ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಮತ್ತು ಕೆಲವು ಹಬ್ಬಗಳಿಗೂ ಕೂಡ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ. ಇನ್ನು ಇದೆ ತಿಂಗಳ 24 ನೇ ತಾರೀಕಿನಂದು ನಮ್ಮ ದೇಶದಲ್ಲಿ ಯುಗಾದಿ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ, ಈ ಉಗಾದಿಯೂ ಹಿಂದುಗಳಿಗೆ ಹೊಸ ವರ್ಷ ಕೂಡ ಹೌದು ಎಂದು ಹೇಳಿದರೆ ತಪ್ಪಾಗಲ್ಲ. ಯುಗಾದಿ ಹಬ್ಬದ ದಿನ ಬೇವು ಮತ್ತು ಬೆಲ್ಲವನ್ನ ಕೊಟ್ಟು ಯುಗಾದಿ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ, ಇನ್ನು ಕೆಲವು ತಮ್ಮ ಇಷ್ಟ ದೇವರ ಅಥವಾ ಮನೆ ದೇವರ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆ.

ಯುಗಾದಿ ಹಬ್ಬ ದಿನ ಅಮಾವಾಸ್ಯೆ ಕೂಡ ಇರುವುದರಿಂದ ಆ ದಿನ ಬಹಳ ಶಕ್ತಿಶಾಲಿಯಾದ ದಿನವಾಗಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ, ಇನ್ನು ಈ ಅಮಾವಾಸ್ಯೆಯ ನಂತರ ನಭೋಮಂಡದಲ್ಲಿ ಕೆಲವು ಬದಲಾವಣೆ ಆಗುವುದರಿಂದ ಕೆಲವು ರಾಶಿಯವರ ಜಾತಕದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಯಾವ ರಾಶಿಗಳ ಜಾತಕದಲ್ಲಿ ಬದಲಾವಣೆ ಆಗಲಿದೆ ಮತ್ತು ಅವರಿಗೆ ಅದರಿಂದ ಏನೇನು ಲಾಭ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮೊದಲನೆಯದಾಗಿ ಮಿಥುನ ರಾಶಿ, ಈ ಯುಗಾದಿ ಅಮಾವಾಸ್ಯೆಯ ನಂತರ ಈ ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ ಮತ್ತು ಇವರು ಮುಂದಿನ ದಿನಗಳಲ್ಲಿ ಬಹಳ ಒಳ್ಳೆಯ ಜೀವನವನ್ನ ಸಾಗಿಸಲಿದ್ದಾರೆ. ವೃತ್ತಿ ಕ್ಷೇತ್ರದಲ್ಲಿ ಇರುವರಿಗೆ ಒಳ್ಳೆಯ ಸ್ಥಾನಮಾನ ಸಿಗಲಿದ್ದು ಇವರ ಏಳಿಗೆಗೆ ಇದು ತಳಪಾಯವಾಗಲಿದೆ, ಏನಾದರು ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಬೇಕು ಅಂದರೆ ಯುಗಾದಿ ನಂತರ ಆರಂಭ ಮಾಡಿ. ಯುಗಾದಿ ಹಬ್ಬದ ದಿನ ನೀವು ನಿಮ್ಮ ಮನೆ ದೇವರಿಗೆ ಪೂಜೆಯ ಸಲ್ಲಿಸಿ ಹೊಸ ದಿನಗಳನ್ನ ಆರಂಭ ಮಾಡಿ ಮತ್ತು ಮುಂದಿನ ಯುಗಾದಿಯ ತನಕ ಯಾವುದೇ ಕಾರಣಕ್ಕೂ ಹಿರಿಯರ ಮನಸ್ಸಿಗೆ ನೋವನ್ನ ಉಂಟುಮಾಡಬೇಡಿ.

This Ugadi

ಇನ್ನು ಎರಡನೆಯದಾಗಿ ಕಟಕ ರಾಶಿ, ಈ ಯುಗಾದಿ ಅಮಾವಾಸ್ಯೆಯ ನಂತರ ಈ ರಾಶಿಯವವರ ಜೀವನದಲ್ಲಿ ಇರುವ ಬಹುತೇಕ ಕಷ್ಟಗಳು ನಿವಾರಣೆ ಆಗುತ್ತದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ, ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ ಮತ್ತು ಇನ್ನು ಪರಿಸರದಲ್ಲಿ ಮಾರಕ ಖಾಯಿಲೆ ಹರಿದಾಡುತ್ತಿರುವ ಕಾರಣ ದೂರ ಪ್ರಯಾಣವನ್ನ ಮುಂದಿನ ಮೂರೂ ತಿಂಗಳುಗಳ ಕಾಲ ಮುಂದೂಡುವುದು ಒಳ್ಳೆಯದು. ಸಂತಾನ ಭಾಗ್ಯ ಕೂಡಿ ಬಾರದೆ ನೋವಿನಲ್ಲಿ ಇರುವವರಿಗೆ ಆದಷ್ಟು ಬೇಗ ಸಂತಾನ ಭಾಗ್ಯ ಕೂಡಿ ಬರಲಿದೆ ಮತ್ತು ವ್ಯಾಪಾರದಲ್ಲಿ ನಷ್ಟವನ್ನ ಅನುಭವಿಸುತ್ತಿರುವವರು ಯುಗಾದಿಯ ದಿನ ವಿಷ್ಣು ದೇವರ ಪೂಜೆಯನ್ನ ಮಾಡಿದರೆ ನಿಮಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಲಾಭ ಬರಲಿದೆ.

ಇನ್ನು ಮೂರನೆಯದಾಗಿ ಕನ್ಯಾ ರಾಶಿ,ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಪಟ್ಟವರು ಆದರೆ ಇವರ ಕಷ್ಟಕ್ಕೆ ಸರಿಯಾದ ಫಲ ಸಿಗುತ್ತಿಲ್ಲ ಅನ್ನುವುದು ಸ್ವಲ್ಪ ಬೇಸರದ ಸಂಗತಿಯಾಗಿದೆ, ಆದರೆ ಚಿಂತೆ ಮಾಡುವ ಅಗತ್ಯ ಇಲ್ಲ ಈ ಯುಗಾದಿಯ ನಂತರ ನೀವು ಪಟ್ಟ ಕಷ್ಟಕ್ಕೆ ಒಳ್ಳೆಯ ಫಲ ಸಿಗಲಿದೆ. ಹೊಸ ಭೂಮಿ ಅಥವಾ ವಾಹನವನ್ನ ಖರೀದಿ ಮಾಡಲು ಈ ಯುಗಾದಿ ಸೂಕ್ತವಾದ ಸಮಯ, ಹಣವನ್ನ ಉಳಿತಾಯ ಮಾಡಿ ಮತ್ತು ಅನವಶ್ಯಕ ಖರ್ಚುಗಳನ್ನ ಆದಷ್ಟು ಕಡಿಮೆ ಮಾಡಿ ಹಾಗೆ ಯಾವುದೇ ಕಾರಣಕ್ಕೂ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನ ಮಾಡಬೇಡಿ. ಇನ್ನು ಕೊನೆಯದಾಗಿ ಸಿಂಹ ಮತ್ತು ಕುಂಭ ರಾಶಿ, ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಈ ಯುಗಾದಿಯ ನಂತರ ಈ ರಾಶಿಯವರ ಅದೃಷ್ಟವೇ ಬದಲಾಗಲಿದ್ದು ಇವರು ಏನೇ ಕೆಲಸ ಮಾಡಿದರು ಅದರಲ್ಲಿ ಜಯ ಇವರದ್ದಾಗಲಿದೆ.

This Ugadi

ಪ್ರೇಮಿಗಳಿಗೆ ಪ್ರೇಮ ನಿವೇಧನೆಯನ್ನ ಮಾಡಿಕೊಳ್ಳಲು ಇದು ಸರಿಯಾದ ಸಮಯ, ಆರೋಗ್ಯದ ವಿಚಾರದಲ್ಲಿ ಸ್ವಲ್ಪ ಜಾಗೂರತರಾಗಿರಿ, ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ ಮತ್ತು ನಿರುದ್ಯೋಗಿಗಳಿಗೆ ಒಲೆಯ ಉದ್ಯೋಗ ಸಿಗಲಿದೆ. ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಲು ಸರಿಯಾದ ಸಮಯ ಮತ್ತು ಸಾಲದ ವ್ಯವಹಾರವನ್ನ ಆದಷ್ಟು ಕಡಿಮೆ ಮಾಡಿ. ಮನೆಯಲ್ಲಿ ಶುಭಕಾರ್ಯ ನಡೆಯಲಿದ್ದು ಅದೂ ನಿಮಗೆ ಸಂತಸವನ್ನ ತಂದುಕೊಡಲಿದೆ, ಚಿನ್ನಾಭರಣವನ್ನ ಖರೀದಿ ಮಾಡಲು ಸೂಕ್ತವಾದ ಸಮಯ ಇದಾಗಿದೆ, ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯೂ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/This-Ugadi-1-1024x576.jpghttp://karnatakatoday.in/wp-content/uploads/2020/03/This-Ugadi-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಮತ್ತು ಕೆಲವು ಹಬ್ಬಗಳಿಗೂ ಕೂಡ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ. ಇನ್ನು ಇದೆ ತಿಂಗಳ 24 ನೇ ತಾರೀಕಿನಂದು ನಮ್ಮ ದೇಶದಲ್ಲಿ ಯುಗಾದಿ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ, ಈ ಉಗಾದಿಯೂ ಹಿಂದುಗಳಿಗೆ ಹೊಸ ವರ್ಷ ಕೂಡ ಹೌದು ಎಂದು ಹೇಳಿದರೆ ತಪ್ಪಾಗಲ್ಲ. ಯುಗಾದಿ ಹಬ್ಬದ ದಿನ ಬೇವು ಮತ್ತು ಬೆಲ್ಲವನ್ನ ಕೊಟ್ಟು ಯುಗಾದಿ...Film | Devotional | Cricket | Health | India