ತನ್ನ ಮಗಳನ್ನೇ ಮಾದರಿಯಾಗಿಟ್ಟುಕೊಂಡು ಈ ಜಿಲ್ಲಾಧಿಕಾರಿ ಮಡಿದ ಕೆಲಸವೇನು ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗ್ತೀರಿ. ಹೌದು ಓದುಗರೇ ಶಿಕ್ಷಣ ಶಿಕ್ಷಣ ಎಂದು ತಮ್ಮ ಮಕ್ಕಳಿಗೆ ಹೊರೆ ಮಾಡಿ ಅವರಿಗಿಷ್ಟವಿಲ್ಲದ ಯಾವುದೊ ಭಾಷೆಯಲ್ಲಿ ಶಿಕ್ಷಣ ಕೊಡಿಸಿ ಚಿಕ್ಕವಯಸ್ಸಿನಲ್ಲೇ ಒತ್ತಡ ಹೆರುವ ಅದೆಷ್ಟೋ ಪೋಷಕರನ್ನು ನೋಡಿದ್ದೇವೆ. ಇಷ್ಟೇ ಅಲ್ಲದೆ ಕನ್ನಡ ಕನ್ನಡ ಎಂದು ಹೇಳಿಕೊಂಡು ತಮ್ಮ ಮಕ್ಕಳನ್ನು ಮಾತ್ರ ಉತ್ತಮ ದರ್ಜೆಯ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಿ ಇತರರಿಗೆ ಬುದ್ದಿ ಹೇಳುವ ಮಂದಿಯನ್ನು ಕೂಡ ನಾವು ನೋಡಿದ್ದೇವೆ. ಆದರೆ ತಮಿಳುನಾಡಿನ ಡಿಸಿ ಯಾದ ಇವರು ಮಾಡಿರುವ ಈ ಕೆಲಸ ಅದೆಷ್ಟೋ ಜನರಿಗೆ ಮಾದರಿಯಾಗಿದೆ. ಹಾಗಿದ್ದರೆ ಈ ಡಿಸಿ ಮಡಿದ ಆ ಕೆಲಸವೇನು ಇದರಿಂದ ಏನಾಗಿದೆ ನೋಡೋಣ ಬನ್ನಿ.

ತಮಿಳುನಾಡಿನ ಪ್ರಾಂತ ವೊಂದರ ಡಿಸಿ ತನ್ನ ಮಗಳನ್ನು ಅಲ್ಲಿಯ ಉತ್ತಮ ಸ್ಕೂಲಿಗೆ ಕಳುಹಿಸುವ ಬದಲು ಅಂಗನವಾಡಿಗೆ ಕಳಿಸುವ ಮೂಲಕ ಶಾಕ್ ನೀಡಿದ್ದಾರೆ ಈ ಮೂಲಕ ಶಿಕ್ಷಣ ಕ್ರಾಂತಿಗೆ ಮುಂದಾಗಿದ್ದಾರೆ ಎನ್ನಬಹುದು. ಡಿಸಿಯಾಗಿದ್ದರೂ ಸಹಿತ ಇತರ ಮಕ್ಕಳೂ ಕೂಡ ಸರ್ಕಾರೀ ಶಾಲೆಯ ಹಾಗು ಸರ್ಕಾರದ ಯೋಜನೆಗಳ ಬಗ್ಗೆ ಮಹತ್ವ ತಿಳಿಸಲು ಮತ್ತು ಇತರ ಪೋಷಕರು ಕೂಡ ಇದರಿಂದ ಬುದ್ದಿ ಕಲಿಯಬೇಕೆನ್ನುವ ಕಾರಣಕ್ಕೆ ಈ ಕೆಲಸ ಮಾಡಿದ್ದಾರೆ.

2009 ರ ಬ್ಯಾಚಿನ IAS ಅಧಿಕಾರಿಯಾಗಿರುವ ಶಿಲ್ಪಾ ಪ್ರಭಾಕರ್ ಸತೀಶ್ ಅಂಗನವಾಡಿಯಲ್ಲಿ ಒಂದು ಮಗುವಿಗೆ ಕಲಿಯಲು ಬೇಕಾದ ಎಲ್ಲಾ ವಾತಾವರಣ ಪೌಷ್ಟಿಕ ಆಹಾರ ಎಲ್ಲವು ದೊರೆಯುತ್ತದೆ ಇದನ್ನೆಲ್ಲಾ ಜನಸಾಮನ್ಯರಿಗೆ ತಿಳಿ ಹೇಳುವ ಸಲುವಾಗಿ ಈ ನಿರ್ಧಾರ ಮಾಡಿದೆ ಎಂದಿದ್ದಾರೆ.

ಅದೇನೇ ಇರಲಿ ತನ್ನ ಬಳಿ ಸಾಕಷ್ಟು ಹಣ ಅಧಿಕಾರ ಇದ್ದರೂ ಕೂಡ ತನ್ನ ಮಗುವನ್ನು ಅಂಗನವಾಡಿಗೆ ಸೇರಿಸುವ ಮೂಲಕ ಇತರ ಪೋಷಕರಿಗೆ ಮಾದರಿಯಾಗಿದ್ದಾರೆ. ಇನ್ನಾದರೂ ನಾವು ನೀವು ಯಾವುದೊ ಆಂಗ್ಲ ಭಾಷೆಯ ಮೋಹ ಬಿಟ್ಟು ತಮ್ಮ ಮಕ್ಕಳಿಗೆ ಅವರ ಕನ್ನಡದಲ್ಲಿ ಅಥವಾ ಮಾತೃಭಾಷೆಯಲ್ಲಿ ಹೆಚ್ಚು ಶಿಕ್ಷಣ ನೀಡುವತ್ತ ಗಮನಹರಿಸಿ. ಈ ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗು ತಲುಪಿಸಿ.

Please follow and like us:
0
http://karnatakatoday.in/wp-content/uploads/2019/01/tamilnadu-dc-1024x576.pnghttp://karnatakatoday.in/wp-content/uploads/2019/01/tamilnadu-dc-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುನಗರತನ್ನ ಮಗಳನ್ನೇ ಮಾದರಿಯಾಗಿಟ್ಟುಕೊಂಡು ಈ ಜಿಲ್ಲಾಧಿಕಾರಿ ಮಡಿದ ಕೆಲಸವೇನು ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗ್ತೀರಿ. ಹೌದು ಓದುಗರೇ ಶಿಕ್ಷಣ ಶಿಕ್ಷಣ ಎಂದು ತಮ್ಮ ಮಕ್ಕಳಿಗೆ ಹೊರೆ ಮಾಡಿ ಅವರಿಗಿಷ್ಟವಿಲ್ಲದ ಯಾವುದೊ ಭಾಷೆಯಲ್ಲಿ ಶಿಕ್ಷಣ ಕೊಡಿಸಿ ಚಿಕ್ಕವಯಸ್ಸಿನಲ್ಲೇ ಒತ್ತಡ ಹೆರುವ ಅದೆಷ್ಟೋ ಪೋಷಕರನ್ನು ನೋಡಿದ್ದೇವೆ. ಇಷ್ಟೇ ಅಲ್ಲದೆ ಕನ್ನಡ ಕನ್ನಡ ಎಂದು ಹೇಳಿಕೊಂಡು ತಮ್ಮ ಮಕ್ಕಳನ್ನು ಮಾತ್ರ ಉತ್ತಮ ದರ್ಜೆಯ ಆಂಗ್ಲ ಮಾಧ್ಯಮ ಶಾಲೆಗೆ ಕಳುಹಿಸಿ ಇತರರಿಗೆ...Kannada News