ಇದೆ ತಿಂಗಳು 21 ನೇ ತಾರೀಕಿನಂದು ಮಹಾಶಿವರಾತ್ರಿ ಹಬ್ಬ ಇದೆ, ಈ ಶಿವರಾತ್ರಿ ಹಬ್ಬವನ್ನ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಆಚರಣೆ ಮಾಡಲಾಗುತ್ತದೆ, ಶಿವನ ಭಕ್ತರಿಗೆ ಶಿವರಾತ್ರಿ ಹಬ್ಬ ತುಂಬಾ ಪವಿತ್ರವಾದ ಹಬ್ಬವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಶಿವರಾತ್ರಿ ದಿನದಿಂದ ಶಿವನಿಗೆ ವಿಶೇಷವಾದ ಪೂಜೆ ಮತ್ತು ಪುನಸ್ಕಾರಗಳನ್ನ ಮಾಡಲಾಗುತ್ತದೆ, ಇನ್ನು ಈ ಮಹಾಶಿವರಾತ್ರಿಯ ದಿನದಂದು ಶಿವನ ಭಕ್ತರು ಇಡೀ ದಿನ ಉಪವಾಸ, ವೃತ ಮತ್ತು ಜಾಗರಣೆಯನ್ನ ಮಾಡುತ್ತಾರೆ ಮತ್ತು ಕೆಲವು ದೇವಾಲಯಗಳಲ್ಲಿ ಭಜನಾ ಕಾರ್ಯಕ್ರಮವನ್ನ ಕೂಡ ಏರ್ಪಾಡು ಮಾಡಲಾಗುತ್ತದೆ. ಇನ್ನು ಈ ಭಾರಿ ಬಂದಿರುವ ಮಹಾಶಿವರಾತ್ರಿ ಹಬ್ಬ ಬಹಳ ವಿಶೇಷವಾದ ದಿನದಂದು ಬಂದಿರುವುದರಿಂದ ಈ ಈ ರಾಶಿಯವರ ಮೇಲೆ ಶಿವ ಮತ್ತು ಪಾರ್ವತಿಯ ನೇರ ದೃಷ್ಟಿ ಬಿದ್ದಿದೆ. ಈ ಎಲ್ಲಾ ರಾಶಿಯವರು ಮುಂದಿನ ದಿನಗಳಲ್ಲಿ ಕುಭೇರ ಯೋಗವನ್ನ ಪಡೆಯಲಿದ್ದಾರೆ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದಾರೆ ಓಂ ನಮಃ ಶಿವನ ಎಂದು ಶಿವನ ಆರಾಧನೆಯನ್ನ ಮಾಡಿ. ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಇನ್ನುಮುಂದೆ ಕಾಲಭೈರವನ ಆಶೀರ್ವಾದ ಸಿಗಲಿದ್ದು ಮಾಡುವ ಎಲ್ಲಾ ಕೆಲಸದಲ್ಲಿ ಮಹಾಶಿವನ ಕೃಪೆ ಇರುವುದರಿಂದ ಇವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಗಳಿಸಿದ್ದಾರೆ. ಇನ್ನು ಕಾಲಭೈರವನ ಕೃಪೆಯಿಂದ ಇವರು ಮತ್ತೆ ಜೀವನದಲ್ಲಿ ಜಯವನ್ನ ಸಾಧಿಸಲಿದ್ದಾರೆ, ಶಿವರಾತ್ರಿಯ ದಿನ ಉಪವಾಸವನ್ನ ಮಾಡಿ ಶಿವನ ಆರಾಧನೆಯನ್ನ ಮಾಡಿದರೆ ತುಂಬಾ ಒಳ್ಳೆಯದು, ಕುಟುಂಬದಲ್ಲಿ ಒಳ್ಳೆಯ ಬದಲಾವಣೆಗಳು ಕಂಡು ಬರಲಿದ್ದು ಅದೂ ನಿಮಗೆ ಸಂತೋಷವನ್ನ ತಂದುಕೊಡಲಿದೆ.

This Shivaratri

ಇನ್ನು ಎರಡನೆಯದಾಗಿ ಮಕರ ರಾಶಿ, ಈ ರಾಶಿಯವರ ಮೇಲೆ ಶಿವ ಮತ್ತು ಪಾರ್ವತಿಯ ಆಶೀರ್ವಾದ ಇರುವುದರಿಂದ ಈ ಶಿವರಾತ್ರಿಯ ನಂತರ ಇವರು ಹೊಸ ವ್ಯವಹಾರವನ್ನ ಆರಂಭ ಮಾಡಿದರೆ ಅದರಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ. ಈ ಸಮಯ ಬಹಳ ಒಳ್ಳೆಯ ಸಮಯವಾದ್ದರಿಂದ ಮನೆಯಲ್ಲಿ ಧಾರ್ಮಿಕ ಚಟುವಟಿಕೆಯನ್ನ ನಡೆಸಬಹುದಾಗಿದೆ, ನಿಮಗೆ ಸಂಬಂದಿಸಿದ ಯಾವುದಾದರೂ ತಕರಾರು ನ್ಯಾಯಾಲಯದಲ್ಲಿ ಇದ್ದರೆ ಅದರಲ್ಲಿ ನಿಮಗೆ ಜಯ ಸಿಗಲಿದೆ, ಒಡ ಹುಟ್ಟಿದವರ ನಡುವಿನ ಸಂಬಂಧ ಬಲಗೊಳ್ಳಲಿದೆ, ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮಾಡಿ ಮತ್ತು ಶಿವರಾತ್ರಿಯ ದಿನ ಜಾಗರಣೆಯನ್ನ ಮಾಡಿದರೆ ತುಂಬಾ ಒಳ್ಳೆಯದು. ಇನ್ನು ಮೂರನೆಯದಾಗಿ ಕನ್ಯಾ ರಾಶಿ, ಮುಕ್ಕಣ್ಣನ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಅದರಲ್ಲಿ ಜಯ ನಿಮ್ಮದಾಗಲಿದೆ, ನಿರುದ್ಯೋಗಿಗಳ ಮೇಲೆ ಶಿವನ ಆಶೀರ್ವಾದ ಇರುವುದರಿಂದ ಇವರಿಗೆ ಸದ್ಯದಲ್ಲೇ ಬಹಳ ಒಳ್ಳೆಯ ಉದ್ಯೋಗ ಸಿಗಲಿದೆ.

ದಿನದಲ್ಲಿ ಒಮ್ಮೆಯ ಶಿವನ ಜಪವನ್ನ ಮಾಡಿದರೆ ತುಂಬಾ ಒಳ್ಳೆಯದು, ಮಾಡುವ ಕೆಲಸದಲ್ಲಿ ನಿಮಗೆ ಭಡ್ತಿ ಸಿಗಲಿದ್ದು ನಿಮ್ಮ ಸಂಬಳ ಜಾಸ್ತಿ ಆಗಲಿದೆ, ಹಣದ ವಿಷಯದಲ್ಲಿ ನಿಮಗೆ ತುಂಬಾ ಒಳ್ಳೆಯದಾಗಲಿದೆ, ಸರಿಯಾದ ದಿಕ್ಕಿನಲ್ಲಿ ಸಾಗಿದರೆ ನೀವು ಮುಂದಿನ ದಿನಗಳಲ್ಲಿ ಬಹಳ ಎತ್ತರದ ಸ್ಥಾನಕ್ಕೆ ಬೆಳೆಯುತ್ತಿರಿ. ಇನ್ನು ನಾಲ್ಕನೆಯದಾಗಿ ಕುಂಭ ರಾಶಿ, ಈ ರಾಶಿಯವರ ಮೇಲೆ ಪರಶಿವನ ಆಶೀರ್ವಾದ ಇರುವುದರಿಂದ ಇವರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ, ಸಂಸಾರದಲ್ಲಿ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದ್ದು ನಿಮ್ಮ ಸಂಸಾರ ಸುಖಕರ ಸಂಸಾರ ಆಗಲಿದೆ. ಎಲ್ಲವೂ ನಿಮ್ಮಿಂದಲೇ ಅನ್ನುವ ಅಹಂ ಅನ್ನು ಇಂದೇ ಬಿಡಿ ಮತ್ತು ಯಾವುದೇ ಕೆಲಸವನ್ನ ಆರಂಭ ಮಾಡುವ ಮುನ್ನ ಒಮ್ಮೆ ಶಿವನಿಗೆ ಪೂಜೆಯನ್ನ ಸಲ್ಲಿಸಿ ನಂತರ ಆರಂಭ ಮಾಡಿ ಮತ್ತು ಶಿವರಾತ್ರಿಯ ದಿನ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ದಾನವನ್ನ ಮಾಡಿದರೆ ನಿಮಗೆ ಪುಣ್ಯ ಸಿಗಲಿದೆ.

ಇನ್ನು ಕೊನೆಯದಾಗಿ ಮೀನಾ ರಾಶಿ, ಈ ರಾಶಿಯವರಿಗೆ ಕೆಲಸದ ವಿಷ್ಯದಲ್ಲಿ ಈ ದಿನಗಳು ತುಂಬಾ ಉತ್ತಮವಾದ ದಿನವಾಗಿದೆ, ಕೆಲಸ ಮಾಡುವ ಕಚೇರಿಯಲ್ಲಿ ಮೇಲಾಧಿಕಾರಿಯ ಜೊತೆ ಉತ್ತಮ ಸಂಬಂಧವನ್ನ ಉಳಿಸಿಕೊಳ್ಳಿ. ಒಂದುವೇಳೆ ನೀವು ತಪ್ಪು ಮಾಡಿದರೆ ಅದನ್ನ ಸ್ವೀಕರಿಸಿ ಮುಂದುವರೆದರೆ ನಿಮಗೆ ಜನರ ಬೆಂಬಲ ಸಿಗಲಿದೆ, ಆರೋಗ್ಯ ಸಮಸ್ಯೆ ಎದುರಿಸುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದು ನಿಮ್ಮ ಆಯಸ್ಸು ವೃದ್ಧಿಸಲಿದೆ. ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯನ್ನ ಮಾಡಿಕೊಳ್ಳಲು ಇದು ಬಹಳ ಸೂಕ್ತವಾದ ಸಮಯವಾಗಿದೆ, ಕಂಡ ಕನಸನ್ನ ನನಸು ಮಾಡಿಕೊಳ್ಳಲು ಇದು ಬಹಳ ಸೂಕ್ತವಾದ ಸಮಯ ಮತ್ತು ಏನೇ ಸಮಸ್ಯೆ ಬಂದರು ಒಮ್ಮೆ ಶಿವನ ದೇವಾಲಯಕ್ಕೆ ಭೇಟಿ ನೀಡಿ ನಿಮ್ಮ ಸಮಸ್ಯೆಗಳನ್ನ ಹೇಳಿಕೊಂಡರೆ ನಿಮ್ಮ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ, ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಶಿವರಾತ್ರಿಯ ದಿನ ಯಾವುದಾದರೂ ಶಿವನ ದೇವಾಲಯಕ್ಕೆ ಭೇಟಿನೀಡಿ ಭಕ್ತಿಯಿಂದ ಶಿವನ ಆರಾಧನೆಯನ್ನ ಮಾಡಿ.

This Shivaratri

Please follow and like us:
error0
http://karnatakatoday.in/wp-content/uploads/2020/02/This-Shivaratri-1024x576.jpghttp://karnatakatoday.in/wp-content/uploads/2020/02/This-Shivaratri-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಇದೆ ತಿಂಗಳು 21 ನೇ ತಾರೀಕಿನಂದು ಮಹಾಶಿವರಾತ್ರಿ ಹಬ್ಬ ಇದೆ, ಈ ಶಿವರಾತ್ರಿ ಹಬ್ಬವನ್ನ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿ ಆಚರಣೆ ಮಾಡಲಾಗುತ್ತದೆ, ಶಿವನ ಭಕ್ತರಿಗೆ ಶಿವರಾತ್ರಿ ಹಬ್ಬ ತುಂಬಾ ಪವಿತ್ರವಾದ ಹಬ್ಬವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ಶಿವರಾತ್ರಿ ದಿನದಿಂದ ಶಿವನಿಗೆ ವಿಶೇಷವಾದ ಪೂಜೆ ಮತ್ತು ಪುನಸ್ಕಾರಗಳನ್ನ ಮಾಡಲಾಗುತ್ತದೆ, ಇನ್ನು ಈ ಮಹಾಶಿವರಾತ್ರಿಯ ದಿನದಂದು ಶಿವನ ಭಕ್ತರು ಇಡೀ ದಿನ ಉಪವಾಸ, ವೃತ ಮತ್ತು ಜಾಗರಣೆಯನ್ನ...Film | Devotional | Cricket | Health | India