ಸರ್ಕಾರೀ ಕೆಲಸ ಪಡೆದು ಜೀವನವನ್ನು ಸೆಟಲ್ ಮಾಡಿಕೊಳ್ಳಬೇಕೆಂಬ ಹಂಬಲ ಎಲ್ಲರಿಗು ಕೂಡ ಇರುತ್ತದೆ. ಎಲ್ಲದಕ್ಕೂ ಪರಿಶ್ರಮದ ಜೊತೆಗೆ ಸ್ವಲ್ಪ ಗುರುಬಲದ ಅಗತ್ಯವೂ ಕೂಡ ಇರುತ್ತದೆ. ಮನುಷ್ಯನ ಸಾಧನೆಗೆ ಮತ್ತು ಉನ್ನತಿಗೆ ಒಮ್ಮೊಮ್ಮೆ ಗ್ರಹಗತಿಗಳು ಕೂಡ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಮಾತ್ರ ಎಲ್ಲವು ಸರಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಜನ್ಮ ರಾಶಿ, ಮತ್ತು ಜಾತಕಫಲದ ಪ್ರಕಾರ ಈ ಬಾರಿ ಸರ್ಕಾರೀ ಕೆಲಸದ ಯೋಗ ಹೊಂದಿರುವ ಆ ರಾಶಿಗಳು ಯಾವುವು ಮತ್ತು ಆ ರಾಶಿಗಳ ರಾಶಿಫಲದ ಬಗ್ಗೆ ತಿಳಿದುಕೊಳ್ಳೋಣ. ಗ್ರಹಗಳಲ್ಲಿ ಅತ್ಯಂತ ಶುಭಗ್ರಹ ಗುರು. ಗುರು ಕಾಲ ಪುರುಷನ ಜ್ಞಾನ ಮತ್ತು ಸುಖವನ್ನು ಸೂಚಿಸುತ್ತಾನೆ. ಗುರುವನ್ನು ಪುತ್ರಕಾರಕ ಮತ್ತು ಧನಕಾರಕನೆಂದು ಕರೆಯುತ್ತಾರೆ. ಜಾತಕದಲ್ಲಿ ಗುರು ಪ್ರಬಲನಾದರೆ ಅವರಿಗೆ ದೀರ್ಘಾಯಸ್ಸು ,  ಸುಖ ಸಿಗುತ್ತದೆ.

ಮೊದಲನೆಯದಾಗಿ ಸಿಂಹ ರಾಶಿಗೆ ಈ ವರ್ಷ ಸರ್ಕಾರೀ ನೌಕರಿಯ ಭಾಗ್ಯವಿದೆ. ಒತ್ತಡದ ದಿನದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ನಿಮ್ಮ ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆ ನಿಮ್ಮ ಮನಸ್ಸಿನ ಶಾಂತಿಗೆ ಭಂಗ ತರುತ್ತದೆ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವನ್ನು ಸುಧಾರಿಸಲು ಒಂದು ಪರಿಪೂರ್ಣ ಅವಕಾಶವಾಗಿರುತ್ತದೆ. ಶೃಂಗಾರ ಸಾಧನಗಳನ್ನು ಖರೀದಿ ಮಾಡುತ್ತೀರಿ. ವಾಹನ ಖರೀದಿ ಮಾಡುತ್ತೀರಿ, ಸ್ತ್ರೀಯರಿಂದ ಸುಖ, ಕಳೆದು ಹೋದ ವಸ್ತು ಸಿಗುತ್ತದೆ. ಸ್ಥಾನಮಾನ ಗೌರವ ಸಿಗುತ್ತದೆ.

ಇನ್ನು ಮಿಥುನ ರಾಶಿಗೆ ಕೂಡ ಈ ಸಲ ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ಒದಗಿ ಬರಲಿವೆ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿಲ್ಲದಿದ್ದಲ್ಲಿ ನೀವು ಸುಲಭವಾಗಿ ನಿಮ್ಮ ಖ್ಯಾತಿಗೆ ಧಕ್ಕೆ ತಂದುಕೊಳ್ಳಬಹುದು. ನಿಮ್ಮ ಖ್ಯಾತಿಗೆ ಧಕ್ಕೆ ತರುವವರೊಂದಿಗೆ ಸಂಬಂಧ ಹೊಂದಬೇಡಿ. ನಿಮಗೆ ಮತ್ತು ನಿಮ್ಮ ಸಂಗಾತಿಗೆ ಇಂದು ಅದ್ಭುತ ಸುದ್ದಿ ಸಿಗುತ್ತವೆ. ವಿವಾಹಿತರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನಿಮ್ಮ ಪರಸ್ಪರ ತಿಳುವಳಿಕೆಯೊಂದಿಗೆ ಇಬ್ಬರೂ ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು. ಸರಕಾರಿ ಮಟ್ಟದಲ್ಲಿ ಲಾಭ ಪಡೆಯುವ ಉತ್ತಮ ಅವಕಾಶವಿದೆ.


ಧನು ರಾಶಿಯವರ ಕೆಲವು ಪ್ರಮುಖ ಕಾರ್ಯಗಳು ಯಶಸ್ವಿಯಾಗುವ ಸಾಧ್ಯತೆಯಿದೆ. ಇದರಿಂದ ಆರ್ಥಿಕ ಪರಿಸ್ಥಿತಿಗಳು ಬಲವಾಗಬಹುದು ಮತ್ತು ನೀವು ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಬಹುದು. ಈ ತಿಂಗಳಲ್ಲಿ ನಿಮ್ಮ ಅದೃಷ್ಟವು ಕೂಡ ನಿಮಗೆ ಜೊತೆ ನೀಡುತ್ತದೆ. ಇದರಿಂದ ನೀವು ಯಾವ ಕೆಲಸವನ್ನು ಮಾಡುತ್ತಿರೋ ಆ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಾ. ಹಣ ,  ಸಂಪತ್ತಿನೊಂದಿಗೆ ಗೌರವವನ್ನೂ ಕೂಡ ಪಡೆಯಬಹುದು. ಈ ತಿಂಗಳಲ್ಲಿ ಶೀತ ಜ್ವರ ನಿಮ್ಮನ್ನು ಕಾಡಬಹುದು.

ಮಕರದವರಿಗೆ ಮುಂದಿನ ತಿಂಗಳು ಸ್ವಲ್ಪ ತೊಂದರೆ ಅನುಭವಿಸಬಹುದು. ಕೆಲಸದ ಬಗ್ಗೆ ಹೆಚ್ಚು ಓಡಾಟ ಮಾಡಬೇಕಾಗಬಹುದು. ಕೆಲಸದ ಹೊರೆ ಬೀಳುವುದರಿಂದಲೂ ತೊಂದರೆಗಳು ಹೆಚ್ಚಾಗುತ್ತವೆ. ಆರ್ಥಿಕ ಸಂದರ್ಭದಲ್ಲಿ ಉತ್ತಮ ಲಾಭ ಪಡೆಯಲು ಅವಕಾಶಗಳು ಪಡೆಯಬಹುದು. ಆದರೆ ಇದಕ್ಕಾಗಿ ಹೆಚ್ಚು ಕಠಿಣ ಪರಿಶ್ರಮವನ್ನು ಮಾಡಬೇಕಾಗಬಹುದು. ನೀವು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನದ ಜೊತೆಗೆ ಕೆಲಸವನ್ನು ಉತ್ತಮ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತೀರಿ. ಈ ತಿಂಗಳು ನಿಮ್ಮ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ ಆದರೆ ಓಡಾಡುವ ಪರಿಸ್ಥಿತಿಗಳು ಹೆಚ್ಚಾಗಿ ಉಂಟಾಗಬಹುದು.

Please follow and like us:
error0
http://karnatakatoday.in/wp-content/uploads/2019/11/jobs-today-1024x576.pnghttp://karnatakatoday.in/wp-content/uploads/2019/11/jobs-today-150x104.pngKarnataka Trendingಅಂಕಣಎಲ್ಲಾ ಸುದ್ದಿಗಳುಸರ್ಕಾರೀ ಕೆಲಸ ಪಡೆದು ಜೀವನವನ್ನು ಸೆಟಲ್ ಮಾಡಿಕೊಳ್ಳಬೇಕೆಂಬ ಹಂಬಲ ಎಲ್ಲರಿಗು ಕೂಡ ಇರುತ್ತದೆ. ಎಲ್ಲದಕ್ಕೂ ಪರಿಶ್ರಮದ ಜೊತೆಗೆ ಸ್ವಲ್ಪ ಗುರುಬಲದ ಅಗತ್ಯವೂ ಕೂಡ ಇರುತ್ತದೆ. ಮನುಷ್ಯನ ಸಾಧನೆಗೆ ಮತ್ತು ಉನ್ನತಿಗೆ ಒಮ್ಮೊಮ್ಮೆ ಗ್ರಹಗತಿಗಳು ಕೂಡ ಉತ್ತಮ ಸ್ಥಿತಿಯಲ್ಲಿ ಇದ್ದಾಗ ಮಾತ್ರ ಎಲ್ಲವು ಸರಿಯಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಜನ್ಮ ರಾಶಿ, ಮತ್ತು ಜಾತಕಫಲದ ಪ್ರಕಾರ ಈ ಬಾರಿ ಸರ್ಕಾರೀ ಕೆಲಸದ ಯೋಗ ಹೊಂದಿರುವ ಆ ರಾಶಿಗಳು ಯಾವುವು ಮತ್ತು...Film | Devotional | Cricket | Health | India