ಭಾರತೀಯ ಜ್ಯೋತಿಷ್ಯದ ಪ್ರಕಾರ ಬ್ರಹ್ಮಾಂಡವನ್ನು ಜನ್ಮದ ಸ್ಥಳದಿಂದ ಹನ್ನೆರಡು ಭಾಗಗಳಲ್ಲಿ ವಿಂಗಡಿಸಲಾಗಿದೆ, ಈ ಭಾಗಗಳನ್ನು ರಾಶಿಚಕ್ರ ಎಂದು ಕರೆಯುತ್ತಾರೆ ಮತ್ತು ಈ ರಾಶಿ ಚಕ್ರಗಳ ಮೇಲೆ ಭಿನ್ನ ಭಿನ್ನ ಗ್ರಹಗಳ ಪರಿಣಾಮವು ಬೀರುತ್ತದೆ, ಆ ಪರಿಣಾಮಗಳು ಶುಭವಾಗಿರುತ್ತವೋ ಅಥವಾ ಅಮಂಗಲಕಾರವಾಗಿರುತ್ತವೋ ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರು ಜ್ಯೋತಿಷ್ಯ ಶಾಸ್ತ್ರಗಳ ಮೂಲಕ ತಿಳಿದುಕೊಳ್ಳುತ್ತಾರೆ. ರಾಶಿಫಲದ ಮೂಲಕ ನಿಮ್ಮ ವ್ಯಾಪಾರ, ಉದ್ಯೋಗ, ಹಣ, ಅರೋಗ್ಯ, ಶಿಕ್ಷಣ ಮತ್ತು ಕೌಟುಂಬಿಕ ಜೀವನಕ್ಕೆ ಸಂಬಂಧಿತ ಎಲ್ಲಾ ಮುನ್ನೋಟಗಳನ್ನು ನೀವು ತಿಳಿದುಕೊಳ್ಳಬಹುದು. ರಾಶಿ ಶಾಸ್ತ್ರದ ಪ್ರಕಾರ ಮುಂದಿನ ಏಳು ದಿನಗಳ ಕಾಲ ಶನಿ ಹಾಗು ಸೂರ್ಯದೇವನ ನೇರದ್ರಷ್ಟಿ ಈ ರಾಶಿಗಳ ಮೇಲೆ ಬೀಳಲಿದೆ, ಹೀಗಾಯಿ ಈ ರಾಶಿಗಳ ಮೇಲೆ ಇದು ಸಾಕಷ್ಟು ಪರಿಣಾಮ ಕೂಡ ಬೀರಲಿದೆ.

ಮೊದಲನೆಯದಾಗಿ ಮೇಷ ರಾಶಿಗೆ ಮುಂಬರವು ದಿನಗಳಲ್ಲಿ ಯಾವುದೇ ಕೆಲಸ ಮಾಡುವ ಮೊದಲು ಚೆನ್ನಾಗಿ ಆಲೋಚಿಸಿ, ಆರೋಗ್ಯದ ಕಡೆ ಹೆಚ್ಚು ಗಮನಕೊಡವ ಅಗತ್ಯವಿದೆ. ನಿಮ್ಮ ಭೋಜನದ ಕಡೆ ಹೆಚ್ಚು ಗಮನ ಹರಿಸಿ ನಿಯಂತ್ರಣದಲ್ಲಿರಿ, ಸ್ನೇಹಿತರ ಸಹಾಯವಿಲ್ಲದೆ ಯಾವುದೆ ಕೆಲಸದಲ್ಲು ಯಶಸ್ಸು ಸಿಗುವುದು ಸುಲಭವಲ್ಲ ಆದ್ದರಿಂದ ಸ್ನೇಹಿತರೊಂದಿಗೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕ್ಕೊಳ್ಳುವುದು ಅಗತ್ಯ. ದೇವತಾರಾಧನೆ ಮಾಡಿ ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ ಹಾಗು ಮುಂದೆ ಬರಲಿರುವ ಕಷ್ಟಗಳು ಸಹ ಪರಿಹಾರವಾಗುತ್ತದೆ.

Shani and Suryadeva

ಕಟಕ ರಾಶಿಯವರಿಗೆ ತಿಂಗಳ ಕೊನೆಯಲ್ಲಿ ಕೆಲವು ಸಮಸ್ಯಗಳು ನಿಮಗೆ ತೊಂದರೆ ಕೊಡುವ ಸಾಧ್ಯತೆಗಳಿವೆ. ದೂರ ಪ್ರಯಾಣವು ಲಾಭವನ್ನು ತಂದುಕೊಡುವುದಾದರು ಬಹಳ ಹಣ ಖರ್ಚು ಮಾಡಬೇಕಾಗುತ್ತದೆ, ಶತ್ರುಗಳು ನಿಮಗೆ ತೊಂದರೆ ಮಾಡುವರಾದರು, ಸಫಲರಾಗುವುದಿಲ್ಲ ಮತ್ತು ಅಥಿತಿಗಳ ಆಗಮನದಿಂದ ಸಂತೋಷವಾಗುತ್ತದೆ. ಅಂದುಕೊಂಡ ಕಾರ್ಯಗಳು ಬಹಳ ಕಷ್ಟಪಟ್ಟು ನೆರವೇರುತ್ತದೆ, ಸರ್ಕಾರಿ ಅಧಿಕಾರಿಗಳೊಂದಿಗೆ ಒಡನಾಟವನ್ನು ತ್ಯಜಿಸಿ. ಜೀವನೋಪಾಯಕ್ಕಾಗಿ ಕೆಲಸ ಮಾಡುವವರು ತಮ್ಮ ಸಹಯೋಗಿಗಳೊಂದಿಗಿನ ಸಂಭಂಧವನ್ನು ಉತ್ತಮವಾಗಿಸಬೇಕು, ನೀವು ನಿಮ್ಮ ಸಾರ್ಮಥ್ಯದಿಂದ ಸನ್ನಿವೇಶವನ್ನು ಸಕಾರಾತ್ಮಕವಾಗಿ ಬಗೆಹರಿಸುವಿರಿ.

ಸಿಂಹ ರಾಶಿಗೆ ಹಳೆಯ ಸ್ನೇಹಿತ ಅಥವಾ ಸಂಬಂಧಿಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ, ಋತುವಿನ ಬದಲಾವಣೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಬಾರದಂತೆ ಎಚ್ಚರ ವಹಿಸಿ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವುದು ಒಳ್ಳೆಯದು, ಬಾಳ ಸಂಗಾತಿಯ ಸಹಯೋಗವು ನಿಮಗೆ ಸಿಗುತ್ತದೆ. ಸ್ಪರ್ದೆಗಳಿಂದ ದೂರ ನಿಲ್ಲದಿರಿ ಮತ್ತು ಅದರ ಆನಂದವನ್ನು ಅನುಭವಿಸಿ, ಆಗ ಕೆಲಸ ಮಾಡುವುದರಲ್ಲಿ ನಿಮಗೆ ಬಹಳ ಮಜ ಸಿಗುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಕುಂಭ ರಾಶಿಯವರಿಗೆ ಸೂಚನೆ ಎಂದರೆ ಸಂಘರ್ಷದಿಂದ ಮಾತ್ರ ಯಶಸ್ಸು ಸಿಗುತ್ತದೆ, ಒಮ್ಮೆಲೆಗೆ ಯಾವುದೇ ತೀರ್ಮಾನಕ್ಕೆ ಬರಬೇಡಿ. ನಿಮ್ಮ ಆತುರದ ನಿರ್ಧಾರದಿಂದ ವಿರೋಧಿಗಳಿಗೆ ಉಪಯೋಗವಾಗುತ್ತದೆ ಮತ್ತು ಶಾಂತ ಚಿತ್ತರಾಗಿ ಒಳ್ಳೆಯ ಕರ್ಮಗಳನ್ನು ಮಾಡಿತ್ತಿರಿ. ಮಾಂಸಾಹಾರ ಹಾಗು ಮಧ್ಯಪಾನವನ್ನು ಸೇವಿಸದಿರುವುದು ಒಳ್ಳೆಯದು, ತಿಂಗಳ ಕೊನೆಯ ವಾರದಲ್ಲಿ ಪರಿಸ್ಥಿತಿಯಲ್ಲಿ ಬದಲಾವಣೆ ಉಂಟಾಗುತ್ತದೆ, ವರ್ಷವು ಸಕಾರಾತ್ಮಕವಾಗಿ ಅಂತ್ಯಗೊಳ್ಳುತ್ತದೆ.

ತುಲಾ ಹಾಗು ಧನು ರಾಶಿಯವರು ನಿಮ್ಮ ಹಳೆಯ ಅನುಭವಗಳಿಂದ ಪಾಠ ಕಲಿಯುವಿರಿ, ಹಾಗು ಜೀವನದಲ್ಲಿ ಮುಂದೆ ಬರುವಿರಿ. ನಿಮಗೆ ನಿಮ್ಮ ಮೇಲಿರುವ ನಂಬಿಕೆಯೇ ಗಲುವಿನ ಮೆಟ್ಟಿಲು, ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುತ್ತವೆ ಮತ್ತು ತಂದೆ ತಾಯಿ ಅಥವಾ ದೊಡ್ಡವರ ಆರ್ಶಿವಾದವನ್ನು ಪಡೆದೇ ಹೊಸ ಕೆಲಸವನ್ನು ಪ್ರಾರಂಭಿಸಿ. ಈ ಎಲ್ಲ ರಾಶಿಯವರು ಪ್ರತಿ ಶನಿವಾರ ಶನಿದೇವನಿಗೆ ಎಣ್ಣೆಯ ಅಭಿಷೇಕ ಮಾಡಿಸಿ ಹಾಗು ಸೂರ್ಯದೇವನನ್ನು ಸ್ಮರಿಸಿ ಮತ್ತು ಮನೆಗೆ ಬಂದ ಅಸಹಾಯಕರನ್ನು ಹಾಗು ನಿರ್ಗತಿಕರನ್ನು ಬರಿಕೈಯಲ್ಲಿ ಕಳುಹಿಸಬೇಡಿ, ವಿದ್ಯಾದಾನ ಹಾಗು ಅನ್ನದಾನ ಮಾಡುವುದು ನಿಮಗೆ ಶ್ರೇಯಸ್ಸು ತರುತ್ತದೆ.

Shani and Suryadeva

Please follow and like us:
error0
http://karnatakatoday.in/wp-content/uploads/2019/11/God-Surya-and-Shani-1024x576.jpghttp://karnatakatoday.in/wp-content/uploads/2019/11/God-Surya-and-Shani-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಭಾರತೀಯ ಜ್ಯೋತಿಷ್ಯದ ಪ್ರಕಾರ ಬ್ರಹ್ಮಾಂಡವನ್ನು ಜನ್ಮದ ಸ್ಥಳದಿಂದ ಹನ್ನೆರಡು ಭಾಗಗಳಲ್ಲಿ ವಿಂಗಡಿಸಲಾಗಿದೆ, ಈ ಭಾಗಗಳನ್ನು ರಾಶಿಚಕ್ರ ಎಂದು ಕರೆಯುತ್ತಾರೆ ಮತ್ತು ಈ ರಾಶಿ ಚಕ್ರಗಳ ಮೇಲೆ ಭಿನ್ನ ಭಿನ್ನ ಗ್ರಹಗಳ ಪರಿಣಾಮವು ಬೀರುತ್ತದೆ, ಆ ಪರಿಣಾಮಗಳು ಶುಭವಾಗಿರುತ್ತವೋ ಅಥವಾ ಅಮಂಗಲಕಾರವಾಗಿರುತ್ತವೋ ಎನ್ನುವುದನ್ನು ಸಾಮಾನ್ಯವಾಗಿ ಎಲ್ಲರು ಜ್ಯೋತಿಷ್ಯ ಶಾಸ್ತ್ರಗಳ ಮೂಲಕ ತಿಳಿದುಕೊಳ್ಳುತ್ತಾರೆ. ರಾಶಿಫಲದ ಮೂಲಕ ನಿಮ್ಮ ವ್ಯಾಪಾರ, ಉದ್ಯೋಗ, ಹಣ, ಅರೋಗ್ಯ, ಶಿಕ್ಷಣ ಮತ್ತು ಕೌಟುಂಬಿಕ ಜೀವನಕ್ಕೆ ಸಂಬಂಧಿತ ಎಲ್ಲಾ...Film | Devotional | Cricket | Health | India