tamil actress Vimal

ಉದ್ದಟತನ ತೋರಿರುವ ತಮಿಳಿನ ಖ್ಯಾತ ನಟನೊಬ್ಬ ತುಂಬಾ ಸಿಲ್ಲಿ ಕಾರಣಕ್ಕೆ ಕನ್ನಡದ ನಟನನ್ನ ಹಿಗ್ಗಾ ಮುಗ್ಗ ಥಳಿಸಿದ್ದಾನೆ, ತನ್ನ ಸ್ನೇಹಿತರ ಜೊತೆ ಸೇರಿ ಕನ್ನಡದ ನಟನಿಗೆ ಕಾಲಿನಿಂದ ಒದ್ದಿದ್ದಾನೆ.

ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಮತ್ತು ಹೇಗೆ ಅನ್ನುವುದರ ಬಗ್ಗೆ ಮತ್ತು ಕನ್ನಡದ ಆ ನಟ ಯಾರು ಅನ್ನವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ವಿರುಂಗಬಕ್ಕಂ ನ ಸರ್ವಿಸ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ, ಸರ್ವಿಸ್ ಅಪಾರ್ಟ್ ಮೆಂಟ್ ಗೆ ತಮಿಳು ನಟ ವಿಮಲ್ ಮತ್ತು ಆತನ ನಾಲ್ಕು ಸ್ನೇಹಿತರು ಹೋಗಿದ್ದಾರೆ.

tamil actress Vimal

ಇನ್ನು ಆ ಅಪಾರ್ಟ್ ಮೆಂಟ್ ತಂಗಿದ್ದ ಕನ್ನಡದ ನಟ ಅಭಿಷೇಕ್ ಫೋನ್ ನಲ್ಲಿ ಮಾತನಾಡುತ್ತ ಆಚೆ ನಿಂತಿದ್ದರು, ಇನ್ನು ಕನ್ನಡದ ನಟ ಅಭಿಷೇಕ್ ಬಳಿ ಹೋದ ತಮಿಳು ನಟ ಅಭಿಷೇಕ್ ಮತ್ತು ಆತನ ಸ್ನೇಹಿತರೆ ನಮಗೆ ರೂಮ್ ಬೇಕು ಎಂದು ಕೇಳಿದ್ದಾರೆ.

ಇನ್ನು ಇದಕ್ಕೆ ಉತ್ತರಿಸಿದ ಅಭಿಷೇಕ್ ನಾನು ರೂಮ್ ಬಾಯ್ ಅಲ್ಲ ನಾನು ಕೂಡ ಒಬ್ಬ ನಟ ಉತ್ತರ ನೀಡಿದ್ದಾರೆ, ಇನ್ನು ಇದೆ ವಿಷಯಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ನಂತರ ಏಕಾಏಕಿ ಅಭಿಷೇಕ್ ಮೇಲೆ ಹಲ್ಲೆ ಮಾಡಿದ ವಿಮಲ್ ಮತ್ತು ಆತನ ಸ್ನೇಹಿತರು ಅಭಿಷೇಕ್ ನನ್ನ ಕೆಳಗೆ ಎಳೆದು ಕಾಲಿನಿಂದ ಒದ್ದು ಕೆಟ್ಟದಾಗಿ ಬೈದು ಹಲ್ಲೆ ಮಾಡಿದ್ದಾರೆ, ಇನ್ನು ನಟ ವಿಮಲ್ ಮತ್ತು ಆತನ ಸ್ನೇಹಿತರ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ ನಟ ಅಭಿಷೇಕ್.

tamil actress Vimal

ವಿಮಲ್ ಮೇಲೆ ಹಲ್ಲೆ ಮತ್ತು ಕೆಟ್ಟ ಪದ ಬಳಕೆ ಕೇಸ್ ರಿಜಿಸ್ಟರ್ ಮಾಡಲಾಗಿದೆ, ಆದರೆ ಈಗ ನಟ ವಿಮಲ್ ಪರಾರಿಯಾಗಿದ್ದು ಫೋನ್ ಸ್ವಿಚ್ ಆಫ್ ಮಾಡಿದ್ದಾನೆ, ಅಭಿಷೇಕ್ ಫೋಟೋ ಇನ್ನು ಹೊರಗೆ ಬಿದ್ದಿಲ್ಲ.

ಇನ್ನು ನಟ ವಿಮಲ್ ಗಾಗಿ ಪೊಲೀಸರು ಹುಡುಕಾಟ ನಡೆಸುತ್ತ ಇದ್ದಾರೆ, ಇಟ ತಮಿಳಿನಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾನೆ, ಚಿಕ್ಕ ವಿಷಯಕ್ಕೆ ವೀರಾವೇಶ ತೋರಿಸಿರುವ ನಟ ವಿಮಲ್ ನ್ನ ಆದಷ್ಟು ಬೇಗ ಅರೆಸ್ಟ್ ಮಾಡಿ ತಕ್ಕ ಶಾಸ್ತಿ ಮಾಡಲಿ ಎಂದು ಆಶಿಸೋಣ.

tamil actress Vimal

Please follow and like us:
0
http://karnatakatoday.in/wp-content/uploads/2019/03/tamil-actress-Vimal-1024x576.jpghttp://karnatakatoday.in/wp-content/uploads/2019/03/tamil-actress-Vimal-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಉದ್ದಟತನ ತೋರಿರುವ ತಮಿಳಿನ ಖ್ಯಾತ ನಟನೊಬ್ಬ ತುಂಬಾ ಸಿಲ್ಲಿ ಕಾರಣಕ್ಕೆ ಕನ್ನಡದ ನಟನನ್ನ ಹಿಗ್ಗಾ ಮುಗ್ಗ ಥಳಿಸಿದ್ದಾನೆ, ತನ್ನ ಸ್ನೇಹಿತರ ಜೊತೆ ಸೇರಿ ಕನ್ನಡದ ನಟನಿಗೆ ಕಾಲಿನಿಂದ ಒದ್ದಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ ಮತ್ತು ಹೇಗೆ ಅನ್ನುವುದರ ಬಗ್ಗೆ ಮತ್ತು ಕನ್ನಡದ ಆ ನಟ ಯಾರು ಅನ್ನವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ...Kannada News