ಲಕ್ಷ್ಮಿ ದೇವಿಯನ್ನು ಒಳಿಸಿಕೊಳ್ಳುವ ಸಲುವಾಗಿ ಹಲವಾರು ಜನರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಕೆಲವರಂತೂ ಲಕ್ಷ್ಮೀದೇವಿಗೆ ನಾನಾ ಬಗೆಯ ಪೂಜೆಗಳನ್ನು ಮಾಡಿ ಆಕೆಯ ಕ್ರಪಾಕಟಾಕ್ಷ ಒಲಿಯುವಂತೆ ಮಾಡಲು ಯತ್ನಿಸುತ್ತಾರೆ.

ನಿಜವಾಗಿಯೂ ಲಕ್ಷೀ ದೇವಿ ನಿಮ್ಮ ಮನೆಯಲ್ಲಿ ಉಳಿಯಬೇಕಾದರೆ ಈ ಕೆಳಗಿನ ಕೆಲ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಹಾಗಾದ್ರೆ ಆ ಸಲಹೆಗಳು ಯಾವುವು ನೋಡೋಣ ಬನ್ನಿ. ಮನೆಯ ಕಪಾಟಿನಲ್ಲಿ ಅನವಶ್ಯಕ ವಸ್ತುಗಳನ್ನು ಬಿಡಬೇಡಿ.

ಹೌದು ಕಪಾಟಿನಲ್ಲಿ ಬೇಡದ ವಸ್ತುಗಳನ್ನು ಇಟ್ಟು, ಅವುಗಳನ್ನು ಸರಿಯಾದ ಕ್ರಮದಲ್ಲಿ ಕೂಡ ಇಡದೆ ಇರುವುದು, ದಾರಿದ್ರಕ್ಕೆ ಕಾರಣವಾಗಬಹುದು.

ತಿಜೋರಿಯಲ್ಲಿ ಅನವಶ್ಯಕ ವಸ್ತುಗಳು.

ಹಣ ಮತ್ತು ಆಭರಣಗಳನ್ನು ಇಡುವ ತಿಜೋರಿಯಲ್ಲಿ ನಾವು ಅನವಶ್ಯಕ ಲೆಕ್ಕ ಪಾತ್ರಗಳು, ಆದಾಯ ಪತ್ರಗಳು, ಇಡಬೇಡಿ.ಇದು ಕೂಡ ಲಕ್ಷ್ಮಿ ನಿಮ್ಮ ಮೇಲೆ ಕುಪಿತವಾಗುವ ಮುಖ್ಯ ಕಾರಣವಾಗಬಹುದು. ಮನೆಯಿಂದ ನಿಂತ ಅಥವಾ ಕೆಟ್ಟು ಹೋದ ಗಡಿಯಾರವನ್ನು ಮನೆಯಿಂದ ಈಗಲೇ ಹೊರಹಾಕಿ.

ಇದು ನಮ್ಮ ಸಂಸ್ಕ್ರತಿಯ ಪ್ರಕಾರ ಅಶುಭದ ಸಂಕೇತ. ಪೂರ್ವಜರ ಫೋಟೋಗಳನ್ನು ಸರಿಯಾದ ಜಾಗದಲ್ಲಿ ನೇತು ಹಾಕಿ. ಹೌದು ಈ ಬಗ್ಗೆ ವಾಸ್ತು ಶಾಸ್ತ್ರಜ್ಞರು ಅಥವಾ ಯಾರಾದರೂ ಹಿರಿಯರನ್ನು ಕೇಳಿ ಮನೆಯಲ್ಲಿ ಪೂರ್ವಜರ ಫೋಟೋವನ್ನು ಎಲ್ಲಿ ಯಾವ ದಿಕ್ಕಿನಲ್ಲಿ ಹಾಕಬೇಕೆಂದು ಕೇಳಿ. ಈ ಎಲ್ಲಾ ಸಲಹೆಗಳನ್ನು ಒಮ್ಮೆ ಸರಿಯಾಗಿ ಪಾಲಿಸಿ ನೋಡಿ ಖಂಡಿತ ಲಕ್ಷ್ಮಿ ದೇವಿ ಒಲಿಯುತ್ತಾಳೆ.

Please follow and like us:
0
http://karnatakatoday.in/wp-content/uploads/2018/03/LAKSHMI-DEVI-1024x576.jpghttp://karnatakatoday.in/wp-content/uploads/2018/03/LAKSHMI-DEVI-150x150.jpgeditorಅಂಕಣಎಲ್ಲಾ ಸುದ್ದಿಗಳುಲಕ್ಷ್ಮಿ ದೇವಿಯನ್ನು ಒಳಿಸಿಕೊಳ್ಳುವ ಸಲುವಾಗಿ ಹಲವಾರು ಜನರು ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಕೆಲವರಂತೂ ಲಕ್ಷ್ಮೀದೇವಿಗೆ ನಾನಾ ಬಗೆಯ ಪೂಜೆಗಳನ್ನು ಮಾಡಿ ಆಕೆಯ ಕ್ರಪಾಕಟಾಕ್ಷ ಒಲಿಯುವಂತೆ ಮಾಡಲು ಯತ್ನಿಸುತ್ತಾರೆ. ನಿಜವಾಗಿಯೂ ಲಕ್ಷೀ ದೇವಿ ನಿಮ್ಮ ಮನೆಯಲ್ಲಿ ಉಳಿಯಬೇಕಾದರೆ ಈ ಕೆಳಗಿನ ಕೆಲ ಸಲಹೆಗಳನ್ನು ಪಾಲಿಸಿದರೆ ಉತ್ತಮ. ಹಾಗಾದ್ರೆ ಆ ಸಲಹೆಗಳು ಯಾವುವು ನೋಡೋಣ ಬನ್ನಿ. ಮನೆಯ ಕಪಾಟಿನಲ್ಲಿ ಅನವಶ್ಯಕ ವಸ್ತುಗಳನ್ನು ಬಿಡಬೇಡಿ. ಹೌದು ಕಪಾಟಿನಲ್ಲಿ ಬೇಡದ ವಸ್ತುಗಳನ್ನು ಇಟ್ಟು, ಅವುಗಳನ್ನು...Karnataka news