ಸರ್ದಾರ್ ವಲ್ಲಭ ಭಾಯ್ ಪಟೇಲರು ಜನಿಸಿದ ನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ‘ಉಕ್ಕಿನ ಮನುಷ್ಯ’ನ ಜನ್ಮದಿನದಂದೇ ಅವರ ಪ್ರತಿಮೆ ಅನಾವರಣಗೊಳಿಸಿದ್ದಾರೆ . ಸದೃಢ ನಾಯಕತ್ವ ಹಾಗೂ ದಿಟ್ಟ ನಿರ್ಧಾರಗಳಿಂದ ‘ಉಕ್ಕಿನ ಮನುಷ್ಯ’ ಎಂದೇ ಜನಪ್ರಿಯರಾಗಿದ್ದ ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ 182 ಮೀಟರ್‌ ಎತ್ತರದ ಪ್ರತಿಮೆ ಈಗ ವಿಶ್ವದ ಎದುರು ನಿಂತಿದೆ. ಈ ಹಿನ್ನಲೆಯಲ್ಲಿ ಇಡೀ ಯೋಜನೆಯ ಒಂದಷ್ಟು ಕುತೂಹಲಕಾರಿ ಅಂಶಗಳನ್ನು ಇಲ್ಲಿ ನೀಡಲಾಗಿದೆ. ಈ ಪ್ರತಿಮೆಯ ಬಗ್ಗೆ ಕೆಲ ವಿಶೇಷತೆಗಳನ್ನು ನೀವು ನೋಡಿದರೆ ಖಂಡಿತ ಶಾಕ್ ಆಗುತ್ತೀರಿ. ಹಾಗಿದ್ದರೆ ಅಂತ ಕೆಲ ಸಂಗತಿಗಳನ್ನು ನಿಮಗೆ ಹೇಳುತ್ತೇವೆ ಕೇಳಿ. ಬುರ್ಜ್ ಖಲೀಪಾ ನಿಮಗೆ ಗೊತ್ತಿರಬಹುದು ಪ್ರತಿಮೆಯ ಉಕ್ಕಿನ ಕೆಲಸವನ್ನು ಮಲೇಷ್ಯಾ ಮೂಲದ ಎವರ್‌ಸೆಂಡಾಯಿ ಕಂಪನಿಗೆ ವಹಿಸಲಾಗಿದೆ. ಜಗತ್ತಿನ ಅತಿ ಎತ್ತರದ ಕಟ್ಟಡ ಎಂದೇ ಖ್ಯಾತಿಯಾಗಿರುವ ದುಬೈನ ಬುರ್ಜ್‌- ಖಲೀಫಾವನ್ನು ಇದೇ ನಿರ್ಮಿಸಿದೆ.

ಇನ್ನು ಈ ಪ್ರತಿಮೆಯನ್ನು ಯಾವ ರೀತಿಯಾಗಿ ಡಿಸೈನ್ ಮಾಡಲಾಗಿದೆ ಎಂದರೆ ಯಾವುದೇ ರೀತಿಯ ಭೂಕಂಪ ಹಾಗೂ ಪ್ರತಿ ಸೆಕೆಂಡಿಗೆ 60 ಮೀಟರ್ ವೇಗದಲ್ಲಿ ಗಾಳಿಯ ಒತ್ತಡವಿದ್ದರೂ ಕೂಡ ಯಾವ ಹಾನಿಯು ಕೂಡ ಆಗಲ್ಲ ಅಷ್ಟೇ ಅಲ್ಲದೆ ರಿಕ್ಟರ್ ಮಾಪಕದಲ್ಲಿ 6.5 ರಷ್ಟು ಭೂಕಂಪದ ತೀವ್ರತೆ ಇದ್ದರು ಕೂಡ ಪ್ರತಿಮೆ ಕಿಂಚಿತ್ತೂ ಅಲುಗಾಡಲ್ಲ. ಇನ್ನು ಬಿರುಗಾಳಿ ಸುಂಟರಗಾಳಿ ಯಾವುದೇ ಬಂದರೂ ಜಗ್ಗಲ್ಲ. 180 ಕೀಮೀ ಪ್ರತಿ ಗಂಟೆ ವೇಗದಲ್ಲಿ ಗಾಳಿ ಬೀಸಿದರೂ ಯಾವುದೇ ತೊಂದರೆ ಇಲ್ಲ.

 

ಇನ್ನು ಈ ಮೂರ್ತಿಯನ್ನು ಮಾಡಲು ದೇಶದ ವಿವಿಧ ಕಡೆಯಿಂದ 1690 ಹಳ್ಳಿಗಳಿಂದ ಕಬ್ಬಿಣ ತುಕ್ಕು ಇತ್ಯಾದಿ ವಸ್ತುಗಳನ್ನು ದಾನವಾಗಿ ಪಡೆಯಲಾಗಿದೆ. ದೆಶದ ಪ್ರತಿ ರೈತನ ಮನೆಯ ಕಬ್ಬಿಣ ಕೂಡ ಇದರಲ್ಲಿದೆ ಎಂದರೆ ತಪ್ಪಾಗಲಾರದು. ಏಕತೆಯ ಪ್ರತಿಮೆಯ ನಿರ್ಮಾಣಕ್ಕಾಗಿ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರೈತರು ಇಲ್ಲಿಗೆ ಬಂದು ಒಗ್ಗೂಡಿದರು. ತಮ್ಮ ಉಪಕರಣಗಳನ್ನು ನೀಡಿದರು. ತಮ್ಮ ಮಣ್ಣಿನ ಪಾಲನ್ನೂ ನೀಡಿದರು.

 

 

ಬೆಣ್ಣೆ ನಗರಿ ದಾವಣಗೆರೆ ಎಂಜಿನಿಯರ್‌ಗಳ ತವರೂರು ಕೂಡ. ನಗರದ ಸಿವಿಲ್‌ ಎಂಜಿನಿಯರ್‌ ಕೆ.ಎಂ.ಜಗದೀಶ್‌, ವಿಶ್ವದ ಅತಿ ಎತ್ತರದ ಮೂರ್ತಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಮೆ ಸ್ಥಾಪನೆ ತಂಡದಲ್ಲಿ ಸಕ್ರಿಯವಾಗುವುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕರ್ನಾಟಕದ ಇಂಜಿನಿಯರ್ ಒಬ್ಬರ ಸಾಥ್ ಕೂಡ ಈ ಪ್ರತಿಮೆ ನಿರ್ಮಾಣದ ಕಾರ್ಯದಲ್ಲಿದೆ ಹಾಗಾಗಿ ಈ ಸಂಗತಿ ನಮ್ಮ ಕರ್ನಾಟಕಕ್ಕೆ ಹೆಮ್ಮೆ. ದಯವಿಟ್ಟು ಈ ಮಾಹಿತಿಯನ್ನು ಎಲ್ಲರಿಗು ಹಂಚಿಕೊಳ್ಳಿ

Please follow and like us:
0
http://karnatakatoday.in/wp-content/uploads/2018/11/PATEL-STATUE-1024x576.jpghttp://karnatakatoday.in/wp-content/uploads/2018/11/PATEL-STATUE-150x104.jpgKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಸರ್ದಾರ್ ವಲ್ಲಭ ಭಾಯ್ ಪಟೇಲರು ಜನಿಸಿದ ನಾಡಿನವರೇ ಆದ ಪ್ರಧಾನಿ ನರೇಂದ್ರ ಮೋದಿ ‘ಉಕ್ಕಿನ ಮನುಷ್ಯ’ನ ಜನ್ಮದಿನದಂದೇ ಅವರ ಪ್ರತಿಮೆ ಅನಾವರಣಗೊಳಿಸಿದ್ದಾರೆ . ಸದೃಢ ನಾಯಕತ್ವ ಹಾಗೂ ದಿಟ್ಟ ನಿರ್ಧಾರಗಳಿಂದ 'ಉಕ್ಕಿನ ಮನುಷ್ಯ' ಎಂದೇ ಜನಪ್ರಿಯರಾಗಿದ್ದ ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ 182 ಮೀಟರ್‌ ಎತ್ತರದ ಪ್ರತಿಮೆ ಈಗ ವಿಶ್ವದ ಎದುರು ನಿಂತಿದೆ. ಈ ಹಿನ್ನಲೆಯಲ್ಲಿ ಇಡೀ ಯೋಜನೆಯ ಒಂದಷ್ಟು ಕುತೂಹಲಕಾರಿ ಅಂಶಗಳನ್ನು...Kannada News