಇಷ್ಟ ಇಲ್ಲದೆ ಇದ್ದರೂ ಕೂಡ ಜ್ಯೋತಿಕಾ ಅವರಿಗೆ ಕೊಟ್ಟ ಮಾತಿನ ಸಲುವಾಗಿ ತಂದೆಗೆ ವಿರುದ್ಧವಾಗಿ ಜ್ಯೋತಿಕಾ ಅವರಿಗೆ ತಾಳಿ ಕಟ್ಟಿದರು ಸೂರ್ಯ, ಆಗ ವಿಧಿಯಿಲ್ಲದೆ ಮನೆಯವರು ಒಟ್ಟಾಗಿ ಇಬ್ಬರ ಮದುವೆಯನ್ನ ಎರಡನೆಯ ಭಾರಿ ಮತ್ತೇ ಮಾಡಿದರು ಎಂದು ಆಗಿನ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಎಷ್ಟು ಮಾತ್ರ ನಿಜ ಅನ್ನುವುದು ನಮಗೆ ಗೊತ್ತಿಲ್ಲ ಆದರೆ ಜ್ಯೋತಿಕಾ ಅವರಿಗೆ ಕೊಟ್ಟ ಮಾತನ್ನ ಉಳಿಸಿಕೊಳ್ಳಲು ಸೂರ್ಯ ಏನು ಬೇಕಾದರೂ ಮಾಡಲು ತಯಾರಿದ್ದರು ಅನ್ನುವುದು ಮಾತ್ರ ನಿಜ ಮತ್ತು ಸೂರ್ಯನನ್ನ ಗಂಡನಾಗಿ ಪಡೆಯುವುದಕ್ಕೆ ಜ್ಯೋತಿಕಾ ಅದೃಷ್ಟ ಮಾಡಿದ್ದರು ಎಂದು ಹೇಳಿದರೆ ತಪ್ಪಾಗಲ್ಲ.

Surya and Jyothika

Please follow and like us:
error0
http://karnatakatoday.in/wp-content/uploads/2019/11/Surya-Jyothika-Love-story-1024x576.jpghttp://karnatakatoday.in/wp-content/uploads/2019/11/Surya-Jyothika-Love-story-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲತಮಿಳಿನ ಟಾಪ್ ನಟ ಸೂರ್ಯ ಅವರು ಖ್ಯಾತ ನಟ ಶಿವಕುಮಾರ್ ಅವರ ಮಗ, ಶಿವಕುಮಾರ್ ಅವರು ಸುಮಾರು 200 ಕ್ಕೂ ಹೆಚ್ಚು ಚಿತ್ರಗಳನ್ನ ಅಭಿನಯ ಮಾಡಿದ್ದಾರೆ, ಆದರೆ ಎಷ್ಟೇ ಸಿನಿಮಾಗಳಲ್ಲಿ ನಟನೆ ಮಾಡಿದರೂ ಕೂಡ ಅವರ ಕೈಯಲ್ಲಿ ಯಾವಾಗಲು ಹಣ ಇರುತ್ತಿರಲಿಲ್ಲ. ಶಿವಕುಮಾರ್ ಅವರದ್ದು ಮಧ್ಯಮ ವರ್ಗದ ಕುಟುಂಬ, ಶಿವಕುಮಾರ್ ಅವರ ಕೈಯಲ್ಲಿ ಹಣ ನಿಲ್ಲದಿರಲು ಕಾರಣ ಅವರಿಗಿರುವ ಅತಿಯಾದ ಒಳ್ಳೆಯತನ, ಹೌದು ನಿರ್ಮಾಪಕರಿಗೆ ಹಿಂಸೆ ಕೊಡದೆ ಅವರು...Film | Devotional | Cricket | Health | India