ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ನಾವು ಚಹಾ ಮತ್ತು ಕಾಫಿಗೆ ಒಂದು ವಿಶೇಷವಾದ ಸ್ಥಾನವನ್ನ ಕೊಟ್ಟಿದ್ದೇವೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕಾಫಿ ಮತ್ತು ಚಹಾ ಕುಡಿಯುವುದನ್ನ ನಾವು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೇವೆ ಅಂದರೆ ಅದನ್ನ ಸೇವಿಸದೇ ಇದ್ದರೆ ನಮಗೆ ವಿಪರೀತ ತಲೆ ಬರುತ್ತದೆ ಅನ್ನುವಷ್ಟು. ಇನ್ನು ಬೆಳಿಗ್ಗೆ ಮತ್ತು ಸಂಜೆ ಒಮ್ಮೆ ಚಹಾ ಅಥವಾ ಕಾಫಿಯನ್ನ ಸೇವನೆ ಮಾಡಿದರೆ ದೇಹದಲ್ಲಿ ಏನೋ ಶಕ್ತಿ ಬಂದಷ್ಟು ಖುಷಿಯಾಗುತ್ತದೆ, ಇನ್ನು ಕೆಲಸದ ಒತ್ತಡದ ಸಮಯದಲ್ಲಿ ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ವಿಶ್ರಾಂತಿ ಸಿಗಲು ಅನ್ನುವ ಸಲುವಾಗಿ ನಾವು ಪದೇ ಪದೇ ಚಹಾ ಅಥವಾ ಕಾಫಿಯನ್ನ ಸೇವನೆ ಮಾಡುತ್ತೇವೆ.

ಸ್ನೇಹಿತರೆ ನಮಗೆ ಇರುವ ಈ ಚಹಾ ಮತ್ತು ಕಾಫಿಯ ಅಭ್ಯಾಸ ಕೇವಲ ಬೆಳಿಗ್ಗೆಯಿಂದ ಹಿಡಿದು ಸಂಜೆಯವರೆಗೆ ಇದ್ದರೆ ಮಾತ್ರ ಒಳ್ಳೆಯದು, ಹಾಗಾದರೆ ಸಂಜೆಯ ನಂತರ ಚಹಾ ಅಥವಾ ಕಾಫಿಯನ್ನ ಸೇವನೆ ಮಾಡಿದರೆ ಏನಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ರಾತ್ರಿ ಊಟದ ಸಮಯದಲ್ಲಿ ಅಥವಾ ಮಲಗುವ ಸಮಯದಲ್ಲಿ ಚಹಾ ಮತ್ತು ಕಾಫಿಯನ್ನ ಸೇವನೆ ಮಾಡುವುದು ಆರೋಗ್ಯಕ್ಕೆ ಅಷ್ಟು ಸೂಕ್ತವಲ್ಲವಂತೆ. ಹೌದು ಸೇಹಿತರೇ ರಾತ್ರಿ ಕಾಫಿ ಸೇವನೆಯಿಂದ ನಮ್ಮ ದೇಹಕ್ಕೆ ಹಾನಿಯಾಗುತ್ತದೆ ಅದಕ್ಕೆ ಕಾರಣ ಕೆಫೆ, ಕೆಫೆ ಅಂಶ ನಮ್ಮ ದೇಹವನ್ನ ಸೇರಿದ ನಂತರ ಅದು ವ್ಯತಿರಿಕ್ತ ಪರಿಣಾಮವನ್ನ ಉಂಟುಮಾಡಿ ನಮ್ಮ ದೇವಹನ್ನ ಹಾಳುಮಾಡುತ್ತದೆ, ಹಾಗಾಗಿ ರಾತ್ರಿಯ ಸಮಯದಲ್ಲಿ ಕಾಫಿಯಿಂದ ದೂರ ಇರುವುದು ಬಹಳ ಒಳ್ಳೆಯದು.

Tea and Coffee

ಆರೋಗ್ಯ ಶಾಸ್ತ್ರದ ಪ್ರಕಾರ ದಿನದ 24 ಘಂಟೆಯಲ್ಲಿ ಒಬ್ಬ ಮನುಷ್ಯ ಕನಿಷ್ಠವಾದರೂ 8 ಘಂಟೆ ನಿದ್ರೆಯನ್ನ ಮಾಡಬೇಕು, ದೇಹಕ್ಕೆ ಮತ್ತು ಮನಸ್ಸಿಗೆ ಶಾಂತಿಗೆ ಸಿಗಬೇಕು ಅಂದರೆ ಒಬ್ಬ ಮನುಷ್ಯನಿಗೆ ನಿದ್ರೆ ಬಹಳ ಆವಶ್ಯಕ. ಇನ್ನು ಒಬ್ಬ ಮನುಷ್ಯ 8 ಘಂಟೆಗಿಂತ ಕಡಿಮೆ ನಿದ್ರೆ ಮಾಡಿದರೆ ಅದೂ ಆತನ ದೇಹದ ಮೇಲೆ ಕ್ರಮೇಣವಾಗಿ ಕೆಟ್ಟ ಪರಿಣಾಮವನ್ನ ಸಾಧ್ಯತೆ ಜಾಸ್ತಿ ಇರುತ್ತದೆ. ಇನ್ನು ಮನಸ್ಸಿನ ಒತ್ತಡವನ್ನ ನಿವಾರಣೆ ಮಾಡಿಕೊಳ್ಳುವ ಸಲುವಾಗಿ ನಾವು ಕಾಫಿ ಅಥವಾ ಚಹಾ ಕುಡಿಯುವ ಅಭ್ಯಾಸವನ್ನ ಮಾಡಿಕೊಂಡಿರುತ್ತೇವೆ ಮತ್ತು ಇದಕ್ಕೆ ವಿರುದ್ಧವಾಗಿ ಕೆಲಸವನ್ನ ಕೂಡ ಮಾಡುತ್ತೇವೆ.

ಇನ್ನು ಕಾಫಿಯಲ್ಲಿ ಇರುವ ಕೆಫೆ ಅಂಶ ರಾತ್ರಿಯ ಸಮಯದಲ್ಲಿ ಊಟದ ನಂತರ ನಮಗೆ ನಿದ್ರೆ ಬರುವುದನ್ನ ತಪ್ಪಿಸುತ್ತದೆ ಮತ್ತು ನಿದ್ರೆ ಬರದಂತೆ ಮಾಡುತ್ತದೆ, ಇದು ಹೆಚ್ಚಿನ ಜನರ ಅನುಭವಕ್ಕೆ ಕೂಡ ಬಂದಿದೆ.  ಇನ್ನು ಹೆಚ್ಚಾಗಿ ಕಾಫಿ ಅಥವಾ ಚಹಾ ಕುಡಿದರೆ ನಮ್ಮ ನಿದ್ರೆಯ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಇದರಿಂದ ನಮಗೆ ಕಾಯಿಲೆಗಳು ಬರುವ ಸಾಧ್ಯತೆ ಜಾಸ್ತಿ ಇದೆ ಕೆಲವು ಸಂಶೋಧನೆಗಳು ತಿಳಿಸಿದೆ. ಇನ್ನು ನಾವು ಕಾಫಿ ಅಥಾಕಾ ಚಹಾ ಕುಡಿಯುವ ಅಭ್ಯಾಸ ಮಾಡಿಕೊಂಡಿರುವ ನಮ್ಮ ಮಾನಸಿಕ ಒತ್ತಡದ ನಿವಾರಣೆಗಾಗಿ, ಹೆಚ್ಚಿನ ಕಾಫಿ ಮತ್ತು ಚಹಾದ ಸೇವನೆಯಿಂದ ಮನಸ್ಸಿನ ಒತ್ತಡ ನಿವಾರಣೆ ಆಗುತ್ತದೆ ನಿಜ ಆದರೆ ರಾತ್ರಿಯ ನಿದ್ರೆ ಹಾಳಾಗಿ ಮಾರನೇ ದಿನ ಆಯಾಸದ ಅನುಭವ ಆಗುತ್ತದೆ.

ಇನ್ನು ಕಾಫಿಯಲ್ಲಿ ಇದು ಕೆಫೆ ಮತ್ತು ಇನ್ನಿತರೇ ಅಂಶಗಳು ಹೃದಯ ಮತ್ತು ಆರೋಗ್ಯಕ್ಕೆ ಕೆಟ್ಟ ಪರಿಣಾಮವನ್ನ ಕೂಡ ಬೀರುತ್ತದೆ ಮತ್ತು ಮಾನಸಿಕ ಖಿನ್ನತೆಗೂ ಕೂಡ ಕಾರಣವಾಯುತ್ತದೆ. ಇನ್ನು ಗರ್ಭಿಣಿಯರು ಒಂದು ದಿನಕ್ಕೆ ಒಂದು ಲೋಟ ಕಾಫಿಯನ್ನ ಮಾತ್ರ ಕುಡಿಯುವುದು ಉತ್ತಮ, ಗರ್ಭಿಣಿ ಮಹಿಳೆ ಏನೇ ಆಹಾರವನ್ನ ಸೇವನೆ ಮಾಡಿದರೆ ಕೂಡ ಅದು ವೇಗವಾಗಿ ಗರ್ಭದಲ್ಲಿ ಇರುವ ಮಗುವಿಗೂ ಸೇರುತ್ತದೆ, ಇನ್ನು ಗರ್ಭದಲ್ಲಿ ಇರುವ ಮಗು ಕಾಫಿಯಲ್ಲಿ ಇರುವ ಕೆಫೆ ಅಂಶವನ್ನ ತುಂಬಾ ಸೂಕ್ಷ್ಮವಾಗಿ ಪ್ರತಿಕ್ರಿಯೆಯನ್ನ ನೀಡುತ್ತದೆ ಮತ್ತು ಈ ಕಾರಣಕ್ಕೆ ಮಗುವಿನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಜಾಸ್ತಿ ಇರುತ್ತದೆ, ಹಾಗಾಗಿ ಗರ್ಭಿಣಿಯರು ಕಾಫಿ ಕುಡಿಯದೆ ಇರುವುದು ಬಹಳ ಒಳ್ಳೆಯದು.

Tea and Coffee

Please follow and like us:
error0
http://karnatakatoday.in/wp-content/uploads/2019/11/Tea-and-Coffee-1024x576.jpghttp://karnatakatoday.in/wp-content/uploads/2019/11/Tea-and-Coffee-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ನಾವು ಚಹಾ ಮತ್ತು ಕಾಫಿಗೆ ಒಂದು ವಿಶೇಷವಾದ ಸ್ಥಾನವನ್ನ ಕೊಟ್ಟಿದ್ದೇವೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕಾಫಿ ಮತ್ತು ಚಹಾ ಕುಡಿಯುವುದನ್ನ ನಾವು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೇವೆ ಅಂದರೆ ಅದನ್ನ ಸೇವಿಸದೇ ಇದ್ದರೆ ನಮಗೆ ವಿಪರೀತ ತಲೆ ಬರುತ್ತದೆ ಅನ್ನುವಷ್ಟು. ಇನ್ನು ಬೆಳಿಗ್ಗೆ ಮತ್ತು ಸಂಜೆ ಒಮ್ಮೆ ಚಹಾ ಅಥವಾ ಕಾಫಿಯನ್ನ ಸೇವನೆ ಮಾಡಿದರೆ ದೇಹದಲ್ಲಿ ಏನೋ ಶಕ್ತಿ ಬಂದಷ್ಟು ಖುಷಿಯಾಗುತ್ತದೆ, ಇನ್ನು...Film | Devotional | Cricket | Health | India