ದೇಶಕಂಡ ಧೀಮಂತ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ.
ದೇಶಕಂಡ ಧೀಮಂತ ಮಹಿಳೆ ಮತ್ತು ದೇಶದ ಎರಡನೇ ಮಹಿಳಾ ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ, ಹೌದು ದೇಶವೆಲ್ಲ ಕಾಶ್ಮೀರದ ಆರ್ಟಿಕಲ್ 370 ಯ ರದ್ದತಿಯ ಬಗ್ಗೆ ಖುಷಿಯಲ್ಲಿರುವಗಾಲೇ ಕೇಂದ್ರ ಸರ್ಕಾರಕ್ಕೆ ಇದೊಂದು ದೊಡ್ಡ ಶಾಕ್ ಎನ್ನಬಹುದಾಗಿದೆ.
ಹಾಗಾದರೆ ಸುಷ್ಮಾ ಸ್ವರಾಜ್ ನಮ್ಮ ಆಗಲಿ ಹೋಗಲು ಕಾರಣ ಏನು ಅನ್ನುವುದರ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಮತ್ತು ಸುಷ್ಮಾ ಸ್ವರಾಜ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.
ಮಹಿಳಾ ವಿದೇಶಾಂಗ ಸಚಿವೆಯಾಗಿ ಆ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ ದಿಟ್ಟ ಸುಷ್ಮಾ ಸ್ವರಾಜ್ ಪ್ರಪಂಚದಾದ್ಯಂತ ಖ್ಯಾತಿ ಗಳಿಸಿದ್ದರು. ಇನ್ನು ಕೆಲವು ದಿನಗಳ ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಸುಷ್ಮಾ ಸ್ವರಾಜ್(67 ) ಮಂಗಳವಾರ ರಾತ್ರಿ ನಿಧನರಾದರು.
ತಾವು ನಿಧನರಾಗುವ ಮುನ್ನ 370ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಕ್ರಮಕ್ಕೆ ಪ್ರಧಾನಿ ಮೋದಿಯವರನ್ನು ಅಭಿನಂದಿಸಿ ಸುಷ್ಮಾ ಸ್ವರಾಜ್ ಅವರು ಇಂದು ಟ್ವೀಟ್ ಮಾಡಿದ್ದರು. ಬಹುಕಾಲದಿಂದ ಬಿಜೆಪಿಯ ಪ್ರಮುಖ ಮಹಿಳಾ ಮುಖಂಡೆಯಾಗಿದ್ದ ಸುಷ್ಮಾ ಸ್ವರಾಜ್ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ.
ಕಳೆದ ವರ್ಷ ನವೆಂಬರ್ನಲ್ಲಿ ಅವರು ತಮಗೆ ಅನಾರೋಗ್ಯವಾಗಿರುವ ಕಾರಣ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಘೋಷಿಸಿದ್ದರು.ಇನ್ನು ಕಾಶ್ಮೀರದ ಮಸೂದೆ ಅಂಗೀಕಾರ ಆದ ಬಳಿಕ ಸುಮಾರು 7 ಗಂಟೆಗೆ ಟ್ವಿಟ್ ಮಾಡಿ ಈ ನಿರ್ಧಾರವನ್ನು ಸ್ವಾಗತಿಸಿದ್ದರು, ಆದರೆ ರಾತ್ರಿ 11 ಗಂಟೆ ಹೊತ್ತಿಗೆ ನಿಧನದ ಸುದ್ದಿ ತಿಳಿದು ಸಹಜವಾಗಿಯೇ ಎಲ್ಲರಿಗೂ ಶಾಕ್ ಆಗಿದೆ.
ಸುಷ್ಮಾ ಆತ್ಮಕ್ಕೆ ಶಾಂತಿ ಸಿಗಲಿ ಎಂದು ರಾಜಕೀಯ ನಾಯಕರು ಟ್ವಿಟ್ಟರ್ ನಲ್ಲಿ ಬರೆದಿಕೊಂಡಿದ್ದಾರೆ, ಸ್ನೇಹಿತರೆ ಸುಷ್ಮಾ ಸ್ವರಾಜ್ ಅವರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Leave a Reply